Homeಕರ್ನಾಟಕಸಮಾಜವನ್ನು ಬದಲಾಯಿಸುವ ಮುನ್ನ ಯುವಜನರು ತಮ್ಮನ್ನು ಬದಲಾಯಿಸಿಕೊಳ್ಳಬೇಕು- ಕಾಮ್ರೇಡ್ ಪ್ರತಿಭಾ ನಾಯಕ್

ಸಮಾಜವನ್ನು ಬದಲಾಯಿಸುವ ಮುನ್ನ ಯುವಜನರು ತಮ್ಮನ್ನು ಬದಲಾಯಿಸಿಕೊಳ್ಳಬೇಕು- ಕಾಮ್ರೇಡ್ ಪ್ರತಿಭಾ ನಾಯಕ್

- Advertisement -
- Advertisement -

“ಸಮಾಜವನ್ನು ಬದಲಾಯಿಸುವ ಹೋರಾಟಕ್ಕೆ ಕಾಲಿಡುವ ಯುವಜನರು ಮೊದಲು ತಮ್ಮನ್ನೇ ಬದಲಾಯಿಸಿಕೊಳ್ಳಬೇಕು, ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟಬೇಕು. ಆ ಹೋರಾಟಗಳ ಮೂಲಕವೇ ನಮ್ಮ ಚಾರಿತ್ರ್ಯ ಮೇಲೇರುತ್ತದೆ” ಎಂದು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪ್ರತಿಭಾ ನಾಯಕ್ ಹೇಳಿದ್ದಾರೆ.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಕರ್ನಾಟಕ  ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ಎರಡು ದಿನಗಳ 5ನೇ ರಾಜ್ಯ ಮಟ್ಟದ ಯುವಜನ ಸಮ್ಮೇಳನ ನಡೆದಿದೆ. ಈ ವೇಳೆ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪ್ರತಿಭಾ ನಾಯಕ್, “ಇಂದು ನಮ್ಮ ಸಮಾಜದಲ್ಲಿ ಮೌಲ್ಯಗಳು ನಶಿಸುತ್ತಿವೆ.  ಆದರೆ, ನಾವು ಮೌಲ್ಯಗಳನ್ನು ಕಳೆದುಕೊಳ್ಳಬಾರದು. ಹೇಗೆ ಸುಗಂಧಯುಕ್ತ ಹೂವೊಂದು ತಾನಿರುವ ಸ್ಥಳವನ್ನು ಪರಿಮಳಯುಕ್ತಗೊಳಿಸುವುದೋ ಹಾಗೆಯೇ ಸಚ್ಚಾರಿತ್ರ್ಯವುಳ್ಳ ಯುವಕರಾಗಿ  ನಾವು  ನಮ್ಮ ಸಮಾಜದಲ್ಲಿಯೂ ಉನ್ನತ ಚಾರಿತ್ಯ್ರ ಮತ್ತು  ಮ್ಯೌಗಳನ್ನು ಬೆಳೆಸಬೇಕು”  ಎಂದು ಹೇಳಿದ್ದಾರೆ.

