Homeಕರ್ನಾಟಕಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಿದ ಕ.ಸಾ.ಪ.; ಸೌಜನ್ಯ ಪರ ಸಮಾಲೋಚನಾ ಸಭೆ ಮುಂದೂಡಿಕೆ

ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಿದ ಕ.ಸಾ.ಪ.; ಸೌಜನ್ಯ ಪರ ಸಮಾಲೋಚನಾ ಸಭೆ ಮುಂದೂಡಿಕೆ

- Advertisement -
- Advertisement -

ಪೊಲೀಸರು ನೋಟಿಸ್ ನೀಡಿದ್ದಾರೆ ಎಂಬ ಕಾರಣ ನೀಡಿ ಕೊನೆ ಕ್ಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ನೀಡಿದ್ದ ಅನುಮತಿ ನಿರಾಕರಿಸಿದ್ದರಿಂದ ‘ಸೌಜನ್ಯ ಪರ ಸಮಾಲೋಚನಾ ಸಭೆ’ ಮುಂದೂಡಲಾಗಿದೆ. ಯುಟ್ಯೂಬರ್ ಸಮೀರ್ ಎಂ.ಡಿ. ಎಂಬಾತ ಮಾಡಿದ ವಿಡಿಯೊ ವೈರಲ್ ಆದ ಬಳಿಕ ಸೌಜನ್ಯಾ ಪ್ರಕರಣದ ಮರುತನಿಖೆಗೆ ಒತ್ತಡ ಹೆಚ್ಚಾಗಿದೆ.

ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಇಂದು (ಭಾನುವಾರ 09/03/2025), 2013 ರಲ್ಲಿ ಅತ್ಯಾಚಾರ-ಹತ್ಯೆಗೆ ಒಳಗಾದ ಧರ್ಮಸ್ಥಳದ ಅಪ್ರಾಪ್ತ ಬಾಲಕಿ ಸೌಜನ್ಯ ಪರವಾಗಿ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವ ಆಯೋಜಕರು ಮಾಹಿತಿ ನೀಡಿದ್ದು, “ಕನ್ನಡ ಸಾಹಿತ್ಯ ಪರಿಷತ್ ನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಸೌಜನ್ಯ ಪರ ಸಾಹಿತಿ, ಚಿಂತಕ, ಪತ್ರಕರ್ತರು, ಹೋರಾಟಗಾರರ ಸಮಾಲೋಚನಾ ಸಭೆ ಕರೆಯಲಾಗಿತ್ತು. ಆದರೆ, ಕನ್ನಡ ಸಾಹಿತ್ಯ ಪರಿಷತ್ ಒತ್ತಡಕ್ಕೊಳಗಾಗಿ ಕೊನೇ ಕ್ಷಣದಲ್ಲಿ ಸಭಾಂಗಣದ ಅನುಮತಿಯನ್ನು ರದ್ದುಗೊಳಿಸಿದ್ದರಿಂದ ಸಮಾಲೋಚನಾ ಸಭೆಯನ್ನು ಮುಂದೂಡಲಾಗಿದೆ” ಎಂದು ಹೇಳಿದ್ದಾರೆ.

“ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣವನ್ನು ಬಾಡಿಗೆ ಪಾವತಿಸಿ ಕಾರ್ಯಕ್ರಮಕ್ಕೆ ನಿಗಧಿಗೊಳಿಸಲಾಗಿತ್ತು. ಕಾರ್ಯಕ್ರಮದ ಬಗ್ಗೆ ಪರಿಷತ್ ಜೊತೆಗೆ ಚರ್ಚೆ ನಡೆಸಲಾಗಿತ್ತು. ಆದರೆ, ಸಾಹಿತ್ಯ ಪರಿಷತ್ ಗೆ ಬಂದ ಲೀಗಲ್ ನೋಟಿಸ್ ಮತ್ತು ಪೊಲೀಸ್ ನೋಟಿಸ್ ಆಧಾರದಲ್ಲಿ ಸಭಾಂಗಣವನ್ನು ನೀಡಲಾಗುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು 08.03.2025 ರಂದು ರಾತ್ರಿ 10.30 ಕ್ಕೆ ಸಂಘಟಕರಲ್ಲೋರ್ವರಾದ ಬೈರಪ್ಪ ಹರೀಶ್ ಕುಮಾರ್ ಅವರಿಗೆ ಲಿಖಿತ ನೋಟಿಸ್ ಕಳಿಸಿದ್ದಾರೆ‌” ಎಂದು ಮಾಹಿತಿ ನೀಡಿದ್ದಾರೆ.

