Homeಮುಖಪುಟ‘ಸುಲ್ಲಿ ಡೀಲ್ಸ್' ಸೃಷ್ಟಿಕರ್ತ ಎನ್ನಲಾಗಿರುವ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು

‘ಸುಲ್ಲಿ ಡೀಲ್ಸ್’ ಸೃಷ್ಟಿಕರ್ತ ಎನ್ನಲಾಗಿರುವ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು

- Advertisement -
- Advertisement -

‘ಸುಲ್ಲಿ ಡೀಲ್ಸ್’ ಎಂಬ ಅಪ್ಲಿಕೇಶನ್‌ನ ಸೃಷ್ಟಿಕರ್ತ ಎಂದು ಹೇಳಲಾದ ಮಧ್ಯಪ್ರದೇಶದ ವ್ಯಕ್ತಿಯನ್ನು ದೆಹಲಿ ಪೊಲೀಸರು ಇಂಧೋರ್‌ನಲ್ಲಿ ಭಾನುವಾರ ಬಂಧಿಸಿದ್ದಾರೆ. “ಸುಲ್ಲಿ ಡೀಲ್ಸ್” ಆಪ್ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ.

26 ವರ್ಷದ ಆರೋಪಿ ಓಂಕಾರೇಶ್ವರ್ ಠಾಕೂರ್ ರನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ದೆಹಲಿ ಪೊಲೀಸರ IFSO ಘಟಕ ಬಂಧಿಸಿದೆ. ಕಳೆದ ವರ್ಷ ಬಿಡುಗಡೆಯಾದ ಈ ಆ್ಯಪ್‌ನಲ್ಲಿ ಅನುಮತಿಯಿಲ್ಲದೆ ನೂರಾರು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ‘ಹರಾಜಿಗೆ’ ಪಟ್ಟಿ ಮಾಡಲಾಗಿತ್ತು.

‘ಸುಲ್ಲಿ ಡೀಲ್ಸ್’ ಮತ್ತು ಇತ್ತೀಚೆಗೆ ರಚಿಸಲಾದ ‘ಬುಲ್ಲಿ ಬಾಯಿ’ ಅಪ್ಲಿಕೇಶನ್‌ಗಳಲ್ಲಿ ಮುಸ್ಲಿಂ ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಹರಾಜಿಗಿಡಲಾಗಿದೆ. ಜೊತೆಗೆ ಮಹಿಳೆಯರ ವಿರುದ್ಧ ಅಸಭ್ಯ ಟೀಕೆಗಳನ್ನು ಮಾಡಲಾಗಿದೆ.

ಈ ಎರಡೂ ಅಪ್ಲಿಕೇಶನ್‌ಗಳು ಕದ್ದ ಫೋಟೋಗಳನ್ನು ಹರಾಜು ಮಾಡಲು ಹೋಸ್ಟಿಂಗ್ ಪ್ಲಾಟ್‌ಫಾರ್ಮ್ ‘ಗಿಟ್‌ಹಬ್’ ಎಂಬ ವೇದಿಕೆಯನ್ನು ಬಳಸಿಕೊಂಡಿವೆ.

ಇದನ್ನೂ ಓದಿ: ಬುಲ್ಲಿ ಬಾಯ್‌‌ ಪ್ರಕರಣ ಬಿಚ್ಚಿಟ್ಟ ‘ಟ್ರ್ಯಾಡ್ಸ್’ ‘ರಾಯ್ತಾಸ್‌’ ಬಲಪಂಥೀಯ ಗುಂಪುಗಳ ಘರ್ಷಣೆ: ಏನಿದು ವಿವಾದ?

“ಓಂ ಠಾಕೂರ್ ಅವರನ್ನು ಇಂದೋರ್‌ನಿಂದ ಬಂಧಿಸಲಾಗಿದೆ. ಸುಲ್ಲಿ ಡೀಲ್ ಆ್ಯಪ್ ಪ್ರಕರಣದ ಹಿಂದಿನ ಪ್ರಮುಖ ಸೂತ್ರಧಾರ ಈತ” ಎಂದು ದೆಹಲಿ ಪೊಲೀಸ್ ವಿಶೇಷ ಘಟಕ ಇಂಟಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ ಘಟಕದ ಉಪ ಪೊಲೀಸ್ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.

’ಬಂಧಿತ ಆರೋಪಿ ಠಾಕೂರ್, ಇಂದೋರ್‌ನ ಐಪಿಎಸ್ ಅಕಾಡೆಮಿಯಲ್ಲಿ ಬಿಸಿಎ ವ್ಯಾಸಂಗ ಮಾಡಿದ್ದಾರೆ ಮತ್ತು ನ್ಯೂಯಾರ್ಕ್ ಸಿಟಿ ಟೌನ್‌ಶಿಪ್‌ನ ನಿವಾಸಿ. ಈತ ಗಿಟ್‌ಹಬ್‌ನಲ್ಲಿ ‘ಸುಲ್ಲಿ ಡೀಲ್ಸ್’ ಕೋಡ್ ಅನ್ನು ಸೃಷ್ಟಿಸಿದ್ದಾರೆ ಬಳಿಕ ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 2020 ರಲ್ಲಿ, ಠಾಕೂರ್ ಟ್ವಿಟರ್ ಹ್ಯಾಂಡಲ್ ‘ಗಂಗೆಸಿಯಾನ್’ ಅನ್ನು ಬಳಸಿಕೊಂಡು ‘ಟ್ರೇಡ್ ಮಹಾಸಭಾ’ ಎಂಬ ಗುಂಪನ್ನು ಸೇರಿಕೊಂಡಿದ್ದಾರೆ. ಆ ಗುಂಪಿನಲ್ಲಿ ಮುಸ್ಲಿಂ ಮಹಿಳೆಯರನ್ನು ಟ್ರೋಲ್ ಮಾಡುವುದು ಹೇಗೆ ಎಂದು ಗುಂಪಿನ ಸದಸ್ಯರು ಆಗಾಗ್ಗೆ ಚರ್ಚಿಸುತ್ತಿದ್ದರು. ‘ಸುಲ್ಲಿ ಡೀಲ್ಸ್’ ಎಂಬ ಅಪ್ಲಿಕೇಶನ್ ಅನ್ನು ರಚಿಸಿದ ನಂತರ, ಈ ಟ್ವಿಟರ್ ಗುಂಪಿನ ಸದಸ್ಯರು, ಪ್ರಮುಖ ವ್ಯಕ್ತಿಗಳು ಸೇರಿದಂತೆ ಹಲವು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಬುಲ್ಲಿ ಬಾಯಿ’ ಆ್ಯಪ್ ಸೃಷ್ಟಿಕರ್ತ ನಿರಾಜ್ ಬಿಷ್ಣೋಯ್ ಅವರಿಂದ ವಿಚಾರಣೆಯ ಸಮಯದಲ್ಲಿ ಪಡೆದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸುಲಿ ಡೀಲ್ಸ್ ಸೃಷ್ಟಿಕರ್ತ ಎನ್ನಲಾಗಿರುವ ಓಂಕಾರೇಶ್ವರ ಠಾಕೂರ್ ಅವರನ್ನು ಗುರುತಿಸಿ ಬಂಧಿಸಿದ್ದಾರೆ.


ಇದನ್ನೂ ಓದಿ: ’ಬುಲ್ಲಿ ಬಾಯ್’ ಪ್ರಕರಣದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಬಂಧನ: ದೆಹಲಿ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...