ಕಾಮಿಡಿಯನ್ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಶೋನಲ್ಲಿ ಬಲಪಂಥೀಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಪೋಷಕರು, ಮಹಿಳೆಯರು ಮತ್ತು ಲೈಂಗಿಕತೆಯ ಕುರಿತು ನೀಡಿರುವ ಅಶ್ಲೀಲ ಹೇಳಿಕೆ ಕುರಿತು ದೇಶದಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಪ್ರಧಾನಿ ಮೋದಿ ಸಮ್ಮಾನಿತ ಅಲಾಬಾದಿಯನ ಒಂದು ಹೇಳಿಕೆಯಿಂದ ಆತ ಭಾಗವಹಿಸಿದ್ದ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಇತರ ಸಾಮಾಜಿಕ ಜಾಲತಾಣ ಪ್ರಭಾವಿಗಳಾದ ಅಪೂರ್ವ ಮುಖಿಜಾ, ಆಶಿಶ್ ಚಂಚಲಾನಿ ಮತ್ತು ಜಸ್ಪ್ರೀತ್ ಸಿಂಗ್ ಕೂಡ ಕೇಸ್ ಹಾಕಿಸಿಕೊಳ್ಳುವಂತಾಗಿದೆ.
ಮುಂಬೈ, ಅಸ್ಸಾಂ ಸೇರಿದಂತೆ ವಿವಿದೆಡೆ ಅಲಹಾಬಾದಿಯ ಮತ್ತು ಇತರರ ವಿರುದ್ದ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಹುಡುಕುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ವಿವಿಧ ಸಂಸ್ಥೆಗಳು ಅಲಹಾಬಾದಿಯನ ಅಸಭ್ಯ ಹಾಸ್ಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನಿನ ಬಿಸಿ ಮುಟ್ಟಿಸಲು ಮುಂದಾಗಿವೆ.
ರಣವೀರ್ ಅಲಹಾಬಾದಿಯನ ಹೇಳಿಕೆ ಒಂದೆಡೆ ವಿವಾದವಾದರೆ, ಅತನ ಜೊತೆಗಿದ್ದ ಇತರರು ಅಮಾಯಕರು ಎಂದೆನಿಸಬೇಕಿಲ್ಲ. ಅವರೂ ಕೂಡ ಎಲ್ಲಾ ಮಿತಿಗಳನ್ನು ಮೀರಿ ಅಸಂಬಂದ್ಧ, ಅವಹೇಳನಕಾರಿ ಮತ್ತು ಅಶ್ಲೀಲ ಹಾಸ್ಯಕ್ಕೆ ಕುಖ್ಯಾತಿ ಪಡೆವರು. ಇದೀಗ ಅಲಹಾಬಾದಿಯನ ಹೇಳಿಕೆ ಜೊತೆಗೆ ಕಾಮಿಡಿಯನ್ ಜಸ್ಪ್ರೀತ್ ಸಿಂಗ್ ಕೇರಳದ ಕುರಿತು ನೀಡಿರುವ ಹೇಳಿಕೆಯೊಂದು ಭಾರೀ ವೈರಲ್ ಆಗಿದೆ. ಕೇರಳದವರನ್ನು ಅಥವಾ ಮಲಯಾಳಿಗಳನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.
“ಕೇರಳ ಸರ್ 100% ಲಿಟ್ರೆಸಿ ಸರ್”
ವಿವಾದಿತ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ಭಾಗವಹಿಸಿದ್ದ ಕೇರಳದ ಸ್ಪರ್ಧಿಯೊಬ್ಬರು “ನನಗೆ ಯಾವುದೇ ರಾಜಕೀಯ ನಿಲುವು ಅಥವಾ ಒಲವು ಇಲ್ಲ. ನಾನು ವೋಟ್ ಕೂಡ ಮಾಡಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ತೀರ್ಪುಗಾರ ಜಸ್ಪ್ರೀತ್ ಸಿಂಗ್ ” ಕೇರಳ ಸರ್ 100% ಲಿಟ್ರೆಸಿ ಸರ್” ಎಂದು ಹೇಳುವ ಮೂಲಕ, ಆಕೆಯನ್ನು, ಆಕೆಯ ಭಾಷೆಯನ್ನು, ಆಕೆಯ ರಾಜ್ಯವನ್ನು ಅವಮಾನಿಸಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ಮೇಲಿನ ತನ್ನ ದ್ವೇಷವನ್ನು ವ್ಯಕ್ತಪಡಿಸಿದ್ದಾರೆ.
ಕೇರಳ, ಕರ್ನಾಟ, ತಮಿಳುನಾಡು, ತೆಲಂಗಾಣದ, ಆಂಧ್ರ ಪ್ರದೇಶ ಸೇರಿದಂತೆ ದಕ್ಷಿಣದ ಡ್ರಾವಿಡ ರಾಜ್ಯಗಳು ಸದಾ ವೈವಿದ್ಯತೆಯನ್ನು ಹೊಂದಿರುವ ರಾಜ್ಯಗಳು. ಭಾರತದ ಸಂವಿಧಾನವನ್ನು ಬಲವಾಗಿ ಪ್ರತಿಪಾದಿಸುವ ರಾಜ್ಯಗಳು. ಶಿಕ್ಷಣ, ಮೂಲ ಸೌಕರ್ಯಗಳ ವಿಚಾರದಲ್ಲಿ ಬಹಳ ಮುಂದುವರಿದ ರಾಜ್ಯಗಳು. ಅಲ್ಲದೆ, ಈ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ. ಈ ಎಲ್ಲಾ ಕಾರಣಕ್ಕೆ ಉತ್ತರ ಭಾರತದ ಕೆಲವರು ದಕ್ಷಿಣದ ಈ ರಾಜ್ಯಗಳನ್ನು ಮತ್ತು ಇಲ್ಲಿನ ಜನರನ್ನು ದೇಶದ್ರೋಹಿಗಳಂತೆ ಕಾಣುವ ಪರಿಪಾಠವಿದೆ. ಆ ಭಾವನೆ ಜಸ್ಪ್ರೀತ್ ಸಿಂಗ್‌ನ ಹೇಳಿಕೆಯಲ್ಲಿ ವ್ಯಕ್ತವಾಗಿದೆ. ವಿಶೇಷವಾಗಿ ಹಿಂದಿಯೇತರ ರಾಜ್ಯ ಎಂಬ ಕಾರಣಕ್ಕೆ ಹಿಂದಿ ಭಾಷಿಕರ ದ್ವೇಷ ಬಹಿರಂಗವಾಗಿದೆ.
ಆಕ್ರೋಶಗೊಂಡ ಮಲಯಾಳಿಗಳು
ಕೇರಳದ ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ರಾಜ್ಯ. ಕೇವಲ ಸಾಕ್ಷರತೆ ಮಾತ್ರವಲ್ಲದೆ ಕೋವಿಡ್, ನಿಫಾ, ಮಂಕಿ ಫಾಕ್ಸ್, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಹೊಂದಿರುವ ರಾಜ್ಯ, ಉದ್ಯೋಗ, ವೇತನದ ವಿಚಾರದಲ್ಲಿ ಉತ್ತರಕ್ಕಿಂತ ಮುಂದಿರುವ ರಾಜ್ಯ. ಈ ಕಾರಣಕ್ಕೆ ಉತ್ತರ ಭಾರತದ ಸಾವಿರಾರು ಜನರು ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ. ಇವೆಲ್ಲವೂ ಹೆಮ್ಮೆ ಪಡುವಂತಹ ವಿಚಾರಗಳೇ. ಆದರೆ, ಜಸ್ಪ್ರೀತ್ ಸಿಂಗ್‌ನ ಅಸಂಬದ್ದ ಹಾಸ್ಯ ಕೇರಳ ಸಾಕ್ಷರತೆ ಹೊಂದಿರುವುದೇ ಅಪರಾಧ ಎಂಬಂತೆ ಬಿಂಬಿಸಿದೆ.
ಜಸ್ಪ್ರೀತ್ ಸಿಂಗ್‌ನ ಹೇಳಿಕೆಗೆ ಆಕ್ರೋಶಗೊಂಡಿರುವ ಮಲಯಾಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ವಿಡಿಯೋಗಳನ್ನು ಮಾಡುವ ಮೂಲಕ ತಿರುಗೇಟು ಕೊಡುತ್ತಿದ್ದಾರೆ.
ನಮಗೆ 100% ಸಾಕ್ಷರತೆ ಇದೆ, ಅದಕ್ಕಾಗಿಯೇ ನಾವು ನಮ್ಮ ಮತವನ್ನು ಚಿಂತಿಸಿ ಚಲಾಯಿಸುತ್ತೇವೆ.
|ನಾವು 100% ಸಾಕ್ಷರರು, ಅದಕ್ಕಾಗಿಯೇ ನಾವು ಕುಂಬಳಂಗಿ ನೈಟ್ಸ್‌ನಂತಹ ಉತ್ತಮ ಚಲನಚಿತ್ರಗಳನ್ನು ಮಾಡುತ್ತೇವೆ.
ನಾವು 100% ಸಾಕ್ಷರರು, ಅದಕ್ಕಾಗಿಯೇ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಸಾಮರಸ್ಯದಿಂದ ಬದುಕುತ್ತಿದ್ದೇವೆ
ನಾವು 100% ಸಾಕ್ಷರರು, ಅದಕ್ಕಾಗಿಯೇ ಕೇರಳ ಮಾದರಿ ಪ್ರಸಿದ್ಧವಾಗಿದೆ.
ನಾವು 100% ಸಾಕ್ಷರರು, ಅದಕ್ಕಾಗಿಯೇ ನಾವು ಎಲ್ಲಾ ಲಿಂಗಗಳನ್ನು ಗೌರವಿಸುತ್ತೇವೆ ಮತ್ತು ಪ್ರತಿಪಾದಿಸುತ್ತೇವೆ.
ನಾವು 100% ಸಾಕ್ಷರರು, ಅದಕ್ಕಾಗಿಯೇ ನಾವು ಅಗತ್ಯವಿದ್ದರೆ ಸರ್ಕಾರದ ವಿರುದ್ಧ ಮಾತನಾಡುತ್ತೇವೆ.
ನಮಗೆ 100% ಸಾಕ್ಷರತೆ ಇದೆ, ಅದಕ್ಕಾಗಿಯೇ ಕೇರಳವನ್ನು ದೇವರ ಸ್ವಂತ ನಾಡು ಎಂದು ಕರೆಯಲಾಗುತ್ತದೆ.
ನಮಗೆ 100% ಸಾಕ್ಷರತೆ ಇದೆ, ಅದಕ್ಕಾಗಿಯೇ ಬೀಫ್ ತಿನ್ನುತ್ತೇವೆ
ನಮಗೆ 100% ಸಾಕ್ಷರತೆ ಇದೆ, ಅದಕ್ಕಾಗಿಯೇ ಕೋಮುವಾದಿಗಳನ್ನು ನಮ್ಮೊಳಗೆ ಬಿಟ್ಟುಕೊಂಡಿಲ್ಲ
100% literacy saar!
Education : Mysore saar
Hospital : Mangalore saar
Jobs : Bangalore saarThis is Gerala Model Saar 💪🏼
— Raaghu ರಾಘು (@raghavvk) February 12, 2025
ಈ ರೀತಿಯ ಉತ್ತರಗಳನ್ನು ಜಸ್ಪ್ರೀತ್ ಸಿಂಗ್‌ಗೆ ಮಲಯಾಳಿಗಳು ನೀಡುತ್ತಿದ್ದಾರೆ. ರಣವೀರ್ ಅಲಹಾಬಾದಿಯನ ಹೇಳಿಕೆ ಎಷ್ಟು ಅಸಂಬದ್ದವೋ, ಅಷ್ಟೇ ಜಸ್ಪ್ರೀತ್ ಸಿಂಗ್‌ನ ಹೇಳಿಕೆ ಅವಹೇಳನಕಾರಿ. ಹಾಗಾಗಿ, ಆತನ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ವ್ಯಕ್ತವಾಗಿವೆ.
ಅಶ್ಲೀಲ ಹೇಳಿಕೆ: ರಣವೀರ್ ಅಲಹಾಬಾದಿಯಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲು


