Homeಪುಸ್ತಕ ವಿಮರ್ಶೆ’ಸಾವಿತ್ರಿಬಾಯಿ ಫುಲೆ ಮತ್ತು ನಾನು’: ಶೋಷಿತ ಶಬರಿಗಳ ಕಥನಗಳಿಗೆ ಕನ್ನಡಿ

’ಸಾವಿತ್ರಿಬಾಯಿ ಫುಲೆ ಮತ್ತು ನಾನು’: ಶೋಷಿತ ಶಬರಿಗಳ ಕಥನಗಳಿಗೆ ಕನ್ನಡಿ

- Advertisement -
- Advertisement -

ಶೌಚಾಲಯದಂತಹ ಕನಿಷ್ಟ ಮೂಲಸೌಕರ್ಯಗಳೂ ಇಲ್ಲದ ಒಂದು ಹಳ್ಳಿಯಲ್ಲಿ ಬದುಕುತ್ತಿರುವ, ನಗರದ ಕಲ್ಪನೆಯೇ ಇಲ್ಲದ ತಳಸಮುದಾಯದ ಒಬ್ಬ ಹುಡುಗಿ ಶಬರಿ ತನ್ನ ಸಾಹಸದಿಂದ ನಗರದ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದು, ಆನಂತರ ಆ ಶಿಕ್ಷಣ ಸಂಸ್ಥೆಯಲ್ಲಿ ಎದುರಾಗುವ ಅವಮಾನ, ನಿರ್ಲಕ್ಷ್ಯ, ಏಕಾಂಗಿತನದಂತಹ ಸವಾಲುಗಳ ನಡುವೆ ಕುಗ್ಗಿ, ಮತ್ತೆ ಎದ್ದುನಿಂತು ಅಂದುಕೊಂಡಿದ್ದನ್ನು ಸಾಧಿಸಿ, ಒಬ್ಬ ಆಕ್ಟಿವಿಸ್ಟ್ ಆದ ಪ್ರಗತಿಯ ಹಾದಿಯನ್ನು ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಎಂಬ ಕಥನ (ಕಿರು ಕಾದಂಬರಿ) ನಿರೂಪಿಸುತ್ತದೆ.

ಶಬರಿಯ ಈ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕೆಳಜಾತಿಯ ಹೆಣ್ಣು, ಜಾತಿಯ ಕಾರಣಕ್ಕೆ ಮಾತ್ರವಲ್ಲದೆ ಹೆಣ್ಣೆಂಬ ಕಾರಣವೂ ಸೇರಿ ಇನ್ನೂ ಹೆಚ್ಚು ತುಳಿಯಲ್ಪಟ್ಟವಳಾಗಿದ್ದಾಳೆ. ಈ ವ್ಯವಸ್ಥೆಯು ’ಮಾದರಿ ಹೆಣ್ಣು’ ಎಂದರೆ ಹೀಗೇ ಎಂದು ಶತಮಾನಗಳಿಂದ ಬಿಂಬಿಸಿದೆ. ಈ ಗುಂಪಿಗೆ ಸೇರಲು ಸೋ ಕಾಲ್ಡ್ ಮಾನದಂಡಗಳೆನಿಸಿಕೊಂಡಿರುವ ಮೇಲ್ಜಾತಿ, ಬಿಳಿಬಣ್ಣ, ಶುದ್ಧ ಭಾಷೆ, ಬಣ್ಣಬಣ್ಣದ ಬಟ್ಟೆ ಈ ಯಾವುವೂ ಶಬರಿಯ ಬಳಿಯಿಲ್ಲ. ತಳಜಾತಿಯಿಂದ ಬಂದ ಅವಳು ನಗರವನ್ನೇ ನೋಡಿರದ, ಕಪ್ಪು ಬಣ್ಣದ, ಜಿಡ್ಡು ಮುಖದ, ಇಂಗ್ಲಿಷ್ ಬಾರದ, ಮೀಸಲಾತಿಯಿಂದ ಮುಂದೆಬಂದ ಹುಡುಗಿ. ಅವಳನ್ನು ಪ್ರತ್ಯೇಕಿಸಲು ಈ ವ್ಯವಸ್ಥೆಗೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೇ? ಧರ್ಮ, ಜಾತಿ, ಲಿಂಗ, ಭಾಷೆ, ಬಣ್ಣ, ಆಹಾರ, ಉಡುಗೆ ಇತ್ಯಾದಿಯಾಗಿ ಯಾವುದೋ ಒಂದು ಭಿನ್ನತೆಯ ಕಾರಣಕ್ಕೆ ಎಲ್ಲರಿಂದಲೂ, ಎಲ್ಲಾ ಕಡೆಯೂ ಹೊರಗಿಡುವಿಕೆ ಕ್ರೌರ್ಯದ ಪರಮಾವಧಿ. ಈ ಕ್ರೌರ್ಯ ಅಂತಿಂತದ್ದಲ್ಲಾ. ಇದು ಒಂದು ವ್ಯಕ್ತಿತ್ವವನ್ನೇ ಕೊಂದುಬಿಡುತ್ತದೆ. ಶಬರಿ ಈ ಪ್ರತ್ಯೇಕತೆಯಿಂದ ಖಿನ್ನತೆಗೊಳಗಾಗಿ ಇನ್ನು ಇಲ್ಲಿ ಬದುಕುಳಿಯುವುದು ಅಸಾಧ್ಯವೆಂದು ನಿರ್ಧರಿಸಿ ಆತ್ಮಹತ್ಯೆಯ ಬಗ್ಗೆ ಯೋಚಿಸುವಾಗ ಅವಳಿಗೆ ಸಿಕ್ಕ ಸಾವಿತ್ರಿಬಾಯಿ ಫುಲೆಯವರ ಡೈರಿಯು ಬದುಕಲು ಸ್ಫೂರ್ತಿ ತುಂಬುತ್ತದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಅಪರಾಧವಾಗಿದ್ದ ಕಾಲದಲ್ಲಿ, ಜ್ಯೋತಿಬಾ ಫುಲೆಯವರ ಬೆಂಬಲದಿಂದ ಶಿಕ್ಷಣ ಪಡೆದು, ಇಡೀ ಸಮಾಜದ, ಕುಟುಂಬದ ಅಡಚಣೆಗಳ ನಡುವೆಯೂ ಭಾರತದಲ್ಲೇ ಮೊದಲಬಾರಿಗೆ ಹೆಣ್ಣು ಮಕ್ಕಳಿಗೆ, ದಲಿತರಿಗೆ, ದಮನಿತರಿಗೆ ಶಾಲೆಯನ್ನು ತೆರೆದ ಸಾವಿತ್ರಿಬಾಯಿ ಫುಲೆಯವರ ಸಾಧನೆ ಶಬರಿಗೆ ತಾನು ಮಾಡಬೇಕಿರುವ ಕರ್ತವ್ಯವನ್ನು, ತನಗಿರುವ ಜವಾಬ್ದಾರಿಯನ್ನು ಎಚ್ಚರಿಸುತ್ತದೆ. ಇದರಿಂದ ಶಬರಿಯ ಆತ್ಮಸ್ಥೈರ್ಯ ಹೆಚ್ಚುತ್ತದೆ. ತನ್ನ ಗುರಿಯು ಸ್ಪಷ್ಟವಾಗುತ್ತದೆ. ಆದರೆ, ಅದನ್ನು ಸಾಧಿಸಲು ಹೊರಟ ಶಬರಿ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಶತಮಾನಗಳಿಂದ ತಳಸಮುದಾಯದ ಜನರನ್ನು ಗುಲಾಮರನ್ನಾಗಿ ದುಡಿಸಿಕೊಂಡ ಈ ವ್ಯವಸ್ಥೆಗೆ ಕೆಳಜಾತಿಯ, ಅದರಲ್ಲೂ ಹೆಣ್ಣೊಬ್ಬಳ ಆತ್ಮವಿಶ್ವಾಸ ನೆಮ್ಮದಿ ಕೆಡಿಸದಿರಲು ಸಾಧ್ಯವೇ? ಇಲ್ಲಿ ಹೆಣ್ಣೊಬ್ಬಳನ್ನು ತನ್ನ ಸ್ಥಾನದಿಂದ ಮೇಲೇಳದಂತೆ ತಡೆಯಲು ಬೇಕಾದ ಎಲ್ಲಾ ನೀಚ ಕ್ರೌರ್ಯಗಳನ್ನೂ ಎಸಗಲಾಗುತ್ತದೆ ಎಂಬುದಕ್ಕೆ ಅವಳನ್ನು ಕಾರಿನಲ್ಲಿ ಅಪಹರಿಸಿ ಕಿರುಕುಳ ಕೊಟ್ಟು ಬೆದರಿಸಿದ ಘಟನೆ ಒಂದು ದುರಂತ ಉದಾಹರಣೆಯಾಗಿ, ಸಾಂಕೇತಿಕವಾಗಿ ಚಿತ್ರಿಸಲಾಗಿದೆ.


ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಶಬರಿ ಕುಸಿಯದೆ, ತನ್ನ ಔಪಚಾರಿಕ ಶಿಕ್ಷಣದ ಪಡೆಯುವುದರ ಜೊತೆಗೆ, ಶೋಷಿಸುವವರ ಮಧ್ಯೆ ಬದುಕಿ ಜಯಿಸುವ ಸಾಮರ್ಥ್ಯವನ್ನು ಕಲಿತುಕೊಂಡು ತನ್ನ ಗುರಿ ಮುಟ್ಟುತ್ತಾಳೆ. ಅಂತ್ಯಗೊಳಿಸಬೇಕೆಂದುಕೊಂಡಿದ್ದ ಬದುಕನ್ನು ಅರ್ಥಪೂರ್ಣವಾಗಿ ಜೀವಿಸಿ ತನ್ನ ಹೋರಾಟದಲ್ಲಿ ಗೆದ್ದ ಅವಳ ಹೋರಾಟದ ಹಾದಿ ನಮ್ಮಂತಹ ಸಾವಿರಾರು ಶಬರಿಗಳಿಗೆ ಸ್ಫೂರ್ತಿ.

ಮೀಸಲಾತಿ ಮತ್ತು ಅದನ್ನು ಪಡೆಯುತ್ತಿರುವವರ ಕುರಿತು ಮೇಲ್ಜಾತಿಗಳಲ್ಲಿ ಅಸಹನೆ, ಕೇಡಿನ ಮನೋಭಾವ ಹಾಗೂ ತಾತ್ಸಾರ ಇಂದಿಗೂ ಪ್ರಸ್ತುತವಾಗಿದೆ ಹಾಗು ಬೆಳೆಯುತ್ತಲೇ ಇದೆ. ಮೀಸಲಾತಿಯ ಬಗೆಗಿನ ಇಂತಹ ಕುತ್ಸಿತ ನೋಟಗಳಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾದಂಬರಿಯ ಶಬರಿಯಂತೆಯೇ ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ತಪ್ಪದೇ ಶೋಷಣೆಯನ್ನು ಅನುಭವಿಸಿರುವುದು ವಾಸ್ತವ. ನಾವ್ಯಾರೂ ಈ ಅವಮಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಮೀಸಲಾತಿಯ ನಿಜವಾದ ಅರ್ಥ ಎಲ್ಲರಿಗೂ ತಿಳಿಯಬೇಕಿದೆ. ನಿಮಗೆ ಮೀಸಲಾತಿಯನ್ನು ಪಡೆಯುತ್ತಿರುವವರ ಬಗ್ಗೆ ಅಸೂಯೆ, ದ್ವೇಷ ಇದ್ದರೆ ಅಥವಾ ಮೀಸಲಾತಿಯಿಂದಾಗಿ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂಬ ನಿಲುವಿದ್ದರೆ ಅಥವಾ ಈಗ ಜಾತಿಯೆಂಬುದೇ ಇಲ್ಲ, ಮೀಸಲಾತಿಯನ್ನು ಬಡತನದ ಆಧಾರದ ಮೇಲೆ ನೀಡಬೇಕು ಎಂಬೆಲ್ಲಾ ತಕರಾರುಗಳಿದ್ದರೆ ಈ ಪುಸ್ತಕ ನಿಮ್ಮೆಲ್ಲಾ ತಕರಾರುಗಳಿಗೆ ಸ್ಪಷ್ಟನೆ ಕೊಡುತ್ತದೆ. ಈ ಕಥನವು ಮೇಲ್ಜಾತಿಯಲ್ಲಿ ಹುಟ್ಟಿದವರು ತಮ್ಮ ಜಾತಿಯ ಕಾರಣಕ್ಕೆ ಪಡೆಯುವ ಎಲ್ಲಾ ರೀತಿಯ ಸಾಮಾಜಿಕ ಬಂಡವಾಳಗಳನ್ನು ಮನಗಾಣಿಸಿ, ಮೀಸಲಾತಿ ಯಾಕೆ ಬೇಕು ಎಂಬುದನ್ನೂ ಅರ್ಥ ಮಾಡಿಸುತ್ತದೆ. ಜೊತೆಗೆ, ಶಿಕ್ಷಿತರಾದ ನಮ್ಮ ಜವಾಬ್ದಾರಿಗಳೇನು, ನಾವೇಗೆ ಸಂಘಟಿತರಾಗಬೇಕು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಂದ, ಹಳ್ಳಿಗಳಿಂದ ನಗರಕ್ಕೆ ಬರುವ ದಲಿತ, ದಮನಿತ ವಿದ್ಯಾರ್ಥಿನಿ/ವಿದ್ಯಾರ್ಥಿಯು ನಗರದ ಉಳ್ಳವರ ಮಧ್ಯೆ ಏಕಾಂಗಿಯಾಗಿ ಪ್ರತ್ಯೇಕಗೊಳ್ಳುವುದನ್ನು ತಡೆಯಲು ನಾವು ಮಾಡಬೇಕಾದ ಕರ್ತವ್ಯಗಳೇನು ಎಂಬುದನ್ನೂ ಹೇಳುತ್ತದೆ.

ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ನೆರವಾಗುವ ಈ ಪುಸ್ತಕವನ್ನು ಕೊಟ್ಟ ಸಂಗೀತಾ ಮುಳೆಯವರಿಗೆ ಹಾಗೂ ಅದನ್ನು ಕನ್ನಡಕ್ಕೆ ತಂದಿರುವ ಕೆಸ್ತಾರ ವಿ ಮೌರ್ಯ ಮತ್ತು ವಿಕಾಸ್ ಆರ್ ಮೌರ್ಯರವರಿಗೆ
ಅಭಿನಂದನೆಗಳು.

ಕಾವ್ಯ .ಸಿ

ಕಾವ್ಯ .ಸಿ
ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಾವ್ಯ ಸದ್ಯಕ್ಕೆ ಬೆಂಗಳೂರು ನಿವಾಸಿ. ದಲಿತ-ಬಹುಜನ ಚಳವಳಿ ಮತ್ತು ಸ್ತ್ರೀವಾದಿ ಚಿಂತನೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ.


ಇದನ್ನೂ ಓದಿ: ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದಗಳು ಮೇಡಂ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
    ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.
    ಜೈ ಸಾವಿತ್ರಿಬಾಯಿ ಫುಲೆ 🌹
    ಜೈ ಭೀಮ್ 🙏

    💯ಮಾರುತಿ ಕೆಳಗೇರಿ 🙏

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...