Homeಮುಖಪುಟನಿವೃತ್ತಿ ನಂತರ ಯಾವುದೇ ಹುದ್ದೆ ಪಡೆಯದಿರಲು ನ್ಯಾ. ಓಕಾ ಮತ್ತು ನಾನು ನಿರ್ಧರಿಸಿದ್ದೇವೆ: ಸಿಜೆಐ ಬಿ.ಆರ್‌...

ನಿವೃತ್ತಿ ನಂತರ ಯಾವುದೇ ಹುದ್ದೆ ಪಡೆಯದಿರಲು ನ್ಯಾ. ಓಕಾ ಮತ್ತು ನಾನು ನಿರ್ಧರಿಸಿದ್ದೇವೆ: ಸಿಜೆಐ ಬಿ.ಆರ್‌ ಗವಾಯಿ

- Advertisement -
- Advertisement -

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರು ಶುಕ್ರವಾರ (ಮೇ.23) ಮುಕ್ತ ನ್ಯಾಯಾಲಯದಲ್ಲಿ ಮಾತನಾಡಿ, “ತಾನು ಮತ್ತು ನಿವೃತ್ತರಾಗುತ್ತಿರುವ ನ್ಯಾಯಮೂರ್ತಿ ಎ.ಎಸ್ ಓಕಾ ಇಬ್ಬರೂ ನಿವೃತ್ತಿಯ ನಂತರದ ಯಾವುದೇ ಹುದ್ದೆಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಇಂದು (ಮೇ.24) ಅಧಿಕೃತವಾಗಿ ನಿವೃತ್ತರಾಗುತ್ತಿರುವ ನ್ಯಾಯಮೂರ್ತಿ ಓಕಾ ಅವರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಸಿಜೆಐ ಈ ಹೇಳಿಕೆ ನೀಡಿದ್ದಾರೆ.

“ನಾವಿಬ್ಬರೂ ನಿವೃತ್ತಿಯ ನಂತರದ ಯಾವುದೇ ಹುದ್ದೆಗಳನ್ನು ಸ್ವೀಕರಿಸುವುದಿಲ್ಲ ಎಂದು ಈಗಾಗಲೇ ನಿರ್ಧರಿಸಿದ್ದೇವೆ. ಆದ್ದರಿಂದ, (ನಿವೃತ್ತಿಯ ನಂತರ) ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಯೋಚಿಸಬಹುದು” ಎಂದು ಸಿಜೆಐ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಓಕಾ ಅವರ ಕೊನೆಯ ಕೆಲಸದ ದಿನದಂದು ಅವರನ್ನು ಗೌರವಿಸಲು ಸಿಜೆಐ ಗವಾಯಿ, ನ್ಯಾಯಮೂರ್ತಿ ಓಕಾ ಮತ್ತು ನ್ಯಾಯಮೂರ್ತಿ ಎ.ಜಿ ಮಸೀಹ್ ಅವರು ಶುಕ್ರವಾರ ಬೆಳಿಗ್ಗೆ ವಿಧ್ಯುಕ್ತ ಪೀಠದಲ್ಲಿ ಕುಳಿತಿದ್ದರು.

ನ್ಯಾಯಮೂರ್ತಿ ಓಕಾ ಅವರು ಕಳೆದ 40 ವರ್ಷಗಳಿಂದ ನನಗೆ ಸ್ನೇಹಿತರಾಗಿದ್ದಾರೆ. ಅವರ ಕೊಡುಗೆಗಳು ಪ್ರಮುಖ ತೀರ್ಪುಗಳನ್ನು ಬರೆಯುವುದನ್ನೂ ಮೀರಿದ್ದು ಎಂದು ಸಿಜೆಐ ಹೇಳಿದ್ದಾರೆ.

