Homeಮುಖಪುಟ"ಕೇರಳ ಸರ್ 100% ಲಿಟ್ರೆಸಿ ಸರ್" : ಜಸ್ಪ್ರೀತ್ ಸಿಂಗ್‌ನ ಅವಹೇಳನದ ಹಾಸ್ಯಕ್ಕೆ ಆಕ್ರೋಶಗೊಂಡ ಮಲಯಾಳಿಗಳು

“ಕೇರಳ ಸರ್ 100% ಲಿಟ್ರೆಸಿ ಸರ್” : ಜಸ್ಪ್ರೀತ್ ಸಿಂಗ್‌ನ ಅವಹೇಳನದ ಹಾಸ್ಯಕ್ಕೆ ಆಕ್ರೋಶಗೊಂಡ ಮಲಯಾಳಿಗಳು

- Advertisement -
- Advertisement -

ಕಾಮಿಡಿಯನ್ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಶೋನಲ್ಲಿ ಬಲಪಂಥೀಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಪೋಷಕರು, ಮಹಿಳೆಯರು ಮತ್ತು ಲೈಂಗಿಕತೆಯ ಕುರಿತು ನೀಡಿರುವ ಅಶ್ಲೀಲ ಹೇಳಿಕೆ ಕುರಿತು ದೇಶದಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಪ್ರಧಾನಿ ಮೋದಿ ಸಮ್ಮಾನಿತ ಅಲಾಬಾದಿಯನ ಒಂದು ಹೇಳಿಕೆಯಿಂದ ಆತ ಭಾಗವಹಿಸಿದ್ದ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಇತರ ಸಾಮಾಜಿಕ ಜಾಲತಾಣ ಪ್ರಭಾವಿಗಳಾದ ಅಪೂರ್ವ ಮುಖಿಜಾ, ಆಶಿಶ್ ಚಂಚಲಾನಿ ಮತ್ತು ಜಸ್ಪ್ರೀತ್ ಸಿಂಗ್ ಕೂಡ ಕೇಸ್‌ ಹಾಕಿಸಿಕೊಳ್ಳುವಂತಾಗಿದೆ.

ಮುಂಬೈ, ಅಸ್ಸಾಂ ಸೇರಿದಂತೆ ವಿವಿದೆಡೆ ಅಲಹಾಬಾದಿಯ ಮತ್ತು ಇತರರ ವಿರುದ್ದ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಹುಡುಕುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ವಿವಿಧ ಸಂಸ್ಥೆಗಳು ಅಲಹಾಬಾದಿಯನ ಅಸಭ್ಯ ಹಾಸ್ಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನಿನ ಬಿಸಿ ಮುಟ್ಟಿಸಲು ಮುಂದಾಗಿವೆ.

ರಣವೀರ್ ಅಲಹಾಬಾದಿಯನ ಹೇಳಿಕೆ ಒಂದೆಡೆ ವಿವಾದವಾದರೆ, ಅತನ ಜೊತೆಗಿದ್ದ ಇತರರು ಅಮಾಯಕರು ಎಂದೆನಿಸಬೇಕಿಲ್ಲ. ಅವರೂ ಕೂಡ ಎಲ್ಲಾ ಮಿತಿಗಳನ್ನು ಮೀರಿ ಅಸಂಬಂದ್ಧ, ಅವಹೇಳನಕಾರಿ ಮತ್ತು ಅಶ್ಲೀಲ ಹಾಸ್ಯಕ್ಕೆ ಕುಖ್ಯಾತಿ ಪಡೆವರು. ಇದೀಗ ಅಲಹಾಬಾದಿಯನ ಹೇಳಿಕೆ ಜೊತೆಗೆ ಕಾಮಿಡಿಯನ್ ಜಸ್ಪ್ರೀತ್ ಸಿಂಗ್‌ ಕೇರಳದ ಕುರಿತು ನೀಡಿರುವ ಹೇಳಿಕೆಯೊಂದು ಭಾರೀ ವೈರಲ್ ಆಗಿದೆ. ಕೇರಳದವರನ್ನು ಅಥವಾ ಮಲಯಾಳಿಗಳನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.

“ಕೇರಳ ಸರ್ 100% ಲಿಟ್ರೆಸಿ ಸರ್”

ವಿವಾದಿತ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ಭಾಗವಹಿಸಿದ್ದ ಕೇರಳದ ಸ್ಪರ್ಧಿಯೊಬ್ಬರು “ನನಗೆ ಯಾವುದೇ ರಾಜಕೀಯ ನಿಲುವು ಅಥವಾ ಒಲವು ಇಲ್ಲ. ನಾನು ವೋಟ್ ಕೂಡ ಮಾಡಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ತೀರ್ಪುಗಾರ ಜಸ್ಪ್ರೀತ್ ಸಿಂಗ್‌ ” ಕೇರಳ ಸರ್ 100% ಲಿಟ್ರೆಸಿ ಸರ್” ಎಂದು ಹೇಳುವ ಮೂಲಕ, ಆಕೆಯನ್ನು, ಆಕೆಯ ಭಾಷೆಯನ್ನು, ಆಕೆಯ ರಾಜ್ಯವನ್ನು ಅವಮಾನಿಸಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ಮೇಲಿನ ತನ್ನ ದ್ವೇಷವನ್ನು ವ್ಯಕ್ತಪಡಿಸಿದ್ದಾರೆ.

ಕೇರಳ, ಕರ್ನಾಟ, ತಮಿಳುನಾಡು, ತೆಲಂಗಾಣದ, ಆಂಧ್ರ ಪ್ರದೇಶ ಸೇರಿದಂತೆ ದಕ್ಷಿಣದ ಡ್ರಾವಿಡ ರಾಜ್ಯಗಳು ಸದಾ ವೈವಿದ್ಯತೆಯನ್ನು ಹೊಂದಿರುವ ರಾಜ್ಯಗಳು. ಭಾರತದ ಸಂವಿಧಾನವನ್ನು ಬಲವಾಗಿ ಪ್ರತಿಪಾದಿಸುವ ರಾಜ್ಯಗಳು. ಶಿಕ್ಷಣ, ಮೂಲ ಸೌಕರ್ಯಗಳ ವಿಚಾರದಲ್ಲಿ ಬಹಳ ಮುಂದುವರಿದ ರಾಜ್ಯಗಳು. ಅಲ್ಲದೆ, ಈ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ. ಈ ಎಲ್ಲಾ ಕಾರಣಕ್ಕೆ ಉತ್ತರ ಭಾರತದ ಕೆಲವರು ದಕ್ಷಿಣದ ಈ ರಾಜ್ಯಗಳನ್ನು ಮತ್ತು ಇಲ್ಲಿನ ಜನರನ್ನು ದೇಶದ್ರೋಹಿಗಳಂತೆ ಕಾಣುವ ಪರಿಪಾಠವಿದೆ. ಆ ಭಾವನೆ ಜಸ್ಪ್ರೀತ್ ಸಿಂಗ್‌ನ ಹೇಳಿಕೆಯಲ್ಲಿ ವ್ಯಕ್ತವಾಗಿದೆ. ವಿಶೇಷವಾಗಿ ಹಿಂದಿಯೇತರ ರಾಜ್ಯ ಎಂಬ ಕಾರಣಕ್ಕೆ ಹಿಂದಿ ಭಾಷಿಕರ ದ್ವೇಷ ಬಹಿರಂಗವಾಗಿದೆ.

ಆಕ್ರೋಶಗೊಂಡ ಮಲಯಾಳಿಗಳು

ಕೇರಳದ ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ರಾಜ್ಯ. ಕೇವಲ ಸಾಕ್ಷರತೆ ಮಾತ್ರವಲ್ಲದೆ ಕೋವಿಡ್, ನಿಫಾ, ಮಂಕಿ ಫಾಕ್ಸ್, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಹೊಂದಿರುವ ರಾಜ್ಯ, ಉದ್ಯೋಗ, ವೇತನದ ವಿಚಾರದಲ್ಲಿ ಉತ್ತರಕ್ಕಿಂತ ಮುಂದಿರುವ ರಾಜ್ಯ. ಈ ಕಾರಣಕ್ಕೆ ಉತ್ತರ ಭಾರತದ ಸಾವಿರಾರು ಜನರು ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ. ಇವೆಲ್ಲವೂ ಹೆಮ್ಮೆ ಪಡುವಂತಹ ವಿಚಾರಗಳೇ. ಆದರೆ, ಜಸ್ಪ್ರೀತ್ ಸಿಂಗ್‌ನ ಅಸಂಬದ್ದ ಹಾಸ್ಯ ಕೇರಳ ಸಾಕ್ಷರತೆ ಹೊಂದಿರುವುದೇ ಅಪರಾಧ ಎಂಬಂತೆ ಬಿಂಬಿಸಿದೆ.

ಜಸ್ಪ್ರೀತ್ ಸಿಂಗ್‌ನ ಹೇಳಿಕೆಗೆ ಆಕ್ರೋಶಗೊಂಡಿರುವ ಮಲಯಾಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ವಿಡಿಯೋಗಳನ್ನು ಮಾಡುವ ಮೂಲಕ ತಿರುಗೇಟು ಕೊಡುತ್ತಿದ್ದಾರೆ.

ನಮಗೆ 100% ಸಾಕ್ಷರತೆ ಇದೆ, ಅದಕ್ಕಾಗಿಯೇ ನಾವು ನಮ್ಮ ಮತವನ್ನು ಚಿಂತಿಸಿ ಚಲಾಯಿಸುತ್ತೇವೆ.

|ನಾವು 100% ಸಾಕ್ಷರರು, ಅದಕ್ಕಾಗಿಯೇ ನಾವು ಕುಂಬಳಂಗಿ ನೈಟ್ಸ್‌ನಂತಹ ಉತ್ತಮ ಚಲನಚಿತ್ರಗಳನ್ನು ಮಾಡುತ್ತೇವೆ.

ನಾವು 100% ಸಾಕ್ಷರರು, ಅದಕ್ಕಾಗಿಯೇ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಸಾಮರಸ್ಯದಿಂದ ಬದುಕುತ್ತಿದ್ದೇವೆ

ನಾವು 100% ಸಾಕ್ಷರರು, ಅದಕ್ಕಾಗಿಯೇ ಕೇರಳ ಮಾದರಿ ಪ್ರಸಿದ್ಧವಾಗಿದೆ.

ನಾವು 100% ಸಾಕ್ಷರರು, ಅದಕ್ಕಾಗಿಯೇ ನಾವು ಎಲ್ಲಾ ಲಿಂಗಗಳನ್ನು ಗೌರವಿಸುತ್ತೇವೆ ಮತ್ತು ಪ್ರತಿಪಾದಿಸುತ್ತೇವೆ.

ನಾವು 100% ಸಾಕ್ಷರರು, ಅದಕ್ಕಾಗಿಯೇ ನಾವು ಅಗತ್ಯವಿದ್ದರೆ ಸರ್ಕಾರದ ವಿರುದ್ಧ ಮಾತನಾಡುತ್ತೇವೆ.

ನಮಗೆ 100% ಸಾಕ್ಷರತೆ ಇದೆ, ಅದಕ್ಕಾಗಿಯೇ ಕೇರಳವನ್ನು ದೇವರ ಸ್ವಂತ ನಾಡು ಎಂದು ಕರೆಯಲಾಗುತ್ತದೆ.

ನಮಗೆ 100% ಸಾಕ್ಷರತೆ ಇದೆ, ಅದಕ್ಕಾಗಿಯೇ ಬೀಫ್ ತಿನ್ನುತ್ತೇವೆ

ನಮಗೆ 100% ಸಾಕ್ಷರತೆ ಇದೆ, ಅದಕ್ಕಾಗಿಯೇ ಕೋಮುವಾದಿಗಳನ್ನು ನಮ್ಮೊಳಗೆ ಬಿಟ್ಟುಕೊಂಡಿಲ್ಲ

ಈ ರೀತಿಯ ಉತ್ತರಗಳನ್ನು ಜಸ್ಪ್ರೀತ್ ಸಿಂಗ್‌ಗೆ ಮಲಯಾಳಿಗಳು ನೀಡುತ್ತಿದ್ದಾರೆ. ರಣವೀರ್ ಅಲಹಾಬಾದಿಯನ ಹೇಳಿಕೆ ಎಷ್ಟು ಅಸಂಬದ್ದವೋ, ಅಷ್ಟೇ ಜಸ್ಪ್ರೀತ್‌ ಸಿಂಗ್‌ನ ಹೇಳಿಕೆ ಅವಹೇಳನಕಾರಿ. ಹಾಗಾಗಿ, ಆತನ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ವ್ಯಕ್ತವಾಗಿವೆ.

ಅಶ್ಲೀಲ ಹೇಳಿಕೆ: ರಣವೀರ್ ಅಲಹಾಬಾದಿಯಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...

ಜೈಲಿನಲ್ಲಿ ಕಂಬಿ ಎಣಿಸುತ್ತಿರುವ 25 ಕ್ರಿಮಿನಲ್‌ಗಳು, ದೆಹಲಿಯ ಜಂತರ್-ಮಂತರ್‌ಗೆ ಬರುಲು ಹೇಗೆ ಸಾಧ? ತನಿಖಾ ವರದಿಯಲ್ಲಿ ಬಯಲಾಯ್ತು ಪೊಲೀಸರ ಕುತಂತ್ರ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS - ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ...

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...