Homeಮುಖಪುಟಅನಿಕೇತನದ ಕಿಡಿ ಬಿತ್ತಿದ ವಿಶ್ವಮಾನವ ಸಂದೇಶ

ಅನಿಕೇತನದ ಕಿಡಿ ಬಿತ್ತಿದ ವಿಶ್ವಮಾನವ ಸಂದೇಶ

- Advertisement -
- Advertisement -

ಕುವೆಂಪು ಅವರ ಜನ್ಮದಿನ ಹತ್ತಿರ ಬರುತ್ತಿದೆ. ಕರ್ನಾಟಕ ಸರ್ಕಾರವು 2005ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ 29ಅನ್ನು ’ವಿಶ್ವ ಮಾನವ’ ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಕುವೆಂಪು ಅವರು ತಮ್ಮ ಬರವಣಿಗೆ ಮತ್ತು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ, ತಾವು ದರ್ಶನ ಪಡೆದ ಹಲವು ತತ್ವಗಳು ವಿಶ್ವಮಾನವ ಸಂದೇಶದ ಮೂಲಕ ಸಾರಿದ್ದರು. ಈ ಸಂದೇಶಗಳು ವರ್ಷಕ್ಕೊಮ್ಮೆ ನೆನಪಿಸಿಕೊಳ್ಳುವ, ವೈದಿಕರ ಮಂತ್ರಗಳಂತೆ ಪಠಿಸಬೇಕಾದವುಗಳಲ್ಲ, ಹೃದಯದಿಂದ ಕೇಳಿಸಿಕೊಳ್ಳಬೇಕಾದ ಮತ್ತು ನಮಗೆ ನಾವೇ ಕನ್ನಡಿ ಹಿಡಿದುಕೊಳ್ಳುವಂತೆ ಮಾಡುವ ದರ್ಶನಗಳು.

ಕುವೆಂಪು ಅವರು ಬರೆದಿರುವ ಎರಡು ಮಹಾಕಾವ್ಯದಂತಹ ಕಾದಂಬರಿಗಳು ಮತ್ತು ವಿಶ್ವಮಾನವ ಸಂದೇಶ ಎರಡನ್ನೂ ಒಟ್ಟಿಗೆ ನೋಡಿದಾಗ, ಅವರು ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಮುನ್ನುಡಿ ರೂಪದಲ್ಲಿ ಬರೆದಿರುವ ಅತ್ಯಂತ ಜನಪ್ರಿಯವಾದ

“ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ”

ಎಂಬ ಸಾಲುಗಳು ಕೇವಲ ತಮ್ಮ ಕಾದಂಬರಿಯ ಕುರಿತು ಹೇಳಿದಲ್ಲ. ಇಡೀ ಸಮಾಜದ ರಚನೆ ಕುರಿತು ಸಹ ಆ ಸಾಲುಗಳು ಆಗಿರಬಹುದು. ಕುವೆಂಪು ಅವರು ತಮ್ಮ ಕಾದಂಬರಿಗಳಲ್ಲಿ, ತಾವು ಪ್ರತಿನಿಧಿಸುವ ಸಮುದಾಯದ ಕುರಿತು ಸಹ ಎಲ್ಲಿಯೂ ಹಿಂಜರಿಕೆ ಇಲ್ಲದೆ ಮಾತನಾಡುವ ಧೈರ್ಯ ತೋರಿಸಿದ್ದಾರೆ. ಒಬ್ಬ ಲೇಖಕನಿಗೆ ಇರಬೇಕಾದ ಮುಖ್ಯ ಗುಣ ಅದು ಎಂಬುದು ನನ್ನ ನಂಬಿಕೆ. ಕುವೆಂಪು ಅವರು ತಮ್ಮ ’ಮಲೆನಾಡಿನ ಚಿತ್ರಗಳು’ ಪುಸ್ತಕದಲ್ಲಿ ಹೇಳಿಕೊಂಡಿರುವ ಲಘು ಹಾಸ್ಯದ ಬೆರೆತ ಹಲವು ಅನುಭವಗಳಲ್ಲಿ, ತಾವು ಬಾಲಕರಾಗಿದ್ದಾಗಲೇ ಶಿಕ್ಷಣದ ಪದ್ಧತಿಗಳು, ತಮ್ಮ ಸುತ್ತಲಿನ ದಿನ ನಿತ್ಯದ ಚಟುವಟಿಕೆಗಳ ಅಸಮಾನತೆಯ ಗೆರೆ ಗುರುತಿಸುವ ಸೂಕ್ಷ್ಮವಾದ ಪ್ರವೃತ್ತಿ ಬೆಳೆಸಿಕೊಂಡಿದ್ದು ತಿಳಿಯುತ್ತದೆ. ಅವರು ಮುಂದೆ ವಿಶ್ವಮಾನವ ಸಂದೇಶದ ಮೂಲಕ ಹೇಳಲು ಹೊರಟಿರುವುದು ಸಹ ಅದೇ ಆಗಿದೆ.

“ಯಾವ ಒಂದು ಗ್ರಂಥವೂ ’ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ’ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು” ಎಂಬ ಕುವೆಂಪು ಅವರ ಈ ಸಂದೇಶವನ್ನು ನವಯುವಕರ ಕಿವಿಗೆ ಎಲ್ಲಾ ಕಾಲಕ್ಕಿಂತಲೂ ಹೆಚ್ಚಾಗಿ ಈ ದಿನದಲ್ಲಿ ಮುಟ್ಟಿಸಬೇಕಾದ ಜರೂರತ್ತು ಇದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳು ಈಡೇರಿಕೆಗೆ ಕಾಯಕ ಮುಖ್ಯವೇ ಹೊರತು, ಹೊಟ್ಟೆ ತುಂಬಿದವರು ಹೇಳುವ ಪ್ರವಚನಗಳಲ್ಲ ಎಂಬ ವಾಸ್ತವವನ್ನು ಜಾತಿಗಳ ಅಮಲು ತಲೆಗೇರಿಸಿಕೊಂಡವರಿಗೆ ತೋರಿಸಬೇಕಿದೆ.

ಇದನ್ನೂ ಓದಿ:ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕುವೆಂಪು ಅವರು ಪ್ರಕೃತಿಯ ಬಗ್ಗೆ ಎಷ್ಟು ವರ್ಣಿಸಿದ್ದಾರೊ ಇನ್ನೂ ಹೆಚ್ಚು ಜೀವಂತವಾಗಿ ನಾಯಿಗುತ್ತಿಯನ್ನು ಪರಿಚಯಿಸುತ್ತಾರೆ. ಕಗ್ಗತ್ತಲಿನ ಕಾಡುಗಳ ರಾತ್ರಿಯ ಎದೆಯಲ್ಲಿ ನಡುಗದೆ, ಪ್ರೀತಿಯ ಬೀಜಗಳನ್ನು ಎದೆಯೊಳಗಿಟ್ಟುಕೊಂಡ ಗುತ್ತಿಯ ಬಿಗಿ ಉಸಿರಿನಲ್ಲಿ ಸಹ ಕುವೆಂಪು ಅವರ ವಿಶ್ವಮಾನವ ಸಂದೇಶ ಇದೆ.

ಕಾನೂರು ಹೆಗ್ಗಡತಿಯ ಹೂವಯ್ಯನ ಹೊಸ ವಿಚಾರಗಳಲ್ಲಿನ ಕ್ರಾಂತಿಯ ಕಿಡಿಯೊಳಗೆ ಬುದ್ಧನ ಶಾಂತಸಾಗರದ ನಗು ಮತ್ತು ಕುವೆಂಪು ಅವರು ಹೇಳುವ “ಪ್ರತಿಯೊಂದು ಮಗುವೂ ಹುಟ್ಟುತ್ತಲೆ – ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ’ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ’ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು” ಎನ್ನುವ ಮಾತು ಅಡಗಿದೆ. ಹೂವಯ್ಯನ ಮೂಲಕ ಕಟ್ಟಿಕೊಟ್ಟ ದರ್ಶನ ನನಗೆ ಹೆಚ್ಚು ಆಪ್ತವಾಗುತ್ತದೆ.

ಕುವೆಂಪು ಅವರ ನಾಟಕ, ಕಥೆ, ಕಾದಂಬರಿ ಮತ್ತು ಅವರ ಒಟ್ಟು ಬರವಣಿಗೆಯ ಪಯಣವೇ ವಿಶ್ವಮಾನವದೆಡೆಗಿನ ಪ್ರಯಾಣವಾಗಿತ್ತು. ಅವರು ಬರೆದಿರುವ ಬರಹಗಳಲ್ಲಿ ಒಂದು ರೀತಿಯ ಪ್ರಕೃತಿಯ ದಿವ್ಯಸ್ಪರ್ಶ ಇದೆ, ಮೂಢನಂಬಿಕೆಗಳು ಮತ್ತು ವೈದಿಕರ ಕೆಡುಕಿನ ಜಾಣತನದ ವಿರುದ್ಧ ಗಟ್ಟಿಯಾದ ಸಿಟ್ಟಿದ್ದು ಅದರ ಬಿಸಿ ತಾಗುತ್ತದೆ.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಅವರ ಆತ್ಮಕಥೆ ’ನೆನಪಿನ ದೋಣಿಯಲ್ಲಿ ನಿವೇದಿಸಿಕೊಂಡಿರುವಂತೆ, ಯುವಕರಾಗಿದ್ದಾಗ ಕುವೆಂಪು ಅವರು ಒಂದು ಸಲ “ಲೈಬ್ರರಿಯಲ್ಲಿ ಸಾಲಾಗಿ ಜೋಡಿಸಿಟ್ಟ ಪುಸ್ತಕಗಳ ಹೆಸರು ನೋಡಿ”, ಓದುತ್ತಾ ಬೆರಗಾಗಿ ನಿಲ್ಲುತ್ತಾರೆ. ಅವರಿಗೆ ಇದ್ದ ಜ್ಞಾನದಾಹ ಇದರಿಂದ ತಿಳಿಯುತ್ತದೆ. ನಮ್ಮನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಶೋಷಿಸುವ ಹಲವು ಸಂಗತಿಗಳಿಗೆ ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಶಕ್ತಿ ಓದಿನಿಂದ ಮಾತ್ರ ಬರುವಂತಹುದು.

