Homeಮುಖಪುಟಪೆಟ್ರೋಲಿಯಂ ಸೆಸ್‌ನ 3.4 ಲಕ್ಷ ಕೋಟಿ ರೂಗಳನ್ನು ಉಚಿತ ಲಸಿಕೆ, ಪಡಿತರಕ್ಕಾಗಿ ಬಳಸಲಾಗಿದೆ: ಸಚಿವ ಹರ್ದೀಪ್...

ಪೆಟ್ರೋಲಿಯಂ ಸೆಸ್‌ನ 3.4 ಲಕ್ಷ ಕೋಟಿ ರೂಗಳನ್ನು ಉಚಿತ ಲಸಿಕೆ, ಪಡಿತರಕ್ಕಾಗಿ ಬಳಸಲಾಗಿದೆ: ಸಚಿವ ಹರ್ದೀಪ್ ಪುರಿ

- Advertisement -
- Advertisement -

2020-21ರ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್‌ನಿಂದಾಗಿ 3.4 ಲಕ್ಷ ಕೋಟಿ ರೂಗಳನ್ನು ಗಳಿಸಿದ್ದು, ಅದರ ಬಹುಪಾಲು ಹಣವನ್ನು ಉಚಿತ ಲಸಿಕೆ ಮತ್ತು ಕೋವಿಡ್ ಪರಿಹಾರ ಕಾರ್ಯಗಳಿಗಾಗಿ ಬಳಸಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್ ಆಗಿ ಒಂದು ವರ್ಷದಲ್ಲಿ 2,33,296 ಲಕ್ಷ ಕೋಟಿ ರೂ ಮತ್ತು ಪೆಟ್ರೋಲ್ ಮೇಲೆ 1,01,598 ಲಕ್ಷ ಕೋಟಿ ರೂಗಳು ಸಂಗ್ರಹ ಆಗಿದೆ ಎಂದು ಲಿಖಿತವಾಗಿ ಉತ್ತರಿಸಿದ್ದಾರೆ.

ಈ ಹಣದ ಬಹುಪಾಲನ್ನು ಪಿಎಂ ಗರೀಬ್ ಕಲ್ಯಾಣ್ ಯೋಜನೆಯ ಭಾಗವಾಗಿ 2020ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಮತ್ತು 2021ರಲ್ಲಿ ಮೇ-ಜೂನ್ ತಿಂಗಳಿನಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲು ಮತ್ತು ದೇಶಾದ್ಯಂತ ಉಚಿತ ಲಸಿಕೆ ನೀಡಲು ಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಗಳು ಅತಿ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕಾರಣದಿಂದ ಅಗತ್ಯ ಇಂಧನಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಮಧ್ಯಪ್ರದೇಶವು ಪೆಟ್ರೋಲ್ ಮೇಲೆ ಅತಿ ಹೆಚ್ಚಿನ ತೆರಿಗೆ ವಿಧಿಸಿದರೆ, ರಾಜಸ್ಥಾನವು ಡೀಸೆಲ್ ಮೇಲೆ ಅತಿ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಸದ್ಯಕ್ಕೆ ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 32.90ರೂ ಅಬಕಾರಿ ಶುಂಕ ವಿಧಿಸುತ್ತಿದ್ದರೆ ಡಿಸೇಲ್ ಮೇಲೆ ಲೀಟರ್‌ಗೆ 31.80 ರೂ ವಿಧಿಸುತ್ತಿದೆ. ರಾಜ್ಯಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚಾಗಿದೆ.

ವಿಡಿಯೋ ನೋಡಿ


ಇದನ್ನೂ ಓದಿ: ಮೋದಿ ಸರ್ಕಾರ ಪೆಟ್ಟು ಕೊಟ್ಟಿದ್ದು ಯಡಿಯೂರಪ್ಪನವರಿಗೆ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತ್ರಿಪುರದಲ್ಲಿ ಬುಡಕಟ್ಟು ಜನರಿಂದ ಮತದಾನ ಬಹಿಷ್ಕಾರ

0
ತ್ರಿಪುರ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯಲ್ಲಿ ರಸ್ತೆ, ನೀರಿನಂತಹ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲದೆ ಕಂಗೆಟ್ಟ ಬುಡಕಟ್ಟು ಗ್ರಾಮದ 600ಕ್ಕೂ ಹೆಚ್ಚು ಜನರು ಮತದಾನವನ್ನು ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ...