ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಆಸನಗಳು ಎಂದು ಕಾಂಗ್ರೆಸ್ ಪಟ್ಟಿ ಮಾಡಿ ಕಿಚಾಯಿಸಿದೆ.
ಮೋದಿಯವರ ಕುರಿತು ಎನಿಮೇಷನ್ ವಿಡಿಯೋ ಮಾಡಿ ಹಂಚಿಕೊಂಡಿರುವ ಕಾಂಗ್ರೆಸ್ ಮೋದಿ ಅವರ ನೆಚ್ಚಿನ ಆಸನಗಳ ಪಟ್ಟಿಯನ್ನು ಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ, ”ಸಮಸ್ಯೆಗಳ ವಿಚಾರದಲ್ಲಿ ಮೌನವಾಗಿ ಇರುವುದು, ಸುಳ್ಳು ಹೇಳುವುದು, ಕ್ಯಾಮರಾಗಳಿಗೆ ಪೋಸ್ ನೀಡುವುದು, ಪ್ರಚಾರಕ್ಕೆ ಆದ್ಯತೆ ಕೊಡುವುದು, ಯಾರ ಮಾತನ್ನೂ ಕೇಳಿಸಿಕೊಳ್ಳದಿರುವುದು, ಉಡುಪಿಗೆ ಆದ್ಯತೆ ನೀಡುವುದು, ಸ್ನೇಹಿತರೊಂದಿಗಷ್ಟೇ ಬೆರೆಯವುದು – ಇವು ಮೋದಿಯವರ ನೆಚ್ಚಿನ ಆಸನಗಳು” ಎಂಬರ್ಥದಲ್ಲಿ ಮೋದಿಯವರನ್ನು ಕಿಚಾಯಿಸಿ ಟ್ವೀಟ್ ಮಾಡಿದೆ.
PM मोदी के पसंदीदा आसन
मौनासन
जुमलासन
कैमरासन
प्रचारासन
अनसुनासन
मोरासन
वस्त्रासन
मित्रासन pic.twitter.com/hO8QCA0zSU— Congress (@INCIndia) June 21, 2023
ಕಾಂಗ್ರೆಸ್ ಹೆಸರಿಸಿರುವ ಮೋದಿ ನೆಚ್ಚಿನ ಆಸನ ಪಟ್ಟಿ ಇಲ್ಲಿದೆ..
* ಮೌನಾಸನ್
* ಜುಮ್ಲಾಸನ್
* ಕ್ಯಾಮರಾಸನ್
* ಪ್ರಚಾರಾಸನ್
* ಅನ್ಸುನಾಸನ್
* ಮೊರಾಸನ್
* ವಸ್ತ್ರಾಸನ್
* ಮಿತ್ರಾಸನ್.
ಪ್ರಧಾನಿ ಮೋದಿ ಅಧಿಕಾರ ಅವಧಿಯಲ್ಲಿ ಅವರ ಕಾರ್ಯವೈಖರಿಯ ಬಗ್ಗೆ ಟೀಕಿಸಿರುವ ವ್ಯಂಗ್ಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.


