Homeಮುಖಪುಟತ್ರಿಪುರದಲ್ಲಿ ಬುಡಕಟ್ಟು ಜನರಿಂದ ಮತದಾನ ಬಹಿಷ್ಕಾರ

ತ್ರಿಪುರದಲ್ಲಿ ಬುಡಕಟ್ಟು ಜನರಿಂದ ಮತದಾನ ಬಹಿಷ್ಕಾರ

- Advertisement -
- Advertisement -

ತ್ರಿಪುರ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯಲ್ಲಿ ರಸ್ತೆ, ನೀರಿನಂತಹ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲದೆ ಕಂಗೆಟ್ಟ ಬುಡಕಟ್ಟು ಗ್ರಾಮದ 600ಕ್ಕೂ ಹೆಚ್ಚು ಜನರು ಮತದಾನವನ್ನು ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಸುಮಾರು 900ರಷ್ಟು ಜನಸಂಖ್ಯೆಯಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 7ಕಿ.ಮೀ ದೂರದ ಗ್ರಾಮಸ್ಥರು ರಸ್ತೆ ನಿರ್ಮಾಣ, ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಲವು ತಿಂಗಳುಗಳಿಂದ ಆಗ್ರಹಿಸುತ್ತಿದ್ದರು, ಆದರೆ ಅವರ ಬೇಡಿಕೆ ಈಡೇರದ ಕಾರಣ ಮತದಾನ ಬಹಿಷ್ಕಾರವನ್ನು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಗದಿಯಂತೆ, ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ರೈಮಾ ವ್ಯಾಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸದೈ ಮೋಹನ್ ಪಾರಾ ಮತಗಟ್ಟೆಗೆ ಚುನಾವಣಾ ತಂಡವು ತೆರಳಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸುತ್ತಿರುವುದರಿಂದ ಗ್ರಾಮಸ್ಥರು ಮತಗಟ್ಟೆಯ ಹೊರಗೆ ನಿಂತಿದ್ದಾರೆ ಆದರೆ ಮತ ಚಲಾಯಿಸಲು ಮತಗಟ್ಟೆಗೆ ಪ್ರವೇಶಿಸಲಿಲ್ಲ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಗ್ರಾಮಸ್ಥರು ಸೇರುತ್ತಾರೆ ಎಂದು ನಾವು ಭಾವಿಸಿದ್ದೆವು ಆಡಳಿತವು ಅವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆಯೂ ದೂರು ನೀಡಿದ್ದು, ವರದಿ ಪಡೆದ ನಂತರ ಅಧಿಕಾರಿಗಳ ತಂಡ ಸದಾಯಿ ಮೋಹನ್ ಪಾರಾಕ್ಕೆ ಧಾವಿಸಿ ಮತದಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ ಎಂದು ಎಂದು ಗಂಡಚೆರಾ (ರೈಮಾ ವ್ಯಾಲಿ) ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅರಿಂದಮ್ ದಾಸ್ ಹೇಳಿದ್ದಾರೆ.

ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ರತನ್ ಲಾಲ್ ನಾಥ್ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದು, ಧಲೈ ಜಿಲ್ಲೆಯ ಮಲ್ದಪರ (ಸದಾಯಿ ಮೋಹ ಪಾರಾ) ಮತ್ತು ಗುಮತಿ ಜಿಲ್ಲೆಯ ಅಂಪಿಯಲ್ಲಿ ಎರಡು ಮತಗಟ್ಟೆಗಳ ಮತದಾರರು ರಸ್ತೆ ಮತ್ತು ನೀರಿನ ಪೂರೈಕೆಯ ಬೇಡಿಕೆಯನ್ನು ಪರಿಹರಿಸದ ಕಾರಣ ಮತದಾನ ಮಾಡಲು ಹೋಗುತ್ತಿಲ್ಲ ಎಂದು ಪ್ರತಿಭಟಿಸಿರುವುದು ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಗಳು ಚುನಾವಣೆಯಲ್ಲಿ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಲು ಅಲ್ಲಿಗೆ ಹೋಗಿದ್ದಾರೆ. ಈ ಎರಡು ಮತಗಟ್ಟೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಮತದಾನವು ಸಾಧಾರಣ ಮತ್ತು ಶಾಂತಿಯುತವಾಗಿತ್ತು. ಸಿಪಿಐ(ಎಂ) ಮತಗಟ್ಟೆಗಳಿಗೆ ಪೋಲಿಂಗ್‌ ಏಜೆಂಟ್‌ಗಳನ್ನು ಕಳುಹಿಸಿಲ್ಲ. ಇದು ಯುದ್ಧಭೂಮಿಯಿಂದ ಪಲಾಯನ ಮಾಡುತ್ತಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: 100 ಕೋಟಿ ದಾಟಿದ ಬಿಜೆಪಿಯ ಗೂಗಲ್‌ ಜಾಹೀರಾತು ವೆಚ್ಚ!; ಕರ್ನಾಟಕವೇ ಪ್ರಮುಖ ಟಾರ್ಗೆಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

12ನೇ ತರಗತಿ ಉತ್ತೀರ್ಣರಾದ ಜಾತಿ ಹಿಂಸಾಚಾರ ಸಂತ್ರಸ್ತ, ಲೈಂಗಿಕ ಅಲ್ಪಸಂಖ್ಯಾತೆಯನ್ನು ಅಭಿನಂದಿಸಿದ ಸ್ಟಾಲಿನ್

0
ಪರಿಶಿಷ್ಟ ಎಂಬ ಕಾರಣಕ್ಕೆ ಜಾತಿ ಹಿಂಸೆ ಎದುರಿಸಿದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ದಲಿತ ವಿದ್ಯಾರ್ಥಿ ಚಿನ್ನದೊರೈ 12 ಪಬ್ಲಿಕ್ ಪರೀಕ್ಷೆಗಳಲ್ಲಿ ಶೇಕಡಾ 78 ಅಂಕಗಳನ್ನು ಪಡೆದರೆ, ಟ್ರಾನ್ಸ್‌ಜೆಂಡರ್ ನಿವೇತಾ ಶೇಕಡಾ 47.1 ಅಂಕಗಳನ್ನು...