Homeಕರ್ನಾಟಕಪ್ರಧಾನಿ ಮೋದಿಯವರ ಬಡವಿರೋಧಿ, ಸೇಡಿನ ರಾಜಕಾರಣದ ಕ್ರೋನಾಲಜಿ ವಿವರಿಸಿದ ಜೈರಾಮ್ ರಮೇಶ್

ಪ್ರಧಾನಿ ಮೋದಿಯವರ ಬಡವಿರೋಧಿ, ಸೇಡಿನ ರಾಜಕಾರಣದ ಕ್ರೋನಾಲಜಿ ವಿವರಿಸಿದ ಜೈರಾಮ್ ರಮೇಶ್

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಬಡವರ ವಿರೋಧಿಯಾಗಿದೆ. ಕರ್ನಾಟಕದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೇ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಈ ವಿಚಾರವಾಗಿ ಟ್ವಿಟ್ ಮಾಡಿರುವ ಅವರು, ಪ್ರಧಾನಿ ಮೋದಿಯವರ ಬಡವಿರೋಧಿ ಮತ್ತು ಸೇಡಿನ ರಾಜಕಾರಣದ ಇತ್ತೀಚಿನ ಕ್ರೋನಾಲಜಿ ಹೀಗಿದೆ ಎಂದು ಟ್ವಿಟ್ ಮಾಡಿದ್ದಾರೆ.

1. ಮೇ 13, 2023: ಕರ್ನಾಟಕದ ಜನರಿಂದ ಪ್ರಧಾನಿ ಮತ್ತು ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ.

2. ಜೂನ್ 2, 2023: ಬಡ ಕುಟುಂಬಗಳಿಗೆ 10 ಕೆಜಿ ಉಚಿತ ಆಹಾರ ಧಾನ್ಯಗಳನ್ನು ನೀಡುವ ಅನ್ನಭಾಗ್ಯ ಗ್ಯಾರಂಟಿಯನ್ನು ಜುಲೈ 1ರಿಂದ ಜಾರಿಗೊಳಿಸುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

3. ಜೂನ್ 13, 2023: ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಎಫ್‌ಸಿಐನಿಂದ ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ನಿಷೇಧಿಸುವ ಸುತ್ತೋಲೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಅನ್ನಭಾಗ್ಯ ಯೋಜನೆಗೆ ಹಿನ್ನಡೆ ತರಲು ಈ ಆದೇಶ ಹೊರಡಿಸಲಾಯಿತು.

”ಕರ್ನಾಟಕವು ಎಫ್‌ಸಿಐಗೆ ಪ್ರತಿ ಕ್ವಿಂಟಲ್‌ಗೆ 3400ರೂ. ನೀಡುತ್ತೇವೆ ಎಂದರೂ ಅಕ್ಕಿ ನೀಡಲಿಲ್ಲ. ಆದರೆ ಎಫ್‌ಸಿಐ ಎಥೆನಾಲ್ ಉತ್ಪಾದನೆ ಮತ್ತು ಪೆಟ್ರೋಲ್ ಮಿಶ್ರಣಕ್ಕಾಗಿ ಪ್ರತಿ ಕ್ವಿಂಟಾಲ್‌ಗೆ 2000ರೂ.ಗೆ ಅಕ್ಕಿಯನ್ನು ಮಾರಾಟ ಮಾಡಲು ಸಿದ್ಧವಾಗಿದೆ. ಬೇರೆಲ್ಲಕ್ಕಿಂತಲೂ ಆಹಾರ ಭದ್ರತೆ ಕುರಿತ ಕಾಳಜಿ ಆದ್ಯತೆಯಾಗಬೇಕಿದೆ” ಎಂದು ಜೈರಾಂ ರಮೇಶ್ ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಹೀನ ರಾಜಕೀಯವು ಬಡವರ ತಟ್ಟೆಯ ಅನ್ನಕ್ಕೂ ವ್ಯಾಪಿಸಿರುವುದು ದುರಂತ: ಕಾಂಗ್ರೆಸ್

ಅಕ್ಕಿ ವಿಚಾರಕ್ಕೆ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಆಕ್ರೋಶ

ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದು, ”ಬಿಜೆಪಿಯ ಹೀನ ರಾಜಕೀಯವು ಬಡವರ ತಟ್ಟೆಯ ಅನ್ನಕ್ಕೂ ವ್ಯಾಪಿಸಿರುವುದು ದುರಂತ. FCI ಗೋದಾಮುಗಳು ಕರ್ನಾಟಕದಲ್ಲೇ ಇವೆ, FCI ನಿಂದ ಅಕ್ಕಿ ಖರೀದಿಸುವುದಾದರೆ ಸಾಗಣೆ ವೆಚ್ಚ ಹಾಗೂ ಸಮಯ ಉಳಿಯಲಿದೆ. ಇತರ ರಾಜ್ಯಗಳಿಂದ ತರಿಸುವುದಾದರೆ ಸಾಗಣೆಯ ದರ ಹಾಗೂ ಸಮಯ ಹೆಚ್ಚಲಿದೆ. ನಮ್ಮ ಗ್ಯಾರಂಟಿಗಳ ಯಶಸ್ಸನ್ನು ತಡೆಯುವ ಬಿಜೆಪಿಯ ಕುತಂತ್ರವು ರಾಜ್ಯಕ್ಕೆ ಹೊರೆಯಾಗಿ ಪರಿಣಮಿಸಿದೆ” ಎಂದಿದ್ದಾರೆ.

ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿರುವ ಕಾಂಗ್ರೆಸ್, ”ಕರ್ನಾಟಕದ ಬಡವರಿಗೆ ಅನ್ನ ನೀಡುವ ಯೋಜನೆಯೊಂದಕ್ಕೆ ಅಡೆತಡೆ ಉಂಟಾದಾಗ ಪಕ್ಷಾತೀತವಾಗಿ ಜನಪರವಾಗಿ ಕೆಲಸ ಮಾಡಬೇಕಿತ್ತು, ಬಡವರಿಗೆ ಅನ್ನ ಕೊಡಿಸುವ ಹೊಣೆಗಾರಿಕೆಯನ್ನು ವಿರೋಧಪಕ್ಷಗಳೂ ಹೊರಬೇಕಿತ್ತು. ಆದರೆ ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರುವ ಬದಲು ಅನ್ನದ ವಿಷಯದಲ್ಲೂ ಕ್ಷುಲ್ಲುಕ ರಾಜಕೀಯ ಮಾಡಲು ಹೊರಟಿದ್ದು ದುರಾದೃಷ್ಟಕರ” ಎಂದು ಟ್ವೀಟ್ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...