Homeರಾಜಕೀಯನಮ್ಮ ಸಿಎಮ್ಮು ಸಮಯದ ಬೊಂಬೆಯಂತಲ್ಲಾ....!

ನಮ್ಮ ಸಿಎಮ್ಮು ಸಮಯದ ಬೊಂಬೆಯಂತಲ್ಲಾ….!

- Advertisement -
- Advertisement -

ಆಡಿದ ಮಾತೆಲ್ಲವೂ ತಪ್ಪಾಗುವಂತೆ ಕಂಡಾಗ ಮೌನವಾಗಿರುವುದು ಲೇಸು. ಇಂತಹ ಸೂಕ್ಷ್ಮಗಳನ್ನು ಅರಿಯದ ಕುಮಾರಣ್ಣ ಮಾತನಾಡುತ್ತಲೆ ಆಡಿದ ಮಾತಿನ ಕೋಟೆಯೊಳಗೆ ಬಂದಿಯಾಗುತ್ತಿದ್ದಾರಂತಲ್ಲಾ, ಜವಾಬ್ದಾರಿ ಹೊತ್ತವರಿಂದ ಒಳ್ಳೆ ಮಾತುಗಳು ಬರಬೇಕಾದರೆ ಓದಿನ ಹಿನ್ನೆಲೆ ಇರಬೇಕಾಗುತ್ತದೆ. ಇಲ್ಲ ಅನುಭವದ ದ್ರವ್ಯ ಇರಬೇಕಾಗುತ್ತದೆ, ಇವೆರಡೂ ಇರದವರು ಕುಮಾರಣ್ಣನಂತಿರುತ್ತಾರೆ ಉದಾಹರಣೆಗೆ ಪ್ರತ್ಯೇಕತೆಯ ಕೂಗಿನಿಂದ ವಿಚಲಿತಗೊಂಡ ಕುಮಾರಣ್ಣ “ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತೀರಿ” ಎಂದುಬಿಟ್ಟಿದ್ದಾರೆ, ಇದರಿಂದ ಅನಾವರಣಗೊಂಡಿದ್ದೇನೆಂದರೆ ಅಂತೂ ಪ್ರತ್ಯೇಕತೆ ನಿಮ್ಮ ಮನಸ್ಸಿನಲ್ಲಿದೆ. ಹಣಕಾಸಿನ ಖಜಾನೆ ಬೆಂಗಳೂರಾಗಿರುವುದರಿಂದ ಅದು ನಿಮ್ಮಲಿಲ್ಲ ಇತ್ಯಾದಿ ಎಂಬಂತೆ ಅವರ ಮಾತು ಹಲವು ಚರ್ಚೆ ಹುಟ್ಟುಹಾಕುತ್ತಿವೆ. ಅಂತೂ ಸರಿಯಾಗಿ ಕನ್ನಡ ಮಾತನಾಡಲು ಬಾರದ ರಾಮುಲು ಎಂಬ ವ್ಯಕ್ತಿಗೆ ಉತ್ತರಕೊಡಲು ಹೋಗಿ ಸಿಕ್ಕಿಕೊಂಡಿರುವ ಕುಮಾರಣ್ಣನನ್ನು ಉಳಿಸಲು ಹೋದ ಧÀೃತರಾಷ್ಟ್ರರು ಎಂದಿನಂತೆ ಜಾತಿ ಲೆಕ್ಕಾಚಾರ ತೆಗೆದು ಲಿಂಗಾಯಿತ ಮುಖ್ಯಮಂತ್ರಿಗಳ ಅವಧಿಯ ಕೆಲಸಗಳನ್ನು ಎಣಿಸಿ ಎಂದಿದ್ದಾರಂತೆ. ಆ ಕೆಲಸವೇನಾದರೂ ನಡೆದರೆ ದೇವೇಗೌಡರೆ ಸಿಕ್ಕಿಬೀಳುತ್ತಾರಂತಲ್ಲಾ ಏಕೆಂದರೆ ಇಡೀ ಕರ್ನಾಟಕವನ್ನು ಸಮಭಾವದಲ್ಲಿ ಕಂಡ ವಿರೇಂದ್ರಪಾಟೀಲರು ತಮ್ಮ ಸ್ವಂತ ಕ್ಷೇತ್ರಕ್ಕೆ ಏನೂ ಮಾಡಿಲ್ಲ ಏಕೆಂದರೆ ಅವರ ತಲೆಯಲ್ಲಿರುವುದು ಅಖಂಡ ಕರ್ನಾಟಕ. ಅದೇ ದೇವೇಗೌಡರ ತಲೆಯಲ್ಲಿರುವುದು ಹೊಳೆನರಸೀಪುರವಂತಲ್ಲಾ ಥೂತ್ತೇರಿ.
