ಅನರ್ಹ ಶಾಸಕ ಕೆ.ಗೋಪಾಲಯ್ಯ ಯಾವತ್ತೋ ಎನ್‌ಕೌಂಟರ್ ಆಗಬೇಕಿತ್ತು, ಪೊಲೀಸರಿಂದ ಮಾತ್ರವಲ್ಲ ರೌಡಿಗಳಿಂದ ಸಹ. ಎರಡೂ ರೀತಿ ಇತ್ತು. ಅವರಿಗೆ ರಕ್ಷಣೆ ಸಿಕ್ಕಿದ್ದೆ ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕುಮಾರಸ್ವಾಮಿ ಹೇಳಿದ್ದಾರೆ.
ಮಹಾಲಕ್ಷ್ಮಿ ಲೇಔಟ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಗಿರೀಶ್ ನಾಶಿಯವರ ಪರವಾಗಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು “ಸಮಾಜಘಾತುಕ ಚಟುವಟಿಕೆಗಳಲ್ಲಿದ್ದ ಗೋಪಾಲಯ್ಯನವರಿಗೆ 2008ರಲ್ಲಿ ಬದಲಾಗಿ ಎಂದು ತೀರ್ಮಾನ ಕೊಟ್ಟಿದ್ದೆ. ತಮ್ಮ ನಡವಳಿಕೆಯಲ್ಲಿ ಅವರು ಬದಲಾವಣೆ ಮಾಡಿಕೊಂಡಿಲ್ಲ. ಅದನ್ನೆಲ್ಲಾ ನೆನಪಿಸಿಕೊಟ್ಟಿದ್ದಿನಿ. ಹಾಗಾಗಿ ಚೂರಿ ಹಾಕುತ್ತೇನೆ ಎನ್ನುವ ಹೇಳಿಕೆಗಳನ್ನು ನಿಲ್ಲಿಸಿದರೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೇಶದ್ರೋಹದ ಕೇಸ್
ಇದಕ್ಕೆ ಪ್ರತಿಕ್ರಿಯಿಸಿದ ಗೋಪಾಲಯ್ಯನವರು “ಅವರ ಮುಂದೆ ರಾಜಕೀಯವಾಗಿ ನಾನು ಚಿಕ್ಕವನು, ಅವರ ಮನೆ ಅನ್ನ ತಿಂದಿದ್ದೀನಿ, ಅವರೇನು ಹೇಳಿದರೂ ಸಹ ಅದು ನನಗೆ ಆರ್ಶೀವಾದ ಅಂದುಕೊಳ್ಳುತ್ತೇನೆ. ಅವರಿಗೆ ಒಳ್ಳೇಯದಾಗಲಿ, ಭಗವಂತ ಒಳ್ಳೆಯದು ಮಾಡಲಿ” ಎಂದು ಹೇಳಿದ್ದಾರೆ.


