Homeಮುಖಪುಟದೂರದೃಷ್ಟಿಯಿಲ್ಲದ ರಾಜ್ಯ ಬಜೆಟ್‌: ವಿಪಕ್ಷ, ಹೋರಾಟಗಾರರ ಟೀಕೆ...

ದೂರದೃಷ್ಟಿಯಿಲ್ಲದ ರಾಜ್ಯ ಬಜೆಟ್‌: ವಿಪಕ್ಷ, ಹೋರಾಟಗಾರರ ಟೀಕೆ…

- Advertisement -
- Advertisement -

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2020-21ನೇ ಸಾಲಿನ 2,37,893 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. 2020–21ನೇ ಸಾಲಿನಲ್ಲಿ ಒಟ್ಟು ರೂ. 2,33,134 ಕೋಟಿ ಜಮೆಗಳನ್ನು ನಿರೀಕ್ಷಿಸಿ 2,37,893 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕಡಿತಗೊಂಡಿದೆ ಎಂದು ಮುಖ್ಯಮಂತ್ರಿ ಸದನದಲ್ಲಿ ಹೇಳಿದರು.

ಶಿಕ್ಷಣ ಇಲಾಖೆಗೆ 29,768 ಕೋಟಿ (ಶೇ.11), ನಗರಾಭಿವೃದ್ಧಿ ಇಲಾಖೆಗೆ 27,952 ಕೋಟಿ (ಶೇ.10), ಜಲಸಂಪನ್ಮೂಲ ಇಲಾಖೆಗೆ 21,308 ಕೋಟಿ(ಶೇ.8), ಇಂಧನ ಇಲಾಖೆಗೆ 17,290 ಕೋಟಿ(ಶೇ.7), ಗ್ರಾಮೀಣಾಭಿವೃದ್ಧಿ ಇಲಾಖೆಗೆ, 15.595 ಕೋಟಿ(ಶೇ. 6), ಕಂದಾಯ ಇಲಾಖೆಗೆ 11, 860 ಕೋಟಿ (ಶೇ. 4), ಲೋಕೋಪಯೋಗಿ ಇಲಾಖೆಗೆ 11, 463 ಕೋಟಿ (ಶೇ.4), ಆರೋಗ್ಯ ಇಲಾಖೆಗೆ 10,122 ಕೋಟಿ(ಶೇ. 4), ಸಾರಿಗೆ, ಒಳಾಡಳಿತ ಇಲಾಖೆಗೆ 10,108 ಕೋಟಿ (ಶೇ. 4), ಸಮಾಜ ಕಲ್ಯಾಣ ಇಲಾಖೆಗೆ 9,444 ಕೋಟಿ (ಶೇ.4), ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7,889 ಕೋಟಿ(ಶೇ.3), ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4,650 ಕೋಟಿ (ಶೇ.2), ವಸತಿ ಇಲಾಖೆಗೆ 2,971 ಕೋಟಿ (ಶೇ.1), ಆಹಾರ ಇಲಾಖೆಗೆ 2,668 ಕೋಟಿ(ಶೇ.1) ಇತರೆ ಇಲಾಖೆಗೆ 84,023 ಕೋಟಿ (ಶೇ. 31) ಮೀಸಲಿರಿಸಲಾಗಿದೆ.

ಬಜೆಟ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ “ಯಡಿಯೂರಪ್ಪನವರು ಪ್ರತಿಪಕ್ಷಗಳ ಪ್ರಶ್ನೆಗೆ ಬಜೆಟ್ ಮೂಲಕ ಉತ್ತರ ಕೊಡುತ್ತೇನೆ ಎನ್ನುತ್ತಿದ್ದರು, ಈಗ ಏನು ಮಾಡಿದ್ದಾರೆ. ಕೇವಲ ಹಸಿರು ಶಾಲು ಮಾತ್ರ ಹಾಕಿಕೊಂಡಿದ್ದರೆ ಸಾಲದು, ನಾನು ಕೂಡಾ ವ್ಯವಸಾಯ ಮಾಡುವ ಕುಟುಂಬದಿಂದ ಬಂದವನು. ರೈತರಪರ ಇರುತ್ತೇನೆ ಎನ್ನುತ್ತಿದ್ದ ಏನು ನೀಡಿದ್ದಾರೆ. ಬಜೆಟ್ ಬೆಳವಣಿಗೆ ಆಗಿರುವುದೇ ಕೇವಲ 1.5%. ಇದು ಹಳೆಯ ಬಜೆಟನ್ನು ಸೇರಿಸಿ ಮಾಡಿದ ಬಜೆಟ್” ಎಂದಿದ್ದಾರೆ.

