Homeಮುಖಪುಟಪ್ಯಾಲೆಸ್ತೀನ್‌ಗೆ ಭಾರತದಿಂದ 2ನೇ ಹಂತದ ಪರಿಹಾರ ಸಾಮಾಗ್ರಿ ರವಾನೆ

ಪ್ಯಾಲೆಸ್ತೀನ್‌ಗೆ ಭಾರತದಿಂದ 2ನೇ ಹಂತದ ಪರಿಹಾರ ಸಾಮಾಗ್ರಿ ರವಾನೆ

- Advertisement -
- Advertisement -

ಯುದ್ದ ಪೀಡಿತ ಪ್ಯಾಲೆಸ್ತೀನ್‌ಗೆ ಭಾರತ ಭಾನುವಾರ 2ನೇ ಹಂತದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ನಾವು ಪ್ಯಾಲೆಸ್ತೀನ್‌ ಜನರಿಗೆ ಮಾನವೀಯ ನೆರವು ನೀಡುವುದನ್ನು ಮುಂದುವರಿಸುತ್ತೇವೆ. 32 ಟನ್‌ಗಳ ಪರಿಹಾರ ಸಾಮಾಗ್ರಿಗನ್ನು ಹೊತ್ತ 2ನೇ ಭಾರತೀಯ ವಾಯುಪಡೆಯ C17 ವಿಮಾನವು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಡಲಿದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಅ.22ರಂದು ಭಾರತವು ಪ್ಯಾಲೆಸ್ತೀನ್‌ಗೆ ವೈದ್ಯಕೀಯ ಮತ್ತು ವಿಪತ್ತು ಪರಿಹಾರ ಸೇರಿದಂತೆ ಮೊದಲ ನೆರವನ್ನು ಕಳುಹಿಸಿಕೊಟ್ಟಿತ್ತು.

ಗಾಝಾ ಮೇಲೆ ಇಸ್ರೇಲ್‌ ಯುದ್ಧ ಘೋಷಿಸಿದ ಬಳಿಕ ಈವೆರೆಗೆ ಪ್ಯಾಲೆಸ್ತೀನ್‌ನಲ್ಲಿ  ಆಕ್ರಮಣದಿಂದ 12,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ  5,000 ಕ್ಕೂ ಹೆಚ್ಚು ಮಕ್ಕಳು ಮತ್ತು 3,300 ಮಹಿಳೆಯರು ಸೇರಿದ್ದಾರೆ, 30,000 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಸರಕಾರಿ ಮಾದ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ವರದಿಯ ಪ್ರಕಾರ 1,800 ಮಕ್ಕಳು ಸೇರಿದಂತೆ ಸುಮಾರು 3,750 ಜನರು ಇನ್ನೂ ಪತ್ತೆಯಾಗಿಲ್ಲ. ಮೃತರಲ್ಲಿ ಒಟ್ಟು 200 ವೈದ್ಯರು, 22 ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮತ್ತು 51 ಪತ್ರಕರ್ತರು ಕೂಡ ಸೇರಿದ್ದಾರೆ.

ಇಸ್ರೇಲ್‌ ಆಕ್ರಮಣದಿಂದ 25 ಆಸ್ಪತ್ರೆಗಳು ಮತ್ತು 52 ಆರೋಗ್ಯ ಕೇಂದ್ರಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಇದಲ್ಲದೆ 55 ಆಂಬ್ಯುಲೆನ್ಸ್‌ಗಳನ್ನು ಇಸ್ರೇಲ್‌ ಪಡೆಗಳು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇಸ್ರೇಲ್‌ ದಾಳಿಯಲ್ಲಿ ಆಸ್ಪತ್ರೆಗಳು, ಮಸೀದಿಗಳು ಮತ್ತು ಚರ್ಚ್‌ಗಳು ಸೇರಿದಂತೆ ಸಾವಿರಾರು ಕಟ್ಟಡಗಳು ಧ್ವಂಸಗೊಂಡಿದೆ.

ಇಸ್ರೇಲ್‌ ಗಾಝಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಆಸ್ಪತ್ರೆಯಿಂದ ಜನರನ್ನು ತೆರವುಗೊಳಿಸುವಂತೆ ಇಸ್ರೇಲ್ ಸೇನೆ ಶನಿವಾರ ಆದೇಶಿಸಿದ ಬಳಿಕ ಆಸ್ಪತ್ರೆಯಲ್ಲಿದ್ದ ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದವರು ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಈ ಮಧ್ಯೆ ತೀವ್ರ ಅನಾರೋಗ್ಯಗೊಂಡಿರುವ ಸುಮಾರು 450 ರೋಗಿಗಳು ಆಸ್ಪತ್ರೆಯಲ್ಲೇ ಉಳಿದಿದ್ದಾರೆ ಎಂದು ವರದಿಯಾಗಿದೆ.

ಅಲ್-ಶಿಫಾ ಆಸ್ಪತ್ರೆಯಡಿಯಲ್ಲಿ ಹಮಾಸ್‍ನ ಕಾರ್ಯಾಚರಣಾ ನೆಲೆಯಿದೆ ಎಂದು ಇಸ್ರೇಲ್ ಹೇಳಿದ್ದು, ಇದನ್ನು ಹಮಾಸ್ ತಳ್ಳಿಹಾಕಿದೆ. ನಿನ್ನೆ ಗಾಝಾ ನಗರದಲ್ಲಿ ಲೌಡ್ ಸ್ಪೀಕರ್ಗಳ ಮೂಲಕ ಘೋಷಣೆ ಮಾಡಿದ ಇಸ್ರೇಲ್ ಸೇನೆ ಒಂದು ಗಂಟೆಯೊಳಗೆ ಆಸ್ಪತ್ರೆಯನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.

ಇದಲ್ಲದೆ ಬಾಂಗ್ಲಾದೇಶ ಸಹಿತ 5 ದೇಶಗಳು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ಗೆ ತನಿಖೆಗೆ ಆಗ್ರಹಿಸಿವೆ. ಐಸಿಸಿ ಸದಸ್ಯರಾದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೊಲಿವಿಯಾ, ಕೊಮೊರೊಸ್ ಮತ್ತು ಜಿಬೌಟಿ ದೇಶಗಳು ಫೆಲೆಸ್ತೀನ್ ದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ತನಿಖೆಗೆ ಆಗ್ರಹಿಸಿವೆ ಎಂದು ಐಸಿಸಿ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಹೇಳಿದ್ದಾರೆ.

ಇದನ್ನು ಓದಿ: ಉತ್ತರಪ್ರದೇಶ: ಹಲಾಲ್ ಉತ್ಪನ್ನಗಳ ಮಾರಾಟ ನಿಷೇಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...