Homeಅಂಕಣಗಳುಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

ಸರಳ ಬಹುಮತ ಸಿಕ್ಕಿದ್ದರೆ ಸರಿಯಾಗಿ ಮಾಡುತ್ತಿದ್ದೆ!

- Advertisement -
- Advertisement -

ಆತ ಅವಳ ಕಿವಿಯಲ್ಲಿ ಉಸುರಿದ! ‘ನಾನು ಒಂದು ಹತ್ತು ವರ್ಷ ಚಿಕ್ಕವನಾಗಿದ್ದಿದ್ದ್ರೆ, ನಿನ್ನನ್ನು ಇನ್ನೂ ಸುಖವಾಗಿಡುತ್ತಿದೆ’ ಎಂದು. ಅದಕ್ಕವಳು ಈಗಲೂ ಏನೂ ಆಗಿಲ್ಲ, ಹತ್ತು ವರ್ಷ ಚಿಕ್ಕವನೆಂದೇ ನಿನ್ನ ಪೌರುಷ ತೋರಬಹುದೆಂದಳು.
ಇಂತಹದೊಂದು ಮಾತು ನಮ್ಮ ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ಹೊರಬರುತ್ತದೆ. ಕಾರಣ, ತಮ್ಮತಮ್ಮ ಅಸಮರ್ಥತೆಗಳನ್ನು ಯಾವು ಯಾವುದೋ ಕಾರಣಗಳ ಮೇಲೆ ಹಾಕಿ ಬಂಡವಾಳವನ್ನ ಕೊಚ್ಚಿಕೊಳ್ಳುವ ಜನ ಈಗಲೂ ಇದ್ದಾರೆ. ಅದಕ್ಕೆ ತಕ್ಕ ಉದಾಹರಣೆ ಎಂದರೆ, ನಮ್ಮ ಮುಖ್ಯಮಂತ್ರಿಯಂತಲ್ಲಾ. ಜೆಡಿಎಸ್‍ಗೆ ಹೆಚ್ಚಿನ ಬಹುಮತವಿದ್ದರೆ ಇನ್ನೂ ಹೆಚ್ಚಿನದನ್ನು ಕಡಿದು ಕಟ್ಟೆ ಹಾಕುತ್ತಿದ್ದೆ ಎಂದು ಕುಮಾರಣ್ಣ ಜನರ ಮೇಲೆಯೇ ಆಪಾದನೆ ಹೊರಿಸುತ್ತಿದ್ದಾರೆ. ಹಾಗೆನೋಡಿದರೆ ತಮ್ಮ ಕ್ಯೆಪಾಸಿಟಿ ಮೂವತ್ತು ಸೀಟು; ಅದು ಹೇಗೋ ಬಿಜೆಪಿಯ ಜೊತೆ ಒಳ ವ್ಯವಹಾರ ನಡೆಸಿ ಮುವ್ವತ್ತೆಂಟು ಸೀಟು ಬಂದವು. ಇನ್ನು ಎಡೂರಪ್ಪನ ಸೀಟು ನೂರ ನಾಕು, ಏಕೆಂದರೆ ಸಿದ್ದು ವೀರಶೈವ ಮತ್ತು ಲಿಂಗಾಯಿತ ಜೇನುಹುಟ್ಟಿಗೆ ಕಲ್ಲು ಬೀರಿ ಕಡಿಸಿಕೊಂಡಿದ್ದಕ್ಕೆ. ಇಂತಿರುವಾಗ ಕುಮಾರಣ್ಣನಿಗ್ಹೇಗೆ ಸರಳ ಬಹುಮತ ಸಾಧ್ಯ. ಅಂತೂ ಕುಮಾರಣ್ಣ ಕೈಲಾಗದಕ್ಕೆ ಕಾಂಗೈನೇ ದೂರುತ್ತಿದ್ದಾರಂತಲ್ಲಾ… ಥೂತ್ತೇರಿ!

