Homeಕರ್ನಾಟಕಕರ್ನಾಟಕದಲ್ಲಿ ಶೇ.70 ರಷ್ಟು ತಾಯಂದಿರ ಸಾವುಗಳನ್ನು ತಪ್ಪಿಸಬಹುದಾಗಿತ್ತು: ವರದಿ

ಕರ್ನಾಟಕದಲ್ಲಿ ಶೇ.70 ರಷ್ಟು ತಾಯಂದಿರ ಸಾವುಗಳನ್ನು ತಪ್ಪಿಸಬಹುದಾಗಿತ್ತು: ವರದಿ

- Advertisement -
- Advertisement -

2024 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ ಕರ್ನಾಟಕದಲ್ಲಿ ಸಂಭವಿಸಿದ ಶೇ.70 ಕ್ಕೂ ಹೆಚ್ಚು ತಾಯಂದಿರ ಸಾವುಗಳನ್ನು ತಡೆಯಬಹುದಿತ್ತು ಎಂದು ರಾಜ್ಯದಲ್ಲಿ ತಾಯಂದಿರ ಮರಣಗಳ ಕುರಿತಾದ ಮಧ್ಯಂತರ ಲೆಕ್ಕಪರಿಶೋಧನಾ ವರದಿ ಹೇಳಿದೆ.

ಶುಕ್ರವಾರ 18 ಪುಟಗಳ ಮಧ್ಯಂತರ ವರದಿಯನ್ನು ಮಂಡಿಸಿದ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂಬತ್ತು ತಿಂಗಳ ಈ ಅವಧಿಯಲ್ಲಿ ಒಟ್ಟು 464 ತಾಯಂದಿರ ಸಾವುಗಳನ್ನು ಲೆಕ್ಕಪರಿಶೋಧಿಸಲಾಗಿದ್ದು, ಬೆಂಗಳೂರು ನಗರ (71), ಬಳ್ಳಾರಿ (38), ಧಾರವಾಡ (35), ಕಲಬುರಗಿ (33), ಮತ್ತು ಬೆಳಗಾವಿ (31) ಅತಿ ಹೆಚ್ಚು ದಾಖಲಾಗಿವೆ. ಇದರಲ್ಲಿ ಇತರ ರಾಜ್ಯಗಳ 18 ಮಹಿಳೆಯರ ಸಾವುಗಳು ಸಹ ಸೇರಿವೆ.

ಸಾವುಗಳಲ್ಲಿ ಸುಮಾರು ಶೇ.80 ರಷ್ಟು 19 ಮತ್ತು 30 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸಂಭವಿಸಿವೆ. ಪ್ರಸವಪೂರ್ವ ಆರೈಕೆಯ ಸಮಯದಲ್ಲಿ ಸಾವನ್ನಪ್ಪಿದ ಮಹಿಳೆಯರಲ್ಲಿ ಸುಮಾರು 62.6% ರಷ್ಟು ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದರು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಳು ಹುಡುಗಿಯರು ಸಹ ಈ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆದ ಐದು ತಾಯಂದಿರ ಮರಣದ ನಂತರ, ಎಲ್ಲಾ ತಾಯಂದಿರ ಮರಣಗಳ ಸಂಭವನೀಯ ಕಾರಣಗಳನ್ನು ಗುರುತಿಸಲು ಇಲಾಖೆಯು 15 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತು. ಬಳ್ಳಾರಿಯ ತಾಯಂದಿರ ಮರಣಗಳು ಎಂಡೋಟಾಕ್ಸಿನ್‌ಗಳಿಂದಾಗಿ ‘ಹೆಚ್ಚಾಗಿ’ ಸಂಭವಿಸಿವೆ. ಪಶ್ಚಿಮ ಬಂಗಾ ಫಾರ್ಮಾಸ್ಯುಟಿಕಲ್ಸ್‌ನ ಕಳಪೆ-ಗುಣಮಟ್ಟದ ರಿಂಗರ್ಸ್ ಲ್ಯಾಕ್ಟೇಟ್ ದ್ರಾವಣಕ್ಕೆ ಸಂಬಂಧಿಸಿವೆ ಎಂದು ಸಮಿತಿ ಕಂಡುಕೊಂಡಿದೆ.

ಏಪ್ರಿಲ್ ಮತ್ತು ಡಿಸೆಂಬರ್ ನಡುವೆ, ಅದೇ ಕಂಪನಿಯ ರಿಂಗರ್ಸ್ ಲ್ಯಾಕ್ಟೇಟ್ ಇತರ 13 ಸಾವುಗಳಿಗೆ ಸಂಬಂಧಿಸಿದೆ ಎಂದು ಅವರು ಕಂಡುಕೊಂಡರು. ರಾಯಚೂರು ಮತ್ತು ಬೆಂಗಳೂರು ನಗರದಲ್ಲಿ ತಲಾ ನಾಲ್ಕು, ಉತ್ತರ ಕನ್ನಡದಲ್ಲಿ ಮೂರು ಮತ್ತು ಯಾದಗಿರಿ ಮತ್ತು ಬೆಳಗಾವಿಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.

2024-25ರ ವೇಳೆಗೆ ರಾಜ್ಯದ ತಾಯಂದಿರ ಮರಣ ಪ್ರಮಾಣ (ಎಂಎಂಆರ್‌) 57 ರಷ್ಟಿದೆ, ತಡೆಗಟ್ಟಬಹುದಾದ ತಾಯಂದಿರ ಮರಣಗಳನ್ನು ಶೂನ್ಯಕ್ಕೆ ತರುವ ಇಲಾಖೆಯ ರೂ. 320 ಕೋಟಿ ಮಿಷನ್ ನಡೆಯುತ್ತಿದೆ ಎಂದು ಗುಂಡೂ ರಾವ್ ಹೇಳಿದ್ದಾರೆ. ಎರಡು ವರ್ಷಗಳಲ್ಲಿ ಎಂಎಂಆರ್‌ ಅನ್ನು ಕೇರಳದ 19 ಕ್ಕೆ ಸಮನಾಗಿಸುವ ಗುರಿಯನ್ನು ಅವರು ಹೊಂದಿರುವುದಾಗಿ ಸಚಿವರು ತಿಳಿಸಿದ್ದಾರೆ.

ಕರ್ನಾಟಕವು ಈ ವರ್ಷದ ಮೊದಲ ಮೂರು ತಿಂಗಳಲ್ಲಿ 102 ತಾಯಂದಿರ ಸಾವುಗಳನ್ನು ವರದಿ ಮಾಡಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 148 ಸಾವುಗಳು ಸಂಭವಿಸಿದ್ದವು.

ಲೆಕ್ಕಪರಿಶೋಧನೆಯ ಹಲವು ವಿವರಗಳಲ್ಲಿ, ಸಾವನ್ನಪ್ಪಿದ 319 ಮಹಿಳೆಯರು (68.75%) ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ಹೊಂದಿದ್ದರು ಎಂದು ಕಂಡುಬಂದಿದೆ. ಇದರಲ್ಲಿ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಅಸ್ವಸ್ಥತೆ ಹೊಂದಿರುವ 153 ಮಹಿಳೆಯರು (33%) ಮತ್ತು ರಕ್ತಸ್ರಾವದಿಂದ ಸಾವನ್ನಪ್ಪಿದ 125 ಮಹಿಳೆಯರು (27%) ಸೇರಿದ್ದಾರೆ. ಸೆಪ್ಸಿಸ್ (9%), ಹೃದಯ ಸಮಸ್ಯೆಗಳು (4%), ಸೋಂಕುಗಳು (4%), ಪಲ್ಮನರಿ ಎಂಬಾಲಿಸಮ್ (3%) ಸೇರಿದಂತೆ ಇತರ ಕಾರಣಗಳನ್ನು ಗುರುತಿಸಲಾಗಿದೆ.

