Homeಮುಖಪುಟಭಾರತೀಯ ಯುವಕರನ್ನು ರಷ್ಯಾ ಯುದ್ಧಭೂಮಿಗೆ ತಳ್ಳಿದ ಆರೋಪ: ನಾಲ್ವರ ಬಂಧನ

ಭಾರತೀಯ ಯುವಕರನ್ನು ರಷ್ಯಾ ಯುದ್ಧಭೂಮಿಗೆ ತಳ್ಳಿದ ಆರೋಪ: ನಾಲ್ವರ ಬಂಧನ

- Advertisement -
- Advertisement -

ಭಾರತೀಯ ಯುವಕರನ್ನು ರಷ್ಯಾ-ಉಕ್ರೇನ್ ಯುದ್ಧ ವಲಯಕ್ಕೆ ತಳ್ಳುತ್ತಿದ್ದ ಮಾನವ ಕಳ್ಳ ಸಾಗಾಣಿಕೆ ಜಾಲದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಾಲ್ವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.

ಕೇರಳದ ತಿರುವನಂತಪುರದ ಅರುಣ್, ಯೇಸುದಾಸ್ ಜೂನಿಯರ್, ಮುಂಬೈ ನಿವಾಸಿ ಆಂಥೋನಿ ಮೈಕೆಲ್ ಇಲಂಗೋವನ್ ಮತ್ತು ನಿಜಿಲ್ ಜೋಬಿ ಬೆನ್ಸಮ್ ಬಂಧಿತರು. ನಿಜಿಲ್ ಜೋಬಿ ಬೆನ್ಸಮ್ ರಷ್ಯಾದ ರಕ್ಷಣಾ ಸಚಿವಾಲಯದ ಗುತ್ತಿಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈತ ಮಾನವ ಕಳ್ಳ ಸಾಗಣಿಕೆ ಜಾಲದ ರಷ್ಯಾದ ಕಿಂಗ್ ಪಿನ್ ಎನ್ನಲಾಗಿದೆ.

ಬಂಧಿತ ಮೈಕೆಲ್ ಅಂಥೋನಿ ದುಬೈನಲ್ಲಿ ನೆಲೆಸಿರುವ ಫೈಸಲ್ ಬಾಬಾ ಜೊತೆಗೂಡಿ ಯುವಕರು ರಷ್ಯಾಗೆ ಪ್ರಯಾಣಿಸಲು ವೀಸಾ ಪ್ರಕ್ರಿಯೆ ಮತ್ತು ವಿಮಾನ ಟಿಕೆಟ್ ಕಾಯ್ದಿರಿಸಲು ಅನುಕೂಲ ಮಾಡುತ್ತಿದ್ದ ಎಂದು ಸಿಬಿಐ ತಿಳಿಸಿದೆ.

ಇನ್ನಿಬ್ಬರು ಆರೋಪಿಗಳಾದ ಅರುಣ್ ಮತ್ತು ಯೇಸುದಾಸ್ ಜೂನಿಯರ್ ಕೇರಳ ಮತ್ತು ತಮಿಳುನಾಡಿನ ಯುವಕರನ್ನು ರಷ್ಯಾ ಸೈನ್ಯಕ್ಕೆ ಕಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ಯೂಟ್ಯೂಬ್ ಚಾನೆಲ್ ಸೇರಿದಂತೆ ಸಾಮಾಜಿಕ ಜಾಲತಾಣ ಮೂಲಕ ಯುವಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಹೆಚ್ಚು ಸಂಬಳದ ಕೆಲಸ ಆಮಿಷವೊಡ್ಡಿ ರಷ್ಯಾಗೆ ಕಳಿಸುತ್ತಿದ್ದರು ಎಂದು ಸಿಬಿಐ ಹೇಳಿದೆ.

ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಕಳ್ಳಸಾಗಣೆಗೆ ಸಂಬಂಧಿಸಿದ 17 ವೀಸಾ ಕನ್ಸಲ್ಟೆನ್ಸಿ ಕಂಪನಿಗಳ ಮಾಲೀಕರು ಮತ್ತು ಏಜೆಂಟರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಕೆಲ ತಿಂಗಳ ಹಿಂದೆ ಹೈದರಾಬಾದ್ ಮೂಲದ ಯುವಕರು ಉಕ್ರೇನ್‌ನಿಂದ ವಿಡಿಯೋ ಕಳಿಸಿ ತಾವು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಬೇರೆ ಕೆಲಸದ ಆಮಿಷವೊಡ್ಡಿ ನಮ್ಮನ್ನು ಕರೆತಂದು ಇಲ್ಲಿ ಗನ್ ಕೊಟ್ಟ ಯುದ್ಧಭೂಮಿಗೆ ಕಳಿಸಲಾಗಿದೆ ಎಂದಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಅಸಾದುದ್ದೀನ್ ಓವೈಸಿ ಯುವಕರನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮೂಲಕ ಮಾನವ ಕಳ್ಳ ಸಾಗಣಿಕೆ ಜಾಲ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : ಬಟಿಂಡಾ ಬಿಜೆಪಿ ಅಭ್ಯರ್ಥಿ ಸ್ವಯಂ ನಿವೃತ್ತಿ ಮನವಿ ತಿರಸ್ಕರಿಸಿದ ಪಂಜಾಬ್ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...