ತನ್ನ ಮರುನಾಮಕರಣದ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್!
PC: Latest News Headlines

ಅಲಹಾಬಾದ್ ಹೈಕೋರ್ಟ್ ಸೋಮವಾರ ಪ್ರಸಿದ್ಧ ಹಿಂದಿ ಮಾತಾದ “ರಾಮ್ ಭರೋಸೆ’ (ದೇವರೇ ಗತಿ) ಬಳಸುವ ಮೂಲಕ ಉತ್ತರ ಪ್ರದೇಶದ ಗ್ರಾಮೀಣ ಮತ್ತು ಸಣ್ಣ ನಗರಗಳ ಆರೋಗ್ಯ ವ್ಯವಸ್ಥೆಯ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದೆ.

ಉತ್ತರಪ್ರದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ ಅಲ್ಲಿನ ಹಳ್ಳಿಗಳು ಮತ್ತು ಸಣ್ಣ ನಗರಗಳಲ್ಲಿನ ಆರೋಗ್ಯ ಮೂಲಸೌಕರ್ಯಗಳ ಕೊರತೆ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಮೇಲಿನಂತೆ ಕಳವಳ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರಿದ್ದ ನ್ಯಾಯಪೀಠವು, ರಾಜ್ಯದ ಕೋವಿಡ್ ರೋಗಿಗಳಿಗೆ ಉತ್ತಮ ಆರೈಕೆ ನೀಡುವಂತೆ ಕೋರಿ ನಡೆಯುತ್ತಿರುವ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಕೋರ್ಟ್‌ಗೆ ಲಭ್ಯವಾದ ಅಂಕಿಅಂಶ, ಮಾಹಿತಿಯನ್ನು ಆಧರಿಸಿ ಮಾತನಾಡಿದ ನ್ಯಾಯಾಧೀಶರು, ಉತ್ತರಪ್ರದೇಶದ ಸಣ್ಣ ನಗರಗಳು ಮತ್ತು ಹಳ್ಳಿಗಳಿಗೆ ಸಂಬಂಧಿಸಿದ ಸಂಪೂರ್ಣ ವೈದ್ಯಕೀಯ ವ್ಯವಸ್ಥೆ ‘ರಾಮ್ ಭರೋಸೆ (ದೇವರ ಕರುಣೆ) ಮೇಲೆ ನಿಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌ನಲ್ಲಿ ಪಶ್ಚಿಮ ಉತ್ತರ ಪ್ರದೇಶದ ಮೀರತ್ ಪಟ್ಟಣದ ಜಿಲ್ಲಾ ಆಸ್ಪತ್ರೆಯಿಂದ ಕೋವಿಡ್ ರೋಗಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂಬ ದೂರನ್ನು ಪರಿಶೀಲಿಸಿದ ಮೂವರು ಸದಸ್ಯರ ಸಮಿತಿಯ ಸಲ್ಲಿಕೆಗಳನ್ನು ಗಮನಿಸಿದ ನ್ಯಾಯಾಲಯ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಾಲಯ ಗಮನಿಸಿದಂತೆ, ರೋಗಿ ಸಂತೋಷ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೆಸ್ಟ್ ರೂಂನಲ್ಲಿ ಅವರು ಕುಸಿದು ಬಿದ್ದ ನಂತರ ಅವರನ್ನು ಸ್ಟ್ರೆಚರ್ ಮೇಲೆ ತಂದು ಜೀವ ಉಳಿಸಲು ಪ್ರಯತ್ನಿಸಲಾಗಿತು. ಆದರೆ ರೋಗಿ ಬದುಕಿ ಉಳಿಯಲ್ಲಿಲ್ಲ. ಅವರ ದೇಹವನ್ನು “ಗುರುತಿಸಲಾಗದ” ವ್ಯಕ್ತಿಯಂತೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ವಿಲೇವಾರಿ ಮಾಡಿದ್ದಾರೆ ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

“ಅಂದು ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯರ ಕಡೆಯಿಂದ ತೀವ್ರ ನಿರ್ಲಕ್ಷತೆ, ಕರ್ತವ್ಯಲೋಪ ನಡೆದಿದೆ ಎಂದು ಕೋರ್ಟ್ ಒತ್ತಿ ಹೇಳಿದೆ.