“ಕೊನೆ ಕ್ಷಣದಲ್ಲಿ ಸಭಾಂಗಣ ನಿರಾಕರಣೆಯ ಹಿನ್ನಲೆಯಲ್ಲಿ 09.03.2025 ರವಿವಾರ 10.30 ಕ್ಕೆ ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆಸಲುದ್ದೇಶಿಸಿದ್ದ “ಸೌಜನ್ಯ ಸಮಾಲೋಚನಾ ಸಭೆ”ಯನ್ನು ಮುಂದೂಡಲಾಗಿದೆ” ಎಂದು ಆಯೋಜಕರು ಅಧಿಕೃತವಾಗಿ ಘೋಷಿಸಿದ್ದಾರೆ.

ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಕರ್ನಾಟಕ ರಣಧೀರ ಪಡೆ ಅಧ್ಯಕ್ಷ, ಸೌಜನ್ಯ ಸಮಾಲೋಚನಾ ಸಭೆ ಆಯೋಜಕರಲ್ಲಿ ಒಬ್ಬರಾದ ಹರೀಶ್‌ ಕುಮಾರ್, “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ನಿನ್ನೆ ತಡರಾತ್ರಿ ವೀರೇಂದ್ರ ಹೆಗಡೆ ಪರ ವಕೀಲರು ಮತ್ತು ವಿ.ವಿ. ಪುರಂ ಪೊಲೀಸರು ನೋಟಿಸ್ ನೀಡಿದ್ದಾರೆ. ವಿವಾದ ಇರುವದರಿಂದ ಅನುಮತಿ ನಿರಾಕರಿಸಿದ್ದೇವೆ ಎಂದು ಖುದ್ದು ಮಹೇಶ್ ಜೋಶಿ ಅವರೇ ನೇರವಾಗಿ ನನಗೆ ವಾಟ್ಸಾಪ್ ಸಂದೇಶ ಕಳಿಸಿದ್ದಾರೆ” ಎಂದು ಮಾಹಿತಿ ನೀಡಿದರು.

“ಸಮಾಲೋಚನಾ ಸಭೆ ರದ್ದುಗೊಳಿಸಿದ್ದೇವೆ ಎಂಬ ಕಾರಣಕ್ಕೆ ಖುಷಿ ಪಡುವ ಅಗತ್ಯ ಇಲ್ಲ, ತುಳಿದಷ್ಟೇ ವೇಗವಾಗಿ ನಾವು ಮೇಲೆದ್ದು ಬರುತ್ತೇವೆ; ಇಂದು ಸಮಾನ ಮನಸ್ಕರೊಂದಿಗೆ ಸಭೆ ನಡೆಸಿ, ಶೀಘ್ರದಲ್ಲೇ ಪರಿಣಾಮಕಾರಿಯಾಗಿ ಕಾರ್ಯಕ್ರಮ ಆಯೋಜಿಸುತ್ತೇವೆ” ಎಂದು ಹೇಳಿದರು.