“ನ್ಯಾಯಾಲಯದ ಕೊಠಡಿಯ ಒಳಗೆ ನ್ಯಾ. ಓಕಾ ಅವರು ಕಾನೂನು ಮತ್ತು ನೈತಿಕತೆಯ ಪ್ರಾಚಾರ್ಯರಾಗಿದ್ದರು. ವಕೀಲರು ನ್ಯಾಯಾಲಯದ ಮೊದಲ ಅಧಿಕಾರಿಗಳು ಎಂದು ಯಾವಾಗಲೂ ನೆನಪಿಸಿದ್ದಾರೆ. ಅವರ ದೃಢತೆಯ ಹಿಂದೆ ಶಿಕ್ಷಕರ ಸಮರ್ಪಣಾಭಾವ ಇದೆ. ಅವರ ಕೊಠಡಿಯಲ್ಲಿ ನೈತಿಕ ವಕೀಲಿಕೆಗೆ ಆದ್ಯತೆ ದೊರೆತಿದೆ. ಇಷ್ಟು ವರ್ಷಗಳ ಕಾಲ ಅವರು ಅತ್ಯುತ್ಸಾಹದಿಂದ ಕೆಲಸ ಮಾಡಿರುವುದು ಶ್ಲಾಘನೀಯ. ನ್ಯಾಯಮೂರ್ತಿಯಾದಾಗ ಅವರು ಅಧಿಕೃತ ವಾಸದ ಮನೆಯನ್ನು ತೆಗೆದುಕೊಳ್ಳಲಿಲ್ಲ” ಎಂದಿದ್ದಾರೆ.

ಔರಂಗಾಬಾದ್‌ನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದೆ ನ್ಯಾಯಮೂರ್ತಿ ಓಕಾ ಅವರ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಸಿಜೆಐ ಶ್ಲಾಘಿಸಿದ್ದಾರೆ.

ನ್ಯಾಯಮೂರ್ತಿ ಓಕಾ ಅವರ ತೀರ್ಪುಗಳ ಕುರಿತು ಮಾತನಾಡುತ್ತಾ, ಪರಿಸರದ ಬಗೆಗಿನ ಅವರ ಬದ್ಧತೆಯನ್ನು ಸಿಜೆಐ ಶ್ಲಾಘಿಸಿದ್ದಾರೆ. ಪರಿಸರಕ್ಕೆ ಸರಿಪಡಿಸಲಾಗದ ಹಾನಿಯನ್ನು ತಡೆಗಟ್ಟಲು ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಓಕಾ ಅವರ ತಾಯಿಯ ನಿಧನಕ್ಕೆ ಸಿಜೆಐ ಗವಾಯಿ ಸಂತಾಪ ಸೂಚಿಸಿದ್ದಾರೆ. ಗಮನಾರ್ಹವಾಗಿ, ಮೇ 21ರಂದು ನಿಧನರಾದ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಓಕಾ ಅವರು, ಒಂದು ದಿನದ ನಂತರ ಕೆಲಸಕ್ಕೆ ಮರಳಿದ್ದರು. ಕಳೆದ ಎರಡು ದಿನಗಳ ಅವರ ಕಾರ್ಯವೈಖರಿ ನ್ಯಾಯದ ಮೇಲಿನ ಅವರ ಅಚಲ ಬದ್ಧತೆಯನ್ನು ತೋರಿಸುತ್ತದೆ ಎಂದು ಸಿಜೆಐ ಕೊಂಡಾಡಿದ್ದಾರೆ.

ನ್ಯಾಯಮೂರ್ತಿ ಓಕಾ ಅವರು ಕಾನೂನಿಗೆ ನೀಡಿದ ಅವಿಶ್ರಾಂತ ಕೊಡುಗೆ ಮತ್ತು ಸಾಂವಿಧಾನಿಕ ನಿಬಂಧನೆಗಳ ಮೇಲಿನ ಅವರ ನಿಷ್ಠೆಯನ್ನು ಎಲ್ಲರೂ ಸ್ಮರಿಸಬೇಕೆಂದು ಸಿಜೆಐ ಕೋರಿಕೊಂಡಿದ್ದಾರೆ.

“ಸುಪ್ರೀಂ ಕೋರ್ಟ್‌ನಲ್ಲಿ ಓಕಾ ಅವರ ಉಪಸ್ಥಿತಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಸಿಜೆಐ ಹೇಳಿದ್ದಾರೆ.

ನ್ಯಾಯಮೂರ್ತಿ ಓಕಾ ಅವರಿಂದ ನ್ಯಾಯಾಲಯವನ್ನು ಹೇಗೆ ನಡೆಸುವುದು ಮತ್ತು ಬಾರ್ ಸದಸ್ಯರೊಂದಿಗೆ ಹೇಗೆ ವ್ಯವಹರಿಸುವುದು ಸೇರಿದಂತೆ ಬಹಳಷ್ಟು ಕಲಿತಿದ್ದೇನೆ ಎಂದು ನ್ಯಾಯಮೂರ್ತಿ ಎ.ಜಿ ಮಸೀಹ್ ಹೇಳಿದ್ದಾರೆ.

ಎಲ್ಲರೂ ಕೋರಿರುವಂತೆ ನಿಮಗೆ ಮತ್ತು ಕುಟುಂಬಕ್ಕೆ ಸ್ವಲ್ಪ ಸಮಯ ನೀಡಿ. ಅತ್ಯಂತ ಕಠಿಣ ಪರಿಶ್ರಮಿಯಾದ ನ್ಯಾ. ಓಕಾ ಅವರು ನಿದ್ರಿಸುವುದೇ ಕಡಿಮೆ. ಅವರಿಗೆ ಎಲ್ಲವೂ ಒಳಿತಾಗಲಿ ಎಂದಿದ್ದಾರೆ.

ಮಹಾರಾಷ್ಟ್ರ| ಮಾವೋವಾದಿಗಳ ಹಿಡಿತವಿದ್ದ ಗಡ್ಚಿರೋಲಿಯಲ್ಲಿ ಅದಿರು ಸಂಸ್ಕರಣಾ ಘಟಕಕ್ಕೆ ಕೇಂದ್ರ ಅನುಮೋದನೆ; 1 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲು ಅನುಮತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮರ್ಯಾದೆಗೇಡು ಹತ್ಯೆ ತಡೆಯುವ ʼಇವ ನಮ್ಮವ ಇವ ನಮ್ಮವʼ ವಿಧೇಯಕಕ್ಕೆ ರಾಜ್ಯಪಾಲರಿಂದ ಸಹಿ

ರಾಜ್ಯ ವಿಧಾನಮಂಡಲ ಅಂಗೀಕರಿಸಿದ ವಿಧೇಯಕಗಳ ಪೈಕಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬದಲಿಗೆ ಮತಪತ್ರ ಬಳಕೆ ಕಡ್ಡಾಯಗೊಳಿಸುವ ‘2026ರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ ಹೊರತುಪಡಿಸಿ ಉಳಿದವುಗಳಿಗೆ...

ಶಾತವಾಹನ ವಿವಿ ವಿವಾದ: ಬಲಪಂಥೀಯರಿಂದ ದಲಿತ ಪ್ರಾಧ್ಯಾಪಕಿ ಮತ್ತು ವಿದ್ಯಾರ್ಥಿಗೆ ‘ನಗರ ನಕ್ಸಲರು’ ಎಂಬ ಹಣೆಪಟ್ಟಿಯಲ್ಲಿ ನಿರಂತರ ಕಿರುಕುಳ

ತೆಲಂಗಾಣದ ಶಾತವಾಹನ ವಿಶ್ವವಿದ್ಯಾಲಯದಲ್ಲಿ ದಲಿತ ಮಹಿಳಾ ಪ್ರಾಧ್ಯಾಪಕಿ ಮತ್ತು ದಲಿತ ವಿದ್ಯಾರ್ಥಿನಿಯನ್ನು "ನಗರ ನಕ್ಸಲರು" ಎಂದು ಹಣೆಪಟ್ಟಿ ಕಟ್ಟಿ ನಿರಂತರ ಕಿರುಕುಳ ನೀಡಿದ ನಂತರ ವಿವಾದ ಭುಗಿಲೆದ್ದಿದ್ದು, ಇದಕ್ಕೆ ಶಿಕ್ಷಣ ತಜ್ಞರು ಮತ್ತು...

ಕೇಂದ್ರದ ಹೊಸ ಕಾಯ್ದೆಯಿಂದ ಸಂಕಷ್ಟ : ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಹಾರ್ಮೋನ್ ಚಿಕಿತ್ಸೆ ಮುಂದುವರಿಸಲು ಕೇರಳ ಹೈಕೋರ್ಟ್ ಅನುಮತಿ

ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026 ಅಂಗೀಕಾರಗೊಂಡ ನಂತರ ಆಸ್ಪತ್ರೆಗಳು ತಮ್ಮ ಚಿಕಿತ್ಸೆಯನ್ನು ಸ್ಥಗಿತಗೊಳಿಸಿವೆ ಎಂದು ಆರೋಪಿಸಿದ್ದ ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಹಾರ್ಮೋನ್ ಬದಲಿ ಚಿಕಿತ್ಸೆಯನ್ನು ಮುಂದುವರಿಸಲು ಕೇರಳ ಹೈಕೋರ್ಟ್...

ಮಾದಕವಸ್ತು ತನಿಖೆಗೆ ಸಹಾಯಕವಾಗಿ AI ಆಧಾರಿತ ಅಪ್ಲಿಕೇಶನ್ ಆರಂಭಿಸಿದ ಗುಜರಾತ್ ಪೊಲೀಸರು

ಅಹಮದಾಬಾದ್: ಮಾದಕವಸ್ತು ಪ್ರಕರಣಗಳ ತನಿಖೆಯನ್ನು ಸುಲಭವಾಗಿಸಲು ಮತ್ತು ವಿಚಾರಣೆಯ ಸಮಯದಲ್ಲಿ ಅವುಗಳನ್ನು ಬಲಪಡಿಸಲು, ಇದರಿಂದಾಗಿ ಶಿಕ್ಷೆಯ ಪ್ರಮಾಣ ಸುಧಾರಿಸಲು ಗುಜರಾತ್ ಪೊಲೀಸರು ಶುಕ್ರವಾರ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಪ್ಲಿಕೇಶನ್ "NARIT AI"...

ಇಸ್ಲಾಮಾಬಾದ್‌ ಶಾಂತಿ ಮಾತುಕತೆ | ಅಮೆರಿಕ–ಇಸ್ರೇಲ್ ಹತ್ಯೆಗೈದ ಮಕ್ಕಳ ರಕ್ತಸಿಕ್ತ ಬ್ಯಾಗ್‌, ಶೂ ಹೊತ್ತು ತಂದ ಇರಾನ್

ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸುವಾಗ, ಅಮೆರಿಕ-ಇಸ್ರೇಲ್‌ನ ಬಾಂಬ್‌ ದಾಳಿ ನಡೆಸಿ ಹತ್ಯೆಗೈದ ಮಕ್ಕಳ ಫೋಟೋ, ರಕ್ತಸಿಕ್ತ ಬ್ಯಾಗ್ ಮತ್ತು ಶೂಗಳನ್ನು ವಿಮಾನದಲ್ಲಿ ಹೊತ್ತು ತರುವ ಮೂಲಕ ಇರಾನ್‌ ಜಗತ್ತಿನ ಗಮನಸೆಳೆದಿದೆ. ಸಾಮಾಜಿಕ ಜಾಲತಾಣ...

ಮಣಿಪುರ: ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳೊಂದಿಗೆ ಇಬ್ಬರನ್ನು ಬಂಧಿಸಿದ ಭದ್ರತಾ ಪಡೆ

ಇಂಫಾಲ: ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳನ್ನು(ಪಾಪಿ ಸೀಡ್ಸ್) ವಶಪಡಿಸಿಕೊಂಡ ನಂತರ ಭದ್ರತಾ ಪಡೆಗಳು ಅವರನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಚುರಾಚಂದ್‌ಪುರ ಪೊಲೀಸ್ ಠಾಣೆ...

ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಆಕೆಯ ಗರ್ಭಪಾತ ಮಾಡಿದ ಆರೋಪದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀಡಿದ ದೂರು ಆಧರಿಸಿ...

ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ : ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋರಿದ್ದ ಮಹಿಳೆಯ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಏ.10) ತಿರಸ್ಕರಿಸಿದೆ ಎಂದು ಕಾನೂನು...

ಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ; ಪಾಕಿಸ್ತಾನ ಮಧ್ಯಸ್ಥಿಕೆ

ಹಲವು ರೀತಿಯ ಪ್ರತಿಷ್ಠೆ ಪ್ರದರ್ಶನ, ಭಿನ್ನಾಭಿಪ್ರಾಯಗಳ ನಡುವೆ ಅಮೆರಿಕ-ಇರಾನ್ ಶಾಂತಿ ಮಾತುಕತೆ ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಪಾಕಿಸ್ತಾನದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ....

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...