ಉತ್ತರಪ್ರದೇಶದ ವೈದ್ಯಕೀಯ ಆರೈಕೆಯ ಸ್ಥಿತಿಯ ಬಗ್ಗೆ ಅವಲೋಕನಗಳನ್ನು ಮಾಡಿದ ನ್ಯಾಯಾಲಯವು, “ಸದ್ಯದ ಆರೋಗ್ಯ ವ್ಯವಸ್ಥೆ ತುಂಬ ದುರ್ಬಲವಾಗಿದೆ. ಇದು ‘ಕಳವಳಕಾರಿ ಸಂಗತಿ’ ಎಂದಿದೆ.

“ಸಾಮಾನ್ಯ ಸಮಯದಲ್ಲಿಯೇ ನಮ್ಮ ಜನರ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅದು ಪ್ರಸ್ತುತ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತೀವ್ರವಾಗಿ ಕುಸಿದು ಬಿದ್ದಿದೆ’ ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ತನ್ನ ವಿಚಾರಣೆಯಲ್ಲಿ, ನ್ಯಾಯಾಲಯವು ಪಶ್ಚಿಮ ಯುಪಿಯ ಬಿಜ್ನೋರ್ ಜಿಲ್ಲೆಯ ಒಂದು ಉದಾಹರಣೆಯನ್ನು ಸಹ ಪ್ರಸ್ತಾಪಿಸಿದೆ. ರಾಜ್ಯ ಸರ್ಕಾರದ ಸಲ್ಲಿಕೆಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಹೀಗೆ ಹೇಳಿದೆ: “ಬಿಜ್ನೋರ್‌ನಲ್ಲಿ ಯಾವುದೇ ಒಳ್ಳೆಯ ಆಸ್ಪತ್ರೆ ಇಲ್ಲ. ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 150 ಹಾಸಿಗೆಗಳಿವೆ. ಉಳಿದ ವೈದ್ಯಕೀಯ ಸಲಕರಣೆಗಳ ತೀವ್ರ ಕೊರತೆಯಿದೆ’ ಎಂದು ಕೋರ್ಟ್ ಹೇಳಿದೆ.

‘ಗ್ರಾಮೀಣ ಪ್ರದೇಶದ ಜನಸಂಖ್ಯೆಯನ್ನು 32 ಲಕ್ಷ ಎಂದು ಪರಿಗಣಿಸಿದರೆ, ಒಂದು ಆರೋಗ್ಯ ಕೇಂದ್ರದಲ್ಲಿ 3 ಲಕ್ಷ ಜನರ ಹೊರೆ ಇದೆ ಮತ್ತು 3 ಲಕ್ಷ ಜನರಿಗೆ ಕೇವಲ 30 ಹಾಸಿಗೆಗಳಿವೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ತೀವ್ರವಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ಉತ್ತರ ಪ್ರದೇಶವು 16.19 ಲಕ್ಷ ಕೊರೋನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಕಳೆದ ತಿಂಗಳಿನಿಂದ ದೈನಂದಿನ ಸೋಂಕುಗಳು 20,000 ಕ್ಕಿಂತ ಹೆಚ್ಚಾಗಿದೆ. ವೈದ್ಯಕೀಯ ಆಮ್ಲಜನಕ ಅಥವಾ ಇತರ ಸಂಪನ್ಮೂಲಗಳ ಕೊರತೆಯಿಲ್ಲ ಎಂದು ರಾಜ್ಯ ಸರ್ಕಾರ ಹೇಳುತಿದ್ದರೂ, ಸರಿಯಾದ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳು ಕಷ್ಟಪಡುತ್ತಿದ್ದಾರೆ ಎಂದು ಮಾಧ್ಯಮಗಳು ತೊರಿಸುತ್ತಿವೆ.

ಕಳೆದ ಕೆಲವು ದಿನಗಳಿಂದ, ಗಂಗಾ ನದಿಯ ದಡದ ಸಮೀಪವಿರುವ ಹಳ್ಳಿಗಳಲ್ಲಿ ಕಂಡುಬರುವ ಶಂಕಿತ ಕೋವಿಡ್ ರೋಗಿಗಳ ಶವಗಳ ಚಿತ್ರಗಳ ಕುರಿತು ಪ್ರಸ್ತಾಪಿಸಿದ ಕೋರ್ಟ್, ಇಂತಹ ಘಟನೆಗಳನ್ನು ತಡೆಯಲು ಕೇಂದ್ರ, ಯುಪಿ ಸರ್ಕಾರ ಮತ್ತು ನೆರೆಯ ಬಿಹಾರ ಸರ್ಕಾರಕ್ಕೆ ತಿಳಿಸಿದೆ.


ಇದನ್ನೂ ಓದಿ; ಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here