Homeಕರ್ನಾಟಕಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

- Advertisement -
- Advertisement -

ಇಂದು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಟ್ವಿಟ್ಟರ್ ಟ್ರೆಂಡಿಂಗ್ #KarnatakaJobsForKannadigas ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ಚರ್ಚಿಸಿದ್ದರು. ಬಹುತೇಕರು ಅದನ್ನು ಬೆಂಬಲಿಸಿದ್ದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದಾರೆ. ಕೆಲವರು ಇದು ಪ್ರಾಕ್ಟಿಕಲ್ ಅಲ್ಲ ಎಂದಿದ್ದಾರೆ. ಕನ್ನಡಿಗರಿಗೆ ಉದ್ಯೋಗ ನಷ್ಟ ಆಗುತ್ತಿರುವುದು ಎಲ್ಲಿ ಎಂಬ ಕುರಿತು ಉದಾಹರಣೆಗಳ ಮೂಲಕ ಚರ್ಚೆ ನಡೆದಿದೆ.

ಪತ್ರಕರ್ತರಾದ ನವೀನ್ ಸೂರಿಂಜೆ ಈ ರೀತಿ ಹೇಳುತ್ತಾರೆ.

ಕರಾವಳಿಯಲ್ಲಿ ಸ್ಥಾಪನೆಯಾದ ವಿಜಯಾ ಬ್ಯಾಂಕನ್ನು ಇನ್ನಿಲ್ಲದಂತೆ ಮಾಡಿದ ಬ್ಯಾಂಕ್ ವಿಲೀನ‌ ಪ್ರಕ್ರಿಯೆಯ ವಿರುದ್ದ ಮಾಡಿದ ಹೋರಾಟವೇನೋ ವ್ಯರ್ಥವಾಯ್ತು. ವಿಜಯಾ ಬ್ಯಾಂಕ್ ಇದ್ದಾಗಲೇ ಸ್ವಲ್ಪಅಸ್ಥೆ ವಹಿಸಿದ್ದರೆ ಬ್ಯಾಂಕ್ ಉಳಿಯುತ್ತಿತ್ತೇನೋ ! ಮೂಲ್ಕಿ ಸುಂದರರಾಮ ಶೆಟ್ಟರಿಂದ ವೈಭವದ ದಿನಗಳನ್ನು ಕಂಡ ವಿಜಯಾ ಬ್ಯಾಂಕಿನಲ್ಲಿ ಎಷ್ಟೊಂದು ಜನ ಪರಿಚಿತರು ಇದ್ದರು. ಮೂಲ್ಕಿಯವರೇಆಗಿದ್ದಕ್ಕೋ ಏನೋ… ನನ್ನಪ್ಪನ ಗೆಳೆಯರಲ್ಲಿ ಬಹುತೇಕರು ವಿಜಯಾ ಬ್ಯಾಂಕ್ ಸಿಬ್ಬಂದಿಗಳು. ನನ್ನ ತಲೆಮಾರಿನ ಯಾರೂ ಕೂಡಾ ನಾನು ವಿಜಯಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿಕೊಂಡಿದ್ದನ್ನು ನಾನುಕೇಳಿಲ್ಲ. ಆಗಲೇ ನಮಗೆ ಅಪಾಯ ಅರಿವಾಗಬೇಕಿತ್ತು.
ನನ್ನೂರಲ್ಲಿ ಹುಟ್ಟಿದ ಬ್ಯಾಂಕ್ ನಲ್ಲಿ ನನ್ನೂರಿನ ಯುವಕರಿಗೆ ಕೆಲಸ ವಂಚಿಸಿ, ಪರ ಬಾಷಿಕರಿಗೆ ಉದ್ಯೋಗ ನೀಡಿದಾಗಲೇ ವಿಜಯಾ ಬ್ಯಾಂಕ್ ಅವನತಿ ಪರ್ವ ಪ್ರಾರಂಭವಾಗಿತ್ತು. ಇವತ್ತು ವಿಜಯಾ ಬ್ಯಾಂಕ್ಉದ್ಯೋಗಿಗಳೆಲ್ಲರೂ ಕನ್ನಡಿಗರಾಗಿದ್ದರೆ ವಿಲೀನ ಪ್ರಕ್ರಿಯೆಗೆ ಉದ್ಯೋಗಿಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು ?
ವಿಜಯಾ ಬ್ಯಾಂಕನ್ನೇನೋ ಕಳೆದುಕೊಂಡೆವು. ಕನ್ನಡಿಗರ ಉಳಿದ ಬ್ಯಾಂಕುಗಳನ್ನಾದರೂ ರಕ್ಷಿಸಬೇಕಿದೆ. ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಪ್ರಾತಿನಿದ್ಯ ಸಿಗಬೇಕಿದೆ. ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆಗೆಅವಕಾಶ ನೀಡಬೇಕಿದೆ.
ಸದ್ಯ, ಕನ್ನಡಿಗರೆಲ್ಲರೂ ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಚಳುವಳಿಯಲ್ಲಿ ಭಾಗಿಯಾಗಬೇಕಿದೆ.

ಎಂ.ಎಸ್.ಶ್ರೀ ಹರ್ಷ ಎನ್ನುವವರು ಇದಕ್ಕೆ ಸಹಮತ ಹೊಂದಿಲ್ಲ.

ಇದು ಪ್ರಾಕ್ಟಿಕಲ್ ಅಲ್ಲ. ಅಭಿವೃದ್ಧಿ ಆದ ಕಡೆ ವಲಸೆ ಆಗಿಯೇ ಆಗುತ್ತದೆ. ಇಂತಹ ಹೋರಾಟಗಳಿಂದ ಏನೂ ಪ್ರಯೋಜನವಿಲ್ಲ. ನನ್ನ ಮಾತಿನಲ್ಲಿ ನಂಬುಗೆ ಇಲ್ಲದಿದ್ದರೆ ಪ್ರಯತ್ನ ಮಾಡಿ ನೋಡಿ.

#ಅಭಿವೃದ್ಧಿ ಯ ವಿರುದ್ಧ ದನಿ ಎತ್ತದ ಇಂತಹ ಹೋರಾಟಗಳು ಕ್ಷಣಿಕ ಆರಾಮು ನೀಡುವ ಪೇನ್ ಕಿಲ್ಲರ್ ಗಳು ಅಷ್ಟೆ.

This is an #impractical movement ..

 

ಮಂಗಳೂರಿನ ಹೋರಾಟಗಾರ ಮುನೀರ್ ಕಾಟಿಪಳ್ಳ ಇದನ್ನು ಬೆಂಬಲಿಸುತ್ತಾರಾದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳುತ್ತಾರೆ.

ಉದ್ಯೋಗ ಸೃಷ್ಟಿಯ ಆಮಿಷವನ್ನು ಒಡ್ಡಿ ತುಳುನಾಡಿನ ಚಿನ್ನದಂತಹ ಭೂಮಿ, ನೇತ್ರಾವತಿಯ ಅಮೃತದಂತಹ ನೀರನ್ನು ಪಡೆದು ಸ್ಥಾಪನೆಯಾದ mrpl ಉದ್ಯೋಗ ಸೃಷ್ಟಿಸಿದ್ದು ಅಷ್ಟರಲ್ಲೇ ಇದೆ. ನಾಲ್ಕುಸಾವಿರ ಎಕರೆ ಭೂಮಿ, ಲಕ್ಷಾಂತರ ಕೋಟಿ ಹಣ ಹೂಡಿಯೂ ಸೃಷ್ಟಿಯಾಗಿರುವ ಉದ್ಯೋಗ ಎರಡು ಸಾವಿರಕ್ಕೂ ಕಡಿಮೆ. ಆ ಎರಡು ಸಾವಿರದಲ್ಲಿ ಕನ್ನಡಿಗರ ಸಂಖ್ಯೆ ಶೇಕಡಾ 25 ರಷ್ಟೂ ಇಲ್ಲ. ತುಳುವರನ್ನುಹುಡುಕಬೇಕಷ್ಟೆ. ಉದ್ಯೋಗ ಸಿಕ್ಕವರಲ್ಲಿ ಬಹುತೇಕರು ಭೂಮಿ ಕೊಟ್ಟ ಕಾರಣಕ್ಕೆ ಪ್ರತಿಯಾಗಿ ಪಡೆದುಕೊಂಡದ್ದೇ ಹೆಚ್ಚು. ಅಂತಹ mrpl ತಿಂಗಳ ಹಿಂದೆ 150 ಅಪ್ರೆಂಟಿಸ್ ಗಳನ್ನು ನೇಮಕಾತಿಮಾಡಿಕೊಂಡಿತು. ಆ 150 ರಲ್ಲಿ ತುಳುವರು ಬಿಡಿ, ಕನ್ನಡಿಗರು ಒಬ್ಬರೂ ಇಲ್ಲವಂತೆ. ಇದು ಅತ್ಯಂತ ಕಳವಳಕಾರಿ ಸಂಗತಿ.

ಈ ಅನ್ಯಾಯ, ತಾರತಮ್ಯ ಕೊನೆಯಾಗಲೇ ಬೇಕು. ನಮ್ಮ ನೆಲ, ಜಲವನ್ನು ಬಳಸಿ ಸ್ಥಾಪನೆಯಾಗುವ ಕೈಗಾರಿಕೆ, ಉದ್ದಿಮೆ, ವ್ಯವಹಾರಗಳು ಉದ್ಯೋಗವನ್ನು ಸೃಷ್ಟಿಸಬೇಕು, ಸ್ಥಳೀಯರಿಗೆ ಅದರಲ್ಲಿಆದ್ಯತೆಯಲ್ಲಿ ಉದ್ಯೋಗ ಸಿಗಲೇಬೇಕು. ಅದಿಲ್ಲದಿದ್ದರೆ ಎದ್ದು ಹೊರ ನಡೆಯಿರಿ ಅನ್ನಬೇಕು.

(ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಕೊಡಿ ಟ್ವಿಟ್ಟರ್, ಫೇಸ್ ಬುಕ್ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಆದರೆ ಇದು ಅಂದಾಭಿಮಾನವೋ, ಪರ ರಾಜ್ಯದವರ ಕುರಿತುಅಸಹನೆಯೋ ಆಗಬಾರದು. ಹೊರ ರಾಜ್ಯದವರೂ ಇರಲಿ. ಕನ್ನಡಿಗರಿಗೆ, ಸ್ಥಳೀಯರಿಗೆ ಆದ್ಯತೆಯಲ್ಲಿ ಅವಕಾಶ ಸಿಗಲಿ ಎಂಬುದು ನನ್ನ ನಿಲುವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಇಡೀದೇಶದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಸರಕಾರದ ಆದ್ಯತೆ ಆಗಬೇಕು. ಗುತ್ತಿಗೆ, ಹೊರಗುತ್ತಿಗೆ ಪದ್ದತಿ ರದ್ದಾಗಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆಯ ಕಾನೂನುಗಳುಜಾರಿಯಾಗಬೇಕು. ಒಟ್ಟಾರೆ ಹೋರಾಟ ನಿರುದ್ಯೋಗ, ಅರೆ ಉದ್ಯೋಗದ ವಿರುದ್ದ, ಸ್ಥಳೀಯರಿಗೆ ಆದ್ಯತೆ ಎಂದಾಗಬೇಕು)

#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೆ_ಸಿಗಲಿ
#karnatakaJobsForKannadigas

 

ಪ್ರದೀಪ್ ತೊರೆನೂರು ಎನ್ನುವವರೂ ಸಹಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗ್ಳೂರಿನಲ್ಲಿ ಒಂದು ಸುತ್ತು ತಿರುಗಾಡುತ್ತಾ ನೋಡಿದರೆ ಹಲವಾರು ಉದ್ಯಮಗಳು ಹಾಗೂ ಕೆಲಸ ಮಾಡುವ ಜನ ಕನ್ನಡೇತರರು ಕಾಣಿಸುತ್ತಾರೆ … ಮತ್ತೊಂದೆಡೆ ಹಲವಾರು ಕನ್ನಡಿಗರು ಕೆಲಸ ಸಿಗದೆ ಒದ್ದಾಡುತ್ತಿದ್ದಾರೆ …

ಸ್ವತಂತ್ರ ನಂತರ ಕೇವಲ ಕೇಂದ್ರ ಸರ್ಕಾರ ಕಚೇರಿ ಹೆಚ್ ಎ ಎಲ್ , ಬೆಮ್‌ಲ್ , ಮುಂತಾದ ಕಡೆ ತಮ್ಮ ಬೇರು ಗಟ್ಟಿ ಮಾಡಿಕೊಂಡು ಅನ್ಯ ಭಾಷಿಕರು ಕರ್ನಾಟಕದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು , ಅದುಕ್ರಮೇಣ ಮಾಹಿತಿ ತಂತ್ರಜಾನ ಕಾರ್ಖಾನೆಗಳಲ್ಲಿ ಅನ್ಯ ರಾಜ್ಯದವರು ತಮ್ಮ ಹಿಡಿತ ಇಟ್ಟುಕೊಂಡು ಕನ್ನಡಿಗರು ಏನೇ ಓದಿ , ಒಳ್ಳೆಯ ಅನುಭವ ಇದ್ದರೂ ಅವರನ್ನು ಕಡೆಗಣಿಸಿದರು ..

ಈ ದೊಡ್ಡ ಮಟ್ಟದ ಕಾರ್ಖನಗಳಲ್ಲಿ ಇದ್ದ ಅನ್ಯ ಭಾಷಿಕರ ಜನ ಇವತ್ತು ನನಗೆ ಆಟೋ ಗಳಲ್ಲಿ , ಮಾಲ್ ಗಳಲ್ಲಿ , ಚಿಕ್ಕ ಚಿಕ್ಕ ಉದ್ಯಮಗಳಲ್ಲಿ ನಿಧಾನವಾಗಿ ತಮ್ಮ ಬೇರು ಗಟ್ಟಿ ಮಾಡಿಕೊಳ್ಳುತಿರುವುದುಕನ್ನಡಿಗರಿಗೆ ಮುಂದಿನ ದಿನಗಳಲ್ಲಿ ಕೆಲಸ ಸಿಗುವ ಅವಕಾಶಗಳು ಕಡಿಮೆಯಾಗಳಿದ್ದು, ಬೆಂಗಳೂರು ನಿಧಾನವಾಗಿ ಅನ್ಯ ರಾಜ್ಯದವರ ತೆಕ್ಕೆಗೆ ಬೀಳುವುದು ಶತ ಸಿದ್ದ !

ಮೊದಲನೆಯದಾಗಿ ಕರ್ನಾಟಕ ಸರ್ಕಾರ ರಾಜ್ಯದ ಒಟ್ಟೂ ನಿರುದ್ಯೋಗಿಗಳ ಅಂಕಿ ಅಂಶ ಬಗ್ಗೆ ಜನರಿಗೆ ತಿಳಿಸಬೇಕು ! ಪ್ರತಿಯೊಂದು ಉದ್ಯಮದಲ್ಲಿ ಸ್ಥಳೀಯರು ಇರುವ ಅಂಕಿ ಅಂಶ ಬಯಲಾಗಬೇಕು ! ಇಂದು ಕಸದ ಕಾಂಟ್ರ್ಯಾಕ್ಟ್ ಗಳಿಂದ ಯಾವ ಯಾವ ಕಾಂಟ್ರ್ಯಾಕ್ಟ್ ಗಳು ಕನ್ನಡಿಗರಿಗೆ ಸಿಕ್ಕಿದೆ , ಅನ್ಯ ಭಾಷಿಕರಿಗೆ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಕರ್ನಾಟಕ ಸರ್ಕಾರ ಬಹಿರಂಗ ಪಡಿಸಲಿ

ಇಲ್ಲಿ ಅನ್ಯಭಾಷಿಕರ ಸಂಖ್ಯೆ ಆಯಾ ರಾಜ್ಯದ ಆಧಾರದ ಮೇಲೆ ವಿಂಗಡಣೆಯಾಗಿ ಆಯಾ ರಾಜ್ಯದ ಉದ್ಯೋಗ ಸೃಷ್ಟಿಸುವಲ್ಲಿ ಆಯಾ ರಾಜ್ಯದ ವೈಪಲ್ಯ ಎತ್ತಿ ತೋರಿಸಬೇಕು !

#Nation_First ಎಂದರೆ ನಮ್ಮ ಕೆಲಸ ಉದ್ಯಮ ಹಾಗೂ ಸ್ವಾಭಿಮವನ್ನು ಅನ್ಯ ರಾಜ್ಯದವರಿಗೆ ಕೊಟ್ಟು ನಾವು ಬಿಕಾರಿ ಯಾಗುವುದಲ್ಲ , ನಾವು ನಮ್ಮ ಹಕ್ಕನ್ನು ಪಡೆದು , ಸ್ಥಳೀಯರಾಗಿ ಕೆಲಸ ಪಡೆದು ,ಒಳ್ಳೆಯ ವ್ಯಾಪಾರ ವಹಿವಾಟು ಮಾಡಿ ಭಾರತ ದೇಶದ ಅಭಿವೃದ್ದಿಗಾಗಿ ಶ್ರಮಿಸುವುದು !

ಸ್ಥಳೀಯರಿಗೆ ಕೆಲ್ಸ ಸಿಕ್ಕ ಮೆಳ್ಳೆ ಉಳಿದ ಕೆಲಸಗಳು ಅನ್ಯ ರಾಜ್ಯದವರು ಪಡೆಯಬಹುದು !

ಇದು ಆಗದೆ ಇದ್ದಲ್ಲಿ ಕನ್ನಡಿಗರು ತಮ್ಮದೇ ನಾಡಿನಲ್ಲಿ ಕೆಲಸ ಇಲ್ಲದೆ ಪರದಾಡುವ ದಿನ ಬರುವುದು ಶತಸಿದ್ದ !

#KarnatakaJobsForKannadigas
#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೇ_ಸಿಗಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...