ಅಪಾಯಕಾರಿ ಅಂಶಗಳಿಗೆ ಮೊದಲೇ ಚಿಕಿತ್ಸೆ ನೀಡಿ, ಎಸ್‌ಒಪಿಗಳನ್ನು ಅಳವಡಿಸಿಕೊಂಡಿದ್ದರೆ; ರಕ್ತ ನಿಧಿಗಳು ಮತ್ತು ಇತರ ಉಪಕರಣಗಳನ್ನು ಸಿದ್ಧವಾಗಿರಿಸಿದ್ದರೆ, ಪ್ರಸವಪೂರ್ವ ಆರೈಕೆಯನ್ನು ಸುಧಾರಿಸಿದ್ದರೆ ಮತ್ತು ನೈಸರ್ಗಿಕ ಜನನಗಳನ್ನು ಉತ್ತೇಜಿಸಿದ್ದರೆ, ಕನಿಷ್ಠ 70% ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಸಮಿತಿಯು ಕಂಡುಹಿಡಿದಿದೆ.

ಮೊದಲ ತ್ರೈಮಾಸಿಕದಲ್ಲಿ ಎಲ್ಲ ಗರ್ಭಿಣಿಯರನ್ನು ಹೆಚ್ಚಿನ ಅಪಾಯಕಾರಿ ಅಂಶಗಳಿಗಾಗಿ ಪರೀಕ್ಷಿಸುವುದು, ಅಸ್ತಿತ್ವದಲ್ಲಿರುವ ಸೋಂಕುಗಳನ್ನು (ಎಚ್‌ಐವಿ, ಸಿಫಿಲಿಸ್, ಟಿಬಿ, ಹೆಪಟೈಟಿಸ್ ಇತ್ಯಾದಿ) ಮೇಲ್ವಿಚಾರಣೆ ಮಾಡುವುದು, ರಕ್ತ ಸಂಗ್ರಹ ಘಟಕಗಳು ಮತ್ತು ರಾಜ್ಯಾದ್ಯಂತ ಔಷಧಗಳು ಮತ್ತು ಇತರ ಉಪಕರಣಗಳನ್ನು ಬಲಪಡಿಸುವುದು; ಸಾಮಾನ್ಯ ಹೆರಿಗೆಗಳಿಗೆ ಮೂರು ದಿನಗಳ ಆಸ್ಪತ್ರೆ ವಾಸ್ತವ್ಯ ಮತ್ತು ಸಿ-ಸೆಕ್ಷನ್ ನಂತರ ಏಳು ದಿನಗಳವರೆಗೆ ಕಡ್ಡಾಯಗೊಳಿಸುವುದು ಸೇರಿದಂತೆ ತಾಯಂದಿರ ಮರಣವನ್ನು ಕಡಿಮೆ ಮಾಡಲು 27 ಶಿಫಾರಸುಗಳನ್ನು ಸಮಿತಿ ಪಟ್ಟಿ ಮಾಡಿದೆ.

“ರಕ್ತಹೀನತೆಯ ಚಿತಿತ್ಸೆಗೆ ನಾವು ಈಗ ಎಫ್‌ಸಿಎಂ (ಫೆರಿಕ್ ಕಾರ್ಬಾಕ್ಸಿಮಾಲ್ಟೋಸ್) ಇಂಜೆಕ್ಷನ್ ಅನ್ನು ಖರೀದಿಸುತ್ತಿದ್ದೇವೆ. ಎರಡನೇ ಮತ್ತು ಏಳನೇ ತಿಂಗಳ ನಡುವೆ, ಪ್ರತಿ ಪ್ರಸವಪೂರ್ವ ತಾಯಿಗೆ ಮಾಸಿಕವಾಗಿ (ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರಿಂದ) ಸಲಹೆ ನೀಡಬೇಕು, ಎಂಟನೇ ತಿಂಗಳಲ್ಲಿ ಎರಡು ಬಾರಿ ಮತ್ತು ಒಂಬತ್ತನೇ ತಿಂಗಳಲ್ಲಿ ವಾರಕ್ಕೊಮ್ಮೆ ನೀಡಬೇಕು” ಎಂದು ಗುಂಡೂರಾವ್ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ರಾಜ್ಯದ ಎಂಎಂಆರ್ ಕುಸಿಯುತ್ತಿದ್ದರೂ, “ವ್ಯವಸ್ಥಿತ ವೈಫಲ್ಯಗಳನ್ನು” ಪರಿಹರಿಸಲು ಬಹಳಷ್ಟು ಮಾಡಬೇಕಾಗಿದೆ ಎಂಬುದನ್ನು ಗುಂಡೂರಾವ್ ಗಮನಿಸಿದರು.

464 ಸಾವುಗಳಲ್ಲಿ 65.7% ಸರ್ಕಾರಿ ಸೌಲಭ್ಯದಲ್ಲಿ, 22.1% ಖಾಸಗಿ ಸೌಲಭ್ಯಗಳಲ್ಲಿ ಮತ್ತು ಸುಮಾರು 10% ಮನೆಯಿಂದ ಆಸ್ಪತ್ರೆಗೆ ಅಥವಾ ಆಸ್ಪತ್ರೆಗಳ ನಡುವೆ ಸಾಗಣೆಯಲ್ಲಿ ಸಂಭವಿಸಿದೆ. “10 ಪ್ರಕರಣಗಳಲ್ಲಿ, ವೈದ್ಯರ ನಿರ್ಲಕ್ಷ್ಯ ಕಂಡುಬಂದಿದೆ, ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಅವರಿಗೆ ನೋಟಿಸ್‌ಗಳನ್ನು ಸಲ್ಲಿಸಿದ್ದೇವೆ” ಎಂದು ಅವರು ಹೇಳಿದರು.

ಸೌಜನ್ಯ ಪ್ರಕರಣ | ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ಪ್ರತಿಭಟನೆಗೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...

ಅಯೋಧ್ಯೆ ದೇಣಿಗೆ ಹಗರಣ: ಕೇವಲ 45 ದಿನಗಳಲ್ಲಿ 70 ಬಾರಿ ಕಳ್ಳತನ, SIT ವರದಿ

ಅಯೋಧ್ಯೆಯ ರಾಮಮಂದಿರಕ್ಕೆ ಬಂದ ಸಾರ್ವಜನಿಕರ ದೇಣಿಗೆ ದುರುಪಯೋಗದ ಆರೋಪದ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಕೇವಲ 45 ದಿನಗಳಲ್ಲಿ ಸುಮಾರು 70 ಸಂಶಯಾಸ್ಪದ ಕಳ್ಳತನಗಳು ನಡೆದಿರುವುದಕ್ಕೆ ಪ್ರಾಥಮಿಕ...

ಬರುಯಿಪುರ ಅತ್ಯಾಚಾರ-ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಎನ್‌ಕೌಂಟರ್; ‘ನನ್ನ ಮಗನ ಶವ ನನಗೆ ಬೇಡ’ ಎಂದ ಹೆತ್ತ ತಾಯಿ!

ಬರುಯಿಪುರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡೋಲ್ ಬುಧವಾರ...

ವಯನಾಡ್ ಭೂಕುಸಿತ: ಕಾಣೆಯಾದ ಐವರಿಗಾಗಿ ಮುಂದುವರೆದ ಹುಡುಕಾಟ

ಬೆಟ್ಟದ ಜಿಲ್ಲೆಯ ವಯನಾಡ್‌ನಲ್ಲಿ ನಡೆಯುತ್ತಿರುವ ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಮೂರು ಜೀವಗಳು ಬಲಿಯಾದ ಒಂದು ದಿನದ ನಂತರ, ಕಾಣೆಯಾಗಿರುವ ಐವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವಯನಾಡ್...

ನನ್ನನ್ನು ಕೊಂಡುಕೊಳ್ಳಲು ಯಾರ ಕೈಲೂ ಸಾಧ್ಯವಿಲ್ಲ: ಮಹುವಾ ಮೋಯಿತ್ರಾ ವಿಶೇಷ ಸಂದರ್ಶನ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಯಭೇರಿ ಬಾರಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಧೂಳೀಪಟವಾಗಿದೆ. ಚುನಾವಣಾ ಸೋಲಿನ ನಂತರ ಸಾಲು...

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ 'ಸಟ್ಲಜ್' (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು...

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...