ಪೊಲೀಸ್ ಪೇದೆಯೊಬ್ಬರು ರೈಲಿಗೆ ತಲೆಕೊಟ್ಟು ಅಸಹಜ ಸಾವಿಗೀಡಾದ ಘಟನೆ ಕುಣಿಗಲ್ ನಲ್ಲಿ ನಡೆದಿದೆ. ಮೃತಪಟ್ಟ ಪೊಲೀಸ್ ಪೇದೆಯನ್ನು ಯಲ್ಲಾಲಿಂಗ ಮೇಟಿ ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲವಾದರೂ ಪೊಲೀಸ್ ಪೇದೆ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗಿದೆ.
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 26 ವರ್ಷದ ಯಲ್ಲಾಲಿಂಗ ಮೇಟಿ ಅವರಿಗೆ ಇನ್ನೂ ವಿವಾಹ ಆಗಿರಲಿಲ್ಲ. ಕಾಯಿಲೆಯಿಂದ ಭಯಗೊಂಡು ನೊಂದು ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ’ಏಕತ್ವಂ’; ಇದು ತನಿಷ್ಕ್‌ನ ಜಾಹಿರಾತಲ್ಲ, ನಿಜ ಜೀವನದ ’ವಿಶ್ವಕುಟುಂಬ’!
ಯಲ್ಲಾಲಿಂಗ ಮೇಟಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಯರವಾಡ ಗ್ರಾಮದವರು. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಪಟ್ಟಣದ ಸಮೀಪವೇ ಹಾದುಹೋಗಿರುವ ರೈಲ್ವೆ ಹಳಿಯಲ್ಲಿ ಮಲಗಿ ಚಲಿಸುತ್ತಿದ್ದ ರೈಲಿಗೆ ಕುತ್ತಿಗೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಿಣಾಮ ಮುಂಡವೊಂದು ಕಡೆ ರುಂಡ ಒಂದು ಕಡೆ ಬೇರ್ಪಟ್ಟಿರುವುದು ಕಂಡು ಬಂದಿದೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ಇದನ್ನೂ ಓದಿ: ಕೊರೊನಾ ಸಾವುಗಳಿಗೆ ಕೊನೆಯಿಲ್ಲವೇ? ಮನಸ್ಸು ಮಾಡಿದರೆ ಜೀವ ಉಳಿಸಬಹುದಲ್ಲವೇ?


