ಇತ್ತಿಚೆಗಷ್ಟೇ ಮೇಘಾಲಯದ 17 ಕಾಂಗ್ರೆಸ್ ಶಾಸಕರ ಪೈಕಿ 12 ಕಾಂಗ್ರೆಸ್ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಮೇಘಾಲಯ ವಿಧಾನಸಭೆಯಲ್ಲಿ ವಿರೋಧ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ ಈಗ ನಾಗಾಲ್ಯಾಂಡ್ ಮೇಲೆ ತನ್ನ ಕಣ್ಣಿಟ್ಟಿದೆ.
ನಾಗಾಲ್ಯಾಂಡ್ ರಾಜ್ಯದ 12 ಮಂದಿ ಅತೃಪ್ತ ಬಿಜೆಪಿ ನಾಯಕರು ಕೋಲ್ಕತ್ತಾದಲ್ಲಿ ಮೊಕ್ಕಾಂ ಹೂಡಿದ್ದು, ಟಿಎಂಸಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ವಿಧಾನಸಭೆಯ ಮಾಜಿ ಉಪಸಭಾಪತಿ ನೇತೃತ್ವದಲ್ಲಿ ಶೀಘ್ರದಲ್ಲೇ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ.
ಈ 12 ಮಂದಿ ಅತೃಪ್ತ ಬಿಜೆಪಿ ನಾಯಕರ ಗುಂಪು ಕೋಲ್ಕತ್ತಾದಲ್ಲಿದೆ ಎಂದು ನಮಗೆ ತಿಳಿದಿದೆ. ಇವರು ಪಕ್ಷದ ಕೆಲವು ಹಿರಿಯ ನಾಯಕರು ಮತ್ತು ವಿಶೇಷವಾಗಿ ಉಪಮುಖ್ಯಮಂತ್ರಿ ವೈ. ಪ್ಯಾಟನ್ ಅವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದಾರೆ” ಎಂದು ನಾಗಾಲ್ಯಾಂಡ್ ಬಿಜೆಪಿಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಜೆಪಿ ನಂತರ ಕಾಂಗ್ರೆಸ್ ಸರದಿ: ಇಂದು ಟಿಎಂಸಿ ಸೇರಲಿರುವ ಬಿಹಾರ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್
ಎರಡು ವರ್ಷಗಳ ಹಿಂದೆ ರಾಜ್ಯ ಬಿಜೆಪಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಹಲವು ಜಿಲ್ಲಾಧ್ಯಕ್ಷರು ಪಕ್ಷದಲ್ಲಿ ಹಲವು ಹಂತಗಳಲ್ಲಿ ಈ ಕುರಿತು ಮಾತನಾಡದರೂ ಸಮಸ್ಯೆ ಮುಂದುವರಿದಿದೆ. ಸದ್ಯ 12 ಮಂದಿ ಅತೃಪ್ತ ಬಿಜೆಪಿ ನಾಯಕರ ಗುಂಪು ಟಿಎಂಸಿ ಸೇರಲು ಸಜ್ಜಾಗಿದೆ. ರಾಜ್ಯದ 60 ಸದಸ್ಯ ಬಲದ ಸದನದಲ್ಲಿ ಬಿಜೆಪಿ 12 ಶಾಸಕರನ್ನು ಹೊಂದಿದೆ.
ನವೆಂಬರ್‌ನಲ್ಲಿ ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ರಾಜ್ಯದ 17 ಕಾಂಗ್ರೆಸ್ ಶಾಸಕರ ಪೈಕಿ 11 ಶಾಸಕರೊಂದಿಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಈ ಮೂಲಕ ಟಿಎಂಸಿ ಮೇಘಾಲಯದಲ್ಲಿ ವಿರೋಧ ಪಕ್ಷವಾಗಿದೆ.


