Homeಮುಖಪುಟಕ್ಯಾಮರಾ ಎದುರಲ್ಲೇ ಅಧಿಕಾರಿಗೆ ಚಪ್ಪಲಿಯಲ್ಲಿ ಹೊಡೆದ ಬಿಜೆಪಿ ನಾಯಕಿ

ಕ್ಯಾಮರಾ ಎದುರಲ್ಲೇ ಅಧಿಕಾರಿಗೆ ಚಪ್ಪಲಿಯಲ್ಲಿ ಹೊಡೆದ ಬಿಜೆಪಿ ನಾಯಕಿ

ಟಿಕ್ ಟಾಕ್ ತಾರೆಯಾಗಿದ್ದ ಇವರು ಬಿಜೆಪಿ ಅಭ್ಯರ್ಥಿಯಾಗಿ 2019 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

- Advertisement -
- Advertisement -

ಕ್ಯಾಮರಾ ಎದುರಲ್ಲೇ ಬಿಜೆಪಿ ನಾಯಕಿ ಹಾಗೂ ಟಿಕ್‌ಟಾಕ್ ತಾರೆಯೂ ಆಗಿರುವ ಸೋನಾಲಿ ಫೋಗಾಟ್ ಹರಿಯಾಣದಲ್ಲಿ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ತನ್ನ ವಿರುದ್ದ ಅನುಚಿತ ವರ್ತನೆ ಮಾಡಿದ್ದಕ್ಕಾಗಿ ಚಪ್ಪಲಿಯಿಂದ ಅಧಿಕಾರಿಗೆ ಥಳಿಸಿದ್ದಾರೆ ಎನ್ನಲಾಗಿದ್ದು ವಿಡಿಯೋ ಈಗ ವೈರಲಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿ 2019 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೋನಾಲಿ ಫೊಗಾಟ್ ರೈತರ ಮಾರುಕಟ್ಟೆಯನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯ ಸದಸ್ಯರಾದ ಸುಲ್ತಾನ್ ಸಿಂಗ್ ಅವರೊಂದಿಗೆ ರೈತರ ದೂರುಗಳ ಪಟ್ಟಿಯೊಂದಿಗೆ ಹೋದಾಗ ಈಘಟನೆ ನಡೆದಿದ್ದು, ಸೋನಾಲಿಯವರನ್ನು ಅಧಿಕಾರಿಯೂ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ಸೋನಾಲಿ ಫೋಗಾಟ್ ಅಧಿಕಾರಿಯನ್ನು ನಿಂದಿಸಿ ಥಳಿಸಲು ಪ್ರಾರಂಭಿಸಿದ್ದಾರೆ. ಅಧಿಕಾರಿಯು ತನ್ನ ದೂರುಗಳನ್ನು ತಿರಸ್ಕರಿಸುತ್ತಿದ್ದಾನೆ ಎಂದು ಸೋನಾಲಿ ಕೋಪಗೊಂಡಿದ್ದರು. ಪೊಲೀಸರು ಆಗಮಿಸಿದ ನಂತರ ಪರಿಸ್ಥಿತಿ ತಿಳಿಯಾಗಿದೆ ಎನ್ನಲಾಗಿದೆ.

ಟಿಕ್‌ಟಾಕ್‌ನಲ್ಲಿ ಜನಪ್ರಿಯರಾಗಿದ್ದ ಸೋನಾಲಿ ಫೋಗಾಟ್ ಕಳೆದ ವರ್ಷ ತನ್ನ ಸಹೋದರಿ ಮತ್ತು ಸೋದರ ಮಾವ ತನ್ನ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು.

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಸೊನಾಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.

“ಖಟ್ಟರ್ ಸರ್ಕಾರದ ವಾಕರಿಕೆ ಕಾರ್ಯಗಳು! ಹಿಸಾರ್‌ನ ಬಿಜೆಪಿ ಮುಖಂಡೆ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯನ್ನು ಪ್ರಾಣಿಗಳಂತೆ ಹೊಡೆಯುತ್ತಿದ್ದಾರೆ. ಸರ್ಕಾರಿ ನೌಕರರಾಗಿರುವುದು ಅಪರಾಧವೇ? ಖಟ್ಟರ್ ಸಹಾಬ್ ಕ್ರಮ ತೆಗೆದುಕೊಳ್ಳುತ್ತಾರೆಯೇ? ಮಾಧ್ಯಮಗಳು ಮೌನವಾಗಿ ಉಳಿಯುತ್ತವೆಯೇ?” ಎಂದು ಟ್ವೀಟ್ ಮಾಡಿದ್ದಾರೆ.


ಓದಿ: ವೈಯಕ್ತಿಕ ಸುರಕ್ಷತೆಯಿಲ್ಲವೆಂದು ಹರಿಯಾಣದ ಮಹಿಳಾ ಐಎಎಸ್ ಅಧಿಕಾರಿ ರಾಜಿನಾಮೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...