ಕಲಬುರಗಿ| ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಚಪಾತಿ ವಿವಾದ; ಉತ್ತರ-ದಕ್ಷಿಣ ಭಾರತದ ವಿದ್ಯಾರ್ಥಿಗಳ ನಡುವೆ ಘರ್ಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು: ಜಾತಿ ಜಗಳದಲ್ಲಿ ದಲಿತ ವ್ಯಕ್ತಿ, ಒಡಿಶಾ ವಲಸೆ ಕಾರ್ಮಿಕನ ಹತ್ಯೆ; ಹಿಂದೆಯೂ ಜಾತಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪಿಗಳು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಿಂದ ಜಾತಿ ಹಿಂಸಾಚಾರದ ಭಯಾನಕ ಘಟನೆ ವರದಿಯಾಗಿದೆ, ಪೆರುಂಪತ್ತು ಗ್ರಾಮದಲ್ಲಿ ನಡೆದ ಕ್ರೂರ ದಾಳಿಯಲ್ಲಿ ಅಂಗವಿಕಲ ದಲಿತ ವ್ಯಕ್ತಿ ಮತ್ತು ಒಡಿಶಾದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ.  ಆರೋಪಿಗಳಲ್ಲಿ ಇಬ್ಬರು ಕೆಲವು...

ರಾಜ್ಯಸಭಾ ಚುನಾವಣೆ: ಆರು ಜನರ ಹೆಸರು ಘೋಷಿಸಿದ ಕಾಂಗ್ರೆಸ್; ಸಿಂಘ್ವಿ-ನೇತಮ್ ಮರು ನಾಮನಿರ್ದೇಶನ

ರಾಜ್ಯಸಭೆಗೆ ಮುಂಬರುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ಆರು ಅಭ್ಯರ್ಥಿಗಳನ್ನು ಘೋಷಿಸಿದೆ. ಇಬ್ಬರು ಹಾಲಿ ಸದಸ್ಯರನ್ನು ಮತ್ತೆ ನಾಮನಿರ್ದೇಶನ ಮಾಡಿದ್ದು, ವಿವಿಧ ರಾಜ್ಯಗಳಿಂದ ಹಲವಾರು ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ರಾಜ್ಯಸಭಾ ಸದಸ್ಯರಾದ ಅಭಿಷೇಕ್ ಮನು...

ರಾಷ್ಟ್ರ ರಾಜಕಾರಣಕ್ಕೆ ನಿತೀಶ್ ಕುಮಾರ್; ರಾಜ್ಯಸಭೆ ಪ್ರವೇಶ ದೃಢಪಡಿಸಿದ ಬಿಹಾರ ಸಿಎಂ

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ನಿತೀಶ್ ಕುಮಾರ್, 20 ವರ್ಷಗಳಿಗೂ ಹೆಚ್ಚು ಕಾಲ ತಾವು ಹೊಂದಿದ್ದ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳುವುದಾಗಿ ದೃಢಪಡಿಸಿದ್ದಾರೆ. "ನನ್ನ ಸಂಸದೀಯ...

ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ : ಹಲವು ಅಧಿಕಾರಿಗಳ ಮನೆ, ಕಚೇರಿ ಶೋಧ

ರಾಜ್ಯಾದಾದ್ಯಂತ ವಿವಿಧ ಜಿಲ್ಲೆಗಳ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಗುರುವಾರ (ಮಾ.5) ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ,...

ಬಾಬಾ ಬುಡನ್‌ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸಲು ಅಡ್ಡಿ : ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸುವ ಕಾನೂನಾತ್ಮಕ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ದ ಗುರುವಾರ (ಮಾ.5) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಉರೂಸ್‌ ಸಂದರ್ಭದಲ್ಲಿ ಬಾಬಾ ಬುಡನ್‌ಗಿರಿಯ...

