Homeಮುಖಪುಟಲಖಿಂಪುರ್‌ ಕೇರಿ ರೈತರ ಹತ್ಯಾಕಾಂಡ: ಸಚಿವರನ್ನು ವಜಾಗೊಳಿಸುವಂತೆ ಸಂಸತ್ತಿನಲ್ಲಿ ವಿಪಕ್ಷಗಳ ಪ್ರತಿಭಟನೆ

ಲಖಿಂಪುರ್‌ ಕೇರಿ ರೈತರ ಹತ್ಯಾಕಾಂಡ: ಸಚಿವರನ್ನು ವಜಾಗೊಳಿಸುವಂತೆ ಸಂಸತ್ತಿನಲ್ಲಿ ವಿಪಕ್ಷಗಳ ಪ್ರತಿಭಟನೆ

- Advertisement -
- Advertisement -

ಉತ್ತರ ಪ್ರದೇಶದ ಲಖಿಂಪುರ್‌ ಕೇರಿ ರೈತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸತತ ಮೂರನೇ ದಿನವಾದ ಇಂದು ಕೂಡ ಸಂಸತ್ತಿನಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸಿದವು.

ಪ್ರತಿಪಕ್ಷಗಳ ಸಂಸದರು ಉಭಯ ಸದನಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಸದನವನ್ನು ಮುಂದೂಡುವಂತೆ ಒತ್ತಾಯಿಸಿದರು. ಲೋಕಸಭೆಯಲ್ಲಿ ಸದನದ ಮಧ್ಯಭಾಗದಲ್ಲಿ ಜಮಾಯಿಸಿದ್ದ ಸಂಸದರು ಭಿತ್ತಿ ಫಲಕಗಳನ್ನು ಹಿಡಿದು ಸಚಿವರನ್ನು ವಜಾಗೊಳಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ.

ರಾಜ್ಯಸಭೆಯು ಈ ದಿನದ ಕಲಾಪ ಆರಂಭವಾದ ಬೆನ್ನಲ್ಲೇ, ಸರ್ಕಾರ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಗದ್ದಲ ಏರ್ಪಟ್ಟ ಕಾರಣ ರಾಜ್ಯಸಭೆಯನ್ನು ಸೋಮವಾರದವರೆಗೆ ಮುಂದೂಡಲಾಗಿದೆ.

ಇದನ್ನೂ ಓದಿ: ಬಾಬರಿ ಧ್ವಂಸ ಮಾಡಿದ ತಮ್ಮ ಕಾರ್ಯಕರ್ತರ ಬಗ್ಗೆ ಶಿವಸೇನೆ ಹೆಮ್ಮೆಪಟ್ಟಿದೆ: ಸಂಜಯ್ ರಾವತ್‌

ಸದನವನ್ನು ಸೋಮವಾರದವರೆಗೆ ಮುಂದೂಡಿದ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು, “ಪಕ್ಷಗಳು ಪರಿಹಾರವನ್ನು ಕಂಡುಕೊಳ್ಳಲು ಮತ್ತು ಸದನದ ಕಲಾಪದಲ್ಲಿ ಶಾಂತಿ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿವೆ” ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ತೇನಿ ಅವರ ಮಗ ಆಶಿಶ್ ಮಿಶ್ರಾ ತೇನಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಹತ್ಯಾಕಾಂಡ ನಡೆಸಿರುವ ಆರೋಪದಲ್ಲಿ ಕಳೆದ ಅಕ್ಟೋಬರ್‌ನಿಂದ ಜೈಲಿನಲ್ಲಿದ್ದಾರೆ. ಹೀಗಾಗಿ ಇವರನ್ನು ವಜಾಗೊಳಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

ಇತ್ತೀಚಿನ ತನಿಖಾ ವರದಿಯಲ್ಲಿ ಸಚಿವರ ಮಗ ಚಲಾಯಿಸುತ್ತಿದ್ದ SUV ರೈತರ ಮೇಲೆ ಹರಿದದ್ದು “ಯೋಜಿತ ಪಿತೂರಿ” ಎಂದು ಹೇಳಿದೆ. “ಕೊಲೆ ಮಾಡುವ ಉದ್ದೇಶದಿಂದ” ರೈತರ ಮೇಲೆ ಕಾರು ಹರಿಸಲಾಗಿದೆ. ಇದು “ನಿರ್ಲಕ್ಷ್ಯದಿಂದ ಉಂಟಾದ ಸಾವುಗಳಲ್ಲ” ಎಂದು ವರದಿ ಬಹಿರಂಗಪಡಿಸಿದೆ.


ಇದನ್ನೂ ಓದಿ: ಲಖಿಂಪುರ್‌‌ ಹತ್ಯಾಕಾಂಡ: ಜೈಲಿನಲ್ಲಿರುವ ಮಗನ ಬಗ್ಗೆ ಕೇಳಿದ ಪತ್ರಕರ್ತರನ್ನು ನಿಂದಿಸಿದ ಸಚಿವ ಅಜಯ್ ಮಿಶ್ರಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...