Homeಕರ್ನಾಟಕಮೈತ್ರಿ ಕಡೆಯಿಂದ ಎರಡು ಅಸ್ತ್ರ: ಶಾಸಕತ್ವದ ಅನರ್ಹತೆ, ಸಚಿವಗಿರಿಯ ಆಮಿಷ!

ಮೈತ್ರಿ ಕಡೆಯಿಂದ ಎರಡು ಅಸ್ತ್ರ: ಶಾಸಕತ್ವದ ಅನರ್ಹತೆ, ಸಚಿವಗಿರಿಯ ಆಮಿಷ!

- Advertisement -
- Advertisement -

ಸರ್ಕಾರ ಬೀಳುವ ಎಲ್ಲ ಲಕ್ಷಣಗಳು ಮೋಲ್ನೋಟಕ್ಕೆ ಮುಖಕ್ಕೆ ಹೊಡೆಯುತ್ತಿರುವ ವೇಳೆಯೂ, ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆ ಹಂತದ ರಕ್ಷಣೆಗೆ ಎಂಬಂತೆ ಎರಡು ಅಸ್ತ್ರಗಳನ್ನು 3 ಗಂಟೆ ಸುಮಾರಿಗೆ ಹೊರಬಿಟ್ಟಿದ್ದಾರೆ.

ಒಂದು, ರಾಜಿನಾಮೆ ನೀಡಿದ್ದೇವೆ ಎಂದು ಬಿಜೆಪಿ ಬಣದ ಜೊತೆ ಹೋಗಲು ಸಜ್ಜಾಗಿರುವ ಶಾಸಕರನ್ನು ಕಾನೂನಿನ ಅಸ್ತ್ರದಿಂದ ಬೆದರಿಸುವುದು. ಇನ್ನೊಂದು ನೀವು ಬಂದರೆ ನಿಮಗೆ ಸಚಿವಗಿರಿ (ಪರೋಕ್ಷವಾಗಿ ಇತರೆ ಸವಲತ್ತೂ ಸೇರಿ) ನೀಡುತ್ತೇವೆ ಎಂಬ ಪ್ರೀತಿಯ ಆಮಿಷ!

ಹಲವು ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಂವಿಧಾನದ ಶೆಡ್ಯೂಲ್ 10ರ ಪ್ಯಾರಾ 2ರ ಮೊರೆ ಹೋಗಿರುವ ಮೈತ್ರಿ ಬಣದ ನಾಯಕರು ಸೆಕ್ಷನ್ 164-1ಬಿ ಅಡಿ ಭಿನ್ನಮತದ ಬಾವುಟ ಹಾರಿಸಿರುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‍ಗೆ ದೂರು ನೀಡಲು ಸಜ್ಜಾಗಿದ್ದಾರೆ.

ಅಂತಹ ಸಂದೇಶವೊಂದನ್ನು ತೇಲಿ ಬಿಡುವ ಮೂಲಕ ಮುಂಬೈನ ಸೋಫಿಟೆಲ್ ಹೊಟೆಲ್‍ನಲ್ಲಿ ಕುಳಿತು ಕರ್ನಾಟಕದ ರಾಜಕೀಯ ಬೆಳವಣೆಗಳನ್ನು ಟಿವಿಯ ಮೂಲಕ ವೀಕ್ಷಿಸುತ್ತಿರುವ ಅತೃಪ್ತರಿಗೆ ಕಾನೂನಾತ್ಮಕ ಕ್ರಮದ ಗುಮ್ಮವನ್ನು ತೋರಿಸಿದ್ದಾರೆ. ಅಲ್ಲಿರುವ ಶಾಸಕರಿಗೆ ‘ಹಾಗೆಲ್ಲ ಮಾಡಲು ಆಗುವುದಿಲ್ಲ’ ಎಂದು ಬಿಜೆಪಿ ಅಭಯ ನೀಡುತ್ತಿರಬಹುದು. ಆದರೆ, ಕಳೆದ ವರ್ಷವಷ್ಟೇ ಹೆಚ್ಚೂ ಕಡಿಮೆ ಇದೇ ಮಾದರಿಯಲ್ಲಿ, ಇಂಥದ್ದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ 18 ಶಾಸಕರನ್ನು ಅನರ್ಹಗೊಳಿಸಿದ್ದು, ಅದನ್ನು ಅಲ್ಲಿನ ಕೋರ್ಟ್ ಮಾನ್ಯ ಮಾಡಿದ್ದು ಇನ್ನೂ ಹಚ್ಚ ಹಸಿರಾಗಿರುವಾಗ, ಅತೃಪ್ತ ಶಾಸಕರಲ್ಲಿ ಒಂದು ಅಳುಕಂತೂ ಮೂಡಿರಲು ಸಾಧ್ಯ.

