Homeಕರ್ನಾಟಕಕಸಾಪ ಆಗದಿರಲಿ ನಿವೃತ್ತ ನೌಕರರ ಆಶ್ರಯತಾಣ

ಕಸಾಪ ಆಗದಿರಲಿ ನಿವೃತ್ತ ನೌಕರರ ಆಶ್ರಯತಾಣ

- Advertisement -
- Advertisement -

ಕಸಾಪ ಕಳವಳ ಚರ್ಚೆ-1

ಹಲವು ವೈರುಧ್ಯ-ವೈಪರೀತ್ಯಗಳ ನಡುವೆಯೂ ಕಲ್ಬುರ್ಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಸಾಂಗವಾಗಿ ಮುಗಿದಿದೆ. ಆದರೆ ಅದರ ಬೆನ್ನಿಗೇ `ಕಸಾಪ ಕಾಳಜಿ’ಯ ಸುತ್ತ ಸಾಕಷ್ಟು ಆತಂಕಗಳೂ ತಲೆಯೆತ್ತಿವೆ. ಈಗಾಗಲೇ ಜಾತಿ ರಾಜಕಾರಣದ ಸೋಂಕಿನಿಂದ ತತ್ತರಿಸಿರುವ ಕಸಾಪ ಆವರಣವನ್ನು ಈಗ ಶುದ್ಧ ಕೋಮುವಾದವೂ ಹೊಕ್ಕು ಕೂತಿದೆ. ಶೃಂಗೇರಿ ಸಮ್ಮೇಳನಕ್ಕೆ ಕಸಾಪ ಸ್ಪಂದಿಸಿದ ರೀತಿಯೇ ಇದಕ್ಕೆ ಸಾಕ್ಷಿ. ಕಸಾಪ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಸಮ್ಮೇಳನದಲ್ಲೆ, ಸರ್ಕಾರಿ ಗುಮಾಸ್ತಗಿರಿಗೆ ಸೀಮಿತವಾದ ಹಾಲಿ ಅಧ್ಯಕ್ಷರ ರಾಜೀನಾಮೆಯ ಕೂಗು ಕೇಳಿಬಂದದ್ದು ತಳ್ಳಿಹಾಕುವ ಸಂಗತಿಯಲ್ಲ.

ಆದರೆ ಕಸಾಪ ಪಾಲಿಗೆ ಇದಕ್ಕಿಂತಲು ಘೋರವಾದ ದಿನಗಳು ಎದುರಾಗುವ ಲಕ್ಷಣಗಳು ಇದೇ ಸಮ್ಮೇಳನದಲ್ಲಿ ಸ್ಪಷ್ಟವಾಗಿ ಗೋಚರಿಸಿವೆ. ಮುಂದಿನ ಬಾರಿ ಕಸಾಪ ಅಧ್ಯಕ್ಷರಾಗಲು ಮತ್ತೊಮ್ಮೆ ಸಾಹಿತ್ಯದ ಸೊಗಡೇ ಗೊತ್ತಿಲ್ಲದ ನಿವೃತ್ತ ಸರ್ಕಾರಿ ಅಧಿಕಾರಿಗಳು, ಒಂದು ರಾಜಕೀಯ ಪಕ್ಷದಲ್ಲಿ ನೇರವಾಗಿ ಗುರುತಿಸಿಕೊಂಡವರು ಕಸರತ್ತು ಶುರು ಮಾಡಿದ್ದಾರೆ. ಈಗ ಸಾಹಿತ್ಯಾಸಕ್ತರು ಎಚ್ಚೆತ್ತುಕೊಂಡು, ಸಾಂಸ್ಕøತಿಕ ಮನಸ್ತಾಪಗಳನ್ನು ಬದಿಗಿರಿಸಿ ಒಂದು ನಿರ್ದಿಷ್ಟ ಯೋಜನೆಯೊಂದಿಗೆ ಕಾರ್ಯೋನ್ಮುಖರಾಗದಿದ್ದಲ್ಲಿ ಮುಂದೊಂದು ದಿನ ಈಗಿನಂತೆಯೇ ಕಸಾಪ ಚುಕ್ಕಾಣಿ ಹಿಡಿದವರ ವರ್ತನೆಗಳನ್ನು ದೂಷಿಸುತ್ತಾ ಕೂರುವ ಒಣಕಾಯಕವಷ್ಟೇ ಉಳಿಯುವುದು. ಅದರಿಂದ ದೂಷಿಸುವವರಿಗೆ ಆತ್ಮತೃಪ್ತಿ ಸಿಗಬಹುದೇ ವಿನಾಃ ಕಸಾಪಕ್ಕಾಗಲಿ, ಕನ್ನಡಕ್ಕಾಗಲಿ, ಸಾಹಿತ್ಯಕ್ಕಾಗಿ ಕಿಂಚಿತ್ತೂ ಪ್ರಯೋಜನವಿಲ್ಲ. ಹಾಗಾಗಿ ಇದು ಎಚ್ಚೆತ್ತುಕೊಳ್ಳಲೇಬೇಕಾದ ಕಾಲ. ಕಸಾಪಕ್ಕೆ ಎದುರಾಗಿರುವ ಅಸಲಿ ಸಂಕಟಗಳೇನು? ಮುಂದೇನು ಮಾಡಬಹುದು? ಎಂಬುದನ್ನು ಚರ್ಚಿಸಲು ನ್ಯಾಯಪಥ ಪತ್ರಿಕೆ ಈ ಚರ್ಚಾ ಸರಣಿ ಶುರು ಮಾಡಿದೆ. ಆ ಮೂಲಕ ಒಂದು ವೇದಿಕೆ ರೂಪುಗೊಳ್ಳಲಿ ಎಂಬುದು ಪತ್ರಿಕೆಯ ಆಶಯ. ಓದುಗರು ತಮ್ಮ ಅನಿಸಿಕೆಗಳನ್ನು ಬರಹರೂಪದಲ್ಲಿ ಕಳುಹಿಸಬಹುದು. ನಿಮ್ಮ ಬರಹ ಯಾವುದೇ ವ್ಯಕ್ತಿನಿಷ್ಠ, ವ್ಯಕ್ತಿದೂಷಣೆಯಿಂದ ಕೂಡಿರುವುದಕ್ಕಿಂತ ಕಸಾಪ ಪಕ್ಷಪಾತಿಯಾಗಿರಲಿ ಎಂಬುದಷ್ಟೇ ನಮ್ಮ ವಿನಂತಿ….

ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಹಿತ್ಯ ಚಟುವಟಿಕೆಗಳಿಗಿಂತ ಇತರೆ ಕಾರಣಕ್ಕೆ ಸುದ್ದಿಯಲ್ಲಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಮಹದಾಯಿ ನೀರು, ಕರ್ನಾಟಕದ ನೆರೆಹೊರೆಯ ರಾಜ್ಯಗಳಲ್ಲಿ ಕನ್ನಡ ಶಾಲೆಗಳ ದುಸ್ಥಿತಿ, ಕನ್ನಡಿಗರಿಗೆ ಕರ್ನಾಟಕದಲ್ಲಿಯೇ ಉದ್ಯೋಗ ದೊರಕದಿರುವುದು ಮುಂತಾದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ, ಸಮಸ್ಯೆ ನಿವಾರಣೆಗೆ ಒತ್ತಾಯಿಸುವ ಕೆಲಸವನ್ನು ಮಾಡದಿರುವುದರಿಂದ ಪರಿಷತ್ತಿನ ಘನತೆಯು ಕುಗ್ಗಿದೆ. ಬಹುಶಃ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಪರಿಷತ್ತಿಗೆ ಇಷ್ಟು ದುರ್ಬಲ ಹಾಗೂ ರಾಜಿಕಬೂಲಿ ಮಾಡುವ ದೇಶಾವರಿ ನಗೆಯ ಅಧ್ಯಕ್ಷರು ಯಾವತ್ತೂ ಆಯ್ಕೆಯಾಗಿರಲಿಲ್ಲ. ಹಾಲಿ ಅಧ್ಯಕ್ಷರ ಜಡತ್ವ, ಸರ್ಕಾರದ ಮುಂದೆ ನಡುಬಗ್ಗಿಸುವ ದೌರ್ಜನ್ಯವೇ ಮೇಲಿನ ಎಲ್ಲ ಅವಾಂತರಗಳಿಗೆ ಕಾರಣರಾಗಿದೆ.

