ಜನಪ್ರಿಯ ನಟ ವಿನೋದ್ ಥಾಮಸ್ ಕೇರಳದ ಪಂಪಾಡಿ ಸಮೀಪದ ಹೋಟೆಲ್‌ವೊಂದರ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಆವರಣದಲ್ಲಿ ಕಾರೊಂದು ನಿಲ್ಲಿಸಿದ್ದು, ವ್ಯಕ್ತಿಯೊಬ್ಬರು ಕಾರಿನೊಳಗೆ ಇರುವುದನ್ನು ಕಂಡ ಹೊಟೇಲ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ನಾವು ಥಾಮಸ್ ಅವರು ಕಾರಿನೊಳಗೆ ನಿಶ್ಚಲವಾಗಿರುವುದನ್ನು ಕಂಡುಕೊಂಡೆವು ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ವೈದ್ಯರು ಆವರನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ವಿನೋದ್ ಥಾಮಸ್ ಸಾವಿನ ಹಿಂದಿನ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ವರದಿಗಳ ಪ್ರಕಾರ, ಕಾರಿನ ಎಸಿಯಿಂದ ವಿಷಕಾರಿ ಅನಿಲವನ್ನು ಉಸಿರಾಡಿದ್ದರಿಂದ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ಬಳಿಕವೇ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಥಾಮಸ್ ಅವರು ಅಯ್ಯಪ್ಪನುಮ್ ಕೊಶ್ಯುಮ್, ನತ್ತೋಲಿ ಒರು ಚೆರಿಯ ಮೀನಲ್ಲ, ಒರು ಮುರೈ ವಂದ್ ಪಾತಾಯ, ಹ್ಯಾಪಿ ವೆಡ್ಡಿಂಗ್ ಮತ್ತು ಜೂನ್ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
Malayalam serial and movie actor vinod Thomas was found dead in his car outside a bar at Pambady near Kottayam yday evening. pic.twitter.com/XrPZWAO25V
— മുരളി (@muralewrites) November 18, 2023
ಇದನ್ನು ಓದಿ: ಉತ್ತರಪ್ರದೇಶ: ಹಲಾಲ್ ಉತ್ಪನ್ನಗಳ ಮಾರಾಟ ನಿಷೇಧ


