ರಾಜ್ಯದಲ್ಲಿ ಜೂನ್ 7 ರ ವರೆಗೆ ಜಾರಿಯಲ್ಲಿರುವ ಲಾಕ್‌ಡೌನ್ ಅನ್ನು ಜೂನ್ 14 ರ ವರೆಗೆ ವಿಸ್ತರಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂಪ್ಪ ಈ ಬಗ್ಗೆ ಗುರುವಾರ ಸಂಜೆ 5 ಗಂಟೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಿನ್ನೆ ನಡೆದ ಸಚಿವರ ಸಭೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇಂದು ಸಂಜೆ ಸಿಎಂ ಬಿಎಸ್ವೈ ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಕೊರೊನಾ ಲಾಕ್‌ಡೌನ್ ಪರಿಹಾರವಾಗಿ 500 ಕೋಟಿ ರೂ. ಗಳನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕಾರಣ, ಮುಖ್ಯಮಂತ್ರಿ ಲಾಕ್‌ಡೌನ್ ಮುಂದುವರಿಸಿದ್ದಾರೆ.
ಚಲನಚಿತ್ರ ಕಲಾವಿದರಿಗೆ 3000 ರೂಪಾಯಿ, ಮೀನುಗಾರರಿಗೆ 3000, ಮುಜುರಾಯಿ ದೇವಸ್ಥಾನ ಅರ್ಚಕರು, ಅಡುಗೆಯವರು ಸಿ ಗ್ರೂಪ್ ನೌಕರರಿಗೆ 3000 ರೂಪಾಯಿ, ಮಗ್ಗಗಳ ಕಾರ್ಮಿಕರಿಗೆ 3000, ಮಸೀದಿ ಮುಹದ್ಝಿನ್‌ಗಳಿಗೆ 3000, ಆಶಾ ಕಾರ್ಯಕರ್ತರು 3000, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ 2000, ಅನುದಾನರಹಿತ ಶಾಲಾ ಶಿಕ್ಷಕರಿಗೆ 5000 ಪರಿಹಾರ ನೀಡುವುದಾಗಿ ಅವರು ಹೇಳಿದ್ದಾರೆ.
ಅತಿಸಣ್ಣ-ಸಣ್ಣ-ಮಧ್ಯಮ ಕೈಗಾರಿಕೆಗಳ ವಿದ್ಯುತ್ ಶುಲ್ಕದಲ್ಲಿ ವಿನಾಯ್ತಿ, ಇತರ ಕೈಗಾರಿಕೆಗಳಿಗೆ ಮೇ,ಜೂನ್ ಶುಲ್ಕ ವಿನಾಯ್ತಿ ಹಾಗೂ ರಫ್ತು ಓರಿಯಂಟ್ ಕೈಗಾರಿಕೆ ಅನುಮತಿ ನೀಡಲಾಗಿದೆ. ಹೊಟೇಲ್‌ಗಳಲ್ಲಿ ಸಂಜೆ 6 ಗಂಟೆಯವರೆ ತೆರೆಯಲು ಅವಕಾಶ ಆದರೆ ಪಾರ್ಸೆಗ್ ಮಾತ್ರ ಅವಕಾಶ ನೀಡಲಾಗಿದೆ. ಜೂನ್ 14ರ ವರೆಗೆ ವಿಸ್ತರಿಸಲಾಗುವ ಲಾಕ್‌ಡೌನ್ ಕೂಡ ಇದೇ ರೀತಿಯಾಗಿಯೆ ಇರಲಿದ್ದು, ಯಾವುದೇ ಸಡಿಲಿಕೆ ಇರುವುದಿಲ್ಲ.
ಮೇ ತಿಂಗಳ 10 ರಿಂದ 24 ರವರೆಗೆ ಮೊಲದ ಹಂತದಲ್ಲಿ ಸಂಪೂರ್ಣ ಲಾಕ್‌ಡೌನ್ ಅನ್ನು ರಾಜ್ಯ ಸರ್ಕಾರವು ಹೇರಿತ್ತು. ಆದರೆ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈ ಲಾಕ್‌ಡೌನ್ ಅನ್ನು ಮತ್ತೇ ಜೂನ್ 7 ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ.
ಮೇ 10 ರಂದು ಲಾಕ್‌ಡೌನ್ ಪ್ರಾರಂಭವಾಗುವುದಕ್ಕಿಂತ ಮೊದಲೆ ರಾಜ್ಯ ಸರ್ಕಾರವು ಕಠಿಣ ನಿರ್ಬಂಧ ಹೇರಿ ಅಘೋಷಿತ ಲಾಕ್‌ಡೌನ್ ಹೇರಿತ್ತು.
ರಾಜ್ಯದಲ್ಲಿ ಜಾರಿಯಲ್ಲಿರುವ ನಿರ್ಬಂಧವನ್ನು ಜೂನ್ 7 ನಂತರವೂ ವಿಸ್ತರಿಸುವ ಬಗ್ಗೆ ಜೂನ್ 5 ರಂದು ತಜ್ಞರ ಜೊತೆಗೆ ಚರ್ಚಿಸಿ ತೀರ್ಮಾನಿಸಲಾವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳೆದ ಭಾನುವಾರ ಹೇಳಿದ್ದರು. ಆದರೆ ಇದೀಗ ಎರಡು ದಿನದ ಮೊದಲೆ ನಿರ್ಬಂಧ ಘೋಷಿಸಲಾಗಿದೆ.
ಭಾನುವಾರ ಮಾತನಾಡಿದ್ದ ಯಡಿಯೂರಪ್ಪ, “ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗುತ್ತಿದೆ. ಆದರೆ, ತಜ್ಞರು ಲಾಕ್‌ಡೌನ್ ವಿಸ್ತರಿಸುವಂತೆ ವರದಿ ನೀಡಿಲ್ಲ. ಜೂನ್ 5 ರ ವೇಳೆಗೆ ಕೊರೊನಾ ಪರಿಸ್ಥಿತಿ ನೋಡಿಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರವು ಈಗಾಗಲೆ ರಾಜ್ಯಗಳ ಸ್ಥಿತಿಗತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ” ಎಂದು ಹೇಳಿದ್ದರು.