ಕಳೆದ ಏಳೆಂಟು ವರ್ಷಗಳ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಗಮನಿಸಿದರೆ, ದತ್ತಿ ಉಪನ್ಯಾಸ ಕಾರ್ಯಕ್ರಮ, ದತ್ತಿ ಪ್ರಶಸ್ತಿ ವಿತರಣೆ ಹಾಗೂ ವರ್ಷಕ್ಕೊಮ್ಮೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದು- ಇಷ್ಟಕ್ಕೆ ಪರಿಷತ್ತಿನ ಕಾರ್ಯಚಟುವಟಿಕೆ ಸೀಮಿತವಾಗಿರುವುದು ಮನವರಿಕೆಯಾಗುತ್ತದೆ. ಪರಿಷತ್ತಿನಲ್ಲಿ ಪುಸ್ತಕ ಪ್ರಕಟಣೆ ವಿಭಾಗ ಇದೆ, ನಿಜ. ಆದರೆ ಅಲ್ಲಿ ಮೌಲಿಕವಾದ ಎಷ್ಟು ಹೊಸ ಪುಸ್ತಕ ಪ್ರಕಟಣೆಗೊಂಡಿವೆ ಎಂಬುದರ ಬಗ್ಗೆ ಏನನ್ನೂ ಹೇಳದಿರುವುದು ಸೂಕ್ತ. ಇನ್ನು ‘ಕನ್ನಡನುಡಿ’ ಪತ್ರಿಕೆ ಪರಿಷತ್ತಿನ ಎಲ್ಲ ಸದಸ್ಯರಿಗೆ ಕಳಿಸುವುದನ್ನು ನಿಲ್ಲಿಸಿ ಎಷ್ಟೋ ವರ್ಷಗಳಾಯಿತು!

ಸಾಹಿತ್ಯ ಪರಿಷತ್ತಿನ ಗಂಭೀರವಾದ ಸಮಸ್ಯೆಯೆಂದರೆ ಅದು ಜಾತಿರಾಜಕಾರಣದ ಸುಳಿಯಲ್ಲಿ ಸಿಲುಕಿರುವುದು. ನೂರಾ ಐದು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ ವಹಿಸಿರುವುದು ನಾಲ್ಕೇ ಜಾತಿಯವರು: ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮತ್ತು ಜೈನರು. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಲಿಂಗಾಯತ ಅಥವಾ ಒಕ್ಕಲಿಗರನ್ನು ಬಿಟ್ಟು ಬೇರೆ ಸಮುದಾಯದವರು ಅಧ್ಯಕ್ಷರಾಗುವುದು ಸಾಧ್ಯವೇ ಇಲ್ಲ. ಜೊತೆಗೆ ಪರಿಷತ್ತಿನ ಮೂರು ಲಕ್ಷಕ್ಕೂ ಅಧಿಕ ಸದಸ್ಯರಿಗೆ ಒಂದು ಸುತ್ತು ಪತ್ರ ಕಳಿಸಲು ಕನಿಷ್ಟ ಹನ್ನೆರಡು ಲಕ್ಷ ರೂಪಾಯಿ ಬೇಕು. ರಾಜ್ಯದ ಒಳಗೆ ಮತ್ತು ಹೊರಗೆ ಪ್ರವಾಸ ಮಾಡಿ ಜಿಲ್ಲಾ ನಾಯಕರ ಭೇಟಿ, ಕರಪತ್ರ ಇತ್ಯಾದಿ ಎಲ್ಲ ವೆಚ್ಚ ಸೇರಿದರೆ ಕನಿಷ್ಟ ಇಪ್ಪತ್ತು ಲಕ್ಷ ರೂಪಾಯಿ ಖರ್ಚು ತಗಲುತ್ತದೆ. ಇದನ್ನೆಲ್ಲ ಕನ್ನಡದ ಯಾವ ಲೇಖಕ ಭರಿಸಲು ಸಾಧ್ಯ? ಇದನ್ನು ಮನಗಂಡು ನಿವೃತ್ತ ಸರ್ಕಾರಿ ಅಧಿಕಾರಿಗಳು ಸಾಹಿತ್ಯ ಪರಿಷತ್ತಿಗೆ ತೇಲಿಕೊಂಡಿದ್ದಾರೆ. ಇವರಿಗೆ ಯಾವ ಬದ್ಧತೆಯೂ ಇಲ್ಲ. ನಿವೃತ್ತಿ ನಂತರ ಗೂಟದ ಕಾರು ಇರುವ ಪರಿಷತ್ತನ್ನು ಹಿಡಿದು ಅಧಿಕಾರಸ್ಥ ರಾಜಕಾರಣಿಗಳನ್ನು ಓಲೈಸುತ್ತ ಸುದ್ದಿಯಲ್ಲಿರಲು ಹವಣಿಸುತ್ತಿದ್ದಾರೆ.

