Homeಕರ್ನಾಟಕಪತ್ರಕರ್ತರಿಗೆ ಲಂಚ| ಸಿಎಂ ಮಾಧ್ಯಮ ಸಲಹೆಗಾರರ ಸರ್ಕಾರಿ ಕಾರಿನಲ್ಲೇ ತಲುಪಿತ್ತೇ ಲಕ್ಷ, ಲಕ್ಷ ಹಣ?

ಪತ್ರಕರ್ತರಿಗೆ ಲಂಚ| ಸಿಎಂ ಮಾಧ್ಯಮ ಸಲಹೆಗಾರರ ಸರ್ಕಾರಿ ಕಾರಿನಲ್ಲೇ ತಲುಪಿತ್ತೇ ಲಕ್ಷ, ಲಕ್ಷ ಹಣ?

- Advertisement -
- Advertisement -

ದೀಪಾವಳಿ ಉಡುಗೊರೆಯ ನೆಪದಲ್ಲಿ ಪತ್ರಕರ್ತರಿಗೆ ಲಂಚ ನೀಡಲು ಸರ್ಕಾರಿ ವಾಹನವನ್ನೇ ಬಳಸಲಾಗಿದೆ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಸರ್ಕಾರಿ ವಾಹನದಲ್ಲೇ ಲಂಚದ ಹಣವನ್ನು ಸಾಗಿಸಲಾಗಿದೆ ಎಂಬ ಅನುಮಾನಗಳಿಗೆ ಪುಷ್ಟಿನೀಡುವಂತಹ ಬೆಳವಣಿಗೆಗಳಾಗಿವೆ.

ಸರ್ಕಾರಿ ರಜೆ ದಿನದಂದು (ಅ.24) ದೀಪಾವಳಿ ಉಡುಗೊರೆಯನ್ನು ಪತ್ರಕರ್ತರಿಗೆ ತಲುಪಿಸಲು ಬಳಸಲಾದ ವಾಹನವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರಿಗೆ ಅಧಿಕೃತವಾಗಿ ಹಂಚಿಕೆಯಾಗಿತ್ತು ಎಂದು ‘ದಿ ಫೈಲ್’ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಈ ಕೃತ್ಯಕ್ಕೆ ತಮ್ಮ ವಾಹನವನ್ನು (ಕೆಎ-01-ಜಿ-5898) ಕಳುಹಿಸಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರು ಹೇಳಿಕೊಂಡಿದ್ದರು. ಆದರೆ ದೀಪಾವಳಿ ಉಡುಗೊರೆ ತಲುಪಿಸಲು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೈಪ್‌ಲೈನ್ ರಸ್ತೆಯಲ್ಲಿ (ಅಕ್ಟೋಬರ್ 24ರಂದು) ಜಿ-5898 ಸಂಖ್ಯೆಯ ವಾಹನವು ಬಳಕೆಯಾಗಿತ್ತು ಎಂಬ ಸಂಗತಿಯು ಪ್ರಕರಣಕ್ಕೆ ಹೊಸ ತಿರುವುಗಳನ್ನು ನೀಡುತ್ತಿದೆ.

ಸರ್ಕಾರಿ ರಜೆ ದಿನವಾಗಿದ್ದ ಅಕ್ಟೋಬರ್ 24ರಂದು ಕುಮಾರಸ್ವಾಮಿ ಲೇಔಟ್‌ನ ಪೈಪ್‌ಲೈನ್‌ ರಸ್ತೆಯಲ್ಲಿ ನಿಂತಿದ್ದ ಕೆಎ-01 ಜಿ-5898 ಸಂಖ್ಯೆಯ ಸರ್ಕಾರಿ ವಾಹನದ ಚಾಲಕನನ್ನು ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದರು. ಸರ್ಕಾರಿ ವಾಹನದ ದುರುಪಯೋಗ ನಡೆಯುತ್ತಿದೆ ಎಂದು ವಿಡಿಯೊ ಮಾಡಿಕೊಂಡು ಅನುಮಾನಗೊಂಡು ಪ್ರಶ್ನಿಸಿದಾಗ, “ಮುಖ್ಯಮಂತ್ರಿಯ ಕಾರ್ಯಾಲಯದಿಂದ ಕಳಿಸಲಾಗಿದೆ, ದೀಪಾವಳಿ ಗಿಫ್ಟ್ ಕೊಡಲು ಬಂದಿದ್ದೇನೆ” ಎಂದು ಉತ್ತರಿಸಿದ್ದರು.