“ಕೋವಿಡ್‌ನ ಸಂದರ್ಭದಲ್ಲಿ ಸರ್ಕಾರವು ಸಾಕಷ್ಟು ಜನವಿರೋಧಿ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಉದ್ಯಮಗಳನ್ನು ಖಾಸಗಿ ಬಂಡವಾಳಿಗರಿಗೆ ಉಡುಗೊರೆಯಾಗಿ ನೀಡಿದೆ. ಪ್ರಪಂಚದಲ್ಲೇ  ದೊಡ್ಡ ಪ್ರಜಾಪ್ರಭುತ್ವವೆಂದು ಬೀಗುವ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಹರಣವಾಗುತ್ತಿದೆ. ಅವುಗಳನ್ನು ರಕ್ಷಿಸಲು ನಾವು ಹೋರಾಟ ಬೆಳೆಸಬೇಕು. ಯುವಜನರು ತಮ್ಮ ವಿರುದ್ಧ ಸರ್ಕಾರ  ತರುವ ನೀತಿಗಳ ವಿರುದ್ಧ, ತಮ್ಮ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ನಾಯಕತ್ವಕ್ಕಾಗಿ ಸಂಘಟನೆಯತ್ತ ನೋಡುತ್ತಿದ್ದಾರೆ. ಅವರನ್ನು ಸಂಘಟಿಸಿ ಹೋರಾಟವನ್ನು ಒಂದು ಗಮ್ಯಕ್ಕೆ ಹೊಯ್ಯುವ  ಹೊಣೆ ನಮ್ಮದು. ನಮಗಾಗಿ ಬದುಕುವುದಷ್ಟೇ ನಿಜವಾದ ಬದುಕಲ್ಲ, ಪರರಿಗಾಗಿ ಬದುಕುವವರು ನಿಜವಾದ ಮಾನವರು. ನಮ್ಮ ನಡುವೆ ಇರುವ ಯುವಕರಲ್ಲಿ ಅಂತಹ ಗುಣವುಳ್ಳ ಯುವಜನರಿದ್ದಾರೆ. ಅಂಥವರನ್ನು ಹುಡುಕಿ ಅವರಿಗೆ ವೈಚಾರಿಕತೆಯನ್ನು ನೀಡಿ ಯುವ ಸಂಘಟನಕಾರರಾಗಿ ಬೆಳೆಸುವ ಹೊಣೆಯನ್ನು ಯುವಜನರು ತೆಗೆದುಕೊಳ್ಳಬೇಕು” ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರಗಳ ಆದ್ಯತೆ ಜನಸಾಮಾನ್ಯರಲ್ಲ, ಕಾರ್ಪೊರೇಟರ್‌ಗಳು- ಡಾ.ಬರಗೂರು ರಾಮಚಂದ್ರಪ್ಪ

ಎಐಡಿವೈಓನ ರಾಷ್ಟಾಧ್ಯಕ್ಷರಾದ ಕಾ. ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, “ನಮ್ಮ ದೇಶದಲ್ಲಿ ವಿಭಿನ್ನ ಸಂಸ್ಕೃತಿಯ ಜನ ಸಾವಿರಾರು ವರ್ಷಗಳಿಂದ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಈಗ ಅವರ ನಡುವೆ ವಿಘಟನೆಯನ್ನು ತರಲು ಪಟ್ಟಭದ್ರ ಶಕ್ತಿಗಳು ಹವಣಿಸುತ್ತಿವೆ. ಅವರ ಹುನ್ನಾರವನ್ನು ಯುವಜನರು ಅರ್ಥಮಾಡಿಕೊಳ್ಳಬೇಕು. ಜನಸಾಮಾನ್ಯರಿಗೆ ಸತ್ಯದ ಅರಿವು ಮೂಡಿಸಿ ತಮ್ಮ ನೈಜ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಕಟ್ಟುವಂತೆ ಮಾಡುವ ಜವಾಬ್ದಾರಿ ಯುವಜನರ ಮೇಲಿದೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ  ಹೋರಾಟಗಾರರಾದ ಭಗತ್‌ಸಿಂಗ್, ನೇತಾಜಿ ಮೊದಲಾದವರು  ಮಾನವನಿಂದ  ಮಾನವನ  ಶೋಷಣೆಯನ್ನು  ಅಂತ್ಯಗೊಳಿಸುವ  ಸಮ  ಸಮಾಜ ನಿರ್ಮಾಣದ  ಕನಸು  ಕಂಡಿದ್ದರು. ಅವರ  ವಿಚಾರದ ಬೆಳಕಿನಡಿಯಲ್ಲಿ ನಾವು ಹೋರಾಟವನ್ನು ಮಂದುವರೆಸಬೇಕು” ಎಂದಿದ್ದಾರೆ.

ಇದೆ ಸಂದರ್ಭದಲ್ಲಿ ಎಐಡಿವೈಓ ಹೊಸ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶರಣಪ್ಪ ಉದ್ಬಾಳ್, ಉಪಾಧ್ಯಕ್ಷರುಗಳಾಗಿ  ಚನ್ನಬಸವ  ಜಾನೇಕಲ್, ವಿಜಯಕುಮಾರ್, ಕೃಷ್ಣ, ಜಗನ್ನಾಥ ಎಸ್.ಎಚ್, ವಿನಯ ಸಾರಥಿ ಆಯ್ಕೆಯಾಗಿದ್ದಾರೆ.


ಇದನ್ನೂ ಓದಿ: ಗೌರವದಿಂದ ವರ್ತಿಸಿ; ಘನತೆಯುತ್ತ ಕೆಲಸದ ವಾತಾವರಣ ನಿರ್ಮಿಸಿ: ಬೆಂಗಳೂರು ಪೌರ ಕಾರ್ಮಿಕರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...