ಕೋಚ್-ರಾಜ್‌ಬೋಂಗ್ಶಿ ಸಮುದಾಯದ ಸದಸ್ಯರ ವಿರುದ್ಧ ವಿದೇಶಿಯರ ನ್ಯಾಯಮಂಡಳಿಗಳಲ್ಲಿ ಬಾಕಿ ಇರುವ ಸುಮಾರು 28,000 ಪ್ರಕರಣಗಳನ್ನು ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು “ಐತಿಹಾಸಿಕ” ಎಂದು ಬಣ್ಣಿಸಿದ್ದಾರೆ.
ಅಸ್ಸಾಂ ಸರ್ಕಾರ ಕೋಚ್-ರಾಜ್‌ಬೋಂಗ್‌ಶಿಯನ್ನು ರಾಜ್ಯದ ಸ್ಥಳೀಯ ಸಮುದಾಯವೆಂದು ಪರಿಗಣಿಸುತ್ತದೆ. ಕೋಚ್-ರಾಜ್ಬೋಂಗ್ಶಿ ಜನರು ರಾಜ್ಯದ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಅವರು ಹೇಳಿದ್ದಾರೆ. ಮತದಾರರ ಪಟ್ಟಿಯಲ್ಲಿರುವ ಅವರ ಹೆಸರಿನ ವಿರುದ್ಧ “ಡಿ ಮತದಾರರು (ಸಂಶಯಾಸ್ಪದ ಮತದಾರರು)” ಟ್ಯಾಗ್‌ಗಳನ್ನು ತೆಗೆದುಹಾಕುವುದನ್ನು ರಾಜ್ಯ ಸರ್ಕಾರ ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಮುದಾಯದ ಸದಸ್ಯರು ದೀರ್ಘಕಾಲದಿಂದ ಬಳಲುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿಸ್ವಾ ಶರ್ಮಾ ಹೇಳಿದ್ದಾರೆ. ಇಂದಿನಿಂದ, ಕೋಚ್-ರಾಜ್ಬೋಂಗ್ಶಿ ಜನರು “ವಿದೇಶಿ” ಟ್ಯಾಗ್ ಅನ್ನು ಹೊಂದಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ವಿದೇಶಿಯರ ನ್ಯಾಯಮಂಡಳಿಗಳು ಶಂಕಿತ ಅಕ್ರಮ ವಲಸಿಗರ ಪ್ರಕರಣಗಳನ್ನು ನಿಭಾಯಿಸುವ ಮತ್ತು ಅವರು ಭಾರತೀಯ ನಾಗರಿಕರೇ ಅಥವಾ ವಿದೇಶಿಯರೇ ಎಂದು ನಿರ್ಧರಿಸುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ. ಈ ನ್ಯಾಯಮಂಡಳಿಗಳನ್ನು 1946 ರ ವಿದೇಶಿಯರ ಕಾಯ್ದೆ ಮತ್ತು 1964 ರ ವಿದೇಶಿಯರ (ನ್ಯಾಯಮಂಡಳಿಗಳು) ಆದೇಶದ ಅಡಿಯಲ್ಲಿ ಸ್ಥಾಪಿಸಲಾಯಿತು. ಕೋಚ್-ರಾಜ್‌ಬೊಂಗ್ಶಿ ಜನರು ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್‌ನ ಕೆಲವು ಭಾಗಗಳಲ್ಲಿ ಹರಡಿಕೊಂಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ವಲಸೆ ಮತ್ತು ವಿದೇಶಿಯರ ಮಸೂದೆ-2025’ ಅನುಮೋದಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
‘ವಲಸೆ ಮತ್ತು ವಿದೇಶಿಯರ ಮಸೂದೆ-2025’ ಅನುಮೋದಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