ಈಗಿನ ಅಧ್ಯಕ್ಷರಾದ ಮನು ಬಳಿಗಾರರ ಹಾದಿಯಲ್ಲಿ ಸಾಗಲು ನಿವೃತ್ತ ಅಧಿಕಾರಿಗಳಾದ ಸಿ.ಸೋಮಶೇಖರ್ ಮತ್ತು ದೂರದರ್ಶನದ ನಿವೃತ್ತ ನಿರ್ದೇಶಕ ಮಹೇಶ್ ಜೋಷಿ ಮುಂದಿನ ಚುನಾವಣೆಗೆ ತಾಲೀಮು ಶುರುಮಾಡಿದ್ದಾರೆ. ಈಗಾಗಲೇ ರಾಜ್ಯದ ಎಲ್ಲ ಪ್ರಮುಖ ಮಠಾಧೀಶರಿಗೆ ಪಾದಸೇವೆ ಮಾಡಿ ಬೆಂಬಲ ಕೋರಿದ್ದಾರೆ. ಕಳೆದ ಬಾರಿಯೇ ಮನು ಬಳಿಗಾರ್ ವಿರುದ್ಧ ಸಿ.ಸೋಮಶೇಖರ್ ಸ್ಪರ್ಧಿಸಲು ಸಿದ್ಧರಾಗಿದ್ದರು.ಒಂದೇ ಜಾತಿಯ ಇಬ್ಬರು ಸ್ಪರ್ಧಿಸಿದರೆ ಮೂರನೆಯವರಿಗೆ ಅನುಕೂಲವಾಗುವುದು ಎಂಬ ಕಾರಣಕ್ಕೆ ಮತ್ತು ಕುಲಬಾಂಧವರ ಒತ್ತಾಯಕ್ಕೆ ಮಣಿದು ಸೋಮಶೇಖರ್ ಹಿಂದೆ ಸರಿದರು. ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಚಾರಕ್ಕೆ ಇಳಿದ ಮಹೇಶ್ ಜೋಷಿ ಮತ್ತು ಸಿ.ಸೋಮಶೇಖರ್ ಅವರ ಸ್ಪರ್ಧೆ ಕುತೂಹಲಕಾರಿಯಾಗಿರುವುದು. ಇವರಲ್ಲದೆ ಮತ್ತೆ ಯಾರೂ ಸ್ಪರ್ಧಿಸಲು ಉತ್ಸಾಹ ತೋರದಿರುವುದು ಅಪಾರ ವೆಚ್ಚ ಮಾಡಬೇಕಾಗಿರುವುದು ಮತ್ತು ಜಾತಿಯ ಬಲ ಇಲ್ಲದಿರುವ ಕಾರಣಕ್ಕೆ!! ಜೊತೆಗೆ ಈಚೆಗೆ ಹಿಂದುತ್ವವಾದಿಗಳು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ನಿಯಂತ್ರಿಸಲು ಮುಂದಾಗಿರುವುದು ಹಾಗೂ ಪರಿಷತ್ತಿನ ಅಧ್ಯಕ್ಷರು ಹಿಂದುತ್ವವಾದಿಗಳಿಗೆ ಮಣಿದಿರುವುದು ಪರಿಷತ್ತಿನ ಸ್ವಾಯತ್ತತೆಗೆ ಭಂಗ ತಂದಿರುವುದು ಆತಂಕದ ಬೆಳವಣಿಗೆಯಾಗಿದೆ. ಪರಿಷತ್ತಿನ ಅಧ್ಯಕ್ಷರಾದವರು ಯಾವುದೇ ಪಕ್ಷ ಅಥವಾ ಸರ್ಕಾರದ ಕೈಗೊಂಬೆ ಅಥವಾ ಅವು ಹೇಳಿದಂತೆ ಕೇಳುವ ಆಜ್ಞಾಧಾರಕರು ಆಗುವುದು ಕನ್ನಡ ಭಾಷೆ ಮತ್ತು ಸಾಹಿತ್ಯದ ಹಿತಕ್ಕೆ ಮಾರಕವಾಗುವುದು. ಹೀಗಾಗಿ ಸ್ವತಂತ್ರ ವ್ಯಕ್ತಿತ್ವ ಮತ್ತು ಬೆನ್ನುಮೂಳೆಯಿರುವ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಪರಿಷತ್ತಿನ ಸ್ವಾಯತ್ತತೆ ಬಯಸುವವರ ಜವಾಬ್ದಾರಿ.

ಕಳೆದ ತಿಂಗಳಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ ಅವರ ವರ್ತನೆ ತೀವ್ರ ಟೀಕೆ ಮತ್ತು ಖಂಡನೆಗೆ ಗುರಿಯಾಯಿತು. ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರ ಆಜ್ಞಾಪಾಲಕರಾಗಿ ಜಿಲ್ಲಾ ಸಮ್ಮೇಳನಕ್ಕೆ ಹಣ ಬಿಡುಗಡೆ ಮಾಡದೇಹೋದದ್ದು ಮತ್ತು ಜಿಲ್ಲಾ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದ ಸಮ್ಮೇಳನದ ಅಧ್ಯಕ್ಷರನ್ನು ಬದಲಾಯಿಸಬಾರದು ಎಂದು ಹೇಳದೆ ಮೌನ ವಹಿಸಿದ್ದು ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲು. ಈ ಬಗ್ಗೆ ಕನ್ನಡದ ಅನೇಕ ಹಿರಿಯ ಲೇಖಕರು ಮೌನ ತಾಳಿದ್ದು ಜುಗುಪ್ಸೆ ಹುಟ್ಟಿಸಿತು. ಅದರಲ್ಲೂ ಮುಖ್ಯವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತರಾಗಿದ್ದ ಎಚ್ ಎಸ್ ವೆಂಕಟೇಶಮೂರ್ತಿಯವರ ಮೌನ ಸಾಂಸ್ಕೃತಿಕ ಲೋಕದ ಘನತೆಯನ್ನು ನಾಶಮಾಡಿತು. ಕೆಲವರಿಗೆ ಸರ್ಕಾರದ ಭಯ, ಕೆಲವರಿಗೆ ತಮ್ಮ ಹಿಂದುತ್ವದ ಮೇಲಿನ ಪ್ರೀತಿ, ಕೆಲವರಿಗೆ ವೇದಿಕೆ ಏರುವ ಅವಕಾಶ ತಪ್ಪುವ ಭೀತಿ- ಹೀಗೆ ಅನೇಕ ಕಾರಣಕ್ಕೆ ಮೌನವಾದವರಿಂದ ಸಾಹಿತ್ಯ ಲೋಕದ ಘನತೆ ಮತ್ತು ಸ್ವಾಯತ್ತತೆ ಮಣ್ಣು ಪಾಲಾಗಿದೆ. ಇಂತಹ ಸ್ವಾರ್ಥಿಗಳು ಮತ್ತು ಕುತ್ಸಿತರ ಕಪಿಮುಷ್ಟಿಯಿಂದ ಪರಿಷತ್ತನ್ನು ಪಾರುಮಾಡಲು ಕನ್ನಡ ಭಾಷೆ ಮತ್ತು ಸಾಹಿತ್ಯ ಪ್ರೇಮಿಗಳು ಒಂದಾಗಿ ಮುಂದಿನ ಚುನಾವಣೆಯಲ್ಲಿ ಪ್ರಗತಿಪರ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸಿ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸಬೇಕಾಗಿದೆ. ಇದು ಬರೀ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯ ಪ್ರಶ್ನೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಬೇರಿಗೆ ವಿಷ ಹಾಕುತ್ತಿರುವ ಎಲ್ಲ ಕೋಮುವಾದಿಗಳ ವಿರುದ್ಧ ನಾವು ಗಟ್ಟಿಯಾದ ಪ್ರತಿರೋಧ ಒಡ್ಡಬೇಕಾದ ಜವಾಬ್ದಾರಿಯೂ ಆಗಿದೆ.