ಅಕ್ಟೋಬರ್‌ 24ರ ಸಂಜೆ 6.34ರ ವೇಳೆಗೆ ‘ಕೆ.ಆರ್‌.ಎಸ್‌. ಪಕ್ಷ ಬೆಂಗಳೂರು’ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್ ಮಾಡಲಾಗಿದೆ. “ಸರ್ಕಾರಿ ವಾಹನ ದುರುಪಯೋಗ: ಇಂದು (ದಿನಾಂಕ 24 ಅಕ್ಟೋಬರ್) ಸರ್ಕಾರಿ ರಜಾ ದಿನವಾಗಿದ್ದು ಸಂಜೆ ಸುಮಾರು ಗಂಟೆ 5ಯಲ್ಲಿ ಕುಮಾರಸ್ವಾಮಿ ಬಡಾವಣೆಯ ಪೈಪ್ ಲೈನ್ ರಸ್ತೆಯ ಬಳಿ ಕಂಡುಬಂದ ಸರ್ಕಾರಿ ವಾಹನ ಸಂಖ್ಯೆ ಕೆಎ 01ಜಿ 5898, ಇನ್ನೋವಾ. ಅದರ ಚಾಲಕನನ್ನು ಪ್ರಶ್ನೆ ಮಾಡಲಾಗಿ ಅವರು ಆ ವಾಹನವು ಮುಖ್ಯಮಂತ್ರಿ ಕಚೇರಿಯ ವಾಹನವಾಗಿದ್ದು ದೀಪಾವಳಿಯ ಸಿಹಿ ಹಂಚಿಕೆಗೆ ಓಡಾಡುತ್ತಿರುವುದಾಗಿ ಹೇಳಿದ್ದಾರೆ. ಈ ರೀತಿಯಲ್ಲಿ ಸರ್ಕಾರಿ ವಾಹನದ ದುರುಪಯೋಗ ಎಷ್ಟು ಸರಿ?” ಎಂದು ಪೋಸ್ಟ್ ಕೆಆರ್‌ಎಸ್‌ ಪೋಸ್ಟ್ ಮಾಡಿದೆ.

ಆ ಕಾರಿನ ಸಂಖ್ಯೆಯೂ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರಿಗೆ ಅಧಿಕೃತವಾಗಿ ಹಂಚಿಕೆಯಾದ ಇನ್ನೋವಾ ವಾಹನದ ಸಂಖ್ಯೆಯೂ ಒಂದೇ ಆಗಿದೆ. ಪತ್ರಕರ್ತರಿಗೆ ಲಕ್ಷಗಟ್ಟಲೇ ನಗದು ಮತ್ತು ಉಡುಗೊರೆ ನೀಡಲು ಇದೇ ವಾಹನವನ್ನು ಬಳಕೆ ಮಾಡಲಾಗಿತ್ತೇ ಎಂಬ ಅನುಮಾನಗಳು ಬಲಗೊಳ್ಳಲು ಕೆಆರ್‌ಎಸ್ ಪಕ್ಷದ ಪೋಸ್ಟ್‌ ಅವಕಾಶ ಒದಗಿಸಿದೆ.

ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿರುವ ಕಾರಿನ ಕುರಿತು ಸರ್ಕಾರ ನೀಡಿರುವ ನಿರ್ದೇಶನದ ಪ್ರತಿಯನ್ನು ‘ಫೈಲ್‌’ ವರದಿ ಮಾಡಿದೆ. “ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರಿಗೆ ಈ ಹಿಂದೆ ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಿಗೆ ಒದಗಿಸಲಾದ ವಾಹನ ಸಂಖ್ಯೆ ಕೆಎ-01-ಜಿ-5898 ವಾಹನವನ್ನು ಒದಗಿಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕುಮಾರಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಗಳಿಗೆ 2022ರ ಸೆ.29ರಂದು ನಿರ್ದೇಶಿಸಿದ್ದರು. ಅದರಂತೆ ಮೋಹನ್ ಕೃಷ್ಣ ಅವರಿಗೆ ಕೆಎ-01 ಜಿ-5898 ಸಂಖ್ಯೆಯ ವಾಹನವನ್ನು ಕುಮಾರಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಯವರು ಹಂಚಿಕೆ ಮಾಡಿದ್ದರು” ಎಂದು ಪತ್ರವನ್ನು ಉಲ್ಲೇಖಿಸಲಾಗಿದೆ. ವಾಟ್ಸ್‌ಅಪ್‌ ಮೂಲಕ ಮೋಹನ್‌ ಕೃಷ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕಳುಹಿಸಲಾಗಿದ್ದು, ‘No it hasn’t been sent For that’ ಎಂಬ ಪ್ರತಿಕ್ರಿಯೆಯನ್ನು ಬಿಟ್ಟರೆ ಮತ್ಯಾವುದೇ ಉತ್ತರ ಬಂದಿಲ್ಲ ಎಂದು ವರದಿಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿರಿ: ಪತ್ರಕರ್ತರಿಗೆ ಲಂಚ ಪ್ರಕರಣ: ಬೊಮ್ಮಾಯಿ ವಿರುದ್ಧ ಲೋಕಾಯುಕ್ತಕ್ಕೆ ದೂರು

‘ನಾನುಗೌರಿ.ಕಾಂ’ ತಂಡದೊಂದಿಗೆ ಮಾತನಾಡಿದ ಮೋಹನ್‌ ಕೃಷ್ಣ ಅವರು, “ನನಗೆ ಆರೋಗ್ಯ ಸರಿ ಇಲ್ಲದೆ ಮನೆಯಲ್ಲಿದ್ದೇನೆ. ರಜೆ ದಿನದಂದು ಸರ್ಕಾರಿ ವಾಹನದಲ್ಲಿ ಸ್ವೀಟ್ ತೆಗೆದುಕೊಂಡು ಹೋಗಿದ್ದು ನಿಜ. ಆದರೆ ನನ್ನ ಸ್ನೇಹಿತನ ಮನೆಗೆ ಸ್ವೀಟ್ ಕಳುಹಿಸಿದ್ದೆನೇ ಹೊರತು ಪತ್ರಕರ್ತರಿಗಲ್ಲ. ಕುಮಾರಸ್ವಾಮಿ ಬಡಾವಣೆಯಲ್ಲಿ ಸುಮಾರು ನಲವತ್ತು ವರ್ಷಗಳ ಹಳೆಯ ಸ್ನೇಹಿತ ವಾಸವಿದ್ದಾನೆ” ಎಂದು ತಿಳಿಸಿದರು.

“‘ದಿ ಫೈಲ್‌ಗೆ ಪ್ರತಿಕ್ರಿಯೆ ನೀಡಲು ಕರೆ ಮಾಡಿದ್ದೆ. ಅವರು ಕರೆ ಸ್ವೀಕರಿಸಲಿಲ್ಲ” ಎಂದು ಸ್ಪಷ್ಟಪಡಿಸಿದರು.

‘ದಿ ಫೈಲ್‌’ ಸಂಪಾದಕರಾದ ಮಹಾಂತೇಶ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ವಾಟ್ಸ್‌ಆಪ್‌ ಮೂಲಕ ಕಳುಹಿಸಿದ ಪ್ರಶ್ನೆಗೆ ಲಿಖಿತ ಉತ್ತರವನ್ನು ನಿರೀಕ್ಷಿಸಿದ್ದೇನೆ. ನಿಮಗೆ ಕೊಟ್ಟ ಉತ್ತರವನ್ನು ಲಿಖಿತವಾಗಿ ನೀಡಿದರೆ ಮುಗಿಯಿತು. ಇಲ್ಲಿ ರಜಾ ದಿನದಂದು ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ವಾಹನವನ್ನು ವೈಯಕ್ತಿಕ ಕೆಲಸಗಳಿಗೆ ಉಪಯೋಗಿಸುವುದು ಸರಿಯೇ?” ಎಂದು ಪ್ರಶ್ನಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...