Homeಮುಖಪುಟಅಬಕಾರಿ ಶುಂಕ: ಮೋದಿ ಸರ್ಕಾರದಿಂದ 4 ಲಕ್ಷ ಕೋಟಿ ಬೃಹತ್ ದೇಶದ್ರೋಹಿ ಭ್ರಷ್ಟಾಚಾರ?

ಅಬಕಾರಿ ಶುಂಕ: ಮೋದಿ ಸರ್ಕಾರದಿಂದ 4 ಲಕ್ಷ ಕೋಟಿ ಬೃಹತ್ ದೇಶದ್ರೋಹಿ ಭ್ರಷ್ಟಾಚಾರ?

ಇಡೀ ದೇಶಕ್ಕೆ ವ್ಯಾಕ್ಸಿನ್ ಮತ್ತು ಪಡಿತರ ನೀಡಲು ಬೇಕಿರುವ ಹಣದ ಮೂರು ಪಟ್ಟನ್ನು ಒಂದೇ ವರ್ಷದಲ್ಲಿ ಪೆಟ್ರೋಲ್ ತೆರಿಗೆಯ ಮೂಲಕ ಸಂಗ್ರಹಿಸಲಾಗಿದೆ ಎಂದ ಮೇಲೆ... ಈಗಲಾದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಬಹುದಲ್ಲವೇ?

- Advertisement -
- Advertisement -

2020-21ರ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್‌ನಿಂದಾಗಿ 3.4 ಲಕ್ಷ ಕೋಟಿ ರೂಗಳನ್ನು ಗಳಿಸಿದ್ದು, ಅದರ ಬಹುಪಾಲು ಹಣವನ್ನು ಉಚಿತ ಲಸಿಕೆ ಮತ್ತು ಬಡವರಿಗೆ ಉಚಿತ ಪಡಿತರ ನೀಡಲು ಬಳಸಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು. ಇದು ಸುಳ್ಳು ಲೆಕ್ಕ ಎಂದು ಕನ್ನಡ ಖ್ಯಾತ ಚಿಂತಕ ಶಿವಸುಂದರ್ ತಮ್ಮ ಜಸ್ಟ್ ಆಸ್ಕಿಂಗ್ ಲೇಖನದಲ್ಲಿ ನಿರೂಪಿಸಿದ್ದಾರೆ. ಅದನ್ನು ನಾನುಗೌರಿ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

“ಪೆಟ್ರೋಲ್ ಬೆಲೆ ಏರಿಸಿ ಸಂಗ್ರಹಿಸಿದ 3.4 ಲಕ್ಷ ಕೋಟಿಗೆ ಸುಳ್ಳು ಲೆಕ್ಕ ಕೊಡುತ್ತಿರುವ ಮೋದಿ ಸರ್ಕಾರ..”

ಮೋದಿ ಸರ್ಕಾರದ ಹೊಸ ಪೆಟ್ರೋಲಿಯಂ ಮಂತ್ರಿ ಹರದೀಪ್ ಪುರಿ ಯವರು 2020-21 ನೇ ಸಾಲಿನಲೀ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿ ಜನರಿಂದ ಹೆಚ್ಚುವರಿಯಾಗಿ 3.4 ಲಕ್ಷ ಕೋಟಿ ರೂ. ಗಳನ್ನೂ ಸಂಗ್ರಹಿಸಲಾಗಿದೆ ಎಂದು ಮೊನ್ನೆ ಒಪ್ಪಿಕೊಂಡಿದ್ದಾರೆ.

ಆದರೆ ಅದರ ದೊಡ್ಡ ಭಾಗವನ್ನು ಜನರಿಗೆ ಉಚಿತ ವ್ಯಾಕ್ಸಿನ್ ಕೊಡಲು ಹಾಗು 2020 ರ ಏಪ್ರಿಲ್- ನವಂಬರ್ ಹಾಗು 2021 ರ ಮೇ-ಜೂನ್, ಒಟ್ಟು ಹತ್ತು ತಿಂಗಳ ಕಾಲ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲು ವ್ಯಯ ಮಾಡಲಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ…