*******
ಕುಮಾರಣ್ಣನವರು ಅನಿಸಿದ್ದನ್ನ ಅಂದುಬಿಡುವುದರಲ್ಲಿ ನಿಸ್ಸೀಮರು. ಅದರಂತೆ ಮಾಧ್ಯಮದವರ ಮೇಲೆ ಮುಗಿಬಿದ್ದಿದ್ದಾರೆ. ಇದನ್ನು ವಿಶ್ಲೇಷಿಸುವುದಾದರೆ ಕೆಲವು ಮಾಧ್ಯಮದವರಿಗೆ ಅವರಿಗೆ ಬೇಕಿದ್ದ ಸರಕಾರ ಬರಲಿಲ್ಲ ಬಂದಿದ್ದರೆ ಇನ್ನೊಂದೆರಡು ಸೈಟು ಮತ್ತು ಕಾರು ಕೊಳ್ಳಬಹುದಿತ್ತು. ರೆಸಾರ್ಟುಗಳಲ್ಲಿ ಪಾರ್ಟಿ ಮಾಡುತ್ತ ತಾವೇ ಸರಕಾರ ನಡೆಸುವವರಂತೆ ಬಹುಬೆಲೆಯ ಮದÀ್ಯ ಸೇವಿಸುತ್ತ ಉಳಿದದ್ದನ್ನ ಮನೆಗೆ ತೆಗೆದುಕೊಂಡು ಹೋಗಬಹುದಿತ್ತು. ಈಗ ಅದಾವುದಕ್ಕು ಅವಕಾಶವಿಲ್ಲದೆ ಕೇವಲ ಕುಮಾರಣ್ಣನ ಆಪ್ತ ಪತ್ರಕರ್ತರು ಮಾತ್ರ ತಿಂದುಂಡು ತೇಗುತ್ತಿರುವುದನ್ನು ನೋಡಿ ಸುಮ್ಮನಿರಲಾದೀತೆ. ಅದಕ್ಕಾಗಿಯೇ ಕರ್ನಾಟಕದ ಭೂಪಟವನ್ನೇ ಅರ್ಧ ಮಾಡಿಕೊಂಡು ಕೆರೆಯುತ್ತ ಮಾತನಾಡುತ್ತ ಕುಮಾರಣ್ಣನನ್ನು ರೇಗಿಸಿದ್ದಾರಂತಲ್ಲಾ. ಕುಮಾರಣ್ಣನ ಬಗ್ಗೆ ಪತ್ರಿಕೆಗಳೇನು ಜನಸಾಮಾನ್ಯರಿಗೂ ಅನುಮಾನಗಳಿವೆ. ಪಾಪ ಆತ ಜನಾಭಿಪ್ರಾಯದ ಮುಖ್ಯಮಂತ್ರಿಯಲ್ಲ ಗತಿಗೆಟ್ಟ ಕಾಂಗ್ರೆಸ್ಸಿಗರು ತಲೆಕೆಟ್ಟ ಬಿಜೆಪಿಗಳಿಗೆ ಹೆದರಿ ಮತಿಗೆಟ್ಟ ದಳದವರೊಂದಿಗೆ ಕೂಡಿಕೆ ಮಾಡಿಕೊಂಡರು. ಇದರಿಂದ ಇನ್ನ ತಲೆಕೆಟ್ಟಂತಾದ ಬಿಜೆಪಿಗಳು ರಾಜ್ಯವನ್ನೇ ಹೊಡೆದು ಹಾಕುವ ಹೀನಕೃತ್ಯಕ್ಕೆ ಕೈಹಾಕಿದೆ. ಈ ಹಿಂದೆ ಮಸೀದಿಯನ್ನೆ ಹೊಡೆದು ಹಾಕಿದ ಇತಿಹಾಸ ಹೊಂದಿರುವ ಬಿಜೆಪಿಗಳಿಗೆ ಯಾವುದೂ ಅಸಾಧ್ಯವಲ್ಲ. ಆದರೇನು ತನ್ನ ಮನೆತನ ಯಾವಾಗಲೂ ಅಧಿಕಾರದಲ್ಲಿರಬೇಕೆಂಬ ಕನಸು ಕಾಣುತ್ತ ಅದಕ್ಕಾಗಿ ಮಾರಿ ಬೆಲೆ ಹೆಣೆಯುತ್ತ ಕುಳಿತ ದೇವೇಗೌಡರ ಮನದಲ್ಲಿ ಕರ್ನಾಟಕ ಇಬ್ಭಾಗವಾಗುವುದು ಬೇಕಿಲ್ಲ ಎಂದು ಹೇಗೆ ಹೇಳುವುದು ಥೂತ್ತೇರಿ.
*******
ಮಾತಿನ ಬಲೆಯಲ್ಲಿ ಸಿಕ್ಕಿಕೊಂಡ ಕುಮಾರಣ್ಣನ ವರಸೆ ಹೊಸದೇನಲ್ಲ. ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿ ಇಳಿದಾಗ ಜನಾಂಗದ ಸಭೆಯಲ್ಲಿ ಮಾತನಾಡುತ್ತ ನಾನು ಅಧಿಕಾರದಲ್ಲಿದ್ದಾಗ ನನ್ನ ಜನಕ್ಕೆ ಏನೂ ಮಾಡಲಾಗಲಿಲ್ಲ ಕ್ಷಮಿಸಿ ಎಂದಿದ್ದರು. ಕಳೆದ ಚುನಾವಣೆಯಲ್ಲಿ ಜಾತಿ ಪ್ರಸ್ತಾಪ ಮಾಡಿ ಜನಾಂಗವನ್ನು ಎತ್ತಿ ಕಟ್ಟಿದ್ದರು. ಉತ್ತರ ಕರ್ನಾಟಕದ ಜನರನ್ನ ಮರಳು ಮಾಡಲು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಆದರದು ವರ್ಕೌಟಾಗಲಿಲ್ಲ. ಈಗ ಬಜೆಟ್ಟಿನಲ್ಲೂ ಪ್ರಾದೇಶಿಕ ಅಸಮತೋಲನ ಎದ್ದುಕಂಡಿದೆ. ಜನ ತಮ್ಮ ನಾಯಕನಾದವನನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬ ತಿಳಿವಳಿಕೆಯಿಲ್ಲದ ಕುಮಾರಣ್ಣ ಈಗಾಗಲೇ ಆಡಿರುವ ಮಾತುಗಳಿಂದ ಖಚಿತ ಅಭಿಪ್ರಾಯವಿಲ್ಲದ ಪರಿಸ್ಥಿತಿಯ ಕೂಸೆಂಬುದನ್ನು ಸಾಬೀತು ಪಡಿಸಿದ್ದಾರೆ. ರಾಹುಲ್‍ಗಾಂಧಿ ಕೃಪೆಯಿಂದ ನಾನು ಮುಖ್ಯಮಂತ್ರಿಯಾದೆ ಎಂದಿದ್ದ ಕುಮಾರಣ್ಣ ಈಗಾಗಲೇ ಅಯ್ಯಪ್ಪನ ಕೃಪೆಯಿಂದ ಮುಖ್ಯಮಂತ್ರಿಯಾದೆ ಎಂದಿದ್ದಾರೆ. ಮದುವೆಯಾಗದೆ ಅಂಗೇ ಉಳಿದಿರುವ ರಾಹುಲ್‍ಗಾಂಧಿಯೇ ಅಯ್ಯಪ್ಪನಿಗೆ ಸಮಾನ ಎಂದುಕೊಂಡರೆ ತೊಂದರೆಯಿಲ್ಲ. ಆದರೆ ಸಮಯಕ್ಕೊಂದು ಮಾತು ಬದಲಿಸುವ ಕುಮಾರಣ್ಣನ ಎದುರು ಇನ್ನೊಂದೆರಡು ಸಮಸ್ಯೆಗಳಿವೆ, ಅವುಗಳ ಪೈಕಿ ಯಾರೊ ಲಂಬಾಣಿ ಸ್ವಾಮಿ ಮುಂದಿನ ಮುಖ್ಯಮಂತ್ರಿ ನೀವೇ ಅಂದಿದ್ದರಂತೆ. ಅಣ್ಣ ಇನ್ನು ಅಲ್ಲಿಗೆ ಹೋದಾಗ ಏನೇಳುತ್ತಾರೊ ಏನೋ ಥೂತ್ತೇರಿ.
