Homeಮುಖಪುಟ3 ಶಂಕಿತರಿದ್ದಾರೆ: ಗರ್ಭಿಣಿ ಆನೆ ಹತ್ಯೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿಕೆ

3 ಶಂಕಿತರಿದ್ದಾರೆ: ಗರ್ಭಿಣಿ ಆನೆ ಹತ್ಯೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿಕೆ

- Advertisement -
- Advertisement -

ಸ್ಫೋಟಕ ತುಂಬಿದ ಅನಾನಸ್ ತಿಂದು ಮೃತಪಟ್ಟ ಗರ್ಭಿಣಿ ಆನೆ ಹತ್ಯೆಯ ತನಿಖೆಯಲ್ಲಿ ಮೂವರು ಶಂಕಿತರನ್ನು ಗುರುತಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆನೆ ಸಾವಿನ ಕುರಿತು ದೇಶಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶಗಳ ಹಿನ್ನೆಲೆಯಲ್ಲಿ “ನ್ಯಾಯ ಮೇಲುಗೈ ಸಾಧಿಸುತ್ತದೆ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

“ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಒಂದು ದುರಂತ ಘಟನೆಯಲ್ಲಿ, ಗರ್ಭಿಣಿ ಆನೆಯೊಂದು ಪ್ರಾಣ ಕಳೆದುಕೊಂಡಿದೆ. ಹಲವರು ಈ ಬಗ್ಗೆ ದುಃಕ ವ್ಯಕ್ತಪಡಿಸಿದ್ದಾರೆ. ನಿಮ್ಮ ಕಾಳಜಿ ವ್ಯರ್ಥವಾಗುವುದಿಲ್ಲ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ”  ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಮೂವರು ಶಂಕಿತರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಘಟನೆ ತನಿಖೆ ನಡೆಸಲಿವೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಜಿಲ್ಲಾ ಅರಣ್ಯ ಅಧಿಕಾರಿ ಇಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪರಾಧಿಗಳಿಗೆ ಶಿಕ್ಷೆಯಾಗಲು ನಾವು ಎಲ್ಲವನ್ನು ಮಾಡುತ್ತೇವೆ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈ ಕುರಿತು ನಿನ್ನೆ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಈ ದುರಂತದ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ ಎಂದು ಟ್ವೀಟ್ ಮಾಡಿದ್ದರು.

ಪಟಾಕಿಗಳನ್ನು ಇಟ್ಟು ಕೊಲ್ಲುವುದು ಭಾರತೀಯ ಸಂಸ್ಕೃತಿಯಲ್ಲ, ಕೇರಳದ ಮಲಪ್ಪುರಂನ ಆನೆ ಹತ್ಯೆ ಘಟನೆಯನ್ನು ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ತನಿಖೆಯಲ್ಲಿ ಒಂದು ಕಲ್ಲನ್ನು ಸಹ ಬಿಡಲಾಗುವುದಿಲ್ಲ. ಖಂಡಿತ ಬಂಧಿಸಲಾಗುವುದು” ಎಂದು ಜಾವಡೇಕರ್‌ ಟ್ವೀಟ್‌ ಮಾಡಿದ್ದರು. ಆದರೆ ಸಚಿವರ ಹೇಳಿಕೆಯಲ್ಲಿ ಘಟನೆ ನಡೆದ ಸ್ಥಳವು ಪಾಲಕ್ಕಾಡ್‌ ಬದಲಾಗಿ ಮಲಪ್ಪುರಂ ಎಂದು ತಪ್ಪಾಗಿ ನಮೂದಾಗಿದೆ.

ಕಳೆದ ಬುಧವಾರ ಪಾಲಕ್ಕಾಡ್‌ನ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಳಿಯ ಹಳ್ಳಿಯೊಂದಕ್ಕೆ ಕಾಡು ಆನೆಯೊಂದು ದಾರಿ ತಪ್ಪಿ ಬಂದಿದೆ. ಅದು ಪಟಾಕಿ ತುಂಬಿದ ಅನಾನಸ್ ತಿಂದ ಕಾರಣ ಅದರ ಬಾಯಿ ಸ್ಪೋಟಗೊಂಡಿದೆ ಎನ್ನಲಾಗಿದೆ. ಆನಂತರ ಅದು ನೋವು ತಾಳಲಾರದೇ ನದಿಗೆ ಹೋಗಿ ವಿರಮಿಸಲು ಯತ್ನಿಸಿ ಅಲ್ಲೇ ತಾನ್ನ ಪ್ರಾಣ ಬಿಟ್ಟಿದೆ.

ಈ ಪ್ರದೇಶದ ಹಳ್ಳಿಗರು ತಮ್ಮ ಹೊಲಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ಪಟಾಕಿ ಅಥವಾ ಸ್ಫೋಟಕ ತುಂಬಿದ ಹಣ್ಣುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಆನೆ ಹತ್ಯೆಯ ಬಳಿಕೆ ಅದನ್ನು ಕ್ರೂರ ವರ್ತನೆ ಎಂದು ವ್ಯಾಪಕವಾಗಿ ಖಂಡಿಸಲಾಗಿದೆ.


ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆ: ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಕಿಡಿಕಾರಿದ ನೆಟ್ಟಿಗರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...