Homeಕರ್ನಾಟಕಶಾಸಕರ ಭವನದಲ್ಲಿ ನಡೆದ ಸಭೆ: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿಗಾಗಿ ಸಾಹಿತಿಗಳು, ಚಿಂತಕರಿಂದ ಆಗ್ರಹ

ಶಾಸಕರ ಭವನದಲ್ಲಿ ನಡೆದ ಸಭೆ: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿಗಾಗಿ ಸಾಹಿತಿಗಳು, ಚಿಂತಕರಿಂದ ಆಗ್ರಹ

- Advertisement -
- Advertisement -

ಬೆಂಗಳೂರು: ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಜಸ್ಟೀಸ್ ನಾಗಮೋಹನ್‌ ದಾಸ್ ಆಯೋಗದ ವರದಿಯ ಅನ್ವಯ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸುವಂತೆ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಕಲಾವಿದರು ಹಾಗೂ ಸಮಾನ ಮನಸ್ಕರು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಂಗಳವಾರ ಬೆಂಗಳೂರಿನ ಶಾಸಕರ ಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಈ ಸಮುದಾಯಗಳ ಹಕ್ಕೊತ್ತಾಯವನ್ನು ಪರಿಗಣಿಸಿ ಸರ್ಕಾರವು ನಾಗಮೋಹನ್‌ ದಾಸ್ ಆಯೋಗವನ್ನು ರಚಿಸಿ ಸಮೀಕ್ಷೆ ನಡೆಸಿತ್ತು. ವರದಿಯಲ್ಲಿ, ಅತ್ಯಂತ ಹಿಂದುಳಿದ 59 ಅಲೆಮಾರಿ ಸಮುದಾಯಗಳನ್ನು ‘A’ ಗುಂಪಿನಲ್ಲಿ ವರ್ಗೀಕರಿಸಿ, ಅವರಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಆದರೆ, ಸರ್ಕಾರ ಈ ಶಿಫಾರಸ್ಸನ್ನು ಬದಿಗೊತ್ತಿ, ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಸಮುದಾಯಗಳೊಂದಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯದಿಂದ ವಂಚಿಸಿದೆ ಎಂದು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.

ಸಭೆಯ ಪ್ರಮುಖ ನಿರ್ಣಯಗಳು:

  • ಪ್ರತ್ಯೇಕ ಮೀಸಲಾತಿ ಜಾರಿ: ಜಸ್ಟೀಸ್‌ ನಾಗಮೋಹನ್‌ ದಾಸ್‌ ಆಯೋಗದ ವರದಿಯಂತೆ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಇದಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಮೀಸಲಾತಿ ಬಿಂದುವನ್ನು ಜಾರಿಗೊಳಿಸಬೇಕು ಎಂದು ಸರ್ವಾನುಮತದಿಂದ ನಿರ್ಧರಿಸಲಾಯಿತು.
  • ಅಭಿವೃದ್ಧಿ ಕಾರ್ಯಕ್ರಮಗಳು: ಶೇ. 1ರಷ್ಟು ಮೀಸಲಾತಿಯ ಜೊತೆಗೆ, ಈ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಕೂಡ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
  • ನಿಗಮದ ವ್ಯಾಪ್ತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ವರ್ಗಕ್ಕೆ ಸೇರಿದ 49 ಸಮುದಾಯಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಬೇಕು. ಇತರ ಸಮುದಾಯಗಳನ್ನು ನಿಗಮದ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಲಾಯಿತು.

ಒಳಮೀಸಲಾತಿ ಹೋರಾಟದ ಹಿರಿಯ ಹೋರಾಟಗಾರರಾದ ಎಸ್. ಮಾರೆಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರೊ. ರಹಮತ್‌ ತರೀಕೆರೆ, ರಾಜಪ್ಪ ದಳವಾಯಿ, ಪ್ರೊ. ನಿರಂಜನರಾಧ್ಯ, ಶಿವಸುಂದರ್‌, ಡಾ. ವಾಸು ಎಚ್‌. ವಿ, ಬಸವರಾಜ್‌ ಕೌತಾಳ್‌, ಅಂಬಣ್ಣ ಅರೋಲಿಕರ್‌, ಪ್ರೊ. ಎ. ಎಸ್‌. ಪ್ರಭಾಕರ್‌, ಡಾ. ಕೆ. ಷರೀಫಾ, ಬಹುಜನ ವೆಂಕಟೇಶ್‌, ದಾಸನೂರು ಕೂಸಣ್ಣ, ವಿನಯ್‌ ಶ್ರೀನಿವಾಸ್‌, ಮೈತ್ರೇಯಿ, ಡಾ. ಹುಲಿಕುಂಟೆ ಮೂರ್ತಿ, ಜಿ.ಬಿ ಪಾಟೀಲ್‌, ಪ್ರೊ. ಬಿ.ಸಿ. ಬಸವರಾಜ್‌, ಡಾ. ಟಿ. ಗೋವಿಂದರಾಜ್‌, ಪ್ರೊ. ಟಿ. ಯಲ್ಲಪ್ಪ, ದಯಾನಂದ, ಕೆಸ್ತಾರ ವಿ ಮೌರ್ಯ, ಡಿ. ಟಿ ವೆಂಕಟೇಶ್‌, ಶ್ರೀಪಾದ್‌ ಭಟ್‌, ಲೇಖಾ ಅಡವಿ, ನಾರಾಯಣ್ ಕ್ಯಾಸಂಬಳ್ಳಿ, ಪ್ರೊ. ನಾರಾಯಣಸ್ವಾಮಿ, ಕೆ.ವಿ ಭಟ್‌, ಕೆ. ಪಿ ಲಕ್ಷ್ಮಣ್‌, ವಿ.ಎಲ್‌ ನರಸಿಂಹಮೂರ್ತಿ, ಹೆಚ್.ಕೆ ಶ್ವೇತಾರಾಣಿ, ಮುತ್ತುರಾಜು, ವಿಕಾಸ್‌ ಆರ್‌ ಮೌರ್ಯ, ಚಂದ್ರು ತರಹುಣಿಸೆ, ಅಶ್ವಿನಿ ಬೋದ್‌, ಭರತ್‌ ಡಿಂಗ್ರಿ, ಕೋಡಿಹಳ್ಳಿ ಚಂದ್ರು, ವೇಣುಗೋಪಾಲ್‌ ಮೌರ್ಯ, ಮಹೇಶ್‌, ಸರೋವರ್‌ ಬೆಂಕೀಕೆರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...