******

ಕುಮಾರಣ್ಣನವರು ಸರಳ ಬಹುಮತ ಬಂದಿದ್ದರೆ ಒಳ್ಳೆ ಕೆಲಸ ಮಾಡುತ್ತಿದ್ದೆ ಎಂದರೆ ಏನರ್ಥ. ಈ ಕಾಂಗೈಗಳು ನನ್ನನ್ನು ಒಳ್ಳೆ ಕೆಲಸ ಮಾಡಲು ಬಿಡುತ್ತಿಲ್ಲ ಎಂಬರ್ಥ ತಾನೆ. ನಾವು ಯಾವರೀತಿ ಇವರಿಗೆ ಅಡ್ಡಿಯಾಗಿದ್ದೇವೆ ಎಂದು ವಿವರಿಸಬೇಕೆಂದು ಕಾಂಗೈ ಬುದ್ದಿಜೀವಿಗಳು ತಮ್ಮ ಅನಿಸಿಕೆಯನ್ನು ಬಾಯಿಬಿಡದೆ ಮುಲುಕುತ್ತಿರುವಾಗಲೇ ಅತ್ತ ದೇವೇಗೌಡರು ನನ್ನ ಜೆಡಿಎಸ್ ಪಾರ್ಟಿಯಿಂದ ಮುಸ್ಲಿಮರು ಕಾಲ್ತೆಗೆಯಲು ಕಾಂಗ್ರೆಸ್ಸಿನವರೇ ಕಾರಣ, ಯಾಕೆಂದರೆ ಕಳೆದ ಚುನಾವಣೆಯಲ್ಲಿ ನಮ್ಮನ್ನ ಬಿಜೆಪಿಯ ಬಿ ಟೀಮ್ ಎಂದು ಕರೆದ ಕಾರಣವಾಗಿ ಮುಸ್ಲಿಮರು ನಮ್ಮಿಂದ ದೂರ ಹೋದರು ಎಂದು ಕಾಂಗೈನೇ ದೂರಿದರಲ್ಲಾ. ಕಾಂಗ್ರೆಸ್‍ನವರು ಹಾಗಂದಿದ್ದು ನಿಜ, ಆದರೆ ಜೆಡಿಎಸ್‍ನವರ ನಡವಳಿಕೆಯೇ ಹಾಗಿತ್ತು. ಚಾಮುಂಡೇಶ್ವರಿ ಚುನಾವಣೆಯಲ್ಲಿ ಗೌಡರ ಪಾರ್ಟಿ ಬಿ ಟೀಮಿನ ಕೆಲಸ ಮಾಡಿದ್ದಲ್ಲದೆ ಕರ್ನಾಟಕದ ಉಳಿದ ಕಡೆಯೂ ಹಾಗೇ ಮಾಡಿತು. ಜೊತೆಗೆ, ದೇವೇಗೌಡರು ಮೋದಿಯನ್ನು ಅಪ್ಪಿತಪ್ಪಿ ಟೀಕಿಸದೆ ಕಾಂಗ್ರೆಸ್‍ನ್ನೇ ಗುರಿಯಾಗಿರಿಸಿಕೊಂಡಿದ್ದಕ್ಕೆ ಸಾಕ್ಷಿ ಸಿಕ್ಕ ಕಾರಣಕ್ಕೆ ಜೆಡಿಎಸ್‍ಗೆ ಬಿ ಪಟ್ಟ ಕೊಟ್ಟರು. ಅದೇನಾದರಾಗಲಿ, ಇದೆಲ್ಲಾ ಆದಮೇಲೆ ಅಪ್ಪ ಮಗ ಕಾಂಗ್ರೆಸ್ಸನ್ನೇ ಟಾರ್ಗೆಟ್ ಮಾಡಿಕೊಂಡಿರುವುದರ ಮರ್ಮವೇನೆಂದು ಕಾಂಗೈಗಳು ಕಂಗಾಲಾಗಿವೆಯಂತಲ್ಲಾ, ಥೂತ್ತೇರಿ!!

******

ರೆಸಾರ್ಟ್ ರಾಜಕಾರಣಕ್ಕೂ ಕರ್ನಾಟಕಕ್ಕೂ ಸಂಬಂಧವೇ ಇರಲಿಲ್ಲ. ರಾಮಕೃಷ್ಣ ಹೆಗಡೆ ಕಾಲದಲ್ಲಿ ನಾದೆಂಡ್ಳ ಬಾಸ್ಕರರಾವ್ ಬಂಡಾಯದಿಂದ ಬೆಚ್ಚಿದ ಎನ್.ಟಿ.ಆರ್ ಆಂದ್ರದ ಶಾಸಕರನ್ನ ಹಿಡಿದುತಂದು ಬೆಂಗಳೂರು ನಂದಿಬೆಟ್ಟದಲ್ಲಿ ದನಗಳನ್ನು ಕೂಡಿಹಾಕಿದಂತೆ ಕೂಡಿ, ಕಡೆಗೆ ಹೊಡೆದುಕೊಂಡು ಹೋದರು. ಈ ಮೂರು ದಶಕದಲ್ಲಿ ಅಂತಹ ಘಟನೆಗಳು ಹಲವು ಜರುಗಿವೆ. ಆದರೀಗ ಜೆಡಿಎಸ್ ಸರಕಾರ ರಚಿಸಲು ಸಿದ್ದು 76 ಕುರಿಗಳನ್ನ ಅಟ್ಟಿಕೊಂಡು ರೆಸಾರ್ಟ್ ಕಡೆ ಹೋಗಿದ್ದು ಶಾನೆ ನಗೆಪಾಟಲಿಗೆ ಗುರಿಯಾಗಿದೆಯಂತಲ್ಲಾ. ಏಕೆಂದರೆ ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂದು ಕುಮಾರಣ್ಣನಿಗೆ ಹೇಳುತ್ತಿದ್ದ ಸಿದ್ದು ತನ್ನ ಜಾಯಮಾನಕ್ಕೆ ಒಗ್ಗದ ಈ ವ್ಯವಹಾರಕ್ಕೆ ತೊಡಗಿದ್ದು ಅಚ್ಚರಿ ಮೂಡಿಸಿದೆಯಲ್ಲಾ. ಸಿದ್ದು ಅನುಮಾನದ ಪ್ರಕಾರವನ್ನು ವಿಶ್ಲೇಷಿಸುವುದಾದರೆ ಕಳೆದ ಚುನಾವಣೆಯಲ್ಲಿ ಓಟಿಗೆರಡು ಸಾವಿರದಂತೆ ಪೀಕಿ ಗೆದ್ದು ಬಂದಿರುವ ಯಮ್ಮೆಲ್ಲೆಗಳು ಗೊಡ್ಡೆಮ್ಮೆಗಳಂತೆ ಬದುಕಲು ಸಾಧ್ಯವಿಲ್ಲ. ಮಾಡಿದ ಖರ್ಚನ್ನು ಮರಳಿ ಪಡೆದು ಎಷ್ಟು ಕೋಟಿಯನ್ನಾದರೂ ಕೊಡಲು ಮೋದಿ ಟೀಮು ಮರ್ಯಾದೆಗೆಟ್ಟು ಕೂತಿವೆ. ಆಕಡೆ ನೋಡದೆ ಇರಲು ನಮ್ಮವರಿಂದ ಸಾಧ್ಯವಿಲ್ಲ ಎಂದು ರೆಸಾರ್ಟ್ ಕಡೆ ಕುರಿಮಂದೆ ಹೊರಡಿಸಿದರಲ್ಲಾ, ಥೂತ್ತೇರಿ!!!

