Homeಮುಖಪುಟಅಶ್ಲೀಲ ಸಿನಿಮಾ ನೋಡಿದ್ರಿ, ಅದನ್ನು ತೋರಿಸಿದ್ದು ತಪ್ಪಾ?: ಬಿಜೆಪಿ ವಿರುದ್ಧ ಗರಂ ಆದ ಮಾಧ್ಯಮಗಳು..

ಅಶ್ಲೀಲ ಸಿನಿಮಾ ನೋಡಿದ್ರಿ, ಅದನ್ನು ತೋರಿಸಿದ್ದು ತಪ್ಪಾ?: ಬಿಜೆಪಿ ವಿರುದ್ಧ ಗರಂ ಆದ ಮಾಧ್ಯಮಗಳು..

ಪ್ರತಿಭಟನೆಯಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ

- Advertisement -
- Advertisement -

ವಿಧಾನಮಂಡಲದಲ್ಲಿ ನಡೆಯುವ ಕಲಾಪಗಳಿಗೆ ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್‌, ಕರ್ನಾಟಕ ಪತ್ರಕರ್ತೆಯರ ಸಂಘ ಒಳಗೊಂಡಂತೆ ವಿವಿಧ ಸಂಘಟನೆಗಳು ನಗರದ ಆನಂದ್‌ರಾವ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಬಿಜೆಪಿ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ, ವಿಧಾನ ಮಂಡಲ ಕಲಾಪವನ್ನೇ ಬಹಿಷ್ಕರಿಸುವುದಾಗಿ ಮಾಧ್ಯಮಗಳು ತಿಳಿಸಿವೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಯಾವುದೇ ಅಭಿಪ್ರಾಯ ಪಡೆಯದೆ ಏಕಾಏಕಿ ನಿರ್ಬಂಧಿಸಿರುವುದು ಸರಿಯಲ್ಲ. ಈ ಬಗ್ಗೆ ಪುನರ್ ಪರಿಶೀಲನೆ ಮಾಡಿ ವಿದ್ಯುನ್ಮಾನ ಮಾಧ್ಯಮಗಳ ನಿರ್ಬಂಧ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನ ಸೌಧ ಕಟ್ಟುವಾಗ ಕೆಂಗಲ್ ಹನುಮಂತಯ್ಯ ಯಾವ ಆಶಯ ಇಟ್ಟುಕೊಂಡು ಕಟ್ಟಿದ್ರೋ ಅದನ್ನ ಮರೆಯಬೇಡಿ. ಮಾದ್ಯಮಗಳಿಗೆ ನಿರ್ಬಂಧ ಹೇರಿರುವುದು ಸ್ಪೀಕರ್ ಕಾಗೇರಿ ನಿರ್ಧಾರ ಅಲ್ಲ. ಕಾಗೇರಿಯವರ ನಿರ್ಧಾರದ ಹಿಂದೆ ಬೇರೆ ಶಕ್ತಿ ಇದೆ. ಕಾಗೇರಿಯವರ ಹೆಗಲ ಮೇಲೆ ಬಂದೂಕು ಇಟ್ಟು ಯಡಿಯೂರಪ್ಪಗೆ ಹೊಡೆಯುತ್ತಿದ್ದಾರೆ… ಮಾದ್ಯಮಗಳು ಅದರ ಮೊದಲ ಬಲಿಪಶುಗಳಾಗುತ್ತಿದ್ದಾರೆ ಎಂದು ಪತ್ರಕರ್ತರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯ ಕಲಾಪಕ್ಕೆ ಫೋನ್‌, ಟ್ಯಾಬ್‌ ತರುವಂತಿಲ್ಲ ನಿಯಮವನ್ನು ವಿರೋಧಿಸಿದ ಸಿದ್ದರಾಮಯ್ಯ…

ಈ ರಾಜಕಾರಣಿಗಳು ವಿಧಾನ ಸಭೆಯಲ್ಲಿ ಏನು ಮಾಡಿದ್ರು ಜನತೆಗೆ ಗೊತ್ತಿದೆ, ನೀವೇನು ಐತಿಹಾಸಿಕ ಸಿನಿಮಾ ನೋಡಿಲ್ಲ. ಅಶ್ಲೀಲ ಸಿನಿಮಾ ನೋಡಿದ್ರಿ, ಅದನ್ನು ತೋರಿಸಿದ್ದು ತಪ್ಪಾ? ಎಂದು ಹಿರಿಯ ಪತ್ರಕರ್ತ ಆರ್.‌ಟಿ. ವಿಠಲ್‌ಮೂರ್ತಿ ಪ್ರತಿಭಟನೆಯಲ್ಲಿ ಪ್ರಶ್ನಿಸಿದ್ದಾರೆ.

ಇನ್ನು ಪ್ರತಿಭಟನೆಯಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ವಿಧಾನಸಭಾ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರುವ ಪ್ರಜಾಪ್ರಭುತ್ವ ವಿರೋಧಿಯಾದ ವಿಧಾನಸಭಾಧ್ಯಕ್ಷರ ಕ್ರಮವನ್ನು ಖಂಡಿಸಿ‌ ಖಾಸಗಿ ಸುದ್ದಿವಾಹಿನಿಗಳ ಮುಖ್ಯಸ್ಥರು ಹಾಗೂ ಹಿರಿಯ ಪತ್ರಕರ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ನನ್ನ ಬೆಂಬಲ ಸೂಚಿಸಿದೆ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯವರ ಹಲವಾರು ಹೇಳಿಕೆಗಳಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಸೀತಾರಾಂ ಯೆಚೂರಿ

0
'ದೇಶದ ವಿವಿಧ ಭಾಗಗಳಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನೀಡಿದ್ದಾರೆ' ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ...