ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗಳ ಚುನಾವಣೆ, ಕರ್ನಾಟಕ ವಿಧಾನಸಭೆಯ ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಉಪಚುನಾವಣೆ ಹಾಗೂ ದೇಶದ ವಿವಿಧ ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶದ ಮುಖ್ಯಾಂಶಗಳು ಇಲ್ಲಿವೆ..
11.20- ಶಿಗ್ಗಾವಿಯಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಯಾಸಿರ್ ಅಹ್ಮದ್ ಪಠಾಣ್-72,306
ಭರತ್ ಬೊಮ್ಮಾಯಿ-60,055
ಅಂತರ-12,251
11.20– ಸಂಡೂರು ಅನ್ನಪೂರ್ಣ ತುಕರಾಂ ಮುನ್ನಡೆ
ಅನ್ನಪೂರ್ಣ ತುಕರಾಂ-83,368
ಬಂಗಾರು ಹನುಮಂತು-74,487
ಅಂತರ-8,881
11.20- ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ಗೆ ಮುನ್ನಡೆ
ಸಿ.ಪಿ ಯೋಗೇಶ್ವರ್-67,967
ನಿಖಿಲ್ ಕುಮಾರಸ್ವಾಮಿ-46,001
ಅಂತರ- 21,966
10.40- ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ಗೆ ಮುನ್ನಡೆ
ಸಿ.ಪಿ ಯೋಗೇಶ್ವರ್-61,267
ನಿಖಿಲ್ ಕುಮಾರಸ್ವಾಮಿ-41,468
ಅಂತರ- 19,799
10.40- ಸಂಡೂರು ಅನ್ನಪೂರ್ಣ ತುಕರಾಂ ಮುನ್ನಡೆ
ಅನ್ನಪೂರ್ಣ ತುಕರಾಂ-67,124
ಬಂಗಾರು ಹನುಮಂತು-60,562
ಅಂತರ-6,562
10.40– ಶಿಗ್ಗಾವಿಯಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಯಾಸಿರ್ ಅಹ್ಮದ್ ಪಠಾಣ್-72,306
ಭರತ್ ಬೊಮ್ಮಾಯಿ-60,055
ಅಂತರ-12,251
10.30-ಶಿಗ್ಗಾವಿಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ
ಯಾಸಿರ್ ಅಹ್ಮದ್ ಪಠಾಣ್-49,177
ಭರತ್ ಬೊಮ್ಮಾಯಿ-48,822
ಅಂತರ-355
10.25- ಸಂಡೂರು ಅನ್ನಪೂರ್ಣ ತುಕರಾಂ ಮುನ್ನಡೆ
ಅನ್ನಪೂರ್ಣ ತುಕರಾಂ-44,463
ಬಂಗಾರು ಹನುಮಂತು-43,355
ಅಂತರ-1,108
10.20- ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ಗೆ ಮುನ್ನಡೆ
ಸಿ.ಪಿ ಯೋಗೇಶ್ವರ್-45,982
ನಿಖಿಲ್ ಕುಮಾರಸ್ವಾಮಿ-34,808
ಅಂತರ- 11,174
9.50- ಶಿಗ್ಗಾವಿ ಆರನೇ ಸುತ್ತು
ಭರತ್ ಬೊಮ್ಮಾಯಿ-32,787
ಯಾಸಿರ್ ಅಹ್ಮದ್ ಖಾನ್-32,125
ಅಂತರ-662
9.40- ಸಂಡೂರು ಐದನೇ ಸುತ್ತು
ಅನ್ನಪೂರ್ಣ ತುಕಾರಾಂ -23,877
ಬಂಗಾರು ಹನುಮಂತು – 23, 672
ಅಂತರ -205
9.30- ಚನ್ನಪಟ್ಟಣ ನಾಲ್ಕನೇ ಸುತ್ತು
ನಿಖಿಲ್ ಕುಮಾರಸ್ವಾಮಿ- 20,676
ಸಿ.ಪಿ ಯೋಗೇಶ್ವರ್ -19,521
ಅಂತರ- 1,155
9.30- ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಲ್ಕನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ
ಸಂಡೂರಿನಲ್ಲಿ ಸದ್ಯ ಕಾಂಗ್ರೆಸ್ ಅಭ್ಯರ್ಥಿ 20,128 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ 19,127 ಮತ ಗಳಿಸಿದ್ದಾರೆ.
ಮೂರನೇ ಸುತ್ತಿನಲ್ಲಿ ಸಂಡೂರು ಕಾಂಗ್ರೆಸ್ ಅಭ್ಯರ್ಥಿ 1,973 ಮತಗಳ ಮುನ್ನಡೆ ಪಡೆದಿದ್ದರು, ನಾಲ್ಕನೇ ಸುತ್ತಿನಲ್ಲಿ 1001 ಮುನ್ನಡೆ ಇದೆ.
9.20- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ 4ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ, ಮತಗಳ ಅಂತರ ಕಡಿಮೆಯಾಗಿದೆ.
9.05- ಚನ್ನಪಟ್ಟಣ ಕ್ಷೇತ್ರದಲ್ಲಿ ಎರಡನೇ ಹಂತದ ಮತ ಎಣಿಕೆ ಆರಂಭಗೊಂಡಿದ್ದು, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ನಡುವೆ ಹಾವು ಏಣಿ ಆಟ ನಡೆಯುತ್ತಿದೆ.
9.00- ಕೇರಳದ ವಯನಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದು, ಸಿಪಿಐ(ಎಂ) ಅಭ್ಯರ್ಥಿ ವಿರುದ್ದ 45,325 ಮತಗಳಿಂದ ಅವರು ಮುನ್ನಡೆಯಲಿದ್ದಾರೆ.
ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 39, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 29 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
8.45 –ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಮಹಾಯುತಿ 134, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ 124 ಮತ್ತು ಇತರರು 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಜಿದ್ದಾಜಿದ್ದಿನ ಕ್ಷೇತ್ರ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆರಂಭಿಕ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರಿಗೆ ಹಿನ್ನಡೆಯಾಗಿದೆ. ಆದರೆ, ಈ ಕ್ಷೇತ್ರದಲ್ಲಿ ಕ್ಷಣಕ್ಷಣಕ್ಕೂ ಟ್ರೆಂಡ್ ಬದಲಾಗುತ್ತಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರಿಗೆ ಹಿನ್ನಡೆಯಾಗಿದೆ.
8.30- ಅಂಚೆ ಮತಗಳ ಎಣಿಕೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕರಾಂ ಮುನ್ನಡೆ ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಹಿನ್ನಡೆ ಅನುಭವಿಸಿದ್ದಾರೆ.