*******
ಕರ್ನಾಟಕ ಹಿಂದೆಂದೂ ಕಂಡರಿಯದ ಸಮಸ್ಯೆಗಳಿಂದ ತತ್ತರಿಸುತ್ತಿರುವಾಗ ಅಷ್ಟಮಠಗಳು ಕಾಮದಾಹದಿಂದ ತತ್ತರಿಸುತ್ತಿವೆಯಂತಲ್ಲಾ. ಸದರಿ ಸಮಸ್ಯೆಗೆ ಬಹಳ ಹಿಂದೆಯೇ ನಿಡುಮಾಮಿಡಿ ಸ್ವಾಮಿಗಳಾದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳವರು ವೀರ್ಯ ಕುರಿತ ಚಿಂತನೆ ನಡೆಸಿ ಮಠದ ಯತಿಗಳನ್ನಾಗಿ ಬಾಲಕರನ್ನು ನೇಮಿಸಬಾರದು, ಆತ ಪ್ರಾಪ್ತ ವಯಸ್ಸಿಗೆ ಬಂದನಂತರ ಲೈಂಗಿಕ ನಿಗ್ರಹದ ಶಕ್ತಿಗಳಿಸಿಕೊಂಡು ಪ್ರಾಯವನ್ನು ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿಕೊಂಡಿದ್ದರೆ ಅಂತಹವನನ್ನು ಸ್ವಾಮಿಯನ್ನಾಗಿ ಮಾಡಿ ಇಲ್ಲವಾದರೆ ಹಿಡ ಮಾಡಿ ಯತಿಯನ್ನಾಗಿಸಿ ಎಂಬ ಸತ್ಯಸಂಗತಿ ಒಳಗೊಂಡ ಸಲಹೆ ಕೊಟ್ಟಿದ್ದರಲ್ಲ! ನಿಡುಮಾಮಿಡಿಯವರು ಇಂತಹ ಹೇಳಿಕೆಯನ್ನ ಆಡಿಕೊಂಡಿದ್ದ ಅಷ್ಟಮಠದ ಯತಿಗಳು, ಹಿಡ ಮಾಡುವುದಾಗಲಿ, ಬೀಜ ಹಿಸುಕುವುದಾಗಲಿ ಇದೆಲ್ಲ ಅನೈಸರ್ಗಿಕ ಕ್ರಿಯೆ. ನೈಸರ್ಗಿಕ ಕ್ರಿಯೆ ಯಾವುದಪ್ಪ ಅಂದ್ರೇ, ಮಠದಷ್ಟಕ್ಕೇ ಮಠವಾಯ್ತು. ನಮ್ಮಷ್ಟಕ್ಕೆ ನಾವು ಆರೈಕೆಗಾಗಿ ಕರೆಸಿಕೊಂಡ ಹೆಣ್ಣುಮಗಳನ್ನೇ ಅಂಗಾತÀ ಮಲಗಿಸಿಕೊಂಡು, ಕೃಷ್ಣಪೂಜೆ ಮಾಡಿದರೆ ಅಂತಹ ಯಾವ ಅಪÀರಾಧವೂ ಅಲ್ಲ; ಅನಾದಿಕಾಲದಿಂದಲೂ ಅಷ್ಟಮಠಗಳ ಯತಿಗಳು ಮಾಡಿಕೊಂಡು ಬಂದಿರುವುದು ಇದನ್ನೇ ಎಂದು ಭಾವಿಸಿ, ಯಾವ ಎಗ್ಗೂ ಇಲ್ಲದೆ ರಾಘವೇಶ್ವರನನ್ನೆ ಮೀರಿಸಿದರಂತಲ್ಲಾ. ಇದನ್ನೆಲ್ಲಾ ಕೇಳಿದ ಸಿದ್ದನಗೌಡ ಪಾಟೀಲ ಎಂಬ ಕಮ್ಯುನಿಸ್ಟ್ ಲೈಂಗಿಕ ಪ್ರತಿಪಾದಕರು “ಅಷ್ಟಮಠದ ಯತಿಗಳನ್ನ ಹಿಡಿದು ಸಾಮೂಹಿಕ ಮದುವೆ ಮಾಡಿಬಿಡುವುದೇ ಲೇಸು” ಎಂದರಂತಲ್ಲ. ಈ ಸುದ್ದಿ ಕೇಳಿದ ಅಷ್ಟಮಠದ ಲೈಂಗಿಕ ತಜ್ಞರು ಈಗ ಆಗಿರುವ ಅನಾಹುತವೇನು? ಮದುವೆ ಅಷ್ಟೊಂದು ಅನಿವಾರ್ಯವೆ, ಎಂದವಂತಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...