ಈ ಸೆಕ್ಷನ್ ಅಳವಡಿಕೆ ಈಗಿನ ಸಂದರ್ಭದಲ್ಲಿ ಸಾಧ್ಯವೇ ಇಲ್ಲವೇ ಎಂಬುದು ಚರ್ಚೆಯ ವಿಷಯವೇ. ಆದರೆ ಸ್ಪೀಕರ್‍ಗೆ ಮನವರಿಕೆ ಮಾಡಲು, ಅದಕ್ಕೆ ತಕ್ಕ ಪುರಾವೆ ಒದಗಿಸಲು ಮೈತ್ರಿಬಣ ಯಶಸ್ವಿಯಾದರೆ, ರಾಜಿನಾಮೆ ಕೊಟ್ಟಿದ್ದೇವೆ ಎನ್ನುತ್ತಿರುವ ಶಾಸಕರ ಸದಸ್ಯತ್ವದ ಮೇಲೆ ತೂಗುಗತ್ತಿ ಗ್ಯಾರಂಟಿ. ಏಕೆಂದರೆ ಈಗ ಶಾಸಕರು ಸದನಕ್ಕೆ ರಾಜಿನಾಮೆ ಸಲ್ಲಿಸಿದ್ದಾರಷ್ಟೇ. ಅದೂ ಕೂಡ, ಇದನ್ನು ಅಂಗೀಕರಿಸುವ ಅಂತಿಮ ಅಧಿಕಾರವುಳ್ಳ ಸ್ಪೀಕರ್ ಕೈಗೆ ಅಧಿಕೃತವಾಗಿ ರಾಜಿನಾಮೆ ಪತ್ರಗಳು ತಲುಪಿಲ್ಲ. ಇದು ತಾಂತ್ರಿಕ ವಿಷಯವಾಗಿದ್ದರಿಮದ ಸ್ಪೀಕರ್ ವಿವೇಚನೆಯ ಮೇಲೆಯೇ ನಿಂತಿದೆ. ಈ ಅತೃಪ್ತರು ಪಕ್ಷಕ್ಕೆ ಇನ್ನೂ ರಾಜಿನಾಮೆ ನೀಡದೇ ಇರುವುದರಿಂದ ಉಭಯ ಪಕ್ಷಗಳು ಪಕ್ಷಾಂತರ ನಿಷೇಧ ಕಾನೂನಿನ ಅಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬಹುದು. ಈ ಶಾಸಕರು ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡು ಮೂಲ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಿರೂಪಿಸಬೇಕು. ಇದು ಈಗಿನ ಪರಿಸ್ಥಿಯಲ್ಲಿ ಕೊಂಚ ಕಷ್ಟವಾದರೂ, ಶಾಸಕರಲ್ಲಿ ಮಾತ್ರ ಭಯ ಹುಟ್ಟಿಸಲು ಸಫಲವಾಗಿರಬಹುದು.

ಮೈತ್ರಿಯ ಉಭಯ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ಕರೆದು ವಿಪ್ ಜಾರಿ ಮಾಡಿದರೆ ಹಾಜರಾಗದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‍ಗೆ ದೂರು ನೀಡಬಹುದು. ಅಷ್ಟರ ಮಟ್ಟಿಗೆ ಕಾನೂನಾತ್ಮಕ ಮೊದಲ ಅಸ್ತ್ರ ಶಾಸಕರಲ್ಲಿ ದಿಗಿಲು ಹುಟ್ಟಿಸುವಲ್ಲಿ ಸಫಲವಾಗಬಹುದು.

ಇನ್ನು ಎರಡನೇ ಅಸ್ತ್ರ ಬೆದರಿಕೆಯದ್ದಲ್ಲ, ಬದಲಿಗೆ ತಮ್ಮದೇ ಶಾಸಕರನ್ನು ರಮಿಸುವಂತದ್ದು. ಬನ್ನಿ ಬನ್ನಿ ಇಲ್ಲಿ ಸಚಿವ ಸಂಪುಟದ ಎಲ್ಲ ಸ್ಥಾನಗಳು ಖಾಲಿಯಿವೆ. ನಿಮಗೆಲ್ಲರಿಗೂ ಅವಕಾಶವಿದೆ ಎಂದು ಪ್ರತಿ ಆಹ್ವಾನ ನೀಡಲಾಗಿದೆ. ಅದಕ್ಕಾಗಿ ಎಲ್ಲ ಸಚಿವರ ರಾಜಿನಾಮೆ ಪಡೆದಿರುವುದಾಗಿ ಉಭಯ ಪಕ್ಷಗಳ ನಾಯಕರು ಅಧಿಕೃತವಾಗಿ ಘೋಷಿಸಿದ್ದಾರೆ.

ಮೊದಲ ಅಸ್ತ್ರಕ್ಕೆ ಬೆದರಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಕೆ. ಆರ್ ಪೇಟೆಯ ಶಾಸಕ ನಾರಾಯಣಗೌಡ ಥರದ ವೈಯಕ್ತಿಕ ವರ್ಚಸಿಲ್ಲದ ಶಾಸಕರು ಶರಣಾಗಿ ಹೇಗೂ ಸಚಿವ ಸ್ಥಾನ ಸಿಗಲಿದೆ ಎಂದು ಮಣಿಯಬಹುದು ಎಂದು ಮೈತ್ರಿ ಬಣ ಅಂದಾಜಿಸಿದೆ. ಸಚಿವರಾಗಲೆಂದೇ ಭಿನ್ನಮತ ಸಾರಿರುವ ರಾಮಲಿಂಗಾರೆಡ್ಡಿ, ಎಸ್‍ಟಿ ಸೋಮಶೇಖರ್, ಬೈರತಿ ಬಸವರಾಜ, ರಮೇಶ ಜಾರಕಿಹೊಳಿ ಥರದವರು ಖುಷಿಯಿಂದ ವಾಪಸ್ ಬರಬಹದೆಂಬ ನಿರೀಕ್ಷೆ ಮೈತ್ರಿಬಣದ್ದು.

ಆದರೆ ಇದೆಲ್ಲವು ಅಷ್ಟು ಸರಳವಾಗಿಲ್ಲ. ಸಂಕೀರ್ಣ ಕಾನೂನನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಕಾನೂನು ತಜ್ಞರಲ್ಲೇ ಭಿನ್ನಾಭಿಪ್ರಾಯ ಇವೆ. ಬಿಜೆಪಿ ಕೂಡ ಕಾನೂನು ಪಂಡಿತರೊಂದಿಗೆ ಸಮಾಲೋಚನೆ ನಡೆಸಿದ್ದು ಯಾವುದೇ ಅಪಾಯವಿಲ್ಲ ಎಂಬ ಭರವಸೆಯನ್ನು ನೀಡಲು ಸಫಲವಾದರೆ ಮಾತ್ರ ಅತೃಪ್ರಲ್ಲಿ ಧೈರ್ಯ ಬರಬಹುದು.

2006 ಮತ್ತು 2008ರ ಹಗ್ಗಜಗಾಟ ಮರುಕಳಿಸುವ ಎಲ್ಲ ಲಕ್ಷಣಗಳಿವೆ. ಸದ್ಯ ರಾಜಿನಾಮೆ ಕೊಟ್ಟ ಶಾಸಕರನ್ನು ಹೊರತುಪಡಿಸಿದರೆ ಬಿಜೆಪಿ ಸಂಖ್ಯೆ 106 ( ಪಕ್ಷೇತರ ನಾಗೇಶ ಸೇರಿದರೆ 107) ಇದ್ದರೆ ಮೈತ್ರ ಬಣದ ಸಂಖ್ಯೆ 104 ಇದೆ. ಈ ಲೆಕ್ಕಾಚಾರದಲ್ಲಿ ಕತ್ತಿಯಂಚಿನ ಸರಳ ಬಹುಮತವಷ್ಟೇ ಈಗ ಬಿಜೆಪಿಗೆ ಸಿಗುತ್ತದೆ. 104 ಸದಸ್ಯರನ್ನು ಹೊಂದಿರುವ ಮೈತ್ರಿ ಬಣವು ಆಪರೇಷನ್ ಶುರು ಮಾಡಿದರೆ ಮತ್ತೆ ಡೋಲಾಯಮಾನವೇ! 3 ಗಂಟೆಯ ನಂತರದ ಈ ಬೆಳವಣಿಗೆ ಈ ಅಧಿಕಾರದ ಆಟಕ್ಕೆ ಹೊಸ ತಿರುವನ್ನಂತೂ ನೀಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...