ಹೈದರಾಬಾದ್ ಕರ್ನಾಟಕದ ಹೋರಾಟಗಾರ, ಚಿಂತಕ ರಜಾಕ್ ಉಸ್ತಾದ್ ಅವರು “ಪೆಟ್ರೋಲ್, ಡೀಸೆಲ್, ಹಾಲಿನ ದರ, ಬಸ್ಸಿನ ದರ ಏರಿಸಿ ಮದ್ಯಮ ವರ್ಗದ ಮೇಲೆ ಹೊರೆ ಹಾಕಿದ ಕೇಂದ್ರ ಸರ್ಕಾರದಿಂದ ಅನುದಾನವನ್ನು ಕೇಳಲಾಗದೆ, ಒಂದು ರೀತಿಯಲ್ಲಿ ನಿರಾಶದಾಯಕವಾದ ಹಾಗೂ ದೂರದೃಷ್ಟಿ ಇಲ್ಲದ ಬಜೆಟ್ ಇದಾಗಿದೆ. ಬಿಡಿಬಿಡಿಯಾಗಿ ಬಜೆಟ್ ಮಂಡನೆ ಮಾಡಿದ ಯಾವುದೇ ಅಭಿವೃದ್ಧಿಗೆ ಪೂರಕವಾಗಿಲ್ಲದ ಬಜೆಟ್ ಇದು. ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರಷ್ಟೇ ಬದಲಾವಣೆ ಮಾಡಿ ಹೆಚ್ಚಿನ ಅನುದಾನ ಕೊಡದೆ ಈ ಭಾಗಕ್ಕೂ ಕೂಡಾ ಅನ್ಯಾಯ ಮಾಡಿದ್ದಾರೆ. 1500 ಕೋಟಿ ಅನುದಾನ ಮೊದಲಿಂದನೂ ಬರುತ್ತಿದ್ದು, ಈಗಲೂ ಅಷ್ಟೇ ಅನುದಾನ ಇಟ್ಟಿದ್ದಾರೆ. ಈ ಅನುದಾನ 3000 ಕೋಟಿಗೆ ಹೆಚ್ಚು ಮಾಡುವ ನಿರೀಕ್ಷೆ ಇತ್ತು, ಆದರೆ ಅದು ಆಗಲಿಲ್ಲ. ಆದ್ದರಿಂದ ಯಾರಿಗೂ ತೃಪ್ತಿಕರವಾಗಿರದ ಬಜೆಟ್ ಮಂಡನೆ ಮಾಡಿದ್ದಾರೆ” ಎಂದಿದ್ದಾರೆ.

SFI ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಅವರು “ರಾಜ್ಯ ಬಿಜೆಪಿ ಸರ್ಕಾರ ಈ ಬಜೆಟ್ ನಲ್ಲಿ ಶಿಕ್ಷಣಕ್ಕೆ ಕೇವಲ 29,786 (11%) ಕೋಟಿ ರೂಪಾಯಿ ಮಾತ್ರ ನೀಡುವುದರ ಮೂಲಕ ತನ್ನ ಶಿಕ್ಷಣ ವಿರೋಧಿ, ವಿದ್ಯಾರ್ಥಿ ದ್ರೋಹಿ ನೀತಿಯನ್ನು ಮುಂದುವರೆಸಿದೆ. ಕಳೆದ ವರ್ಷದ ಬಜೆಟ್ ಗಿಂತಲೂ ಈ ವರ್ಷದ ಬಜೆಟ್ ನಲ್ಲಿ 0.3% ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಕಡಿತ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರ ಮತ್ತೆ ಮಠ ಮಾನ್ಯಗಳಿಗೆ, ಜಾತಿವಾರು ಪ್ರತಿಮೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೀಸಲಿಡುವುದರ ಮೂಲಕ ಬಿಜೆಪಿ ಸರ್ಕಾರವೂ ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿಯ ಕಣ್ಣೋಟ ಇಲ್ಲ ಎಂಬುದು ಈ ಬಜೆಟ್ ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ” ಎಂದಿದ್ದಾರೆ.

“ರಾಜ್ಯದ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್, ಉಚಿತ ಬಸ್ ಪಾಸ್ , ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಕನಿಷ್ಠ 3500/-ರೂ ಹೆಚ್ಚಿಸಬೇಕು, ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕು ಎಂದು ಇಡೀ ರಾಜ್ಯಾದ್ಯಂತ ಹೋರಾಟಗಳನ್ನು ನಡೆಸಿದರೂ ಈ ರಾಜ್ಯ ಸರ್ಕಾರ ಪರಿಗಣಿಸದೆ ಶಿಕ್ಷಣ ಕ್ಷೇತ್ರಕ್ಕೆ ನಿರ್ಲಕ್ಷ್ಯತೆ ತೋರಿದೆ. ಬಿಜೆಪಿ ಸರ್ಕಾರದ ಪ್ರತಿ ಬಾರಿಯೂ ಶಿಕ್ಷಣ ಕ್ಷೇತ್ರಕ್ಕೆ ಹಣ ಕಡಿತ ಮಾಡುವ ಪರಿಪಾಠವನ್ನು ಮುಂದುವರಿಸಿರುವುದರಿಂದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ದ್ರೋಹ ಬಗೆದಿದೆ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...