ಇದನ್ನೂ ಓದಿ : ಪೆಟ್ರೋಲಿಯಂ ಸೆಸ್‌ನ 3.4 ಲಕ್ಷ ಕೋಟಿ ರೂಗಳನ್ನು ಉಚಿತ ಲಸಿಕೆ, ಪಡಿತರಕ್ಕಾಗಿ ಬಳಸಲಾಗಿದೆ: ಸಚಿವ ಹರ್ದೀಪ್ ಪುರಿ

ಈ ಹೇಳಿಕೆಯ ಮೂಲಕ ಮೋದಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದೆ… :

ಮೊದಲಿಗೆ- ವ್ಯಾಕ್ಸಿನ್ ಉಚಿತವಾಗೇನೂ ಕೊಡುತ್ತಿಲ್ಲ..

ಮೋದಿ ಸರ್ಕಾರವು ಬಡ-ಮಧ್ಯಮ ವರ್ಗದ ಜನರಿಂದ ಸುಲಿದ ತೆರಿಗೆಯಿಂದ ಜನರಿಗೆ ವ್ಯಾಕ್ಸಿನ್-ಪಡಿತರ ಕೊಡುತ್ತಿದೆಯೇ ವಿನಾ, ಶ್ರೀಮಂತರಿಗೆ ತೆರಿಗೆ ಹಾಕುವ ಮೂಲಕವೋ, ಅಥವಾ ಸರ್ಕಾರದ ದುಂದು ವೆಚ್ಚಗಳನ್ನೋ ಕಡಿಮೆ ಮಾಡುವುದರಿಂದಲ್ಲ.

ಅರ್ಥಾತ್ ಸರ್ಕಾರ ಬಡವರಿಗೆ ಅವರಿಂದ ಸಂಗ್ರಹಿಸಿದ ಹಣದಿಂದಲೇ ವ್ಯಾಕ್ಸಿನ್- ಪಡಿತರ ಕೊಡುತ್ತಿದೆಯೇ ವಿನಾ ಉಚಿತವಾಗಿಯಲ್ಲ… ಆದ್ದರಿಂದ ಮೊದಲು ಉಚಿತ ವ್ಯಾಕ್ಸಿನ್, ಉಚಿತ ಪಡಿತರ ಎನ್ನುವ ಜನವಂಚಕ ಪ್ರಚಾರವನ್ನು ನಿಲ್ಲಿಸಬೇಕು…

ಎರಡನೆಯದಾಗಿ- ಉಳಿದ ಮೂರು ಕೋಟಿಗೆ ಲೆಕ್ಕವೆಲ್ಲಿ?
ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ ಜುಲೈ 29 ರವರೆಗೆ ಕೇವಲ 45 ಕೋಟಿ ವ್ಯಾಕ್ಸಿನ್ ಗಳನ್ನೂ ಜನರಿಗೆ ನೀಡಿದೆ.

ಅದರ ಒಟ್ಟಾರೆ ಸರಾಸರಿ ಬೆಲೆ ವ್ಯಾಕ್ಸಿನ್ ಒಂದಕ್ಕೆ 500 ರೂ. ಎಂದಿಟ್ಟುಕೊಂಡರೂ ಈವರೆಗೆ ಸರ್ಕಾರ ಈ ಬಾಬತ್ತಿನಲ್ಲಿ ವೆಚ್ಚ ಮಾಡಿರುವುದು ಕೇವಲ 23,000 ಕೋಟಿ ರೂ. ಮಾತ್ರ ಎಂದಾಯಿತು!

ಅಂದರೆ ಪೆಟ್ರೋಲ್ ಬೆಲೆ ಏರಿಕೆಯಿಂದ ಸಂಗ್ರಹಿಸಿದ 3.4 ಲಕ್ಷ ಕೋಟಿಯ ಶೇ. 6.7 ಭಾಗ ಮಾತ್ರ… ಉಳಿದದ್ದೇನಾಯ್ತು?

ವ್ಯಾಕ್ಸಿನ್ ಗಾಗಿ ಎಂದೇ 2021ರ ಬಜೆಟ್ಟಿನಲ್ಲಿ ಪೆಟ್ರೋಲ್ ತೆರಿಗೆಯನ್ನು ಹೊರತುಪಡಿಸಿ 66,000 ಕೋಟಿಗಳನ್ನು ಎತ್ತಿಡಲಾಗಿತ್ತು…

ಪೆಟ್ರೋಲ್ ಬೆಲೆ ಏರಿಕೆಯಿಂದ ಸಂಗ್ರಹಿಸಿದ ಹಣದಲ್ಲಿ ವ್ಯಾಕ್ಸಿನ್ ಕೊಡುತ್ತಿರುವುದಾದರೆ, ಅದಕ್ಕೆ ಮುಂಚೆಯೇ ಬಜೆಟ್ನಲ್ಲಿ ಎತ್ತಿಟ್ಟಿದ್ದ ವ್ಯಾಕ್ಸಿನ್ ಹಣದ ಲೆಕ್ಕವೇನು?

– 2020 ಮತ್ತು 2021 ರಲ್ಲಿ ಒಟ್ಟು ಹತ್ತು ತಿಂಗಳ ಕಾಲ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲು ಆದ ಖರ್ಚೆಷ್ಟು? 1.2 ಲಕ್ಷ ಕೋಟಿ ರೂಪಾಯಿಗಳು.

ಆದರೆ ಇದೆಲ್ಲವೂ ವಿಶೇಷ ಅಥವಾ ಹೆಚ್ಚುವರಿ ವೆಚ್ಚವಲ್ಲ.

2013 ರಲ್ಲಿ ಆಹಾರ ಭದ್ರತಾ ಕಾಯಿದೆ ಜಾರಿಯಾದ ಮೇಲೆ ಈ ದೇಶದ 83 ಕೋಟಿ ಜನರಿಗೆ ಪ್ರತಿವರ್ಷ ರಿಯಾಯತಿ ದರದಲ್ಲಿ ಆಹಾರ ಪಡಿತರವನ್ನು ಒದಗಿಸಲು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಪ್ರತಿವರ್ಷ ಕೇಂದ್ರ ಬಜೆಟ್ಟಿನಿಂದ ಹಣವನ್ನು ಒದಗಿಸಲಾಗುತ್ತದೆ. ಅದರ ಭಾಗವಾಗಿಯೇ 2020ರಲ್ಲೇ ಈ ಬಾಬತ್ತಿಗೆ ಕೇಂದ್ರ ಬಜೆಟ್ಟಿನಲ್ಲಿ 1.15 ಲಕ್ಷ ಕೋಟಿ ಎತ್ತಿಡಲಾಗಿತ್ತು.!

ಹೀಗಾಗಿ ಈ ಬಾರಿ ಕೋವಿಡ್ ನಿಂದಾಗಿ ಬಜೆಟ್ಟಿನಲ್ಲಿ ಎತ್ತಿಟ್ಟ ಹಣದ ಜೊತೆಗೆ ಸರ್ಕಾರಕ್ಕೆ ಹೆಚ್ಚೆಂದರೆ 15,000 ಕೋಟಿ ಖರ್ಚಾಗಿರಬಹುದು ..

ಅಂದರೆ … ವ್ಯಾಕ್ಸಿನ್ ಗಾಗಿ 25,000 ಕೋಟಿ

ಪಡಿತರಕ್ಕಾಗಿ 15,000 ಕೋಟಿ

ಒಟ್ಟು 40,000 ಕೋಟಿ …

ಪೆಟ್ರೋಲ್ ತೆರಿಗೆಯಿಂದ ಸಂಗ್ರಹಿಸಿದ 3.4 ಲಕ್ಷ ಕೋಟಿ ಯಲ್ಲಿ 40,000 ಕೋಟಿ ಕಳೆದರೆ ಉಳಿದ 3 ಲಕ್ಷ ಕೋಟಿ ಗಳ ಲೆಕ್ಕ???

– ಇನ್ನು ಭಾರತದ ಎಲ್ಲಾ ಜನರಿಗೆ ಬೇಕಿರುವ, ಮುಂದಿನ ವರ್ಷದ ಕೊನೆಯ ವೇಳೆಗೆ ಹಾಕಬಹುದಾದ, 200 ಕೋಟಿ ವ್ಯಾಕ್ಸಿನ್ ಗಳಿಗೆ ವೆಚ್ಚವಾಗುವುದು 1 ಲಕ್ಷ ಕೋಟಿ …

ಅದನ್ನೂ ಈಗಲೇ ಸೇರಿಸಿಬಿಟ್ಟರೂ ಸರ್ಕಾರಕ್ಕೆ ಒಟ್ಟಾರೆ ಯಾಗಿ ಮುಂದಿನ ಎರಡು ವರ್ಷಗಳಿಗೆ ಕೋವಿಡ್ ಹೆಚ್ಚುವರಿಯಾಗಿ ವೆಚ್ಚವಾಗುವುದು 1.15 ಲಕ್ಷ ಕೋಟಿ ಮಾತ್ರ..

ಕಳೆದ ಒಂದು ವರ್ಷದಲ್ಲಿ ಜನರಿಂದ ಸುಲಿದಿರುವ 3.4 ಲಕ್ಷ ಕೋಟಿಯಲ್ಲಿ 1.15 ಲಕ್ಷ ಕೋಟಿ ತೆಗೆದರೂ ಸರ್ಕಾರ ಕೋವಿಡ್ ಹೆಸರಲ್ಲಿ 2.25 ಲಕ್ಷ ಕೋಟಿ ರೂ. ಗಳು ಲೆಕ್ಕ ಕೊಡದ ಸುಲಿಗೆ ಎಂದಾಯಿತು..ಅಲ್ಲವೇ?

ಮೂರನೆಯದಾಗಿ: ಈಗಲಾದರೂ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗಬೇಕಲ್ಲವೇ?

ಏನಿಲ್ಲವೆಂದರೂ ಇಡೀ ದೇಶಕ್ಕೆ ವ್ಯಾಕ್ಸಿನ್ ಹಾಕಲು ಬೇಕಿರುವ ಹಣದ ಮೂರು ಪಟ್ಟು… ಹಾಗು ಪಡಿತರಕ್ಕೆ ಬೇಕಿರುವ ಮೂರು ಪಟ್ಟು ಹಣವನ್ನು ಒಂದೇ ವರ್ಷದಲ್ಲಿ ಪೆಟ್ರೋಲ್ ತೆರಿಗೆಯ ಮೂಲಕ ಸಂಗ್ರಹಿಸಲಾಗಿದೆ ಎಂದ ಮೇಲೆ… ಈಗಲಾದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಬಹುದಲ್ಲವೇ?

ಆದ್ದರಿಂದ… ಜನರ ಬಲಗೈಯನಲ್ಲಿರುವುದನ್ನು ಕಸಿದೂ ಎಡಗೈಗೆ ಕೊಟ್ಟು ಉಚಿತವಾಗಿ ಕೊಡಲಾಗುತ್ತಿದೆ ಎಂದು ಪ್ರಚಾರ ಮಾಡಿಕೊಳ್ಳುವುದು ಐಪಿಸ್ ಸೆಕ್ಷನ್ 415-420 ರ ಕಲಮುಗಳಡಿ ಮೋಸ, ವಂಚನೆ ಎಂಬ ಅಪರಾಧವಲ್ಲವೇ?

ವ್ಯಾಕ್ಸಿನ್ ಹೆಸರಿನಲ್ಲಿ ಅಗತ್ಯಕ್ಕಿಂತ ಮೂರು ಪಟ್ಟು ಹಣವನ್ನು ಸಂಗ್ರಹಿಸಿ ತಪ್ಪು ಲೆಕ್ಕವನ್ನು ನೀಡುವುದು ದೇಶದ್ರೋಹವಲ್ಲವೇ? ಸರ್ಕಾರಿ ಅಧಿಕಾರದ ದುರುಪಯೋಗವಲ್ಲವೇ?

ಕೋವಿಡ್ ಸಂಕಷ್ಟದಲ್ಲಿಯೂ ಬಡ-ಮಧ್ಯಮ ವರ್ಗದವರಿಂದ ಸುಲಿದ 3.4+0.60= 4ಲಕ್ಷ ಕೋಟಿ ಗುಳುಂ ಮಾಡಿರುವುದು ಭ್ರಷ್ಟಾಚಾರವಲ್ಲವೇ?

– ಶಿವಸುಂದರ್


ಇದನ್ನೂ ಓದಿ; ಪೆಗಾಸಸ್ ಹಗರಣ: ಗುರುವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....