Homeಕರೋನಾ ತಲ್ಲಣಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಕೇಂದ್ರದ ಜಾಣ ಕುರುಡು, ನೂರಾರು ಲಸಿಕಾ ಕೇಂದ್ರಗಳಿಗೆ ಬೀಗ

ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಕೇಂದ್ರದ ಜಾಣ ಕುರುಡು, ನೂರಾರು ಲಸಿಕಾ ಕೇಂದ್ರಗಳಿಗೆ ಬೀಗ

ಕೇಂದ್ರವು ಮಹಾರಾಷ್ಟ್ರದ ವಿರುದ್ಧ ಏಕೆ ತಾರತಮ್ಯ ಮಾಡುತ್ತಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಪ್ರಶ್ನಿಸಿದ್ದಾರೆ.

- Advertisement -
- Advertisement -

ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಮಹಾರಾಷ್ಟ್ರದಲ್ಲಿ ನೂರಕ್ಕೂ ಹೆಚ್ಚು ಕೊರೊನಾ ಲಸಿಕಾ ಕೇಂದ್ರಗಳಿಗೆ ಬೀಗ ಬಿದ್ದಿದೆ. ಲಸಿಕೆಯ ಅಗತ್ಯತೆ ಹೆಚ್ಚಿದೆ ಎಂದು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ನಮಗಾಗುತ್ತಿರುವ ತಾರತಮ್ಯದ ಬಗ್ಗೆಯೂ ತಿಳಿಸಿದ್ದೇನೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.

ದೇಶದಲ್ಲೇ ಅತ್ಯಂತ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳಿರುವ ಮಹಾರಾಷ್ಟ್ರದ ಹಲವಾರು ವ್ಯಾಕ್ಸಿನೇಷನ್ ಕೇಂದ್ರಗಳು ಲಸಿಕೆಗಳ ಕೊರತೆಯನ್ನು ಅನುಭವಿಸುತ್ತಿವೆ. ಲಸಿಕೆ ಕೊರತೆಯಿಂದಾಗಿ ಜನರಿಗೆ ಲಸಿಕೆ ನೀಡದೆ ಹಿಂತಿರುಗುವಂತೆ ಹೇಳಲಾಗುತ್ತಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ  ನಿನ್ನೆ (ಬುಧವಾರ) ಕೂಡ  ಹೇಳಿದ್ದಾರೆ.

ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ ನೋ ಸ್ಟಾಕ್ ಬೋರ್ಡ್ಗಳಿದ್ದರೇ ಮತ್ತೆ ನೂರಾರು ಲಸಿಕಾ ಕೇಂದ್ರಗಳಿಗೆ ಬೀಗ ಬಿದ್ದಿದೆ. ಮುಂಬೈನಲ್ಲಿ 26 ಲಸಿಕೆ ಕೇಂದ್ರಗಳನ್ನು ಮುಚ್ಚಲಾಗಿದೆ. ಇವುಗಲ್ಲಿ 23 ಲಸಿಕಾ ಕೇಂದ್ರಗಳು ನವಿ ಮುಂಬೈನಲ್ಲಿವೆ. ಲಸಿಕೆ ಕೊರತೆಯಿಂದಾಗಿ ಪುಣೆ 100 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಲೇ ಟ್ವೀಟ್ ಮಾಡಿದ್ದಾರೆ. ಸತಾರಾ, ಸಾಂಗ್ಲಿ, ಪನ್ವೆಲಾದಲ್ಲಿನ ಕೇಂದ್ರಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ವ್ಯಾಕ್ಸಿನೇಷನ್‌ ಕೇಂದ್ರಗಳಲ್ಲಿ ಜನ ಲಸಿಕೆಯಿಲ್ಲದೆ ಹಿಂತಿರುಗುತ್ತಿದ್ದಾರೆ : ಮಹಾರಾಷ್ಟ್ರ ಆರೋಗ್ಯ ಸಚಿವ

ಲಸಿಕೆ ನೀಡುವಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರೊಂದಿಗೆ ಮಾತನಾಡಿದ್ದಾರೆ. ಕೇಂದ್ರದಿಂದ ಹೆಚ್ಚಿನ ಲಸಿಕೆ ಪ್ರಮಾಣಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.

