Homeಕರ್ನಾಟಕಕೋಡಿಹಳ್ಳಿ ಚಂದ್ರಶೇಖರ್‌‌ ಕಳ್ಳ ಎಂದು ಗೊತ್ತಿತ್ತು; ಅದಕ್ಕಾಗಿ 2011 ರಿಂದ ದೂರವಿಟ್ಟಿದ್ದೆವು: ರೈತ ಮುಖಂಡ ಬಡಗಲಪುರ...

ಕೋಡಿಹಳ್ಳಿ ಚಂದ್ರಶೇಖರ್‌‌ ಕಳ್ಳ ಎಂದು ಗೊತ್ತಿತ್ತು; ಅದಕ್ಕಾಗಿ 2011 ರಿಂದ ದೂರವಿಟ್ಟಿದ್ದೆವು: ರೈತ ಮುಖಂಡ ಬಡಗಲಪುರ ನಾಗೇಂದ್ರ ಆಕ್ರೋಶ

- Advertisement -
- Advertisement -

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ದ ಕೇಳಿ ಬಂದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಿ, ಮೈಸೂರಿನ ನ್ಯಾಯಾಲಯದ ಬಳಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ಮುಂದಾಳತ್ವದಲ್ಲಿ ರೈತರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯ ನಂತರ ರೈತರು ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಒತ್ತಾಯದ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಡಗಲಪುರ ನಾಗೇಂದ್ರ ಅವರು,“ಕೋಡಿಹಳ್ಳಿ ಚಂದ್ರಶೇಖರ್‌ ಎಂಬ ವ್ಯಕ್ತಿ ಹಸಿರು ಟವೆಲ್ ಹಾಕಿಕೊಂಡು ಒಂದು ಡೀಲ್‌‌ಗೆ ಮಾಡುವುದರ ಮೂಲಕ ಇಡೀ ರೈತ ಕುಲಕ್ಕೆ ಅಪಮಾನವಾಗಿದ್ದಾರೆ. ತ್ಯಾಗ ಬಲಿದಾನದ ಮೂಲಕ ಕಟ್ಟಿದ್ದಂತಹ ರೈತ ಚಳವಳಿಗೆ ದ್ರೋಹ ಎಸಗಿದ್ದಾರೆ. ಆತ ಕಳ್ಳ ಎಂದು ನಮಗೆ ಗೊತ್ತಿತ್ತು. ಅದಕ್ಕೆ ನಾವು 2011 ರಿಂದ ನಾವು ದೂರ ಇಟ್ಟಿದ್ದೆವು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ತಾನೇ ಸ್ವಯಂ ಅಧ್ಯಕ್ಷ ಎಂದು ಘೋಷಿಸಿ ಗುಂಪು ಕಟ್ಟಿಕೊಂಡು ರೈತ ಚಳವಳಿಯ ಹೆಸರಿನಲ್ಲಿ ದಂಧೆಕೋರತನ ಮಾಡಿದ್ದಾರೆ. ಬಹಳಷ್ಟು ಅನುಮಾನಗಳು, ಚರ್ಚೆಗಳು ಈ ಬಗ್ಗೆ ನಡೆಯುತ್ತಿತ್ತು. ಆದರೆ ಖಾಸಗಿ ಚಾನೆಲ್ ಅದನ್ನು ಸ್ಟಿಂಗ್‌ ಆಪರೇಷನ್‌ ಮಾಡುವ ಮೂಲಕ ಅದನ್ನು ಬಯಲಿಗೆಳೆದಿದೆ. ಜೊತೆಗೆ ಆತನ ಒಟ್ಟು ಕಪಟತನವನ್ನು, ನಕಲಿತನವನ್ನು, ಸಂಘಟನಾ ದ್ರೋಹವನ್ನು ಬಯಲಿಗೆಳೆದಿದೆ” ಎಂದು ನಾಗೇಂದ್ರ ಅವರು ಹೇಳಿದ್ದಾರೆ.

ಇದನ್ನೂ ಓದಿ: KSRTC ನೌಕರರ ಹೋರಾಟದ ಹೆಸರಿನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌‌ ಕೋಟಿ ಕೋಟಿ ಡೀಲ್‌: ಆರೋಪ

“ಭ್ರಷ್ಟಾಚಾರಿಗಳಾಗುವುದು ಕೇವಲ ರಾಜಕಾರಣಿಗಳು, ಅಧಿಕಾರಿಗಳು ಮಾತ್ರವಲ್ಲ, ಹೋರಾಟಗಾರರು ಕೂಡಾ ಭ್ರಷ್ಟಾಚಾರಿಗಳಾಗುತ್ತಾರೆ. ಆದರೆ ಹೋರಾಟಗಾರರು ಹೋರಾಟದ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದರೆ ಅದು ತುಂಬಾ ಅಪಾಯ. ಒಬ್ಬ ರೈತ ಚಳವಳಿಯ ಪ್ರಮುಖ ಕಾರ್ಯಕರ್ತನಾಗಿ ಇದನ್ನು ತೀವ್ರವಾಗಿ ಖಂಡಿಸುತ್ತೇನೆ, ಇದನ್ನು ರೈತ ಸಮೂಹ ಎಂದೆದಿಗೂ ಸಹಿಸಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹೋರಾಟಗಾರರಲ್ಲಿ, ಹೋರಾಟಗಾರರು ಮತ್ತು ಮಾರಾಟಗಾರರು ಎಂಬ ಎರಡು ತರದ ಜನರಿರುತ್ತಾರೆ. ಮಾರಾಟಗಾರ ವ್ಯಕ್ತಿಯೆಂದರೆ ಚಂದ್ರಶೇಖರ್‌ ತರದವರು. ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ವಾಪಾಸು ತೆಗೆಯುತ್ತೇನೆ ಎನ್ನುವ ಆತನಿಗೆ ಅಷ್ಟು ಶಕ್ತಿಯಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.