*******

ಧಾರವಾಡದ ಸಾಹಿತ್ಯ ಸಂಭ್ರಮವಂತೂ ಹೇಳತೀರದಾಗಿದೆಯಂತಲ್ಲಾ. ಈ ಹಿಂದೆ ಗಿರಡ್ಡಿ ಗೋವಿಂದರಾಜರು ಬಲಪಂಥೀಯರಿಗೂ ಆಹ್ವಾನ ಕೊಡಲಾಗಿ ಅವರು ಈ ಸಮ್ಮೇಳನ ನಮ್ಮದೇ ಎಂಬಂತೆ ನಡೆದುಕೊಳ್ಳುತ್ತಿದ್ದಾರಂತಲ್ಲಾ. ಆ ನಂತರ ಎಡಪಂಥೀಯರೂ ಈ ಸಂಭ್ರಮದೊಳಗೆ ಕಾಣಿಸಿಕೊಂಡು ಗುಟುರು ಹಾಕಲಾಗಿ ಹಲವು ಜನರು ಎಡಬಲ ಎಂದು ಚರ್ಚಿಸುತ್ತಿರುವಾಗಲೇ ಈ ಇಬ್ಬರು ಜೊತೆಗೂ ಸ್ನೇಹದಿಂದಿದ್ದ ಕೆಲವರು ನಾವಂತೂ ಎಡವೂ ಅಲ್ಲ, ಬಲವೂ ಅಲ್ಲ ನಮ್ಮದೇನಿದ್ದರೂ ನಡು ಎಂದಾಗ ಕಂಬಾರ `ನಾನೂ ಕೂಡ ನಡು ಮಧ್ಯದವನು. ನಡು ಎಂದರೆ ನನಗೆ ತುಂಬಾ ಇಷ್ಟ. ಆದರೂ, ಬಲದ ಕಡೆಗಿನ ಒಲವು ತುಸು ಜಾಸ್ತಿ ಇದ್ದುದರಿಂದ ಪೇಜಾವರನ ಕಾಲಿಗೆ ಡೈ ಹೊಡೆದೆ ಇದನ್ನು ಸರಿದೂಗಿಸಲೋಸ್ಕರ ಈಚೆಗೆ ಕೋಡೀಮಠದ ಕಾಲಿಗೆ ಬಿದ್ದೆ’ ಎಂದಿಲ್ಲವಂತಲ್ಲಾ, ಥೂತ್ತೇರಿ!!!!

******

ಯಾವತ್ತಿಗೂ ಹಿಂದೂ ಧರ್ಮದ ಮೇಧಾವಿಗಳ ಕಣ್ಣು ತೆರೆಸಿದ್ದು ಈ ಶ್ರೇಣೀಕೃತ ಸಮಾಜದ ಕಟ್ಟಕಡೆಯವರಂತಲ್ಲಾ. ಹಾಗೆಯೇ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಿದ್ದ ಜನ ಬೆಚ್ಚಿ ಬೀಳುವಂತೆ ಉಚಲ್ಯಾ ಕ್ಯಾತಿಯ ಲಕ್ಷಣ ಗಾಯಕವಾಡ ಮಾತನಾಡಿದರಂತಲ್ಲಾ. ಅದೇನಪ್ಪ ಎಂದರೆ, ಭೂದೇವಿ ಉಳಿಸಲು ವಿಷ್ಣು ವರಹ ಅವತಾರವೆತ್ತಿದ್ದ. ಅಂದರೆ ವಿಷ್ಣು ಹಂದಿಯಾಗಿದ್ದ. ಆದ್ದರಿಂದ ಹಂದಿ ಪೂಜನೀಯ ಪ್ರಾಣಿ. ಗೋವಿನಂತೆ ಇದೂ ಕೂಡ ಹಿಂದೂ ಧರ್ಮದ ಗೌರವಕ್ಕೆ ಪಾತ್ರವಾಗಬೇಕು. ಆದರೆ ನೀವು ಗೋಮೂತ್ರದಂತೆಯೇ ಹಂದಿ ಮೂತ್ರವನ್ನು ಪರಿಗಣಿಸಬೇಕು. ಅಂದರೆ ಪೂಜಾಸ್ಥಳದಲ್ಲಿ ಪ್ರೋಕ್ಷಣೆಗೆ ಬಳಸಬೇಕು, ತೀರ್ಥ ರೂಪವಾಗಿ ಸೇವಿಸಬೇಕು ಎಂದಾಗ ಬಲಪಂಥೀಯಗಳು ಮಧ್ಯಾಹ್ನ ಭೋಜನ ಮಾಡುವುದೇ ಕಷ್ಟವಾಯ್ತಂತಲ್ಲಾ, ಥೂತ್ತೇರಿ….!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...