Homeಅಂತರಾಷ್ಟ್ರೀಯ’ನಮ್ಮನ್ನ ಕ್ಷಮಿಸಿ’: ಗಾಂಧಿ ಶಿಲ್ಪ ವಿರೂಪ ಘಟನೆಗೆ ಅಮೆರಿಕ ರಾಯಭಾರಿ ಕ್ಷಮೆಯಾಚನೆ

’ನಮ್ಮನ್ನ ಕ್ಷಮಿಸಿ’: ಗಾಂಧಿ ಶಿಲ್ಪ ವಿರೂಪ ಘಟನೆಗೆ ಅಮೆರಿಕ ರಾಯಭಾರಿ ಕ್ಷಮೆಯಾಚನೆ

- Advertisement -
- Advertisement -

ಅಮೆರಿಕದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಭಾರತೀಯ ರಾಯಭಾರಿ ಕೆನ್ ಜಸ್ಟರ್ ಕ್ಷಮೆಯಾಚಿಸಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ರಾಯಭಾರಿ ಕಚೇರಿ ಇದ್ದು, ಕಚೇರಿ ಎದುರು ಇರುವ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ಪೊಲೀಸರು ತಿಳಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದ ಅಮೇರಿಕಾ ರಾಯಭಾರಿ “ವಾಷಿಂಗ್ಟನ್ ಡಿ.ಸಿ ಯಲ್ಲಿ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿರುವುದಕ್ಕೆ ಕ್ಚಮೆಯಿರಲಿ. ದಯವಿಟ್ಟು ನಮ್ಮ ಪ್ರಾಮಾಣಿಕ ಕ್ಷಮೆಯಾಚನೆಯನ್ನು ಸ್ವೀಕರಿಸಿ. ಜಾರ್ಜ್ ಫ್ಲಾಯ್ಡ್ ಅವರ ಭೀಕರ ಸಾವು, ಭೀಕರವಾದ ಹಿಂಸೆ ಮತ್ತು ವಿಧ್ವಂಸಕತೆಯಿಂದ ದಿಗ್ಭ್ರಮೆಯಾಗಿದೆ. ಯಾವುದೇ ರೀತಿಯ ಪೂರ್ವಾಗ್ರಹ ಮತ್ತು ತಾರತಮ್ಯದ ವಿರುದ್ಧ ನಾವು ನಿಲ್ಲುತ್ತೇವೆ. ನಾವು ಚೇತರಿಸಿಕೊಳ್ಳುತ್ತೇವೆ ಮತ್ತು ಉತ್ತಮವಾಗುತ್ತೇವೆ ” ಎಂದು ಅವರು ಹೇಳಿದ್ದಾರೆ.

ಮೇ 25 ರಂದು ಆಫ್ರಿಕನ್ ಜನಾಂಗಕ್ಕೆ ಸೇರಿದ ಜಾರ್ಜ್ ಫ್ಲಾಯ್ಡ್ ಎಂಬವರನ್ನು ವಿನಿಯಾಪೊಲೀಸ್ ಎಂಬಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹತ್ಯೆ ಮಾಡಿದ್ದರು. ರಸ್ತೆಯ ಮೇಲೆ ಜಾರ್ಜ್ ಅವರನ್ನು ಮಲಗಿಸಿ ಅವರ ಕತ್ತಿನ ಮೇಲೆ ಕಾಲನ್ನು ಒತ್ತಿ ಹಿಡಿದ ಪರಿಣಾಮ ಉಸಿರುಗಟ್ಟಿ ಅವರು ಮೃತಪಟ್ಟಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಅಮೆರಿಕದಾದ್ಯಂತ #blacklivesmatter ಎಂಬ ಘೋಷಣೆಯಡಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಈ ಸಮಯದಲ್ಲಿ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು.

ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್‌ನ ಪ್ರಕಾರ, ಮಹಾತ್ಮ ಗಾಂಧಿಯವರ ಶಿಲ್ಪವನ್ನು ಕಂಚಿನಲ್ಲಿ ನಿರ್ಮಿಸಲಾಗಿದ್ದು, 8 ಅಡಿ 8 ಇಂಚುಗಳಷ್ಟು ಎತ್ತರವನ್ನು ಹೊಂದಿದೆ.


ಓದಿ: ಫ್ಪಾಯ್ಡ್ ಸಾವಿಗೆ ಮರುಗಿದ ಪ್ರಿಯಾಂಕ ಚೋಪ್ರಾರವರೆ, ನಿಮ್ಮ ದೇಶದ ಬಗ್ಗೆ ಏನು ಹೇಳುತ್ತೀರಿ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...