Homeಕರ್ನಾಟಕಕುಮಾರಸ್ವಾಮಿ ಇರೋದೇ ಪುಟಗೋಸಿ ರಾಜಕಾರಣ ಮಾಡೋಕೆ - ಕೋಡಿಹಳ್ಳಿ ಚಂದ್ರಶೇಖರ್ ಕಿಡಿ

ಕುಮಾರಸ್ವಾಮಿ ಇರೋದೇ ಪುಟಗೋಸಿ ರಾಜಕಾರಣ ಮಾಡೋಕೆ – ಕೋಡಿಹಳ್ಳಿ ಚಂದ್ರಶೇಖರ್ ಕಿಡಿ

"ಯಡಿಯೂರಪ್ಪನವರ ಜೊತೆ ನಿಮ್ಮ ಡೀಲ್ ಎಷ್ಟಕ್ಕೆ? ಎಷ್ಟು ಜನರನ್ನು ಮಾರಾಟಕ್ಕೆ ಇಟ್ಟಿದ್ದೀರಿ? ನೂರಕ್ಕೆ ನೂರು ಇದು ಡೀಲ್ ರಾಜಕಾರಣ"

- Advertisement -
- Advertisement -

ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯ ಪರವಾಗಿ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಮತ ಹಾಕಿದ್ದು, ಈ ನಿರ್ಣಯದ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲವಾಗಿದ್ದಾರೆ. “ಕುಮಾರಸ್ವಾಮಿ ಇರೋದೇ ಪುಟಗೋಸಿ ರಾಜಕಾರಣ ಮಾಡಲು” ಎಂದು ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆ ಮಧ್ಯಾಹ್ನದವರೆಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿದ್ದ ಜೆಡಿಎಸ್, ಸಂಜೆಯ ವೇಳೆಗೆ ತನ್ನ ನಿಲುವನ್ನು ಬದಲಿಸಿತ್ತು. ಹೀಗಾಗಿ ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಕುಮಾರಸ್ವಾಮಿ ವಿರುದ್ಧ ಆಕ್ರೋಶಗೊಂಡಿವೆ.

ಇದನ್ನೂ ಓದಿ: ಯಾವುದೇ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಕೇಂದ್ರ ಘೋಷಿಸಬಹುದು: ಸುಪ್ರೀಂ‌ಕೋರ್ಟ್

ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನಗಳ ವಿರುದ್ಧ ಇಂದು ಬಾರುಕೋಲು ಚಳುವಳಿ ನಡೆಸಲು ಮುಂದಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗಳೊಂದಿಗೆ ಮಾತನಾಡಿ, “ಯಡಿಯೂರಪ್ಪನವರ ಜೊತೆ ನಿಮ್ಮ ಡೀಲ್ ಎಷ್ಟಕ್ಕೆ? ಎಷ್ಟು ಜನರನ್ನು ಮಾರಾಟಕ್ಕೆ ಇಟ್ಟಿದ್ದೀರಿ? ನೂರಕ್ಕೆ ನೂರು ಇದು ಡೀಲ್ ರಾಜಕಾರಣ” ಎಂದು ಕಿಡಿಕಾರಿದರು.

“ಭೂಸ್ವಾಧೀನ ಕಾಯ್ದೆ ಜಾರಿಗೆ ತಂದಿದ್ದು ಕುಮಾರಸ್ವಾಮಿ. ಕುಮಾರಸ್ವಾಮಿ ರೈತರ ಹೆಸರು ಹೇಳಿಕೊಂಡು ಅಚ್ಚುಕಟ್ಟಾಗಿ ಅಧಿಕಾರ ಅನುಭವಿಸಿದ್ದಾರೆ. ದೇವೇಗೌಡರು ಕರೆದು ಬುದ್ದಿ ಹೇಳಬೇಕಿತ್ತು. ಕುಮಾರಸ್ವಾಮಿ ಇರೋದೇ ಪುಟಗೋಸಿ ರಾಜಕಾರಣ ಮಾಡೋಕೆ. ಇದು ಕುಮಾರಸ್ವಾಮಿಯವರ ಕೊನೆಯ ರಾಜಕಾರಣ. ಅವರು ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಭೂ ಸುಧಾರಣೆ ತಿದ್ದುಪಡಿ ಅಂಗೀಕಾರ: ಜೆಡಿಎಸ್ ನಡೆಯನ್ನು ಸಮರ್ಥಿಸಿದ ಕುಮಾರಸ್ವಾಮಿ- ಸರಣಿ ಟ್ವೀಟ್

ಇನ್ನು ಸಿಎಂ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ ಚಂದ್ರಶೇಖರ್, “ಅವರ ವಾದ ಅವ್ರು ಬಿಡ್ತಿಲ್ಲ. ಅವರು ಅಂದುಕೊಂಡಿದ್ದನ್ನೇ ಮಾಡ್ತಿದಾರೆ ಸಿಎಂ. ಚಳವಳಿ ನಡೆಯುವಾಗಲೇ ಭೂಸುಧಾರಣಾ ಕಾಯ್ದೆ ಅಂಗೀಕಾರ ಯಾಕೆ ಮಾಡಿದ್ರು?” ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದ್ದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ನಿನ್ನೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿ-ಜೆಡಿಎಸ್ ಒಗ್ಗಟ್ಟಿನಿಂದ ಬಹುಮತ ದೊರೆತು ಅಂಗೀಕಾರವಾಗಿದೆ. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ತಮ್ಮ ಪಕ್ಷದ ಈ ನಡೆಯನ್ನು ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದು, “ಜೆಡಿಎಸ್ ಸೂಚಿಸಿದಂತೆ ಕಾಯ್ದೆಯಲ್ಲಿ ಮಹತ್ತರ ಬದಲಾವಣೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಜೆಡಿಎಸ್‌ಗೆ ಬುದ್ಧಿ ಹೇಳುವವರಿಲ್ಲ, ಮತದಾರರೇ ಪಾಠ ಕಲಿಸುತ್ತಾರೆ: ನಾರಾಯಣಗೌಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...