Homeಮುಖಪುಟಮಣಿಪುರದಲ್ಲಿ ಭದ್ರತಾ ಪಡೆಗಳ ಶಿಬಿರದ ಮೇಲೆ ದಾಳಿ: ಇಬ್ಬರು ಯೋಧರ ಹತ್ಯೆ

ಮಣಿಪುರದಲ್ಲಿ ಭದ್ರತಾ ಪಡೆಗಳ ಶಿಬಿರದ ಮೇಲೆ ದಾಳಿ: ಇಬ್ಬರು ಯೋಧರ ಹತ್ಯೆ

- Advertisement -
- Advertisement -

ಇಂದು ಮುಂಜಾನೆ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಶಿಬಿರದ ಮೇಲೆ ಸಶಸ್ತ್ರದಾರಿಗಳು ದಾಳಿ ನಡೆಸಿದ್ದು, ಇಬ್ಬರು ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸಿಆರ್‌ಪಿಎಫ್ ಸಬ್ ಇನ್‌ಸ್ಪೆಕ್ಟರ್ ಎನ್ ಸರ್ಕಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಅರೂಪ್ ಸೈನಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಇನ್ಸ್‌ಪೆಕ್ಟರ್ ಜಾದವ್ ದಾಸ್ ಮತ್ತು ಕಾನ್‌ಸ್ಟೆಬಲ್ ಅಫ್ತಾಬ್ ದಾಸ್ ಎಂದು ಗುರುತಿಸಲಾಗಿದೆ. ಐಆರ್‌ಬಿಎನ್‌ ಶಿಬಿರಕ್ಕೆ ಭದ್ರತೆ ಒದಗಿಸಲು CRPF ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದಾಳಿ ನಡೆಸಿದ ದುಷ್ಕರ್ಮಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಶಸ್ತ್ರದಾರಿಗಳು ಭದ್ರತಾ ಪಡೆಗಳ ಶಿಬಿರವನ್ನು ಗುರಿಯಾಗಿಸಿಕೊಂಡು ಬೆಟ್ಟದ ತುದಿಯಿಂದ ಮನಬಂದಂತೆ ನಾರಾಯಣಸೇನ ಎಂಬ ಹಳ್ಳಿಯ ಕಡೆಗೆ ಗುಂಡು ಹಾರಿಸಿದ್ದಾರೆ. ಮಧ್ಯರಾತ್ರಿ 12.30ರಿಂದ 2.15ರವರೆಗೂ ಗುಂಡಿನ ದಾಳಿ ಮುಂದುವರಿದಿದೆ. ಇದಲ್ಲದೆ ಬಾಂಬ್‌ ದಾಳಿಗಳನ್ನು ಕೂಡ ನಡೆಸಲಾಗಿದೆ. ಇದರಿಂದಾಗಿ  ಸಿಆರ್‌ಪಿಎಫ್‌ನ 128 ಬೆಟಾಲಿಯನ್‌ನ ಔಟ್‌ಪೋಸ್ಟ್‌  ಸ್ಫೋಟಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಣಿಪುರದ ನರಂಸೇನಾ ಪ್ರದೇಶದಲ್ಲಿ ಶಂಕಿತ ಕುಕಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದಾರೆ. ದಾಳಿಯು ಮಧ್ಯರಾತ್ರಿ ಪ್ರಾರಂಭವಾಯಿತು ಮತ್ತು ಈ ಪ್ರದೇಶದಲ್ಲಿ 2:15ರವರೆಗೆ ಮುಂದುವರೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಸಿಆರ್‌ಪಿಎಫ್‌ನ 128 ಬೆಟಾಲಿಯನ್‌ನ ಸಿಬ್ಬಂದಿಗಳು ರಾಜ್ಯದ ಬಿಷ್ಣುಪುರ ಜಿಲ್ಲೆಯ ನರಸೇನಾ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು.

ಮೇ ತಿಂಗಳ ಆರಂಭದಿಂದ ಮಣಿಪುರದಲ್ಲಿ ಜನಾಂಗೀಯ ಕಲಹ ನಡೆಯುತ್ತಿದ್ದು, ರಾಜ್ಯದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೈತೈ ಹಾಗೂ ಕುಕಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದುವರೆಗೆ ಹಿಂಸಾಚಾರಕ್ಕೆ 220ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಎರಡೂ ಸಮುದಾಯಗಳಿಗೆ ಸೇರಿದ  60 ಸಾವಿರಕ್ಕೂ ಹೆಚ್ಚು ನಾಗರಿಕರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ, ಆದರೆ ಕಳೆದ 1 ವರ್ಷದಿಂದ ಸಂಘರ್ಷಕ್ಕೆ ಮಣಿಪುರ ರಾಜ್ಯ ಸಾಕ್ಷಿಯಾಗುತ್ತಿದ್ದರೂ, ಶಾಂತಿ ಸ್ಥಾಪನೆಗೆ ವಿಫಲವಾಗಿರುವುದು ಆಡಳಿತರೂಢ ಬಿಜೆಪಿ ಸರಕಾರದ ವೈಫಲ್ಯವನ್ನು ಎತ್ತಿತ್ತೋರಿಸುತ್ತದೆ.

ಇದನ್ನು ಓದಿ: 100 ಕೋಟಿ ದಾಟಿದ ಬಿಜೆಪಿಯ ಗೂಗಲ್‌ ಜಾಹೀರಾತು ವೆಚ್ಚ!; ಕರ್ನಾಟಕವೇ ಪ್ರಮುಖ ಟಾರ್ಗೆಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...