Homeಕರ್ನಾಟಕ‘ಯಾರಿಂದಲೊ ಡೀಲ್‌ ತೆಗೆದುಕೊಂಡು ನನ್ನ ಮುಗಿಸಲು ಮಾಡಿದ ತಂತ್ರ’: ಪವರ್‌ ಟಿವಿ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್‌...

‘ಯಾರಿಂದಲೊ ಡೀಲ್‌ ತೆಗೆದುಕೊಂಡು ನನ್ನ ಮುಗಿಸಲು ಮಾಡಿದ ತಂತ್ರ’: ಪವರ್‌ ಟಿವಿ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್‌ ಆರೋಪ

- Advertisement -
- Advertisement -

ಕೆಎಸ್‌ಆರ್‌‌ಟಿಸಿ ನೌಕರರ ಹೋರಾಟ ಮತ್ತು ರೈತ ಹೋರಾಟದ ವಿಚಾರದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್‌‌ ಕೋಟಿ ಕೋಟಿ ಡೀಲ್ ನಡೆಸಿದಿದ್ದಾರೆ ಎಂದು ಕನ್ನಡದ ಸುದ್ದಿ ವಾಹಿನಿ ಪವರ್‌ ಟಿವಿ ಆರೋಪಿಸಿದ್ದು, ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದೆ. ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೋಡಿಹಳ್ಳಿ ಚಂದ್ರಶೇಖರ್‌ ಅವರು, ಇದು ಚಾರಿತ್ಯ್ರವಧೆ ಮಾಡಲು ಬೇಕಾಗಿ ಮಾಡುತ್ತಿರುವ ಕೃತ್ಯ. ನಾನು ಭ್ರಷ್ಟಾಚಾರದ ವಿರುದ್ಧ ಮಾತನಾಡುವುದಕ್ಕೆ ನನ್ನನ್ನು ಮುಗಿಸಬೇಕು ಎಂದು ಒಂದು ದೊಡ್ಡ ಡೀಲ್ ತೆಗೆದುಕೊಂಡು ಅವರು ನಡೆಸಿರುವಂತಹ ತಂತ್ರ ಎಂದು ಪವರ್‌ ಟಿವಿ ವಿರುದ್ದ ಶನಿವಾರ ಆರೋಪ ವ್ಯಕ್ತಪಡಿಸಿದ್ದಾರೆ.

ತಮ್ಮ ಮೇಲಿನ ಡೀಲ್ ಆರೋಪದ ವಿಚಾರವಾಗಿ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌ ಅವರು,“ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವವನಿಗೆ ನೈತಿಕತೆ ಇರಬೇಕು, ಮೊದಲು ಅವನು ಭ್ರಷ್ಟಾಚಾರ ಮುಕ್ತನಾಗಿರಬೇಕು. ಅವನೇ ಭ್ರಷ್ಟಾಚಾರ ಮಾಡಿ, ನಮ್ಮನ್ನು ಭ್ರಷ್ಟರು ಎಂದರೆ ಹೇಗೆ? ಅವರು ಚಾರಿತ್ಯ್ರವಧೆ ಮಾಡಲು ಬೇಕಾಗಿ ಮಾಡುತ್ತಿರುವಂತಹ ಒಂದು ಡೀಲ್ ಅದು” ಎಂದು ಅವರು ಪವರ್‌ ಟಿವಿಯ ವಿರುದ್ಧವೇ ಆರೋಪ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಕೋಡಿಹಳ್ಳಿ ಚಂದ್ರಶೇಖರ್‌ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ, ಹಾಗಾಗಿ ಅವರನ್ನು ಮುಗಿಸಬೇಕು ಎಂದು, ಒಂದು ದೊಡ್ಡ ಡೀಲ್ ತೆಗೆದುಕೊಂಡು ಅವರು ನಡೆಸಿರುವಂತಹ ತಂತ್ರ ಅದು. ಏಳೆಂಟು ತಿಂಗಳುಗಳ ಕಾಲ ನನ್ನ ಸಂಪರ್ಕ ಮಾಡಿ, ಕಟ್‌ ಆಂಡ್‌ ಪೇಸ್ಟ್‌ ಮಾಡಿ ಅದನ್ನು ಸ್ಟೋರಿ ಮಾಡಿದ್ದಾರೆ” ಎಂದು ಕೋಡಿಹಳ್ಳಿ ಹೇಳಿದ್ದಾರೆ.

ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್‌‌ ಕಳ್ಳ ಎಂದು ಗೊತ್ತಿತ್ತು; ಅದಕ್ಕಾಗಿ 2011 ರಿಂದ ದೂರವಿಟ್ಟಿದ್ದೆವು: ರೈತ ಮುಖಂಡ ಬಡಗಲಪುರ ನಾಗೇಂದ್ರ ಆಕ್ರೋಶ

‘ಇವನು ಭ್ರಷ್ಟ, ಇವನು ಭ್ರಷ್ಟ’ ಎಂದು ಹೇಳುವ ಅವನು ಲೋಫರ್‌‌. ಅವರೇನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೆ? ಈ ದೇಶದ ಪ್ರಧಾನ ಮಂತ್ರಿಯೆ? ಎಂದು ಅವರು ಪ್ರಶ್ನಿಸಿದ್ದಾರೆ.

‘ಇದು ಎಲ್ಲವೂ ನಡೆದಿರುವುದು ಸತ್ಯ, ಆದರೆ ಹಣಕಾಸು ವರ್ಗಾವಣೆ ನಡೆದಿಲ್ಲ’ ಎಂದು ನನ್ನ ವಿರುದ್ಧ ಮಾಡಿರುವ ಕಾರ್ಯಕ್ರಮದ ಎರಡನೇ ದಿನ ಸಂಜೆಗೆ ಹೇಳುತ್ತಾರೆ. ನನಗೆ ಸಿಂಗಪೂರ್‌, ಮುಂಬೈ, ದುಬೈನಲ್ಲಿ ಅಕೌಂಟ್‌‌ ಇದೆ; 35 ಕೋಟಿ, 3 ಸಾವಿರ ಕೋಟಿ ವಿಚಾರವೆಲ್ಲಾ ಮಾತನಾಡಿ ಹಣವರ್ಗಾವಣೆ ಆಗಿಲ್ಲ ಎಂದರೆ ಏನರ್ಥ ಅದು? ಮತ್ತೆ ಯಾಕೆ ಇಷ್ಟೆಲ್ಲಾ ಹೇಳಿದ್ದಾರೆ? ಹಾಗಾಗಿ ಈ ವಿಚಾರ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದೇನೆ ಎಂದು ಅವರು ನಾನುಗೌರಿ.ಕಾಂ ಜೊತೆಗೆ ಹೇಳಿದ್ದಾರೆ.

ರೈತ ಮುಖಂಡರುಗಳು ಕೂಡಾ ನಿಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ನಿಮ್ಮ ವಿರುದ್ದ ತನಿಖೆಗೆ ಆಗ್ರಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈಗ ಇರತಕ್ಕಂತಹ ರೈತ ಸಂಘಟನೆಗಳಲ್ಲಿ ಬಲಿಷ್ಠವಾದ ಸಂಘಟನೆ ನಮ್ಮದು. ಹಾಗಾಗಿ ಸಣ್ಣ ಪುಟ್ಟ ಸಂಘಟನೆಗಳೆಲ್ಲವೂ ಕೂಡಾ ನಮ್ಮ ಮೇಲೆ ಕಾಮೆಂಟ್ ಮಾಡುತ್ತಾರೆ. ಅದಕ್ಕೆ ಏನು ಮಾಡಕ್ಕೆ ಆಗುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: KSRTC ನೌಕರರ ಹೋರಾಟದ ಹೆಸರಿನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌‌ ಕೋಟಿ ಕೋಟಿ ಡೀಲ್‌: ಆರೋಪ

“ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಅಂತವರು ಗುಂಪು ಕಟ್ಟಿ ನಮ್ಮ ಮೇಲೆ ಹಲ್ಲೆ ಮಾಡುತ್ತಿರುವಾಗ ಎಲ್ಲಾ ರೈತ ಸಂಘಟನೆಗಳು ನಮ್ಮ ಬೆಂಬಲಕ್ಕೆ ಇರಬೇಕಿತ್ತು. ಆದರೆ ಅವರೆಲ್ಲರೂ ಕೂಡಾ ಯಾವುದೋ ಪಕ್ಷದ ಕಾರ್ಯಕರ್ತರಾಗಿ ಹಾಗೂ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಾಗಿ ಇರುವ ಕಾರಣಕ್ಕೆ ಎಲ್ಲರೂ ನಮ್ಮನ್ನು ಟೀಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ” ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಪ್ರತಿಕ್ರಿಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...