’ವಿಚಾರ ಕ್ರಾಂತಿಗೆ ಆಹ್ವಾನ’ ಪುಸ್ತಕದಲ್ಲಿ ಕುವೆಂಪು ಅವರು ತಮ್ಮ ಬದುಕಿನ ವಿಚಾರಗಳಲ್ಲಿದ್ದ ’ಎಷ್ಟೊಂದು ಮಡಿವಂತಿಕೆಗಳಿಗೆ ಛಿದ್ರ ಮಾಡಿದ್ದಾರೆ’ ಎಂಬುದು ತಿಳಿಯುತ್ತದೆ. ಬರವಣಿಗೆಯಂತೆ ಬದುಕಿದ ಕುವೆಂಪು ಅವರು ವಿಶ್ವಮಾನವರಾಗಿದ್ದು ಹೀಗೆ.

“ಜಾತಿ-ಮತ ಇವೆಲ್ಲಾ ಇರಬೇಕು ಅನ್ನುವವರು, ಅವನು ಎಂಥಾ ಸಾಹಿತಿಯೇ ಆಗಿರಲಿ ಅವನಿಗೆ ಧಿಕ್ಕಾರ”- ಕುವೆಂಪು.

ಈ ಮೇಲಿನ ಮಾತುಗಳನ್ನು ಗಮನಿಸಿದಾಗ, ನಿರಂತರವಾಗಿ ಯಾವುದೋ ಒಂದು ಧರ್ಮ ಶ್ರೇಷ್ಠವೆಂದು ಸಾರುವ ಲೇಖಕರ ಹಿಂದೆ ಯುವಪಡೆ ಓಡುತ್ತಿರುವ ಸನ್ನಿವೇಶದಲ್ಲಿ, ಪ್ರಶ್ನಿಸುವ ಮನಸ್ಸು ಕಳೆದುಕೊಂಡಿರುವ ವಿದ್ಯಾವಂತರ ಕುರಿತು, ಭವಿಷ್ಯದ ನಮ್ಮ ನಾಡಿನ ಬಗ್ಗೆ ಆತಂಕ ಹುಟ್ಟುತ್ತದೆ. ಕುವೆಂಪು ಅವರ ಜನ್ಮದಿನದ ಹೊತ್ತಿನಲ್ಲಿ ಆದರೂ ನಾವೆಲ್ಲ ಗಟ್ಟಿಯಾಗಿ ನಿಂತು ’ಜೀವಪರ’ ವಿಚಾರಗಳನ್ನು ಬೆಂಬಲಿಸುತ್ತ, ಇನ್ನೊಬ್ಬರ ತಲೆಯಲ್ಲಿ ಸೆಗಣಿ ತುಂಬಲು ಪ್ರಯತ್ನಿಸುತ್ತಿರುವವರ ಕೈಕೆಳಗಿನಿಂದ ಪಾರಾಗಿ ಹೊರಬರುವ ಪ್ರತಿಜ್ಞೆ ಮಾಡಿ ಅದನ್ನು ಆಚರಿಸಬೇಕಿದೆ.

ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಕುವೆಂಪು ಅವರ ವಿಶ್ವಮಾನವ ಗೀತೆಯಂತೆ ನಾವೆಲ್ಲ ನಮ್ಮ ನಮ್ಮ ಮತಗಳ ಹೊಟ್ಟ ತೂರಿ, ನಿಜವಾದ ಬೇರು ಬಿಟ್ಟು ಚಿಗುರೊಡೆಯಬಲ್ಲ ಕಾಳುಗಳನ್ನು ಹುಡುಕಬೇಕಿದೆ.

ಕಪಿಲ ಪಿ ಹುಮನಾಬಾದೆ

ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್‌ನವರು. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾದಂಬರಿ ಹಾಣಾದಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿ.


ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...