ಸ್ಟಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರನ್ನು ಕೆರಳಿಸಿದೆ.
ಇತ್ತೀಚೆಗೆ ನಡೆದ ‘ನಯ ಭಾರತ್’ ಎಂಬ ಕಾರ್ಯಕ್ರಮದಲ್ಲಿ ಸಮಕಾಲೀನ ರಾಜಕೀಯದ ಕುರಿತು ಚರ್ಚಿಸುವ ವೇಳೆ, ಶಿವಸೇನೆ ಪಕ್ಷವನ್ನು ವಿಭಜಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಶಿಂದೆ ಅವರನ್ನು ಕಮ್ರಾ ಪರೋಕ್ಷವಾಗಿ ಟೀಕಿಸಿದ್ದು, ಅವರನ್ನು ‘ದೇಶದ್ರೋಹಿ’ ಎಂದು ಕರೆದಿರುವುದಾಗಿ ಆರೋಪಿಸಲಾಗಿದೆ.
ಕಮ್ರಾ ಸ್ವತಃ ಹಂಚಿಕೊಂಡ ವಿಡಿಯೋ ಕ್ಲಿಪ್‌ನಲ್ಲಿ ಅವರು ‘ಥಾಣೆಯ ನಾಯಕ’ ಎಂದು ಉಲ್ಲೇಖಿಸಿ ‘ದಿಲ್ ತೋ ಪಾಗಲ್ ಹೈ’ ಹಾಡಿನ ದಾಟಿಯಲ್ಲಿ ಹಾಡೊಂದನ್ನು ಹಾಡಿ ಶಿಂದೆ ಅವರನ್ನು ಅಣಕಿಸಿದ್ದಾರೆ. ಅವರ ದೈಹಿಕ ನೋಟ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗಿನ ಹೊಂದಾಣಿಕೆಯ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಆದರೆ, ಎಲ್ಲೂ ಶಿಂದೆ ಹೆಸರು ಉಲ್ಲೇಖಿಸಿಲ್ಲ.
Maharashtra ❤️❤️❤️ pic.twitter.com/FYaL8tnT1R
— Kunal Kamra (@kunalkamra88) March 23, 2025
ಕುನಾಲ್ ಕಮ್ರಾ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಂಬೈನಲ್ಲಿ ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಮ್ರಾ ಅವರ ಫೋಟೋಗಳನ್ನು ಸುಟ್ಟುಹಾಕಿದ್ದಾರೆ. ಕುನಾಲ್ ಕಮ್ರಾ ಅವರ ಕಾರ್ಯಕ್ರಮವನ್ನು ಚಿತ್ರೀಕರಿಸಿದ ಮುಂಬೈನ ಖಾರ್ ಪ್ರದೇಶದ ಹೋಟೆಲ್ ಅನ್ನು ಧ್ವಂಸಗೊಳಿಸಿದ್ದಾರೆ.
Please give me one reason why a well-educated person would want to live in this country.#kunalkamra pic.twitter.com/TiestMfxmf
— Travis Kutty (@TravisKutty) March 23, 2025
ಇದು “ಶಿಂಧೆ ಅವರ ಮೇಲೆ ಅಪಪ್ರಚಾರ ಮಾಡುವ ಪಿತೂರಿ” ಎಂದಿರುವ ಶಿವಸೇನೆ, ಕುನಾಲ್ ಕಮ್ರಾ, ಶಿವಸೇನೆ (ಯುಬಿಟಿ) ನಾಯಕರಾದ ಸಂಜಯ್ ರಾವತ್ ಮತ್ತು ಆದಿತ್ಯ ಠಾಕ್ರೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದೆ.
ಶಿವಸೇನಾ ನಾಯಕ ರಾಹುಲ್ ಕನಾಲ್ ನೀಡಿದ ದೂರಿನಲ್ಲಿ, “ಇದು ಶಿಂಧೆ ಅವರ ಖ್ಯಾತಿ, ವ್ಯಕ್ತಿತ್ವಕ್ಕೆ ಧಕ್ಕೆ ತರುವ “ಪೂರ್ವ ಯೋಜಿತ ಕ್ರಿಮಿನಲ್ ಪಿತೂರಿ ಮತ್ತು ವ್ಯವಸ್ಥಿತ ಪೇಯ್ಡ್ ಅಭಿಯಾನ” ಎಂದು ಕರೆದಿದ್ದಾರೆ.
“ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವುದು, ಅಶ್ಲೀಲ ಪದಗಳನ್ನು ಬಳಸುವುದು ಮತ್ತು ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಆರೋಪಗಳನ್ನು ಮಾಡುವುದು ಸೇರಿದಂತೆ ಕುನಾಲ್ ಕಮ್ರಾ ಮಾಡಿದ ಕೃತ್ಯಗಳು ಆಕ್ರಮಣಕಾರಿ ಮಾತ್ರವಲ್ಲದೆ ಕಾನೂನುಬಾಹಿರವೂ ಆಗಿವೆ ಎನ್ನಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.
ಶಿವಸೇನಾ ಶಾಸಕ ಮುರಾಜಿ ಪಟೇಲ್ ನೀಡಿದ ದೂರಿನ ಮೇರೆಗೆ ಕಮ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
“ನಾವು ನಾಳೆ 11 ಗಂಟೆಗೆ ಕುನಾಲ್ ಕಮ್ರಾಗೆ ಥಳಿಸುತ್ತೇವೆ” ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ನಿರುಪಮ್ ಭಾನುವಾರ ರಾತ್ರಿ ಎಕ್ಸ್‌ನಲ್ಲಿ ಬೆದರಿಕೆಯ ಪೋಸ್ಟ್ ಹಾಕಿದ್ದಾರೆ.

ಶಿವಸೇನೆ ಸಂಸದ ನರೇಶ್ ಮಸ್ಕೆ, “ದೇಶದಾದ್ಯಂತ ಸೇನಾ ಕಾರ್ಯಕರ್ತರು ಕಮ್ರಾ ಅವರ ಬೆನ್ನಟ್ಟಲಿದ್ದಾರೆ” ಎಂದಿದ್ದಾರೆ. “ನೀವು ಭಾರತದಿಂದ ಪಲಾಯನ ಮಾಡಿ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಈ ನಡುವೆ, ಉದ್ಧವ್ ಸೇನಾ ನಾಯಕರು ಕಮ್ರಾ ಕಾರ್ಯಕ್ರಮದ ನಡೆದ ಹೋಟೆಲ್‌ನ ಸ್ಟುಡಿಯೋ ಧ್ವಂಸವನ್ನು ಖಂಡಿಸಿದ್ದು, ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದು, ಫಡ್ನವೀಸ್ ಅವರನ್ನು ‘ದುರ್ಬಲ ಗೃಹ ಸಚಿವ’ ಎಂದು ಕರೆದಿದ್ದಾರೆ.
कुनाल कामरा एक जानेमाने लेखक और स्टँडप कॉमेडियन है
कुणालने महाराष्ट्रकी राजनीती पर एक व्यंगात्मक गाना लिखा तो शिंदे गैंग को मिरची लगी.
उनके लोगोने कामराका स्टूडियो तोड दिया.
देवेंद्रजी , आप कमजोर गृहमंत्री हो!
@narendramodi
@Dev_Fadnavishttps://t.co/7ciSQRQY81— Sanjay Raut (@rautsanjay61) March 23, 2025
ಘಟನೆ ಕುರಿತು ಪ್ರತಿಕ್ರಿಯಿಸಿದ ಆದಿತ್ಯ ಠಾಕ್ರೆ, “ಏಕನಾಥ್ ಶಿಂಧೆ ಅವರ ಕುರಿತ ಹಾಡು “100% ನಿಜ” ಮತ್ತು “ಯಾರಾದರೂ ಹಾಡಿದರೆ ಅಸುರಕ್ಷಿತ ಹೇಡಿ ಮಾತ್ರ ಪ್ರತಿಕ್ರಿಯಿಸುತ್ತಾನೆ” ಎಂದು ಹೇಳಿದ್ದಾರೆ.

ಕುನಾಲ್ ಕಮ್ರಾ ಅವರು ಇದುವರೆಗೆ ವಿವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತ್ಯೇಕ ಪೋಸ್ಟ್‌ನಲ್ಲಿ, ಅವರು ಸಂವಿಧಾನದ ಪ್ರತಿಯನ್ನು ಹಿಡಿದಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಹೆಚ್ಚಿನ ವಿವರಣೆಯನ್ನು ನೀಡದೆ “ಮುಂದಕ್ಕೆ ಒಂದೇ ದಾರಿ” ಎಂದು ಬರೆದಿದ್ದಾರೆ.
The only way forward… pic.twitter.com/nfVFZz7MtY
— Kunal Kamra (@kunalkamra88) March 23, 2025
ಸುಶಾಂತ್ ಸಿಂಗ್ ಸಾವು ಪ್ರಕರಣದ ಮುಕ್ತಾಯ ವರದಿ ಸಲ್ಲಿಸಿದ ಸಿಬಿಐ: ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್


