Homeಕರ್ನಾಟಕರಾಜ್ಯೋತ್ಸವದ ಕುರಿತು ಕನ್ನಡದಲ್ಲಿ ಟ್ವೀಟ್ ಮಾಡಿ ಪ್ರಶಂಸೆ ಮತ್ತು ಟ್ರೋಲ್‌ಗೊಳಗಾದ ಪ್ರಧಾನಿ ಮೋದಿ...

ರಾಜ್ಯೋತ್ಸವದ ಕುರಿತು ಕನ್ನಡದಲ್ಲಿ ಟ್ವೀಟ್ ಮಾಡಿ ಪ್ರಶಂಸೆ ಮತ್ತು ಟ್ರೋಲ್‌ಗೊಳಗಾದ ಪ್ರಧಾನಿ ಮೋದಿ…

- Advertisement -
- Advertisement -

ಕನ್ನಡದ ರಾಜ್ಯೋತ್ಸವದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಟ್ವೀಟ್‌ ಮಾಡಿ ಪ್ರಾರ್ಥಿಸಿದ್ದಾರೆ. ಹಲವು ಜನರು ಪ್ರಧಾನಿಯವರ ಕನ್ನಡ ಟ್ವೀಟ್‌ ನೋಡಿ ಪುಳಕಿತಗೊಂಡರೆ ಮತ್ತಷ್ಟು ಜನರು ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.

“ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ.” ಎಂದು ನರೇಂದ್ರ ಮೋದಿಯವರು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ “ಸರ್ ನಿಮ್ಮ ಬೆಂಬಲದ ಸರ್ಕಾರ ಇವತ್ತು‌ ಕನ್ನಡದ ಧ್ವಜವನ್ನ ಎಷ್ಟೋ ಜಿಲ್ಲಾ ಕೇಂದ್ರಗಳಲ್ಲಿ‌ ಹಾರಿಸುತ್ತಿಲ್ಲ ಎಂಬ ಸುದ್ದಿ ಬಂದಿಲ್ವ ಯಾಕೆ ಬಂದಿದ್ರು ಸುಮ್ಮನಿದ್ದೀರಾ..” ಎಂದು ಸುಮಂತ್‌ ಗೌಡ ಎಂಬುವವರು ಪ್ರಶ್ನಿಸಿದ್ದಾರೆ.

ಪ್ರಧಾನಿಗಳೇ.. ಈಗ ಏನೋ ಕರ್ನಾಟಕದ ಕಾಳಜಿ ವಹಿಸೋರ ರೀತಿ ಟ್ವೀಟ್ ಮಾಡೋ ನಾಟಕ ಬಿಡಿ.. ಉತ್ತರ ಕರ್ನಾಟಕದ ಜನ ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ ಅವರ ಜೀವನಕ್ಕೆ ಅಗತ್ಯತೆಗಳನ್ನ ಕಲ್ಪಿಸುವ ಕಡೆ ನಿಮ್ಮ ಗಮನ ಕೊಡಿ.. ಈ ನಾಟಕಗಳೆಲ್ಲ ನಿಲ್ಲಿಸಿ, ಇನ್ಮುಂದೆ ಪ್ರಯೋಜನಕ್ಕೆ ಬರಲ್ಲ ಇವು ಎಂದು ಪ್ರಸನ್ನ ಕುಮಾರ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದೆಡೆ @BJP4Karnataka
ಸರ್ಕಾರ #ನಾಡಧ್ವಜ ಹಾರದಂತಿರಬೇಕು ಎಂಬ ನೀತಿಯನ್ನು ಜಾರಿಗೊಳಿಸಿದೆ, ಇನ್ನೊಂದೆಡೆ #ರಾಜ್ಯೋತ್ಸವ ಹೆಸರಿನಲ್ಲಿ ಹುಸಿ ಶುಭಾಶಯ ಕೋರುವ ಅವರದೇ ಪಕ್ಷದ ನಾಯಕರು. ಎಂತಹ ಆಶಾಢಭೂತಿತನ ಇವರದ್ದು. #KannadaRajyotsava ಮತ್ತು ಬಾವುಟ ನಮ್ಮ ಹಕ್ಕು ಅದನ್ನು ತಡೆಯಲು ನೆಡೆಸುವ ಸಕಲ ಯತ್ನವೂ ಸೋಲಲಿದೆ. #ಜಯಕರ್ನಾಟಕ ಎಂದು ಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡದಲ್ಲಿ ಟ್ವೀಟ್ ಮಾಡಿದಕ್ಕೆ ಧನ್ಯವಾದಗಳು ಮೋದಿಜಿ. ಆದರೆ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ? ಕನ್ನಡಿಗರು ವಿಶಾಲ ಹೃದಯವಂತಿಕೆಯರು ನಿಜ,ಆದರೆ ನಮ್ಮ ನಾಡ ಧ್ವಜದ ತಂಟೆಗೆ ಬರೋದು,ಬಲವಂತದ ಹಿಂದಿ ಹೇರಿಕೆ ಸಹಿಸೊಲ್ಲ. ಕೊಡುಗೆ ನೀಡಿ ಮಾತಾಡಿ.. ಕನ್ನಡ ಕಾಮಧೇನು… ಕರ್ನಾಟಕ ಕಲ್ಪವೃಕ್ಷ.. ಎಂದು ದೇವರಾಜ್‌ ಅಚಾರ್ಯರವರು ಕಮೆಂಟ್‌ ಮಾಡಿದ್ದಾರೆ.

ಇಂದು ಮಾಡುವ ಟ್ವೀಟ್ ಅನ್ನು ಅಂದು ಉತ್ತರ ಕರ್ನಾಟಕ ಮುಳುಗಿದಾಗ ಮಾಡಿದ್ದರೆ ನಮ್ಮ ಜನರಿಗೆ ಇನ್ನೂ ಹತ್ತಿರವಾಗುತ್ತಿದ್ದೀರಿ. ಇನ್ನೂ ಕಾಲ ಮಿಂಚಿಲ್ಲ ಕನ್ನಡತನವನ್ನು ಉಳಿಸಿ ಬೆಳೆಸುವ ನಿಮ್ಮ ಮಾತು ಬರೀ ಟ್ವೀಟ್ ಗೆ ಸಿಮೀತವಾಗದೆ ಕಾರ್ಯರೂಪಕ್ಕೆ ಬರುವ ಮಾತಾಗಲಿ. ಎಂದು ತರ್ಲೆಪುಟ್ಟ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಮೊದಲು ನೆರೆ ಸಂತ್ರಸ್ತರಿಗೆ ಹಣ ಕೊಡಪ್ಪ..ಕನ್ನಡದ ಮೇಲಿನ ದಬ್ಬಾಳಿಕೆ ನಿಲ್ಲಿಸಪ್ಪ ತಾತಪ್ಪ.. ಆಮೇಲೆ ಬೇಕಿದ್ರೆ ನಾಟಕ ಮಾಡು ಎಂದು ಸಾಗರ್‌ ಮನಸು ಪ್ರತಿಕ್ರಿಯಿಸಿದ್ದಾರೆ.

ಧನ್ಯವಾದಗಳು. ನಿಮ್ಮ ಈ ಸಂದೇಶ ಪರಿಪೂರ್ಣವಾಗುವುದು ನೆರೆ ಸಂತ್ರಸ್ಥರಿಗೆ ಸಿಗಬೇಕಾದ ಎಲ್ಲಾ ರೀತಿಯ ಸಹಾಯಗಳು ದೊರೆತಾಗ ಮಾತ್ರ! ಎಂದು ಗಣೇಶ್‌ ರಾವ್‌ರವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆ ಬಂದಾಗ 20ಕ್ಕು ಹೆಚ್ಚು ಬಾರಿ ಚುನಾವಣಾ ಪ್ರಚಾರಕ್ಕೆ ಬರುವ ನೀವು ನೆರೆ ಬಂದಾಗ ಒಮ್ಮೆಯೂ ಭೇಟಿ ನೀಡಿಲ್ಲ ಮತ್ತು ನೀಡೋದು ಇಲ್ಲ. ಆದರೆ ಇವಾಗ ದೊಡ್ಡದಾಗಿ #ಕನ್ನಡರಾಜ್ಯೋತ್ಸವ ದ ಶುಭಾಶಯ ತಿಳಿಸುತ್ತಿದ್ದೀರಿ? ನಿಮ್ಮ ನಟನೆಯ ಮುಂದೆ ಎಲ್ಲಾ ನಟರು ಶೂನ್ಯ ಬಿಡಿ ಎಂದು ಚೇತನ್‌ ಕುಮಾರ್‌ ಎಂಬುವವರು ಕಿಡಿಕಾರಿದ್ದಾರೆ.

ತಮಗೂ ಕೂಡಾ ಕನ್ನಡ ರಾಜ್ಯೋತ್ಸವದ ಹಾರ್ಧಿಕ್ ಶುಭಾಶಯಗಳು ನಮ್ಮ ದೇಶದ ಹೆಮ್ಮೆಯ ಮೋದಿಜೀ ಅವರಿಗೆ ಈ ನಿಮ್ಮದ ಟ್ವಿಟ್ ಎಲ್ಲಾ ಕನ್ನಡ ಮಹಾ ಜನತೆಗೆ ಖುಷಿ ತಂದಿದೆ ನನ್ನ ದೇವ್ರು … ಎಂದು ನಮೋ ಮಹಾಂತೇಶ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ನೀವು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಕೇಳುವುದೇ ಚೆಂದ ಮೋದಿ ಅವರೇ, ಹೌದು ಕರ್ನಾಟಕ ವಿಶಾಲ ಹೃದಯ ಉಳ್ಳ ಹೆಮ್ಮೆಯ ಕನ್ನಡಿಗರ ನಾಡು. ಕನ್ನಡ ರಾಜ್ಯೋತ್ಸವದ ಶುಭಾಶಯಗಳು  ಎಂದು ಸಹನಾ ರೇಣುಕಾರವರು ಪ್ರತಿಕ್ರಿಯೆ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಆತನಿಗೆ ಕನ್ನಡ ಬರುವುದಿಲ್ಲ ಎಂದು ಗೊತ್ತಿದ್ದರೂ ಕೆಲವು ಮೂರ್ಖರು ಪುಳಕಿತರಾಗಿದ್ದಾರಲ್ಲ! ಈತ ರಾಜ್ಯದ ಅಭಿವೃದ್ಧಿಗೆ ಪ್ರಾರ್ಥನೆ ಮಾಡುವ ಬದಲು ಕೆಲಸಮಾಡಲಿ!

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...