Homeಮುಖಪುಟದ್ವೇಷ ಅಭಿಯಾನದ ವಿರುದ್ದ 'ಸ್ನೇಹ' ನೆಟ್ಟು ಸೌಹಾರ್ದ ಪರಂಪರೆ ಎತ್ತಿಹಿಡಿದ ಕೇರಳ

ದ್ವೇಷ ಅಭಿಯಾನದ ವಿರುದ್ದ ‘ಸ್ನೇಹ’ ನೆಟ್ಟು ಸೌಹಾರ್ದ ಪರಂಪರೆ ಎತ್ತಿಹಿಡಿದ ಕೇರಳ

ಗರ್ಭಿಣಿ ಆನೆ ಸಾವಿಗೀಡಾದ ಘಟನೆಯನ್ನಿಟ್ಟುಕೊಂಡು ಕೇರಳದ ವಿರುದ್ದ ಬಲಪಂಥೀಯ ಸಂಘಟನೆಗಳು ದ್ವೇಷ ಅಭಿಯಾನವನ್ನು ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಸೌಹಾರ್ದ ಹಾಗೂ ಸಹಿಷ್ಣುತೆಯ ಸಂದೇಶವನ್ನು ಕೇರಳ ನೀಡಿದೆ.

- Advertisement -
- Advertisement -

ಗರ್ಭಿಣಿ ಆನೆಯೊಂದು ಪಟಾಕಿ ತುಂಬಿದ ಅನಾನಾಸು ತಿಂದು ಸಾವಿಗೀಡಾದ ನಂತರ ಇದರ ಬಗ್ಗೆ ನಡೆಸಲಾಗುತ್ತಿರುವ ದ್ವೇಷ ಅಭಿಯಾನದ ವಿರುದ್ದವಾಗಿ ಕೇರಳ ವಿಭಿನ್ನವಾಗಿ ಪ್ರತಿಕ್ರಿಯಿಸಿದೆ. ವಿಶ್ವ ಪರಿಸರ ದಿನಾಚರಣೆಯಾದ ಇಂದು ಕೇರಳದ ಮಲಪ್ಪುರಂ ಜಿಲ್ಲೆಯ ದೇವಾಲಯದ ಆವರಣದಲ್ಲಿ ಕೋಮು ಸೌಹಾರ್ದತೆಯ ಭಾಗವಾಗಿ ‘ಮೈತ್ರಿ’ ಎಂಬ ಸಸಿಯನ್ನು ನೆಡಲಾಗಿದೆ.

ಮಲಪ್ಪುರಂನ ಕುನ್ನುಮ್ಮಲ್ ಶ್ರೀ ತ್ರಿಪುರಾಂತಕ ದೇವಸ್ಥಾನದ ಆವರಣದಲ್ಲಿ, ದೇವಾಲಯದ ಅರ್ಚಕ ಮಣಿಕಂಡನ್ ಎಂಬಾದಿರಿ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖಂಡ ಸಯ್ಯಿದ್ ಮುನವ್ವರ್ ಅಲಿ ಶಿಹಾಬ್ ತಂಙಲ್ ಸೇರಿಕೊಂಡು ಸಪೋಟಾ ಸಸಿಗಳನ್ನು ನೆಟ್ಟು, ಅದಕ್ಕೆ ‘ಮೈತ್ರಿ’ ಎಂದು ಹೆಸರಿಟ್ಟರು. ಮಲಯಾಳಂ ಭಾಷೆಯಲ್ಲಿ ‘ಮೈತ್ರಿ’ ಎಂದರೆ ‘ಸ್ನೇಹ’ ಎಂದರ್ಥ.

ಈ ಬಗ್ಗೆ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿರುವ ಮುಸ್ಲಿಂ ಲೀಗ್ ಮುಖಂಡ ಶಿಹಾಬ್ ತಂಙಲ್ “ಈ ಸಸಿ ಬೆಳೆದು ಮರವಾಗಿ, ಪ್ರಕೃತಿ ಪ್ರೇಮದೊಂದಿಗೆ, ಸಹಿಷ್ಣುತೆಯ ಗುರುತಾಗಿ, ನಮಗೆ ಎಂದೆಂದೂ ನೆರಳಾಗಲಿ” ಎಂದು ಬರೆದಿದ್ದಾರೆ.

മലപ്പുറം-കുന്നുമ്മൽ ശ്രീ ത്രിപുരാന്തക ക്ഷേത്ര-അങ്കണത്തിൽ ലോക പരിസ്ഥിതി ദിനമായ ഇന്ന് ക്ഷേത്ര പൂജാരി ശ്രീ മണികണ്ഠൻ…

Posted by Sayyid Munavvar Ali Shihab Thangal on Thursday, June 4, 2020

 

ಗರ್ಭಿಣಿ ಕಾಡು ಆನೆಯ ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಮಲಪ್ಪುರಂ ಜಿಲ್ಲೆಯ ವಿರುದ್ಧದ ದ್ವೇಷ ಅಭಿಯಾನದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆಯು ಹೆಚ್ಚು ಮಹತ್ವ ಪಡೆದಿದೆ.

ಕೇರಳದ ಪಾಲಕ್ಕಡ್‌ನಲ್ಲಿ ಆನೆ ಸಾವನಪ್ಪಿದ ಘಟನೆ ನಡೆದರೂ ಸಹ ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿಯಾಗಿರುವ ಮನೇಕಾ ಗಾಂಧಿ, ಘಟನೆ ನಡೆದ ಸ್ಥಳವನ್ನು ಮಲಪ್ಪುರಂ ಎಂದು ತಪ್ಪಾಗಿ ಉಲ್ಲೇಖಿಸಿದ್ದರು. ಇದಕ್ಕೆ ಪ್ರಮುಖ ಕಾರಣ ಮಲಪ್ಪುರಂ ಮುಸ್ಲಿಂ ಬಾಹುಳ್ಯ ಜಿಲ್ಲೆಯಾಗಿರುವುದು. ಹಾಗಾಗಿ ಇದನ್ನು ‘ಅತ್ಯಂತ ಹಿಂಸಾತ್ಮಕ ಜಿಲ್ಲೆ’ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದರು.

ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ ಸಹ ತನ್ನ ಟ್ವೀಟ್‌ನಲ್ಲಿ ಆನೆ ಹತ್ಯೆ ಸ್ಥಳವನ್ನು ಪಾಲಕ್ಕಾಡ್‌ ಬದಲಾಗಿ ಮಲಪ್ಪುರಂ ಎಂದೇ ನಮೂದಿಸಿದ್ದರು.

ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಮಲಪ್ಪುರಂನಲ್ಲಿ ಸ್ಥಳೀಯ ಜನರಿಂದ ಗರ್ಭಿಣಿ ಆನೆಗೆ ಪಟಾಕಿ ತುಂಬಿದ ಅನಾನಸು ಹಣ್ಣನ್ನು ನೀಡಲಾಗಿದೆ ಎಂದು ಮೊದಲು ವರದಿಯಾಗಿದ್ದರೂ, ನಂತರ ಘಟನೆಯೂ ಆನೆಯೂ ಸತ್ತು ಹೋಗಿರುವುದು ಮಲಪ್ಪುರಂನಲ್ಲಿ ಅಲ್ಲ ನೆರೆಯ ಪಾಲಕ್ಕಾಡ್ ಜಿಲ್ಲೆಯಲ್ಲಿ ಎಂದು ತಿಳಿದುಬಂದಿದೆ. ಅಲ್ಲದೆ ಇದಕ್ಕೆ ಯಾರೂ ಉದ್ದೇಶ ಪೂರ್ವಕವಾಗಿ ಹಣ್ಣನ್ನು ತಿನ್ನಿಸಿಲ್ಲ, ಕಾಡುಹಂದಿಗಳಿಗೆ ಇಟ್ಟಿದ್ದ ಹಣ್ಣನ್ನು ಆನೆ ಆಕಸ್ಮಿಕವಾಗಿ ತಿಂದಿದೆ ಎಂದು ತಿಳಿದುಬಂದಿದೆ.

ಆನೆಯ ಸಾವಿಗೆ ಕಾರಣವಾದ ಒಬ್ಬ ರೈತನನ್ನು ಕೇರಳ ಪೊಲೀಸರು ಇಂದು ಬಂಧಿಸಿದ್ದಾರೆ.

“ಮಲಪ್ಪುರಂ ಯಾವಾಗಲೂ ಧಾರ್ಮಿಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂಪ್ರದಾಯವನ್ನು ಹೊಂದಿದೆ. ಆದ್ದರಿಂದ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರಮಾಣದ ದ್ವೇಷ ಅಭಿಯಾನ ನಡೆಯುತ್ತಿರುವಾಗ, ನಾವು ಅದನ್ನು ಅಂತಹದೇ ಮಾನವೀಯ ಭಾವನಾ ಸೂಚಕಗಳಿಂದ ಎದುರಿಸಬೇಕಾಗುತ್ತದೆ” ಎಂದು ಶಿಹಾಬ್ ತಂಙಲ್ ತಿಳಿಸಿದ್ದಾರೆ ಎಂದು ಒಮನೋರಮ ವರದಿ ಮಾಡಿದೆ.

ಇಂತಹ ಘಟನೆಯ ಭಾಗವಾಗಲು ತುಂಬಾ ಸಂತೋಷವಾಗಿದೆ ಎಂದು ದೇವಾಲಯದ ಅರ್ಚಕ ಮಣಿಕಂಡನ್ ಎಂಬಾದಿರಿ ಹೇಳಿದರು. “ನಾವು ಎಂದಿಗೂ ಇತರ ಸಮುದಾಯಗಳಿಂದ ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿಲ್ಲ. ಇಲ್ಲಿ ನಾವು ಯಾವಾತ್ತೂ  ಸೌಹಾರ್ದಯುತವಾಗಿ ವಾಸಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಕೇರಳದ ಧಾರ್ಮಿಕ ಸಹಬಾಳ್ವೆಯ ಪರಂಪರೆಯನ್ನು ಜಗತ್ತಿಗೆ ಪ್ರದರ್ಶಿಸುವ ಒಂದು ಹೆಜ್ಜೆಯಾಗಿ ದೇವಾಲಯದ ಅಂಗಳದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಮುಸ್ಲಿಂ ಲೀಗ್ ಪಕ್ಷದ ಯುವಜನ ವಿಭಾಗವಾದ ‘ಯೂತ್ ಲೀಗ್’ ಆಯೋಜಿಸಿತ್ತು.


ಓದಿ:  3 ಶಂಕಿತರಿದ್ದಾರೆ: ಗರ್ಭಿಣಿ ಆನೆ ಹತ್ಯೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿಕೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...