ಕೇಂದ್ರವು ಮಹಾರಾಷ್ಟ್ರದ ವಿರುದ್ಧ ಏಕೆ ತಾರತಮ್ಯ ಮಾಡುತ್ತಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ಪ್ರಶ್ನಿಸಿದ್ದಾರೆ. ಜನಸಂಖ್ಯೆಯ ಪ್ರಕಾರ ರಾಜ್ಯಕ್ಕೆ ವಾರಕ್ಕೆ 40 ಲಕ್ಷ ಡೋಸ್ ಮತ್ತು ತಿಂಗಳಿಗೆ 1.6 ಕೋಟಿ ಲಸಿಕೆಗಳು ಬೇಕಾಗುತ್ತವೆ. ಇನ್ನು “ಮಹಾರಾಷ್ಟ್ರವು ಗುಜರಾತ್ ಜನಸಂಖ್ಯೆಗಿಂತ ದುಪ್ಪಟ್ಟು ಜನಸಂಖ್ಯೆಯನ್ನು ಹೊಂದಿದೆ. ಆದರೂ ಗುಜರಾತ್ ಮತ್ತು ನಮ್ಮ ರಾಜ್ಯಕ್ಕೆ ಸರಿ ಸಮಾನವಾಗಿ ಒಂದು ಕೋಟಿ ಡೋಸ್ ಸಿಕ್ಕಿದೆ” ಎಂದಿದ್ದಾರೆ.

ಲಸಿಕೆ ಕೊರತೆಯ ಬಗ್ಗೆ ಮಹಾರಾಷ್ಟ್ರದ ಆರೋಪಗಳು ಕೇಂದ್ರದ ಜೊತೆಗೆ ಘರ್ಷಣೆಗೆ ಕಾರಣವಾಗಿದೆ. ಮಹಾರಾಷ್ಟ್ರ ಸರ್ಕಾರವು ಜವಾಬ್ದಾರಿಯುತವಾಗಿದೆ. ಲಸಿಕೆಯನ್ನು ಸರಿಯಾಗಿ ಹಂಚಿಕೆ ಮಾಡದೆ ಲಸಿಕೆ ಇಲ್ಲ ಎನ್ನುತ್ತಿದೆ. ಅದು ಕಾರ್ಯನಿರ್ವಹಿಸಲು ಅಸಮರ್ಥವಾಗಿದೆ. ಕೊರೊನಾ ನಿಯಂತ್ರಿಸದೆ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಡಾ.ಹರ್ಷ್ ವರ್ಧನ್ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಾಜೇಶ್ ತೋಪೆ, “ಇದು ಕೇಂದ್ರ ಮತ್ತು ರಾಜ್ಯವು ಕಿತ್ತಾಡುವ ವಿಷಯವಲ್ಲ. ಇದನ್ನು ರಾಜಕೀಯಗೊಳಿಸಲು ನಾವು ಬಯಸುವುದಿಲ್ಲ. ನಾವು ಯಾರನ್ನೂ ದೂಷಿಸಲು ಬಯಸುವುದಿಲ್ಲ” ಎಂದಿದ್ದಾರೆ.

ಇತ್ತ, ಗುಜರಾತ್‌ನ ಗಾಂಧಿನಗರದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ 25 ವರ್ಷ ತುಂಬದ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಳೆದ ವಾರ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಸ್ಕ್ರೋಲ್.ಇನ್ ವರದಿ ಮಾಡಿದೆ.


ಇದನ್ನೂ ಓದಿ: ಮಾರ್ಚ್‌‌‌‌ನಲ್ಲಿ ಎರಡು ಪಟ್ಟು ರಫ್ತು; ಹಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆ ಕೊರತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಮ್ಮ ನಾಯಕ ಅಂದು ಗುಹೆಯೊಳಗೆ, ಇಂದು ನೀರೊಳಗೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರಾಜ್

0
"ನಮಗೊಬ್ಬ ನಾಯಕನಿದ್ದಾನೆ. ಆತ 2019ರಲ್ಲಿ ಕ್ಯಾಮರಾ ಮ್ಯಾನ್‌ಗಳ ಜೊತೆ ಗುಹೆ ಸೇರ್ಕೊಂಡ. ಈಗ ಚುನಾವಣೆ ಬರುವಾಗ ನೀರಿನೊಳಗೆ ಹೋಗಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ಆತ 20ನೇ ಶತಮಾನದ ದೇಶದ ನಾಯಕನಾ?"...