ಟ್ರಂಪ್ ಯುದ್ಧಾಧಿಕಾರಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಹಿನ್ನಡೆ; ಸೆನೆಟ್‌ನಲ್ಲಿ ನಿರ್ಣಯಕ್ಕೆ ಸೋಲು 

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧಾಧಿಕಾರಕ್ಕೆ ಲಗಾಮು ಹಾಕುವ ನಿರ್ಣಯಕ್ಕೆ ಅಮೆರಿಕ ಸೆನೆಟ್‌ನಲ್ಲಿ (ಸಂಸತ್ತಿನ ಮೇಲ್ಮನೆ) ಸೋಲಾಗಿದೆ. ಇದರಿಂದ ಪ್ರಸ್ತುತ ನಡೆಸುತ್ತಿರುವ ಇರಾನ್ ಮೇಲಿನ ದಾಳಿಯನ್ನು ಇನ್ನಷ್ಟು ಹೆಚ್ಚಿಸಲು ಟ್ರಂಪ್‌ಗೆ ಅನುಮತಿ ಸಿಕ್ಕಂತಾಗಿದೆ....

ಜಾತ್ಯತೀತ ತಾಣ ಬಾಬಾ ಬುಡನ್‌ ಗಿರಿಯಲ್ಲಿ ‘ವೈದಿಕ ಆಚರಣೆ’ಗೆ ವಿರೋಧ; ಕಾಂಗ್ರೆಸ್‌ ಸರ್ಕಾರದ ವಿರುದ್ದ ಪ್ರತಿಭಟನೆ

ಕೋಮುವಾದಿಗಳು ಎಷ್ಟೇ ವಿಷಯ ತಿರುಚುವ ಕೆಲಸ ಮಾಡಿದರೂ ಬಾಬಾ ಬುಡನ್ ಗಿರಿಯ ಜಾತ್ಯತೀತ ಹಿನ್ನೆಲೆಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಸೌಹಾರ್ಧ ಪರಂಪರೆಯನ್ನು ಬದಿಗೆ ಸರಿಸಿ, ವೈದಿಕ ಆಚರಣೆಗೆ ಅನುಮತಿ ನೀಡುವ ಮೂಲಕ ಹಿಂದುತ್ವ...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಜಲಾಂತರ್ಗಾಮಿ ದಾಳಿ: ಸಮುದ್ರದಲ್ಲಿ ಶವಗಳು ಪತ್ತೆ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಬುಧವಾರ ಜಲಾಂತರ್ಗಾಮಿ ದಾಳಿಯ ನಂತರ ಇರಾನ್ ನೌಕಾ ಯುದ್ಧನೌಕೆ ಐರಿಸ್ ದೇನಾ ಮುಳುಗಿದೆ ಎಂದು ವರದಿಯಾಗಿದೆ.  ಈ ದಾಳಿಯಲ್ಲಿ ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ,...

ಹೆದ್ದಾರಿಯಲ್ಲಿ ದ್ವೇಷ ಬರಹ : ಮುಸ್ಲಿಮರು ಭಾರತದಲ್ಲಿ ‘ಬಾಡಿಗೆದಾರರು’ ಅವರು ಹಾಗೆಯೇ ಬದುಕಬೇಕು ಎಂದ ಹಿಂದೂ ರಕ್ಷಾ ದಳದ ಸದಸ್ಯರು

2026ರ ಫೆಬ್ರವರಿ 26 ಮತ್ತು 27ರ ನಡುವಿನ ಮಧ್ಯರಾತ್ರಿ ಉತ್ತರ ಪ್ರದೇಶದ ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯ ಮೇಲೆ ಹಿಂದೂ ರಕ್ಷಾ ದಳಕ್ಕೆ (ಹೆಚ್‌ಆರ್‌ಡಿ) ಸೇರಿದ ಮಹಿಳೆಯರು ಹಿಂದಿಯಲ್ಲಿ “मुसलमान के लिए...

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಹತ್ಯೆಗೆ ಗುರಿಯಾಗುತ್ತಾನೆ: ಇಸ್ರೇಲ್ ರಕ್ಷಣಾ ಸಚಿವನಿಂದ ಬೆದರಿಕೆ

ದುಬೈ: ‘ಅಯತೊಲ್ಲಾ ಅಲಿ ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಅವರನ್ನು ಹತ್ಯೆ ಮಾಡುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಬುಧವಾರ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ...