Homeಕರ್ನಾಟಕಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ

ಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ

- Advertisement -
- Advertisement -

ಹಿರಿಯ ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರು, ಬಳ್ಳಾರಿಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆಯ ಅರಣ್ಯ ಗುತ್ತಿಗೆಗಾಗಿ ಕುದುರೆಮುಖ ಐರನ್ ಓರ್ ಕಂಪನಿ ನಿಯಮಿತ (KIOCL) ಮುಂದಿಟ್ಟಿರುವ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ದೇವದಾರಿ ಗಣಿ ದಕ್ಕಿಸಿಕೊಳ್ಳಲು, KIOCL ಈ ಹಿಂದೆ ಕುದುರೆಮುಖದಲ್ಲಿ ಮಾಡಿದ ನಷ್ಟದ ಪರಿಹಾರವಾಗಿ ತನ್ನ ಮಾಲೀಕತ್ವದ 114.3 ಹೆಕ್ಟೇರ್ ಭೂಮಿ ಮತ್ತು ಅಲ್ಲಿನ ನಿರ್ಮಾಣಗಳನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವುದಾಗಿ ಹೇಳಿದೆ. ಇದು ಒಂದು ಕಡೆ ಅರಣ್ಯ ಇಲಾಖೆಯ ಬೇಡಿಕೆಗೆ ಮಣಿದಂತೆ ಕಂಡರೂ, ಈ ನಿರ್ಧಾರವು ತೀವ್ರ ಅನಾಹುತಗಳಿಗೆ ಕಾರಣವಾಗಲಿದೆ ಎಂದು ವಿಠಲ್ ಹೆಗಡೆಯವರು ಎಚ್ಚರಿಸಿದ್ದಾರೆ.

ಪ್ರಮುಖ ವಿರೋಧದ ಕಾರಣಗಳು

ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಕಂಪನಿಯ ಭೂಮಿಯನ್ನು ಅರಣ್ಯಕ್ಕೆ ಹಸ್ತಾಂತರಿಸುವುದರಿಂದ ಎರಡು ಪ್ರಮುಖ ಅಪಾಯಗಳು ಉದ್ಭವಿಸುತ್ತವೆ ಎಂದು ಅವರು ಹೇಳಿದ್ದಾರೆ. ಒಂದು, ಸುತ್ತಮುತ್ತಲಿನ ಜನರಿಗೆ ತೀವ್ರ ತೊಂದರೆಯಾಗುತ್ತದೆ, ಅವರ ಬದುಕು ಅತಂತ್ರವಾಗುತ್ತದೆ. ಇನ್ನೊಂದು, ಸ್ವತಃ ಕಂಪನಿಯೇ ತನ್ನ ಭವಿಷ್ಯಕ್ಕೆ ತಾನೇ ಸಂಚಕಾರ ತಂದುಕೊಳ್ಳುತ್ತದೆ. ದೇವದಾರಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ರಾಜ್ಯದ ಅರಣ್ಯ ಇಲಾಖೆ ಮತ್ತು KIOCL ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಮಣಿದಿರುವ KIOCL, ಈ ಮೂಲಕ ದೇವದಾರಿ ಗಣಿಯ ಅರಣ್ಯ ಗುತ್ತಿಗೆ ಪಡೆಯಲು ಯತ್ನಿಸುತ್ತಿದೆ.

ಲಕ್ಯಾ ಅಣೆಕಟ್ಟಿನ ದುರಂತ ಇತಿಹಾಸ

KIOCL ಭಾರತ ಸರ್ಕಾರದ ಒಂದು ಸಾರ್ವಜನಿಕ ಉದ್ಯಮವಾಗಿದ್ದು, 1976 ರಲ್ಲಿ ಸ್ಥಾಪನೆಯಾಗಿತ್ತು. ಕುದುರೆಮುಖದಲ್ಲಿ ಗಣಿಗಾರಿಕೆ ಪ್ರಾರಂಭವಾದಾಗ, ಅಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಹೂಳು (tailings ಅಥವಾ slurry) ನೈಸರ್ಗಿಕ ಜಲಮೂಲಗಳಿಗೆ ಸೇರಿ ಪರಿಸರಕ್ಕೆ ಹಾನಿಯಾಗದಂತೆ ತಡೆಯಲು ಲಕ್ಯಾ ಹೊಳೆಗೆ ಅಡ್ಡಲಾಗಿ ಒಂದು ದೊಡ್ಡ ಅಣೆಕಟ್ಟನ್ನು 1994ರಲ್ಲಿ ನಿರ್ಮಿಸಲಾಯಿತು. ಆದರೆ, ಗಣಿಗಾರಿಕೆ ಮುಂದುವರೆದಂತೆ ಉತ್ಪತ್ತಿಯಾಗುವ ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತಾ ಹೋಯಿತು.

ಆರಂಭದಲ್ಲಿ ನಿರ್ಮಿಸಿದ್ದ ಅಣೆಕಟ್ಟಿನ ಸಾಮರ್ಥ್ಯ ಕಡಿಮೆಯಾದಾಗ, KIOCL ಕಂಪನಿಯು ಅರಣ್ಯ ಇಲಾಖೆಯ ಅನುಮತಿಯಿಲ್ಲದೆ, 1991 ಮತ್ತು 1994ರ ನಡುವೆ ಅಣೆಕಟ್ಟಿನ ಎತ್ತರವನ್ನು ಅಕ್ರಮವಾಗಿ ಹೆಚ್ಚಿಸಿತು. ಇದರಿಂದಾಗಿ, ಅಣೆಕಟ್ಟಿನ ಸುತ್ತಮುತ್ತಲಿನ ಸುಮಾರು 840 ಎಕರೆಗಳಷ್ಟು ಅರಣ್ಯ ಪ್ರದೇಶವು ಮುಳುಗಡೆಯಾಯಿತು. ಈ ಅಕ್ರಮ ಕಾರ್ಯಕ್ಕೆ ಕಂಪನಿಯು ನಂತರ ಪರಿಸರ ಸಂರಕ್ಷಣಾ ಕಾನೂನುಗಳ ಉಲ್ಲಂಘನೆಗಾಗಿ ದಂಡವನ್ನು ಎದುರಿಸಬೇಕಾಯಿತು. ಈ ಪರಿಸರ ನಷ್ಟವನ್ನು ತುಂಬಿಕೊಡುತ್ತೇನೆ ಎಂದು ಕಂಪೆನಿಯು ಈಗ ಹೇಳಿದ್ದು, ಸಂಡೂರಿನಲ್ಲಿ ಗಣಿಗಾರಿಕೆ ಆರಂಭಿಸಲು ಇದು ತೊಡಕಾಗಿರುವುದರಿಂದ ಈ ಮಾರ್ಗವನ್ನು ಕಂಡುಕೊಂಡಿದೆ. ವಿಠಲ್ ಹೆಗಡೆಯವರ ಪ್ರಕಾರ, ಈ ನಡೆ ತೀರಾ ಅಪಾಯಕಾರಿ.

ಅನ್ಯಾಯದ ನಿದರ್ಶನ

ಹಿರಿಯ ಹೋರಾಟಗಾರರು ತಮ್ಮ ಹಳೆಯ ಹೋರಾಟದ ನೆನಪುಗಳನ್ನು ಕೆದಕುತ್ತಾ, ಒಂದು ಕಾಲದಲ್ಲಿ, ತಮ್ಮ ಜೀವನೋಪಾಯಕ್ಕಾಗಿ ಕಾಡನ್ನು ಒತ್ತುವರಿ ಮಾಡಿದ್ದ ಗುರುವ ಬಿನ್ ದೊಂಬಯ್ಯ ಎಂಬ ಸ್ಥಳೀಯರಿಗೆ ಅರಣ್ಯ ಇಲಾಖೆ 49 ಲಕ್ಷ ರೂಪಾಯಿ ದಂಡ ವಿಧಿಸಿತ್ತು ಎಂಬುದನ್ನು ಉಲ್ಲೇಖಿಸಿದರು. “ಹಾಗಾದರೆ, ಇಷ್ಟು ಬೃಹತ್ ಪ್ರಮಾಣದಲ್ಲಿ ಅರಣ್ಯ ಮುಳುಗಡೆ ಮಾಡಲು ಕಾರಣವಾದ KIOCL ಗೆ ಎಷ್ಟು ದಂಡವೆಂದು ನಾವು ಆಗಿನ ಹೋರಾಟದಲ್ಲಿ ಪ್ರಶ್ನಿಸಿದ್ದೇವೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಜನರ ಬದುಕಿಗೆ ಸಂಚಕಾರ

ಕುದುರೆಮುಖ ಕಬ್ಬಿಣ ಅದಿರು ಗಣಿಗಾರಿಕೆಗೂ ಮೊದಲು ಅಲ್ಲಿ ವಾಸವಿದ್ದ ಸುಮಾರು 79 ಮೂಲನಿವಾಸಿ ಕುಟುಂಬಗಳನ್ನು ಪಕ್ಕದ ಜಂಬಳ ಎಂಬಲ್ಲಿಗೆ ಸ್ಥಳಾಂತರಿಸಲಾಗಿತ್ತು. ಗಣಿಗಾರಿಕೆ ಪ್ರದೇಶದಲ್ಲಿ ಕಾರ್ಮಿಕರ ಮಕ್ಕಳಿಗೆ ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಲಾಗಿತ್ತು. ಕಂಪನಿಯು 2005ರಲ್ಲಿ ಹಲವು ಹೋರಾಟಗಳ ನಂತರ ಮುಚ್ಚಲ್ಪಟ್ಟಿದ್ದರೂ, ಅಲ್ಲಿ ಉಳಿದಿದ್ದ ಕಾರ್ಮಿಕರು ಮತ್ತು ಸ್ಥಳಾಂತರಗೊಂಡ ಜನರು ಈ ಆಸ್ಪತ್ರೆ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಅವಲಂಬಿಸಿದ್ದರು. ಈ ಜಾಗವನ್ನು ಕಂಪನಿಯು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಇಷ್ಟು ಜನರಿಗೆ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿ ಅವರ ಬದುಕು ಮತ್ತಷ್ಟು ಕಷ್ಟಕ್ಕೆ ಸಿಲುಕುತ್ತದೆ ಎಂದು ಹೆಗಡೆಯವರು ಕಳವಳ ವ್ಯಕ್ತಪಡಿಸಿದರು.

ದಶಕಗಳ ಹೋರಾಟದ ನೆನಪುಗಳು

ಕುದುರೆಮುಖ ಗಣಿಗಾರಿಕೆಯಿಂದ ತುಂಗಾ ಮತ್ತು ಭದ್ರಾ ನದಿಗಳ ಮೂಲಗಳು ಬತ್ತಿ ಹೋಗುತ್ತವೆ ಎಂದು ಪರಿಸರವಾದಿಗಳು ದಶಕಗಳ ಕಾಲ ಹೋರಾಟ ನಡೆಸಿದರು. ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟವು ತುಂಗಾಭದ್ರ ಹರಿಯುವ ಎಂಟು ಜಿಲ್ಲೆಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ, ಕುದುರೆಮುಖ ಗಣಿಗಾರಿಕೆಯು ತುಂಗಾ ಮೂಲದ ಗಂಗಡಿಕಲ್ಲು, ಭದ್ರನದಿಯ ನಲ್ಲಿಬಿಡಿಗೆ ವಿಸ್ತರಿಸಬಾರದೆಂದು ಯಶಸ್ವಿ ಹೊರಾಟ ನಡೆಸಿತ್ತು. ಈ ರೀತಿಯ ಹಲವು ಧರಣಿ, ಪ್ರತಿಭಟನೆಗಳು, ಲಾಠಿಜಾರ್ಜ್‌ಗಳು, ಬಹಳ ಮುಖ್ಯವಾಗಿ ದಾವಣಗೆರೆಯಲ್ಲಿ 10 ಸಾವಿರದಷ್ಟು ಜನರು ಸೇರಿದ ಸಮಾವೇಶಗಳನ್ನು ನಡೆಸಲಾಯಿತು. ಈ ಎಲ್ಲಾ ಹೋರಾಟಗಳ ಕಾರಣದಿಂದ ಕರ್ನಾಟಕ ಸರಕಾರವು ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆಯನ್ನು ನೀಡಿತು. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಈ ಮೊದಲೇ ದಾವೆ ಹೂಡಲಾಗಿತ್ತು. ಜನರ ಪ್ರತಿಭಟನೆಯ ಕಾರಣ ನೀಡಿದ ರಾಜ್ಯ ಸರಕಾರದ ಹೇಳಿಕೆಯಿಂದಾಗಿ ಸುಪ್ರೀಂ ಕೋರ್ಟ್ ಕುದುರೆಮುಖ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ತೀರ್ಪು ನೀಡಿ, 2005ರ ಡಿಸೆಂಬರ್ 31ರ ವೇಳೆಗೆ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಆದೇಶಿಸಿತು.

ಹೋರಾಟಗಾರರ ಭವಿಷ್ಯದ ಪ್ರಸ್ತಾವನೆಗಳು

ಈ ಹೋರಾಟದ ಸಂದರ್ಭದಲ್ಲಿ ನಾವು ಸರ್ಕಾರಕ್ಕೆ ಕೆಲವು ಪ್ರಸ್ತಾವನೆಗಳನ್ನು ಇಟ್ಟಿದ್ದೆವು ಎಂದು ವಿಠಲ್ ಹೆಗಡೆಯವರು ನೆನಪಿಸಿಕೊಂಡರು. ಗಣಿಗಾರಿಕೆ ನಿಲ್ಲಿಸಿ, ಕಂಪನಿಯ ಜಾಗವನ್ನು ಈ ಹಿಂದೆ ಸ್ಥಳಾಂತರ ಮಾಡಲಾಗಿದ್ದ 79 ಕುಟುಂಬಗಳಿಗೆ (1300 ಜನ) ಹಂಚಬೇಕು; ಪರಿಸರ ಸಂರಕ್ಷಣಾ ಯೋಜನೆಯನ್ನು ಪ್ರಾರಂಭಿಸಿ ಇವರಿಗೆ ಉದ್ಯೋಗ ನೀಡಬೇಕು; ಮತ್ತು ಬೆಲೆ ಬಾಳುವ ಕಂಪನಿಯ ಕಟ್ಟಡಗಳನ್ನು ಬಳಸಿಕೊಂಡು ಸುಸಜ್ಜಿತ ಆಸ್ಪತ್ರೆ ಮತ್ತು ಅರಣ್ಯ ವಿಶ್ವವಿದ್ಯಾಲಯವನ್ನು ನಿರ್ಮಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದರು. ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ಒಂದು ಒಳ್ಳೆಯ ಅಸ್ಪತ್ರೆಯಿಲ್ಲದ ಕಾರಣ ಇಲ್ಲಿ ಸುಸಜ್ಜಿತ ಅಸ್ಪತ್ರೆಯನ್ನು ನಿರ್ಮಿಸಬಹುದು. ಈ ಪ್ರಸ್ತಾವನೆಗಳನ್ನು ಸರ್ಕಾರ ನಿರ್ಲಕ್ಷಿಸಿದ್ದು, ಈಗ ಕಂಪನಿಯ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು. ಈಗಲೂ ಕೂಡ ಈ ಜಾಗವನ್ನು ಅರಣ್ಯ ಇಲಾಖೆಗೆ ಕೊಡದೆ ಮೇಲಿನ ಬೇಡಿಕೆಯನ್ನು ಸರಕಾರ ಈಡೇರಿಸಬೇಕೆಂದು ವಿಠಲ ಹೆಗಡೆಯವರು ಹೇಳುತ್ತಾರೆ.

ಲಕ್ಯಾ ಅಣೆಕಟ್ಟು: ಪರಿಸರ ಟೈಮ್ ಬಾಂಬ್

ಕುದುರೆಮುಖದ ಗಣಿ ಚಟುವಟಿಕೆಗಳನ್ನು 2006ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸ್ಥಗಿತಗೊಳಿಸಿದ ನಂತರ, KIOCL ತನ್ನ ಮಂಗಳೂರು ಸ್ಥಾವರದಲ್ಲಿ ಕಬ್ಬಿಣದ ಉಂಡೆಗಳು ಮತ್ತು ಪಿಗ್ ಐರನ್ ಉತ್ಪಾದನೆಯನ್ನು ಮುಂದುವರೆಸಿದೆ. ಈ ಮಂಗಳೂರಿನ ಸ್ಥಾವರಕ್ಕೆ ಲಕ್ಯಾ ಅಣೆಕಟ್ಟಿನಿಂದ ಪೈಪ್ ಮೂಲಕ ನೀರು ಹೋಗುತ್ತಿದೆ. ಕಂಪನಿಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದರೆ, ಅಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಮತ್ತು ಚಟುವಟಿಕೆಗಳು ನಿಷಿದ್ಧವಾಗುತ್ತವೆ. ಇದರರ್ಥ ನೀರು ಸರಬರಾಜು ನಿಲ್ಲುತ್ತದೆ. ಇದು ದೊಡ್ಡ ಸಮಸ್ಯೆಗೆ ಎಡೆಮಾಡಿಕೊಡುತ್ತದೆ ಮತ್ತು ಕಂಪನಿಯ ಕಾರ್ಯಾಚರಣೆಗೆ ಭಾರಿ ನಷ್ಟ ಉಂಟುಮಾಡುತ್ತದೆ.

