Homeಮುಖಪುಟಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ `ನಾನು ಗೌರಿ’ ಮೀಡಿಯಾದೊಂದಿಗೆ ಮಾತನಾಡಿದ ಬೂದಾಳು ಅವರು, ಸರಹಪಾದನ ತಾತ್ವಿಕತೆಯ ಪ್ರಸ್ತುತತೆ, ಶ್ರಮಣ ಪರಂಪರೆಯ ವೈಶಿಷ್ಟ್ಯತೆ ಹಾಗೂ ಕೃತಿಯ ಅನುವಾದದ ಹಿಂದಿನ ಶ್ರಮವನ್ನು ಹಂಚಿಕೊಂಡಿದ್ದಾರೆ.

- Advertisement -
- Advertisement -

ಕನ್ನಡದ ಪ್ರಮುಖ ಸಾಂಸ್ಕೃತಿಕ ಚಿಂತಕರಲ್ಲಿ ಒಬ್ಬರಾದ ಡಾ.ನಟರಾಜ್‌ ಬೂದಾಳು ಅವರು ಅನುವಾದಿಸಿರುವ ‘ಸರಹಪಾದ’ ಕೃತಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಶ್ರಮಣ ಪರಂಪರೆಯ ಕುರಿತು ವಿಸ್ತೃತವಾಗಿ ಬೆಳಕು ಚೆಲ್ಲುತ್ತಿರುವ ನಟರಾಜ ಬೂದಾಳು ಅವರು ಹೊರ ತಂದಿರುವ ವಿಶೇಷ ಕೃತಿಗಳಲ್ಲಿ ‘ಸರಹಪಾದ’ವೂ ಒಂದು. ಶ್ರಮಣ ಪರಂಪರೆಗಳಾದ ಸಿದ್ಧ, ನಾಥ, ಆರೂಢ, ಬೌದ್ಧ, ತತ್ವಪದ ಮೊದಲಾದವುಗಳ ತಾತ್ವಿಕತೆಗಳನ್ನು ಚರ್ಚೆಗೆ ತಂದಿರುವವರಲ್ಲಿ ಬೂದಾಳು ಪ್ರಮುಖರು.

ಎಲ್ಲ ಮಿಥ್ಯಾವಾದಗಳನ್ನು ದಾಟುವುದನ್ನು ಕಲಿಸಿದ ಮಹಾಬೌದ್ಧ ಸಿದ್ಧ ಸರಹಪಾದನ ವಿಚಾರಗಳನ್ನು ಬೂದಾಳು ವಿಶಿಷ್ಟವಾಗಿ ಕನ್ನಡಕ್ಕೆ ತಂದಿದ್ದಾರೆ. ಲೋಕಾನುಭವವೇ ಮುಖ್ಯವೆಂದ ಅನುಭಾವ ಪರಂಪರೆಯಲ್ಲಿ ಬರುವ ಬೌದ್ಧಸಿದ್ಧ ಸರಹಪಾದ. ಬೌದ್ಧ ತಾತ್ವಿಕತೆಯಲ್ಲಿ ಪ್ರಧಾನವಾಗಿರುವ ‘ಮೂಲಮಾಧ್ಯಮಕಕಾರಿಕೆ’ ಕೃತಿಯ ರಚನಾಕಾರನಾದ ನಾಗಾರ್ಜುನನ ಗುರು ಸರಹಪಾದ.

ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು

‘ನಾಗಾರ್ಜುನ ಅಲ್ಲಮಪ್ರಭು ಒಂದು ತೌಲನಿಕ ಅಧ್ಯಯನ’, ‘ನಾಗಾರ್ಜುನ ಮಧ್ಯಮಮಾರ್ಗ’, ‘ಬುದ್ಧನೆಂಬ ಜ್ಞಾನಪೂರ್ಣ ಜಗಂಜ್ಯೋತಿ’, ‘ಬುದ್ಧಗುರುವಿನ ಮಧ್ಯಮಮಾರ್ಗ’, ‘ಪ್ರತ್ಯೇಕ ಬುದ್ಧ ಅಲ್ಲಮಪ್ರಭು’, ‘ಹಿಂದಣ ಹೆಜ್ಜೆಯನರಿತನಲ್ಲದೆ’, ‘ಪ್ರಜ್ಞಾ ಪಾರಮಿತ ಹೃದಯ ಸೂತ್ರ’, ‘ಬೌದ್ಧ ಮಧ್ಯಮ ಮಾರ್ಗ’, ‘ಮಾತಿನ ಮೊದಲು’, ‘ಶಂಕರಾನಂದಯೋಗಿ ಮತ್ತು ಶಂಕರಾರ್ಯರ ತತ್ವಪದಗಳು’, ‘ದಾವ್ ದೆ ಚಿಂಗ್’, ‘ಮನಮಗ್ನತೆ’ ಸೇರಿದಂತೆ ಹಲವು ಕೃತಿಗಳನ್ನುಅವರು ರಚಿಸಿದ್ದಾರೆ. ತತ್ವಪದ ಕ್ಷೇತ್ರದಲ್ಲಿ ಬೂದಾಳು ಅವರು ಮಾಡಿರುವ ಕಾರ್ಯಗಳು ಅವಿಸ್ಮರಣೀಯ.

‘ಸರಹಪಾದ ಕನ್ನಡಕ್ಕೇ ಯಾವತ್ತೋ ಬರಬೇಕಿತ್ತು’

ಪ್ರಶಸ್ತಿ ಲಭಿಸಿದ ಈ ಸಂದರ್ಭದಲ್ಲಿ ‘ನಾನು ಗೌರಿ’ ಮಾಧ್ಯಮದೊಂದಿಗೆ ಮಾತನಾಡಿದ ನಟರಾಜ ಬೂದಾಳು ಅವರು, “ಭಾರತದ ಬಹಳ ಮುಖ್ಯವಾದ ಸಾಧಕ ಪರಂಪರೆ ಎಂದರೆ ಶ್ರಮಣ ಪರಂಪರೆ. ಈ ಪರಂಪರೆಯ ಮಹಾಗುರು ಸರಹಪಾದ. ಆತನ ತಾತ್ವಿಕತೆಗಳು ಕನ್ನಡಕ್ಕೆ ಯಾವತ್ತೋ ಬರಬೇಕಿತ್ತು. ತಡವಾಗಿಯಾದರೂ ಬಂತು. ಅದನ್ನು ಓದುಗರು ಗುರುತಿಸಿದ್ದು ಸಂತೋಷ ತಂದಿದೆ” ಎಂದರು.

“ಸರಹಪಾದನ ತಾತ್ವಿಕತೆಗಳು ದೇವನಾಗರಿ ಲಿಪಿಯಲ್ಲಿ, ಅಪಭ್ರ೦ಶ ಭಾಷೆಯಲ್ಲಿ ಇವೆ. ಅಪಭ್ರಂಶ ಭಾಷೆಯಲ್ಲಿನ ಕೃತಿ, ಸಂಸ್ಕೃತಿಗೆ ಆಗಿರುವ ಅನುವಾದ ಹಾಗೂ ಮೂರು ಇಂಗ್ಲಿಷ್ ಭಾಷಾಂತರಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡಕ್ಕೆ ‘ಸರಹಪಾದ’ ಕೃತಿಯನ್ನು ತಂದೆ. ದೇವನಾಗರಿ ಲಿಪಿಯಲ್ಲಿರುವ ಕೃತಿಯು ಅಪಭ್ರಂಶ ಆವೃತ್ತಿಯಲ್ಲೇ ಇದೆ. ಅಪಭ್ರಂಶ ಈಗ ಇಲ್ಲ. ಆದರೆ ಆ ಕೃತಿ ಇದೆ. ಇಂಗ್ಲಿಷ್‌ಗಿಂತ, ಸಂಸ್ಕೃತಕ್ಕಿಂತ ಕನ್ನಡಕ್ಕೆ ಹತ್ತಿರವಾದ ಭಾಷೆ ‘ಅಪಭ್ರಂಶ’. ಮೂರು ಭಾಷೆಗಳಲ್ಲಿ ಬಂದಿರುವ ಕೃತಿಗಳನ್ನು ಅಧ್ಯಯನ ಮಾಡಿ ಅನುವಾದ ಮಾಡಿರುವೆ” ಎಂದು ಬೂದಾಳು ತಿಳಿಸಿದರು.

“ಬೌದ್ಧತಾತ್ವಿಕತೆಯನ್ನು ಪಸರಿಸಿದ ನಾಗಾರ್ಜುನ ಗುರು ಸರಹಪಾದ. ಆತ ದಕ್ಷಿಣ ಭಾರತಕ್ಕೂ ಬಂದಿದ್ದ ಎನ್ನುವವರಿದ್ದಾರೆ. ಆತ ಮಹಾನ್‌ ತಾತ್ವಿಕನೂ ಹೌದು, ಸಾಧಕನೂ ಹೌದು. ಸರಹ ಎಲ್ಲವನ್ನೂ ತಿರಸ್ಕರಿಸಿ ಸುಮ್ಮನಿರುವ ಮಾರ್ಗದ ಕುರಿತು ಮಾತನಾಡುತ್ತಾನೆ. ಅವನ ಎದುರು ನಾಗಾರ್ಜುನ ಸೇರಿದಂತೆ ಯಾವ ತಾತ್ವಿಕರೂ ನಿಲ್ಲಲು ಸಾಧ್ಯವಿಲ್ಲ” ಎಂಬುದು ಬೂದಾಳು ಅವರ ಅಭಿಪ್ರಾಯ.

“ಆತ ಪೊಳ್ಳು ಜಗದ್ಗುರುಗಳನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸುತ್ತಾನೆ. ಸರಹನ ಪ್ರಕಾರ ಕುಟುಂಬವೇ ದೊಡ್ಡದು. ಪಾರಲೌಖಿತ ವ್ಯಮೋಹಕ್ಕೆ ಏಕೆ ಬೀಳುತ್ತೀರಾ? ಲೌಕಿಕದಲ್ಲಿ ಚೆನ್ನಾಗಿ ಬಾಳಲು ಸಾಧ್ಯವಿಲ್ಲದನು ಅಲ್ಲೇನು ಮಾಡುತ್ತಾನೆ? ಅಧಿಕಾರ ಕೇಂದ್ರಗಳು, ಸರ್ಕಾರಗಳು ವಿಧೇಯರಾಗಿರಬೇಕಾದದ್ದು ಕುಟುಂಬಗಳಿಗೆ ಹೊರತು ಜಗದ್ಗುರುಗಳಿಗೂ ಅಲ್ಲ, ದೇವಸ್ಥಾನಕ್ಕೂ ಅಲ್ಲ. ಕುಟುಂಬವೇ ಶ್ರೇಷ್ಟ ಎಂದು ಹೇಳಿದವನು ಸರಹ” ಎನ್ನುತ್ತಾರೆ ಅವರು.

“ಶ್ರಮಣ ಪರಂಪರೆಯನ್ನು ಯಾರೂ ಮುನ್ನಲೆ ತರಬೇಕಾಗಿಲ್ಲ. ಅದು ಪ್ರಯೋಗಿಕವಾಗಿ ಈಗಾಗಲೇ ಸಮಾಜದಲ್ಲಿದೆ. ನಮ್ಮ ನಡುವೆ ತತ್ವಪದಕಾರರು ಇದ್ದಾರೆ. ಇಂದಿಗೂ ಶ್ರಮಣ ಪರಂಪರೆ ಜೀವಂತವಾಗಿದೆ. ಆದರೆ ಶೈಕ್ಷಣಿಕ ವಲಯದಲ್ಲಿ ಈ ಕುರಿತು ಗಂಭೀರ ಚರ್ಚೆಗಳಾಗುತ್ತಿಲ್ಲ. ಅಕಾಡೆಮಿಕ್‌ ವಲಯ ಈ ಶ್ರಮಣ ಪರಂಪರೆಯನ್ನು ಕಣ್ಣುಬಿಟ್ಟು ನೋಡಬೇಕಾಗಿದೆ” ಎಂದು ತಿಳಿಸಿದರು ಬೂದಾಳು.


ಇದನ್ನೂ ಓದಿ: ‘ಕುವೆಂಪು ಸಮಗ್ರ ಸಾಹಿತ್ಯ ಸಂಪುಟ 12’ ಮಾರಾಟಕ್ಕೆ ಹೈಕೋರ್ಟ್ ತಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...