Homeಮುಖಪುಟಗೌತಮ್ ಗಂಭೀರ್ ಫೌಂಡೇಶನ್ ಕಾನೂನುಬಾಹಿರವಾಗಿ ಕೋವಿಡ್ ಮೆಡಿಸಿನ್ ಸಂಗ್ರಹಿಸಿ ತಪ್ಪು ಮಾಡಿದೆ

ಗೌತಮ್ ಗಂಭೀರ್ ಫೌಂಡೇಶನ್ ಕಾನೂನುಬಾಹಿರವಾಗಿ ಕೋವಿಡ್ ಮೆಡಿಸಿನ್ ಸಂಗ್ರಹಿಸಿ ತಪ್ಪು ಮಾಡಿದೆ

- Advertisement -
- Advertisement -

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ನಡೆಸುವ ಫೌಂಡೇಶನ್ ಕೋವಿಡ್ ಚಿಕಿತ್ಸೆಯಲ್ಲಿ ಬಳಸಲಾಗುವ ಫ್ಯಾಬ್ಲಿಪೂ ಔಷಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದೆ ಮತ್ತು ವಿತರಣೆ ಮಾಡಿ ತಪ್ಪೆಸಗಿದೆ ಎಂದು ದೆಹಲಿ ಹೈಕೋರ್ಟ್‌ಗೆ ದೆಹಲಿ ಸರ್ಕಾರದ ಔಷಧ ನಿಯಂತ್ರಕ ಮಂಡಳಿ ಇಂದು ತಿಳಿಸಿದೆ.

ಗೌತಮ್ ಗಂಭೀರ್ ಫೌಂಡೇಷನ್, ಔಷಧಿ ವಿತರಕರು ಮತ್ತು ಇದಕ್ಕೆ ಸಂಬಂಧಿಸಿದ ಇತರರ ವಿರುದ್ಧ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಸರ್ಕಾರದ ಔಷಧ ನಿಯಂತ್ರಣ ಮಂಡಳಿ ಹೈಕೋರ್ಟಿಗೆ ಸಲ್ಲಿಸಿದ ವಿವರದಲ್ಲಿ ಹೇಳಿದೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.

ಶಾಸಕ ಪ್ರವೀಣ್ ಕುಮಾರ್ ಅವರು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಇದೇ ರೀತಿಯ ಅಪರಾಧಗಳಿಗೆ ತಪ್ಪಿತಸ್ಥರೆಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಆರು ವಾರಗಳಲ್ಲಿ ಈ ಪ್ರಕರಣಗಳಲ್ಲಿ ಹೆಚ್ಚಿನ ಪ್ರಗತಿಯ ಕುರಿತು ವರದಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಔಷಧ ನಿಯಂತ್ರಕ ಮಂಡಳಿಯನ್ನು ಕೇಳಿದೆ ಮತ್ತು ಜುಲೈ 29 ರಂದು ಮುಂದಿನ ವಿಚಾರಣೆ ನಡೆಸಲಿದೆ.

ಗೌತಮ್‌ ಗಂಭೀರ್‌ ಫೌಂಡೇಶನ್‌ ವತಿಯಿಂದ ದೆಹಲಿಯಲ್ಲಿ ಕೊರೋನಾ ವೈರಸ್‌ ಗೆ ಸಂಬಂಧಿಸಿದ ಔಷಧಿಗಳನ್ನು ಸಂಗ್ರಹಿಸಿದ ಮತ್ತು ವಿತರಿಸಿದ ಪ್ರಕರಣವನ್ನು ದೆಹಲಿ ಹೈಕೋರ್ಟ್‌ ಅತ್ಯಂತ ಗಂಭಿರವಾಗಿ ಪರಿಗಣಿಸಿದೆ. ಸಾವಿರಾರು ಜನರು ಔಷಧಗಳಿಲ್ಲದೇ ಸಾಯುತ್ತಿರುವಾಗ ಇಲ್ಲೊಬ್ಬ ನೂರಾರು ಸಂಖ್ಯೆಯಲ್ಲಿ ಔಷಧಿಯನ್ನು ದಾಸ್ತಾನು ಇರಿಸಿಕೊಂಡಿದ್ಧಾನೆ. ಅವರನ್ನು ಜನರ ಜೀವ ರಕ್ಷಿಸುವ ಹೀರೋ ಗಳೆಂದು ಸರ್ಕಾರ ಮತ್ತು ನೀವು ತಿಳಿದಿರಬಹುದು. ಆದರೆ ನ್ಯಾಯಾಲಯ ವಿಪತ್ತಿನ ಸಂದರ್ಭದಲ್ಲಿ ಕಳ್ಳ ಮಾರ್ಗದಲ್ಲಿ ಹೀರೋಗಳಾಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಬಯಸುತ್ತದೆ ಎನ್ನುವ ಮೂಲಕ ಕುಂಟುತ್ತ ಸಾಗುತ್ತಿರುವ ಗೌತಮ್‌ ಗಂಭೀರ್‌ ಫೌಂಢೇಶನ್‌ ವಿರುದ್ಧದ ತನಿಖೆಯ ಕುರಿತು ದೆಹಲಿ ಹೈಕೋರ್ಟ್‌ ಪೀಠ ಮೇ 31 ರಂದು ತೀವ್ರ ಅಸಮಧಾನ ವ್ಯಕ್ತಪಡಿಸಿತ್ತು.


ಇದನ್ನೂ ಓದಿ: ನೀವು ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ: ಗೌತಮ್‌ ಗಂಭೀರ್‌ ವಿರುದ್ಧದ ತನಿಖೆ ಕುರಿತು ದೆಹಲಿ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನ ಮಾಡಿ: ಖರ್ಗೆ, ರಾಹುಲ್‌ ಗಾಂಧಿ ಆಗ್ರಹ

0
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಇದು ಸಾಮಾನ್ಯ...