“ಕವಿತಾ ಕುರಗಂಟಿ ಎಂಬ ಪ್ರಾಮಾಣಿಕ ರೈತ ಹೋರಾಟಗಾರ್ತಿ, ಯದುವೀರ್‌, ರಾಕೇಶ್‌ ಟಿಕಾಯತ್‌ ಹೆಸರನ್ನು ತಂದಿದ್ದಾರೆ. ಇವರಿಗೆ ಇಂಗ್ಲಿಷ್‌, ಹಿಂದಿ ಭಾಷೆನೇ ಗೊತ್ತಿಲ್ಲ. ಅವರ ಜೊತೆಗೆ ಹೇಗೆ ಸಂವಾದ ಮಾಡುತ್ತಾರೆ? ಅವರು ತನ್ನ ಸ್ವಂತ ಲಾಭಕ್ಕೋಸ್ಕರ ಯಾರಿಗೆ ಬೇಕಾದರೂ ಮಸಿ ಬಳಿಯುವ ಕೆಲಸ ಮಾಡುತ್ತಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಇರೋದೇ ಪುಟಗೋಸಿ ರಾಜಕಾರಣ ಮಾಡೋಕೆ – ಕೋಡಿಹಳ್ಳಿ ಚಂದ್ರಶೇಖರ್ ಕಿಡಿ

“ಈತ ಅಕ್ರಮವಾಗಿ ಮಾಡಿಕೊಂಡಿರುವ ಆಸ್ತಿಯನ್ನು ಸರ್ಕಾರ ಮುಟ್ಟಗೋಳು ಹಾಕಬೇಕು. ಡೀಲ್‌ಗೆ ಹೋದವರ ಮೇಲೆ ಮತ್ತು ಇವರ ಮೇಲೆ ಕೇಸ್‌ ದಾಖಲಿಸಿ ಎಫ್‌ಐಆರ್‌ ದಾಖಲಿಸಬೇಕು. ಸಿಬಿಐ ಅಥವಾ ನ್ಯಾಯಾಧೀಶರ ಮೂಲಕ ಉನ್ನತ ಮಟ್ಟದ ತನಿಖೆ ನಡೆಯಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಕೋಡಿಹಳ್ಳಿ ಚಂದ್ರಶೇಖರ್‌ ಇನ್ನಾವುದೇ ರೈತರ ಹೆಸರಿನಲ್ಲಿ ಹೋರಾಟ ಮಾಡಬಾರದು. ಒಂದು ವೇಳೆ ಹೋರಾಟ ಮಾಡಿದರೆ ಅಲ್ಲಿಂದ ಅವರನ್ನು ಹೇಗೆ ಹೊರಹಾಕಬೇಕು ಎನ್ನುವುದು ಗೊತ್ತಿದೆ. ಹಸಿರು ಟವೆಲ್ ತೆಗೆಯಿರಿ ಎಂದು ಹೇಳಿದ್ದೇವೆ, ಅದನ್ನು ನಾವೇ ಕಿತ್ತುಕೊಳ್ಳುತ್ತೇವೆ.

ಕೋಡಿಹಳ್ಳಿ ಚಂದ್ರಶೇಖರ್‌ ಇನ್ನು ಮುಂದೆ ಯಾವುದೇ ಹೋರಾಟದಲ್ಲಿ ಕಂಡು ಬಂದರೆ ಅವರನ್ನು ಓಡಿಸುವಂತಹ ಕೆಲಸವನ್ನು ಸಾಮಾನ್ಯ ರೈತರು ಮಾಡುತ್ತಾರೆ” ಎಂದು ಅವರು ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಸಿರು ಹಾದಿಯ ಕಥನ: ರೈತ ಹೋರಾಟಗಾರ ಹೆಚ್.ಆರ್ ಬಸವರಾಜಪ್ಪನವರ ಕುರಿತ ಪುಸ್ತಕ ಬಿಡುಗಡೆ

ಯಾರೋ ಒಬ್ಬರು ಹಸಿರು ಟವೆಲ್ ಹಾಕಿ ತಪ್ಪು ಮಾಡಿದರೆ, ಎಲ್ಲಾ ಹಸಿರು ಟವೆಲ್ ಹಾಕಿರುವವರು ತಪ್ಪು ಮಾಡಿದ್ದಾರೆ ಎಂದು ಬಿಂಬಿಸಬೇಡಿ. ಪ್ರಾಮಾಣಿಕವಾಗಿ ತ್ಯಾಗ, ಬಲಿದಾನ ಮಾಡುವ ಹೋರಾಟಗಾರರು ಇದ್ದಾರೆ ಎಂದು ಅವರು ಮಾಧ್ಯಮ ಮತ್ತು ಜನತೆಗೆ ವಿನಂತಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Respected Nagendra sir..

    Thanks for opposing Kodihalli as we knew before but lack of evidence.
    U did great did keeping him away since 2011.
    Shri Putanaya and prof Nanjundswamy had invested life to raitha sangha as honest,political less,caste less ,strong identity world wide with strong foundation..
    Some leaders and politicians takes advantage of genuine organizations.
    Mr Badagalapura Nagendra is a efficient farmers president for karnataka in absence of great late shri Putanaya.
    Jai kisan

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...