ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸ್ಥಾನಗಳಿಗೆ ಈ ಹಿಂದೆ ನೇಮಕಗೊಂಡವರು ಸಂಘ ಪರಿವಾರದ ಕಾರ್ಯಕರ್ತರು ಎಂಬ ವರದಿಗಳ ಹಿನ್ನೆಲೆ, ಅವರ ನೇಮಕಾತಿ ರದ್ದುಪಡಿಸಿ ಹೊಸ ನೇಮಕಾತಿ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ ಎಂದು ಈದಿನ.ಕಾಂ ವರದಿ ಮಾಡಿದೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಶಿವಮೊಗ್ಗದ ಶುಭಾ ಧನಂಜಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯ ಸ್ಥಾನಕ್ಕೆ ಬಿ ಎಲ್ ರಾಜು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸ್ಥಾನಕ್ಕೆ ಜಿ ವಿ ರವೀಂದ್ರನಾಥ (ರವೀಂದ್ರನಾಥ ಸಿರಿವರ) ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಮೈಸೂರಿನ ಡಾ. ಕೃಪಾ ಫಡಕೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಸ್ಥಾನಕ್ಕೆ ವಿಜಯಲಕ್ಷ್ಮಿ ಕೌಟಗಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸ್ಥಾನಕ್ಕೆ ಮಾಲೂರು ವಿಜಿ ಅವರನ್ನು ಈ ಹಿಂದೆ ನೇಮಿಸಲಾಗಿತ್ತು. ಇವರ ನಾಮನಿರ್ದೇಶನಗೊಳಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಸರ್ಕಾರ ಆದೇಶಿಸಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : ಪ್ಲಾನ್ ಮಾಡಿ ಕೊಂದಿದ್ದಾನೆ; ವಯಸ್ಸಿನ ಕಾರಣಕ್ಕೆ ಆತನನ್ನು ಕ್ಷಮಿಸಲು ಸಾಧ್ಯವಾ..?: ಮೃತ ಯುವತಿ ಪ್ರಬುದ್ಧ ತಾಯಿ ಸೌಮ್ಯಾ