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಲು ಹಣಬಲ ಮತ್ತು ಜಾತಿಬಲ ಬೇಕೇಬೇಕು ಎಂಬ ವಾತಾವರಣ ಏನಿದೆ, ಅದು ಕನ್ನಡ ಭಾಷೆ ಮತ್ತು ಸಾಹಿತ್ಯದ ಅಸ್ಮಿತೆ ಮತ್ತು ಉಳಿವಿನ ಪ್ರಶ್ನೆಯಾಗಿದೆ. ಮಠಮಾನ್ಯಗಳ ಬೆಂಬಲ ಪಡೆದು, ಎಲ್ಲೊ ಹೇಗೊ ಸಂಪಾದಿಸಿದ ಹಣವನ್ನು ತಂದು ಪರಿಷತ್ತಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹವಣಿಸುತ್ತಿರುವ ಮಾಜಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಬಾರದು. ಹತ್ತಾರು ವರ್ಷಗಳ ಕಾಲ ಸಾಹಿತ್ಯ ಕೃಷಿ ಮಾಡಿದ ಪ್ರಗತಿಪರರು, ಸಾಂಸ್ಕೃತಿಕ ಲೋಕದಲ್ಲಿ ಕ್ರಿಯಾಶೀಲರಾಗಿರುವವರು ಪರಿಷತ್ತಿನ ಅಧ್ಯಕ್ಷರಾಗಬೇಕು. ಜಾತಿ, ಧರ್ಮ, ಪ್ರಾಂತ, ಪಕ್ಷ ಮೀರಿ ಕೆಲಸ ಮಾಡುವ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯದವರು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ನಾವು ಕೆಲಸ ಮಾಡಬೇಕು.

ಪರಿಷತ್ತು ನಿವೃತ್ತ ಸರ್ಕಾರಿ ನೌಕರರ ಪುನರ್ವಸತಿ ಕೇಂದ್ರವಲ್ಲ. ಈ ನಿವೃತ್ತ ಸರ್ಕಾರಿ ನೌಕರರು ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಗುಡುಗಲಾರರು ಹಾಗೂ ಅಧಿಕಾರಶಾಹಿ ಮನೋಭಾವ ಅವರ ಅತಿದೊಡ್ಡ ದೌರ್ಬಲ್ಯ. ಇದರಿಂದ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ಮಣ್ಣು ಮುಕ್ಕುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರು ಸರ್ಕಾರದ ಮುಂದೆ ವಿಧೇಯರಾಗಿ ವರ್ತಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಿಗರಿಗೆ ಅವಮಾನ ಮಾಡುವರು. ಆದ್ದರಿಂದ ಸಾಹಿತ್ಯ ಲೋಕದ ಸಾಧಕರು ಪರಿಷತ್ತಿನ ಅಧ್ಯಕ್ಷರಾಗಬೇಕಾಗಿದೆ.

ಸಾಹಿತ್ಯ ಸಮ್ಮೇಳನ ನಡೆಸಲು ಪರಿಷತ್ತಿನ ಅಧ್ಯಕ್ಷರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಬಹಳ ಆಸಕ್ತಿ ತೋರುತ್ತಿರುವುದು ಇತ್ತೀಚಿನ ವಿದ್ಯಮಾನ. ಸಾಹಿತ್ಯದ ಮೇಲಿನ ಪ್ರೀತಿಗಿಂತ ‘ಇತರೆ’ ವ್ಯಾವಹಾರಿಕ ಸಂಗತಿಗಳು ಸಮ್ಮೇಳನ ನಡೆಸಲು ತೋರುತ್ತಿರುವ ಉತ್ಸಾಹಕ್ಕೆ ಕಾರಣವಾಗಿವೆ. ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಯಲ್ಲಿ ಪಾಲ್ಗೊಳ್ಳುವವರ ಆಯ್ಕೆ ಮಾಡುವಲ್ಲಿ ಕೂಡ ಅನೇಕ ಲೆಕ್ಕಾಚಾರಗಳಿವೆ. ಸಾಹಿತ್ಯ ಸಮ್ಮೇಳನದಲ್ಲಿ ಸಂಭ್ರಮ, ಉತ್ಸಾಹ, ಜನರು ಮುಗಿಬಿದ್ದು ಪಾಲ್ಗೊಳ್ಳುತ್ತಿರುವುದು ಸರಿಯೇ. ಆದರೆ ಯಾವುದೇ ಗಟ್ಟಿ ಚಿಂತನೆ, ನೆಲಜಲ ಕುರಿತು ಬದ್ಧತೆ ಕಾಣದ ಸಮ್ಮೇಳನ ಇಷ್ಟರಿಂದ ಮಾತ್ರ ಯಶಸ್ವಿಯಾಗುವುದಿಲ್ಲ. ಸರ್ಕಾರದ ಅನುದಾನ ಹೆಚ್ಚಿದಂತೆ ಸಮ್ಮೇಳನಗಳ ಗುಣಮಟ್ಟ ಕುಸಿದಿರುವುದು ವಿಪರ್ಯಾಸ. ಹಾಗೆಯೇ ಬಹುತೇಕ ತಾಲ್ಲೂಕು, ಜಿಲ್ಲಾ ಸಮ್ಮೇಳನಗಳಲ್ಲಿ ರಾಜಕೀಯ ವ್ಯಕ್ತಿಗಳ ಮೇಲಾಟವೇ ಎದ್ದು ಕಾಣುತ್ತದೆ. ಸಮ್ಮೇಳನ ನಡೆಸಲು ಸರ್ಕಾರದ ಅನುದಾನ ಮತ್ತು ಖಾಸಗಿಯವರಿಂದ ಹಣ ಸಂಗ್ರಹಣೆ ಹೆಚ್ಚಿದಂತೆ ಸಾಹಿತ್ಯೇತರ ಹಿತಾಸಕ್ತಿ ಕೂಡ ಹೆಚ್ಚಿದೆ. ಸಾಹಿತ್ಯ ಪರಿಷತ್ತು ಕೊಡುವ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟು ಕುಳಿತ ಅನೇಕ ಲೇಖಕರು, ಅದರಲ್ಲೂ ನೃಪತುಂಗ ಪ್ರಶಸ್ತಿ, ಸಮ್ಮೇಳನದ ಅಧ್ಯಕ್ಷತೆ ಮೇಲೆ ಕಣ್ಣಿಟ್ಟವರು ಪರಿಷತ್ತಿನ ವೈಫಲ್ಯ, ಯಪರಾತಪರಾ ಕುರಿತು ತುಟಿ ಬಿಚ್ಚುವುದೇ ಇಲ್ಲ. ಪರಿಷತ್ತು ಸ್ವಾಯತ್ತತೆ ಕಳೆದುಕೊಂಡು ಸರ್ಕಾರದ ಅಂಗಸಂಸ್ಥೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿರಿಯ ಲೇಖಕರ ನಿದರ್ಶನ ಇಲ್ಲ. ಹಿಂದೆ 1980-82 ರಲ್ಲಿ ಗೋಕಾಕ್ ಚಳವಳಿ ನಡೆದಾಗ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪರ ನಿಲ್ಲದೆ ಸರ್ಕಾರದ ಬಾಲಂಗೋಚಿಯಾಗಿತ್ತು. ಈಗ ಬೇರೆ ಕಾರಣಕ್ಕೆ- ಅನುದಾನದ ಕಾರಣಕ್ಕೆ ಸ್ವಾಯತ್ತತೆ ಕಳೆದುಕೊಂಡು ಕನ್ನಡ, ಕನ್ನಡಿಗರ ಪರವಾಗಿ ನಿಲ್ಲುತ್ತಿಲ್ಲ. ಮನು ಬಳಿಗಾರರು ನಿವೃತ್ತ ಅಧಿಕಾರಿ, ಅವರು ಮೊದಲಿಂದಲೂ ಅಧಿಕಾರಸ್ಥರ ಮುಂದೆ ನಡು ಬಗ್ಗಿಸಿ ಗೊತ್ತೇ ಹೊರತು ಸ್ವಾಯತ್ತ ಸಂಸ್ಥೆಯ ಘನತೆ ಎತ್ತಿ ಹಿಡಿದು ಗೊತ್ತಿಲ್ಲ. ಹೀಗಾಗಿ ಮುಂದೆ ಪರಿಷತ್ತು ಕನ್ನಡ, ಕನ್ನಡಿಗರ ಪರವಾಗಿ ನಿಲ್ಲುವಂಥ ಗಟ್ಟಿ ವ್ಯಕ್ತಿತ್ವದ ವ್ಯಕ್ತಿ ಪರಿಷತ್ತಿನ ಅಧ್ಯಕ್ಷರಾಗಬೇಕಾಗಿದೆ. ಹಾಗೂ ನಿವೃತ್ತ ಅಧಿಕಾರಿಗಳ ಆಶ್ರಯತಾಣ ಆಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...