ಇದಕ್ಕಿಂತಲೂ ಗಂಭೀರವಾದ ಮತ್ತೊಂದು ಅಪಾಯವೆಂದರೆ ಲಕ್ಯಾ ಅಣೆಕಟ್ಟು. ಕುದುರೆಮುಖ ಕಂಪನಿಯ ಮಂಗಳೂರು ಸ್ಥಾವರಕ್ಕೆ ಈ ಲಕ್ಯಾ ಡ್ಯಾಂನಿಂದ ನೀರು ಹೋಗುವುದು ಸ್ಥಗಿತಗೊಂಡರೆ ಹೆಚ್ಚುವರಿ ನೀರು ಈ ಡ್ಯಾಂ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಮೊದಲೇ ಗಣಿಗಾರಿಕೆಯ ಹೂಳಿನಿಂದ ತುಂಬಿಕೊಂಡಿರುವ ಲಕ್ಯಾ ಡ್ಯಾಂನ ಹೆಚ್ಚುವರಿ ನೀರನ್ನು ನಿರಂತರವಾಗಿ ನಿರ್ವಹಿಸದಿದ್ದರೆ, ಅದು ಒಡೆದು ಹೋಗುವ ಸಾಧ್ಯತೆ ಸಾಕಷ್ಟು ಇರುತ್ತದೆ. ಮಣ್ಣಿನಲ್ಲಿ ನಿರ್ಮಿಸಿದ ಲಕ್ಯಾ ಡ್ಯಾಂ ಒಡೆದು ಹೋದರೆ, “ಇಕೋ ಟೈಮ್ ಬಾಂಬ್” ಆಗಿರುವ ಈ ಡ್ಯಾಂ ಸಿಡಿದು, ಕಿಲೋಮೀಟರ್‌ಗಟ್ಟಲೆ ಈ ಹೂಳು ತುಂಬಿಕೊಂಡು ಭದ್ರಾ ನದಿ ಮೂಲವೇ ಬತ್ತಿಹೋಗುತ್ತದೆ. ಇದು ರಾಜ್ಯಕ್ಕೆ ಭಾರಿ ನಷ್ಟ ಉಂಟುಮಾಡುತ್ತದೆ ಎಂದು ಅವರು ವಿವರಿಸಿದರು.

ದೇವದಾರಿ ಗಣಿ: ತಾತ್ಕಾಲಿಕ ಪರಿಹಾರಕ್ಕೆ ವಿರೋಧ

ಗಣಿ ಮುಚ್ಚಿದ ನಂತರ ಈ ಪ್ರದೇಶವು ತನ್ನ ಮೂಲ ಅರಣ್ಯ ಪರಿಸರಕ್ಕೆ ಮರಳಲು ಪ್ರಾರಂಭಿಸಿದೆ. ಆದರೆ, ಲಕ್ಯಾ ಅಣೆಕಟ್ಟು ಮತ್ತು ಅದರ ಸುತ್ತಮುತ್ತಲಿನ ಹೂಳಿನ ಕೊಳ ಇಂದಿಗೂ ಕಳವಳಕ್ಕೆ ಕಾರಣವಾಗಿದೆ. ಈ ಎಲ್ಲ ಕಾರಣಗಳಿಂದ, ದೇವದಾರಿ ಗಣಿ ಗುತ್ತಿಗೆಗಾಗಿ KIOCL ಮಾಡುತ್ತಿರುವ ಈ ಪ್ರಸ್ತಾವನೆ ತಾತ್ಕಾಲಿಕ ಪರಿಹಾರವಾಗಿ ಕಂಡರೂ, ಇದು ಭವಿಷ್ಯದಲ್ಲಿ ದೊಡ್ಡ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವಿಠಲ್ ಹೆಗಡೆಯವರು ಸ್ಪಷ್ಟಪಡಿಸಿದ್ದಾರೆ. ಈ ಕ್ರಮವು ಅರಣ್ಯ ಹಾನಿಗೆ ಪರಿಹಾರ ನೀಡುವ ಬದಲಿಗೆ, ಇನ್ನೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರ ದೃಷ್ಟಿಕೋನ ಸಾರುತ್ತದೆ.

ನುಸುಳುಕೋರರೆಂಬ ಆರೋಪ: 36 ಜನರನ್ನು ಬಾಂಗ್ಲಾದೇಶದ ಗಡಿಗೆ ತಳ್ಳಿದ ಅಸ್ಸಾಂ ಪೊಲೀಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...