Homeಕರ್ನಾಟಕಚಾಮರಾಜನಗರ ಆಸ್ಪತ್ರೆಯಲ್ಲಿ ದುರಂತ: ಆಮ್ಲಜನಕ ಕೊರತೆಯಿಂದ 24 ಜನರು ಮೃತ

ಚಾಮರಾಜನಗರ ಆಸ್ಪತ್ರೆಯಲ್ಲಿ ದುರಂತ: ಆಮ್ಲಜನಕ ಕೊರತೆಯಿಂದ 24 ಜನರು ಮೃತ

- Advertisement -
- Advertisement -

ಆಮ್ಲಜನಕ ಕೊರತೆಯ ಪರಿಣಾಮ 12 ಕೊರೊನಾ ರೋಗಿಗಳ ಸಹಿತ 24 ಜನರು ಮೃತಪಟ್ಟಿರುವ ಅಘಾತಕಾರಿ ಘಟನೆ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯ ಸೋಮವಾರ ಸಂಭವಿಸಿದೆ. ಆಮ್ಲಜನಕ ಪೂರೈಕೆಯ ಕೊರತೆಯಿಂದಾಗಿ 12 ರೋಗಿಗಳು ಸಾವನ್ನಪ್ಪಿದ್ದು, ಇತರ ರೋಗಿಗಳು ವಿವಿಧ ಬೇರೆ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಪ್ರತಿಪಾದಿಸಿದೆ.

ಆದರೆ, ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊರೊನಾ ಸೋಂಕಿತರಲ್ಲದ ರೋಗಿಗಳು ಕೂಡಾ ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

“ಭಾನುವಾರ ಬೆಳಿಗ್ಗೆ ಮತ್ತು ಸೋಮವಾರ ಬೆಳಿಗ್ಗೆ ನಡುವೆ ಒಟ್ಟು 24 ಸಾವುಗಳು ಸಂಭವಿಸಿವೆ. ಜಿಲ್ಲಾ ಹಾಸ್ಪಿಟಲ್‌ನಲ್ಲಿ 23 ಮಂದಿ ಸಾವನ್ನಪ್ಪಿದ್ದರೆ, ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎಲ್ಲಾ ರೋಗಿಗಳೂ ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುವುದಿಲ್ಲ” ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದ್ದಾರೆಂದು DH ವರದಿ ಮಾಡಿದೆ.

ಇದನ್ನೂ ಓದಿ: ಇಂದೋರ್‌ನಲ್ಲಿನ ಈ ಕೊರೊನಾ ಆರೈಕೆ ಕೇಂದ್ರ RSS ನಿರ್ಮಿಸಿದ್ದಲ್ಲ!

ಆಮ್ಲಜನಕದ ಕೊರತೆಯಿಂದಾಗಿ 12 ಸಾವುಗಳು ಸಂಭವಿಸಿವೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ದೃಡಪಡಿಸಿದ್ದು, ಇತರರು ವಿವಿಧ ಕಾಯಿಲೆಗಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ದುರದೃಷ್ಟವಶಾತ್, ಆಸ್ಪತ್ರೆಯಲ್ಲಿನ ಆಮ್ಲಜನಕದ ಸ್ಥಾವರವು ಭಾನುವಾರ ರಾತ್ರಿಯಿಂದಲೆ ಆಮ್ಲಜನಕದ ಕೊರತೆಯನ್ನು ಹೊಂದಿತ್ತು ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ DH ವರದಿ ಮಾಡಿದೆ. ಆಸ್ಪತ್ರೆಯ ಆವರಣದಲ್ಲಿರುವ 6,000 ಲೀಟರ್ ಸಾಮರ್ಥ್ಯದ ಆಮ್ಲಜನಕ ಸ್ಥಾವರವು 1.5 ದಿನಗಳವರೆಗೆ ಆಮ್ಲಜನಕದ ಅಗತ್ಯವನ್ನು ಉಳಿಸಿಕೊಳ್ಳಬಲ್ಲದು, ಆದರೆ ಇದರಲ್ಲಿನ ಸಂಗ್ರಹವು ಭಾನುವಾರ ಸಂಜೆಯೆ ಮುಗಿದಿತ್ತು ಎನ್ನಲಾಗಿದೆ.

ಮೃತ ರೋಗಿಗಳ ಸಂಬಂಧಿಕರು ಚಾಮರಾಜನಗರ ಆಸ್ಪತ್ರೆಯ ಹೊರಗೆ ಜಮಾಯಿಸಿ ಅವ್ಯವಸ್ಥೆಗೆ ಅಧಿಕಾರಿಗಳನ್ನು ದೂಷಿಸಿದ್ದಾರೆ. ಕೊರೊನಾ ರೋಗಿಗಳಿಗೆ ಮಧ್ಯರಾತ್ರಿಯಲ್ಲಿ ಟವೆಲ್‌ಗಳನ್ನು ಬೀಸುವ ವಿಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Kerala Election Results 2021 | `ಕೇರಳ 99′ – ಎಡ ಮೈತ್ರಿಯಲ್ಲಿರುವ ಎಲ್ಲಾ ಪಕ್ಷಗಳಿಗೆ ಸ್ಥಾನ

ಮೃತಪಟ್ಟವರಲ್ಲಿ ಹೆಚ್ಚಿನವರು 30-40 ವಯಸ್ಸಿಗೆ ಸೇರಿದವರಾಗಿದ್ದು, ಅವರಲ್ಲಿ ಕೆಲವರು ಕೆಲವೇ ತಿಂಗಳ ಹಿಂದೆ ವಿವಾಹವಾದವರು ಕೂಡಾ ಇದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, “ಪ್ರತಿಯೊಂದು ಜೀವನವೂ ಅಮೂಲ್ಯವಾದುದು. ಘಟನೆಯ ಬಗ್ಗೆ ವರದಿಯನ್ನು ಕೋರಿದ್ದು, ಅದು ಇಂದು ಮಧ್ಯಾಹ್ನದ ವೇಳೆಗೆ ಬರಲಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ಜನರು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಆದರೆ ಮೂರು ದಿನಗಳ ಹಿಂದೆಯಷ್ಟೇ ಜಿಲ್ಲೆಗೆ ಭೇಟಿ ನೀಡಿ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ ಎಂದು ಹೇಳಿದ್ದರು, ಜೊತೆಗೆ ಚಾಮರಾಜನಗರದಲ್ಲಿ ಆರು ಸಾವಿರ ಲೀಟರ್ ಆಮ್ಲಜನಕದ ಘಟಕಕ್ಕೆ ಚಾಲನೆ ನೀಡಲಾಗಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆ ಸಮಸ್ಯೆ ಇರುವುದಿಲ್ಲ ಎಂದು ಕೂಡಾ ಹೇಳಿದ್ದರು.

ಇದನ್ನೂ ಓದಿ: ಅಸ್ಸಾಂ ಚುನಾವಣೆ: ಜೈಲಿನಲ್ಲಿದ್ದುಕೊಂಡೇ ಜಯಗಳಿಸಿದ ಹೋರಾಟಗಾರ ಅಖಿಲ್ ಗೊಗೊಯ್‌

 

ನೆರೆಯ ಮೈಸೂರು ಜಿಲ್ಲೆಯಿಂದ ಬರಬೇಕಿದ್ದ ಆಮ್ಲಜನಕದ ಪೂರೈಕೆಯು ಸಮಯಕ್ಕೆ ಸರಿಯಾಗಿ ಸಿಗಲಿಲ್ಲ, ಇದು ದುರಂತಕ್ಕೆ ಕಾರಣವಾಗಿದೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು DH ಉಲ್ಲೇಖಿಸಿದೆ.

ಆದರೆ, ಭಾನುವಾರ ಮಧ್ಯರಾತ್ರಿಯ ವೇಳೆಗೆ ಒಟ್ಟು 250 ಆಮ್ಲಜನಕ ಸಿಲಿಂಡರ್‌ಗಳನ್ನು ಚಾಮರಾಜನಗರಕ್ಕೆ ಕಳುಹಿಸಲಾಗಿದೆ ಮತ್ತು ಮೈಸೂರು ಜಿಲ್ಲಾಡಳಿತದಿಂದ ಯಾವುದೇ ವಿಳಂಬವಾಗಿಲ್ಲ ಎಂದು ಮೈಸೂರು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 24 ವೆಂಟಿಲೇಟರ್‌ಗಳು, 53 ಐಸಿಯು ಹಾಸಿಗೆಗಳು ಮತ್ತು 55 ಆಮ್ಲಜನಕಯುಕ್ತ ಹಾಸಿಗೆಗಳಿವೆ. ಈ ಎಲ್ಲಾ ಹಾಸಿಗೆಗಳು ಈಗಾಗಲೆ ತುಂಬಿದೆ.

ಇದನ್ನೂ ಓದಿ: ಬಂಗಾಳಕ್ಕೆ ‘ದೀದಿ’, ತಮಿಳುನಾಡಿಗೆ ‘ಸ್ಟಾಲಿನ್’, ಕೇರಳಕ್ಕೆ ‘ವಿಜಯನ್’!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...